ಶ್ರೀ ಶ್ರೀಧರ ಸ್ವಾಮಿಗಳ ಅಂಗ ಪೂಜೆ ಹಾಡು

(Many thanks to Mrs Vani Akka Shastri of Gurupura, Kansur, Sirsi Karnataka for sharing this)

ಮಂಗಳ ಪರಮ ಪವಿತ್ರ ನಿಗೆ ಜಯ ಮಂಗಲ ಪಾವನ ಮೂರುತಿಗೆ
ಮಂಗಳಂ ಪರಮ ಪವಿತ್ರನಿಗೆ ॥

ಮತ್ಸ್ಯ ದೊಳಗೆ ದಿವ್ಯ ಮನುಜಾ ಕೃತಿಯಿಂದ ಹುಟ್ಟಿ ಶ್ರೀಧರ ನಾಮ ಇಟ್ಟವಗೆ
ಉತ್ತಮೋತ್ತಮನಾಗಿ ಪೃಥ್ವಿ ಸಂಚರಿಸಿದ ಪರಮ ಪವಿತ್ರ ಪಾದಕ್ಕೆ ಮಂಗಳ ॥೧॥

ಬಂದು ನಿಂತಿಹಳನ್ನು ಹಿಡಿದು ನಿಲ್ಲಿಸಿ ಆನಂದದ ಪರದಲ್ಲಿ ನಿಂದವಗೆ
ಮುಂದೆ ಬರುತಿಹಬಾಯ ಬಿಡುತಿರೆ ಪ್ರೇತನ ಮಂಡೆ ಮೆಟ್ಟಿದ ಅಂಗಾಲಿಗೆ ಮಂಗಲ॥೨॥

ಅಂಬಾ ಪತಿಯ ಮಿತ್ರನಾದವಗೆ ಪರ ಹೊಂದಿ ಆನಂದದೊಳು ಇರುವವಗೆ
ಗಂಗಾಪಿತನ ಮಹರಂಗಾನೊಳ್ ಬೆರೆತಾನಜಂಗೆಯು ಮೊಳಕಾಲಿಗೆ ಮಂಗಲ ॥3॥

ಕಷ್ಟಾಹಾರಗೆ ಕಮಲಾಕ್ಷನ ಮಿತ್ರಗೆದುಷ್ಟರ ಶಿಕ್ಷಿಸಿ ಪೊರೆದವಗೆ
ಶ್ರೇಷ್ಠ ದ ಕಾವಿಯ ಉಡಿಗಂಟಿಕ್ಕುತ್ತ ಮಡಿಯನುಟ್ಟ ನಡುವಿಗೆ ಮಂಗಲ ॥4॥

ಮದನಾರಿ ಮಿತ್ರಗೆ ಪರದಲ್ಲಿ ಮೋಕ್ಷಗೆ ಕರುಣಾಮೃತವನ್ನು ಸುರಿವವಗೆ
ಕದರಿ ನೇರಳೆ ಬಾಳೆ ಫಲ ನೈವೇದಿಸಿ ಗೋರಸವ ಸೇವಿಪ‌ ಉದರಕೆ ಮಂಗಲ ॥5॥

ಉತ್ತುಮೋತ್ತಮ ಅಂಗದೊಳು ಮುಕ್ತಿಮಂಟಪ ಸುತ್ತಯೋಗಿನಿಯರು ಪಾಡುತ್ತಿರೆ
ಸತ್ಯಪುಷ್ಪಗಳಿಂದ ಶಕ್ತಿ ಮಹಲಿಂಗಾನ ಮುಟ್ಟಿ ಪೂಜಿಪ ಹಸ್ತಕೆ ಮಂಗಲ ॥6॥

ಕಂಠಕ್ಕೆ ಒಪ್ಪುವ ಪಂಚಾಕ್ಷರಿ ಮುತ್ತು ಅನಂತ ಜ್ಯೋತಿಗಳಂತೆ ಬೆಳಗುತ್ತಿರೆ
ಸಂಚಿತ ಒಳಿದು ಪ್ರಪಂಚಕ್ಕೆ ಬೆಳಗುವ ನೀಲಕಂಠನ ಮಿತ್ರನ ಕಂಠಕೆ ಮಂಗಲ ॥7॥

ಗಮನದಿ ವಾಮನ ಮೂರ್ತಿಯ ನಾಮವ ಸುಮನೋಹರವಾಗಿ ಪಾಡುತ್ತಿರೆ
ಗಣಪತಿ ಪಿತನ ರುದ್ರಾಕ್ಷರಿ ಜಪಿಸುತ್ತ ಗುಪ್ತದೊಳು ಇರುವ ಜಿವ್ಹೆಗೆ ಮಂಗಲ ॥8॥

ಸತತ ಸೀತಾಪತಿ ನಾಮದ ರಸವನ್ನು ತ್ರಿಷೆಗೆ ಸೇವಿಸುತ ನಿರಂತರವು
ಕ್ಷುದೆಗೆ ಶ್ರೀ ನರಹರಿ ನಾಮದ ಭಕ್ಷವ ಹದದಿ ಮೆಲ್ಲುವ ಹಲ್ಲಿಗೆ ಮಂಗಳ ॥9॥

ಸಾಧನೆ ಇಂದಲಿ ವೇದಘೋಷಗಳನ್ನು ಸಾಧಿಸಿ ಧ್ವಾರದಿ ನಿಂದವಗೆ
ಬೇರಿ ತಮಟೆ ನಾನಾ ವಾದ್ಯ ತುತ್ತೂರಿ ಕೇಳುತ್ತಾಲಿರುವ ಕರ್ಣ ಕೆ ಮಂಗಲ ॥10॥