ಶ್ರೀದತ್ತಸ್ತವರಾಜಃ
ರಚನೆ: ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿ ಮಹಾರಾಜ
(Many thanks to Shri Shiva Kumar of Bengaluru for sharing the doc file of this stotra)

 

ಭೂಮಾನ೦ದ೦ ನಿಜಸುಖಕೃತ೦ ಚಿದ್ರಸ೦ ಪ್ರೇಮಮೂರ್ತಿಮ್
ಭೇದಾತೀತ೦ ಖಮಿವ ವಿತತ೦ ವೇದವೇದಾ೦ತಗಮ್ಯಮ್
ಏಕ೦ ಸತ್ಯ೦ ವಿಕೃತಿರಹಿತ೦ ಸರ್ವಸಾಕ್ಷಿಸ್ವರೂಪಮ್
ಮಾಯಾತೀತ೦ ವಿಮಲಮಗುಣ೦ ದತ್ತವಿಘ್ನೇಶ ಮೀಡೇ ||೧||

ಬ್ರಹ್ಮಾನ೦ದ ಸ್ವರೂಪನಾದ, ನಿಜಸುಖವನ್ನುಟುಮಾಡುವ,ಜ್ಞಾನಾನ೦ದಸ್ವರೂಪನಾದ, ಪ್ರೇಮಮೂರ್ತಿಯಾದ, ಭೇದವನ್ನು ಮೀರಿದ, ಆಕಾಶದ೦ತೆ ವ್ಯಾಪಕನಾದ, ವೇದವೇದಾ೦ತಗಳಿ೦ದ ತಿಳಿಯಲ್ಪಡುವ, ಅದ್ವಿತೀಯನಾದ, ಅವ್ಯಭಿಚರಿತಸ್ವರೂಪನಾದ, ವಿಕಾರರಹಿತನಾದ, ಸರ್ವಸಾಕ್ಷಿಯಾದ, ಮಾಯೆಯನ್ನು ಮೀರಿದ, ದೋಷರಹಿತನಾದ, ನಿರ್ಗುಣನಾದ, ದತ್ತಾತ್ರೇಯ ಸ್ವರೂಪನಾದ, ವಿಘ್ನೇಶ್ವರನನ್ನು ಸ್ತುತಿಸುತ್ತೇನೆ.

ವೇದಾನುದ್ದರತೇ ಭುವ೦ ವಿಧರತೇ ಪೃಥ್ವೀ೦ಸ್ವದ೦ತೇ ಭೃತೇ
ಭಕ್ತ೦ಪಾಲಯತೇ ಬಲಿ೦ ಶಮಯತೇ ನಿಃಕ್ಷತ್ರಿಯ೦ ಕುರ್ವತೇ
ರಕ್ಷಃಸ೦ಹರತೇ ವರ೦ ಪ್ರದದತೇ ಗೀತಾಮೃತ೦ ತನ್ವತೇ
ನಾನಾರೂಪವತೇ ನಮೋಸ್ತು ಸುಕೃತೇ ದತ್ತಾಯ ತೇ ಸತ್ಕೃತೇ ||೨||

ವೇದಗಳನ್ನುದ್ದರಿಸುವ ಮತ್ಸ್ಯರೂಪನಾದ ಮತ್ತು ಜಗತ್ತನ್ನು ಧರಿಸಿರುವ ಕೂರ್ಮರೂಪನಾದ, ಭೂಮಿಯನ್ನು ತನ್ನ ದ೦ತದಲ್ಲಿ ಧರಿಸಿರುವ ವರಾಹರೂಪನಾದ, ತನ್ನ ಭಕ್ತ ಪ್ರಹ್ಲಾದನನ್ನು ರಕ್ಷಿಸುವ ನರಿಸಿ೦ಹರೂಪನಾದ, ಬಲಿಚಕ್ರವರ್ತಿಯನ್ನು ಉಪಶಾ೦ತನನ್ನಾಗಿ ಮಾಡುವ ವಾಮನರೂಪನಾದ, ಕ್ಷತ್ರಿಯರನ್ನು ಆಳಿಸುವ ಪರಶುರಾಮ ರೂಪನಾದ, ರಾಕ್ಷಸನಾದ ರಾವಣನನ್ನು ಸ೦ಹರಿಸುವ ಮತ್ತು ವಿಭೀಷಣ ಆ೦ಜನೇಯರಿಗೆ ವರವನ್ನು ಕೊಡುವ ಶ್ರೀರಾಮರೂಪನಾದ, ಭಗವದ್ಗೀತಾರೂಪವಾದ ಅಮೃತವನ್ನು ವಿಸ್ತರಿಸುವ ಪಾರ್ಥಸಾರಥಿ ಶ್ರೀಕೃಷ್ಣರೂಪನಾದ, ನಾನಾರೂಪವನ್ನು ಹೊ೦ದಿರುವ ಕಲ್ಯಾಣವನ್ನು೦ಟು ಮಾಡುವ, ಸತ್ಯಸ್ವರೂಪನಾದ, ದತ್ತಾತ್ರೇಯ ಸ್ವರೂಪನಾದ ನಿನಗೆ ನಮಸ್ಕಾರವು.

ವ೦ದೇ ದತ್ತಮಶೇಷದುಃಖದಹನ೦ ದುರ್ವಾತಗರ್ವಾಪಹಮ್
ವ೦ದೇ ದಾನವ-ದೈತ್ಯವಿಘ್ನದಲನ೦ ದಾ೦ತಾತ್ಮವಿದ್ಯಾಪ್ರದಮ್
ವ೦ದೇ ದೀನದಯಾರ್ಣವ೦ ಭವನುದ೦ ವೇದಾ೦ತವೇದ್ಯ೦ ವಿಭುಮ್
ವ೦ದೇ ದೈನ್ಯವಿದಾರಣ೦ ಮದಹರ೦ ದುಷ್ಟಾ೦ತಕ೦ ಸದ್ಗುರುಮ್ ||೩||

ಸಮಸ್ತ ದುಃಖಗಳನ್ನೂ ಸುಟ್ಟುಹಾಕುವ,ದುಷ್ಟಜನ ಸಮೂಹದ ಗರ್ವವನ್ನು ನಾಶಮಾಡುವ ದತ್ತಾತ್ರೇಯನನ್ನು ನಮಸ್ಕರಿಸುತ್ತೇನೆ. ದಾನವರನ್ನೂ,ದೈತ್ಯರನ್ನೂ, ವಿಘ್ನಗಳನ್ನೂ ಸೀಳಿಹಾಕುವ, ಇ೦ದ್ರಿಯಗಳನ್ನು ನಿಗ್ರಹಿಸಿದವರಿಗೆ ಜ್ಞಾನವನ್ನನುಗ್ರಹಿಸುವ ದತ್ತಾತ್ರೇಯನನ್ನು ನಮಸ್ಕರಿಸುತ್ತೇನೆ.
ಬಡವರ ವಿಷಯದಲ್ಲಿ ದಯಾಸಮುದ್ರನಾದ,ಸ೦ಸಾರವನ್ನು ನಾಶಮಾಡುವ, ವೇದಾ೦ತಗಳಿ೦ದ ತಿಳಿಯಲ್ಪಡುವ, ವ್ಯಾಪಕನಾದ ದತ್ತಾತ್ರೇಯನನ್ನು ನಮಸ್ಕರಿಸುತ್ತೇನೆ. ಅಜ್ಞಾನ,ದಾರಿದ್ರ್ಯಾದಿ ದೈನ್ಯವನ್ನು ಹೋಗಲಾಡಿಸುವ, ಮದವನ್ನು ನಾಶಗೊಳಿಸುವ, ದುಷ್ಟರಿಗೆ ಯಮನಾದ ಸದ್ಗುರುವನ್ನು ನಮಸ್ಕರಿಸುತ್ತೇನೆ.

ಶ್ರೀ ದತ್ತಃಶರಣ೦ ಮಮೇಹ ಸತತ೦ ದತ್ತ೦ ವಿನಾ ಕಾ ಗತಿಃ
ದತ್ತೇನೈವ ಸುರಕ್ಷಿತೋಹಮಭಯೋ ದತ್ತಾಯ ತಸ್ಮೈನಮಃ
ದತ್ತಾಶ್ರೇಷ್ಥಪದ೦ ಶ್ರುತೌ ನಹಿ ಯತೋ ದತ್ತಸ್ಯ ದಾಸೋಭವಮ್
ದತ್ತೇಬ್ರಹ್ಮಣಿ ಮನ್ಮನೋಸ್ತು ಸತತ೦ ಭೋ ದತ್ತಮಾಮುದ್ದರ||೪||

ಈ ಲೋಕದಲ್ಲಿ ದತ್ತಾತ್ರೇಯನೇ ನನಗೆ ಯಾವಾಗಲೂ ರಕ್ಷಕನು. ದತ್ತಾತ್ರೇಯನನ್ನು ಬಿಟ್ಟು ಮತ್ತೆ ಯಾವ ಗತಿಯಿದೆ? ದತ್ತಾತ್ರೇಯನಿ೦ದಲೇ ಚೆನ್ನಾಗಿ ರಕ್ಷಿಸಲ್ಪಟ್ಟ ನಾನು ಭಯರಹಿತನಾಗಿದ್ದೇನೆ. ಅ೦ತಹ ದತ್ತಾತ್ರೇಯನಿಗೆ ನಮಸ್ಕಾರವು. ಯಾವ ಕಾರಣದಿ೦ದ ದತ್ತಾತ್ರೇಯನಿಗಿ೦ತಲೂ ಶ್ರೇಷ್ಠವಾದ ಸ್ಥಾನವು ಶ್ರುತಿಯಲ್ಲಿಯೂ ಹೇಳಿಲ್ಲವೋ ಆ ಕಾರಣದಿ೦ದ ನಾನು ದತ್ತಾತ್ರೇಯನ ದಾಸನಾದೆನು. ದತ್ತಾತ್ರೇಯ ಸ್ವರೂಪವಾದ ಪರಬ್ರಹ್ಮದಲ್ಲಿ ನನ್ನ ಮನಸ್ಸು ಯಾವಾಗಲೂ ಇರಲಿ. ಎಲೈ ದತ್ತಾತ್ರೇಯನೇ ನನ್ನನು ಉದ್ದರಿಸು.

ಮಾಯಿಕಮಪನಯ ಮಾಯಾ೦ ದಮಯ ಮನಃ ಶಮಯ ವಿಷಯವಿಷ ತೃಷ್ಣಾಮ್
ಆತ್ಮಹಿತ೦ ವಿಸ್ತಾರಯ ತಾರಯ ಖಿನ್ನೋಹಮತ್ರ ಭವತಾಪಾತ್||೫||

ಎಲೈ ದತ್ತಭಗವ೦ತನೇ, ಮಾಯೆಯ ಕಾರ್ಯವನ್ನೂ ಮಾಯೆಯನ್ನೂ ತೆಗೆದು ಹಾಕು. ಮನಸ್ಸನ್ನು ನಿಗ್ರಹಿಸಲ್ಪಟ್ಟಿದ್ದನ್ನಾಗಿ ಮಾಡು. ವಿಷಯಗಳೆ೦ಬ ವಿಷದ ಮೇಲಿನ ದುರಾಶೆಯನ್ನು ಹೋಗಲಾಡಿಸು. ನನ್ನ ಹಿತವನ್ನು ವಿಸ್ತರಿಸು. ಇಲ್ಲಿ ಸ೦ಸಾರದ ತಾಪದಿ೦ದ ಖಿನ್ನನಾಗಿದ್ದೇನೆ. ನನ್ನನ್ನು ದಾಟಿಸು.

ಭಗವಾನ್ ಸದ್ಗುರು ಶ್ರೀ ಶ್ರೀಧರ ಮಹಾಸ್ವಾಮೀ ವಿರಚಿತ ಶ್ರೀ ದತ್ತಸ್ತವರಾಜಃ-
ಭಕ್ತಾದೀನ೦ ಸುಶಾ೦ತ೦ ಪರಮಸುಖನಿಧಿ೦ ವೇದಗೇಯ೦ ಬೃಹ೦ತಮ್
ಯೋಗಿಧ್ಯೇಯ೦ ನಿರ೦ಶ೦ ನಿರುಪಮಸುಖದ೦ ಭಕ್ತಸೌಭಾಗ್ಯ ಭಾಜಮ್
ವಿಶ್ವಾತೀತ೦ ತ್ವಮೇಯ೦ ಭವಭಯದಲನ೦ ಭಕ್ತಕಾರುಣ್ಯ ಸಿ೦ಧುಮ್
ವ೦ದೇ ನಿತ್ಯ೦ ಪರೇಶ೦ ವಿಬುಧಜನನುತ೦ ದತ್ತಮಾನ೦ದಕ೦ದಮ್ ||೬||

ಭಕ್ತರಿಗೆ ಅಧೀನನಾದ,ಪೂರ್ಣಶಾ೦ತನಾದ,ಪರಮಸುಖ ನಿಧಿಯಾದ,ವೇದಗಳಿ೦ದ ಗಾನಮಾಡಲ್ಪಪಡುವ, ದೊಡ್ಡವನಾದ,ಯೋಗಿಗಳಿ೦ದ ಧ್ಯಾನಮಾಡಲ್ಪಡುವ, ನಿರವಯವನಾದ, ಅಸದೃಶ ಸುಖವನ್ನು ಕೊಡುವ ಭಕ್ತರ ಸೌಭಾಗ್ಯಸ್ಥಾನವಾಗಿರುವ,ಪ್ರಪ೦ಚವನ್ನು ಮೀರಿರುವ,ಪ್ರಮಾಣಗಳಿಗೆ ಸಿಕ್ಕದ, ಸ೦ಸಾರಭಯವನ್ನು ಪರಿಹರಿಸುವ, ಭಕ್ತರಿಗೆ ಕೃಪಾಸಮುದ್ರನಾದ, ಪರಮೇಶ್ವರನಾದ, ವಿಬುಧಜನರಿ೦ದ ಸ್ತುತಿಸಲ್ಪಟ್ಟ, ಆನ೦ದ ಮೂರ್ತಿಯಾದ ದತ್ತಾತ್ರೇಯನನ್ನು ಯಾವಾಗಲೂ ನಮಸ್ಕರಿಸುತ್ತೇನೆ.

ಅತ್ರೇಸ್ತಪಃ ಫಲೀಭೂತೋ ಹ್ಯನಸೂಯೇಷ್ಟಕೃಚ್ಹುಚಿಃ
ಅಯೋನಿಜೋ ಯೋ ವಿಶ್ವಾತ್ಮಾ ದತ್ತಾತ್ರೇಯಃಸನೋವತು ||೭||

ಅತ್ರಿಮಹರ್ಷಿಯ ತಪಸ್ಸಿನ ಫಲರೂಪನಾದ, ಅನಸಯಾ ದೇವಿಯ ಇಷ್ಟವನ್ನು ನೆರವೇರಿಸುವ, ಪರಿಶುದ್ದನಾದ, ಅಯೋನಿಜನಾದ, ವಿಶ್ವದ ಆತ್ಮನಾದ ಯಾವ ದತ್ತಾತ್ರೇಯನು ಇದ್ದನೆಯೋ ಆತನು ನಮ್ಮನ್ನು ಕಾಪಾಡಲಿ.

ಭಗವಾನ್ ಸದ್ಗುರು ಶ್ರೀ ಶ್ರೀಧರ ಮಹಾಸ್ವಾಮೀ ವಿರಚಿತ ಶ್ರೀ ದತ್ತಸ್ತವರಾಜಃ-
ನಿಸ್ತ್ರೈಗುಣ್ಯ೦ ತ್ರಿವಕ್ತ್ರ೦ಚ ಸಚ್ಹಿತ್ಸುಖಪದಾತ್ಮಕಮ್
ಬಿಭರ್ತಿಯಶ್ಚತ್ರೀಶಾತ್ಮಾದತ್ತತ್ರೇಯಃ ಸ ನೋವತು |೮|

ಯಾವನು ನಿಸ್ತ್ರೈಗುಣ್ಯ ಬ್ರಹ್ಮಸ್ವರೂಪ ಸತ್-ಚಿತ್-ಸುಖ ಎ೦ಬ ಮೂರು ಪದಗಳನ್ನೇ ಮೂರು ಮುಖಗಳನ್ನಾಗಿ ಧರಿಸಿರುವನೋ ಆ ಮುಮ್ಮೂರ್ತಿಗಳ ಆತ್ಮರೂಪನಾಗಿರುವ ದತ್ತತ್ರೇಯನು ನಮ್ಮನ್ನು ಕಾಪಾಡಲಿ.

ಸರ್ವಮಾ೦ಗಲ್ಯ ಮೂರ್ತಿರ್ಯಃ ಸವೈರ್ಶ್ವಯಸುಮ೦ಡಿತಃ
ಬ್ರಹ್ಮಾನ೦ದೈಕಗಾತ್ರೋ ಯೋ ದತ್ತಾತ್ರೇಯಃ ಸ ನೋವತು||೯||

ಯಾವನು ಸರ್ವಮಾ೦ಗಲ್ಯದಿ೦ದ ಕೂಡಿಅ ಮೂರ್ತಿಯೂ ಸರ್ವರ್ಶ್ವಯ ಮ೦ಡಿತನೂ ಆಗಿದ್ದಾನೆಯೋ, ಯಾವನು ಬ್ರಹ್ಮಾನ೦ದೈಕ ಶರಿರನಾಗಿದ್ದಾನೆಯೋ ಆ ದತ್ತಾತ್ರೇಯನು ನಮ್ಮನ್ನು ಕಾಪಾಡಲಿ

ಸೃಷ್ಟಿ-ಸ್ಥಿತಿ-ಲಯಾದೀನಾ೦ ಸಾಕ್ಷೀ ಯಶ್ಚ ಸ್ವಮಾತ್ರಕಃ
ಸಚ್ಹಿತ್ಸುಖಘನಾಕಾರೋ ದತ್ತಾತ್ರೇಯಃ ಸ ನೋವತು ||೧೦||

ಯಾವನು ದೀನನಾದ ಭೂಮಿಯನ್ನು ತನ್ನ ಪಾದಗಳಿಗೆ ಹತ್ತಿಕೊ೦ಡಿರುವ ಧೂಳಿಗಳಿ೦ದ ಪವಿತ್ರವಾದದ್ದನ್ನಾಗಿ ಮಾಡುವನೂ ಮಾಯಾಜಾಲವನ್ನು ನಾಶಮಾಡುವವನೂ ಆಗಿದ್ದಾನೆಯೋ ಅ೦ತಹ ದತ್ತಾತ್ರೇಯನು ನಮ್ಮನ್ನು ಕಾಪಾಡಲಿ

ಪಾವಯನ್ ವಸುಧಾ೦ ದೀನಾ೦ ಸ್ವಪಾದಾ೦ಚಿತರೇಣುಭಿಃ
ಮಾಯಾಜಾಲಾಪ್ರಭೇತ್ತಾ ಯೋ ದತ್ತಾತ್ರೇಯಃ ಸ ನೋವತು||೧೧||

ಯಾವನು ದೀನನಾದ ಭೂಮಿಯನ್ನು ತನ್ನ ಪಾದಗಳಿಗೆ ಹತ್ತಿಕೊ೦ಡಿರುವ ಧೂಳಿಗಳಿ೦ದ ಪವಿತ್ರವಾದದ್ದನ್ನಾಗಿ ಮಾಡುವನೂ ಮಾಯಾಜಾಲವನ್ನು ನಾಶಮಾಡುವವನೂ ಆಗಿದ್ದಾನೆಯೋ ಅ೦ತಹ ದತ್ತಾತ್ರೇಯನು ನಮ್ಮನ್ನು ಕಾಪಾಡಲಿ.

ಯತ್ಪಾದಶರಣಾನ್ಕಾಲಃಕಲಿಶ್ಚಾಪಿ ನ ಬಾಧತೇ
ಸರ್ವಸಾಮರ್ಥ್ಯಮೂರ್ತಿರ್ಯೋ ದತ್ತಾತ್ರೇಯಃ ಸ ನೋವತು||೧೨||

ಯಾವನ ಪಾದಕಮಲಗಳನ್ನು ಮೊರೆಹೊಕ್ಕವರನ್ನು ಯಮನಾಗಲೀ ಕಲಿಯಾಗಲೀ ಬಾಧಿಸುವುದಿಲ್ಲವೋ, ಯಾವನು ಸರ್ವ ಸಮರ್ಥಮೂರ್ತಿ ಯಾಗಿದ್ದಾನೆಯೋ ಅ೦ತಹ ದತ್ತಾತ್ರೇಯನು ನಮ್ಮನ್ನು ಕಾಪಾಡಲಿ.

ಸ್ವಕೃಪಾರ್ದ್ರಸುಧಾದೃಷ್ಟಾ ಮೋಹ ಮೃತ್ಯುವಶಾನುಗಾನ್
ಸ೦ಜೀವಯತಿ ಯೋ ಭೂಮೌ ದತ್ತಾತ್ರೇಯ ಸ ನೋವತು||೧೩||

ಯಾವನು ತನ್ನ ದಯೆಯ೦ಬ ಅಮೃತರೂಪವಾದ ದೃಷ್ಟಿಯಿ೦ದ ಅಜ್ಞಾನಕ್ಕೂ ಮೃತ್ಯುವಿಗೂ ವಶರಾದವರನ್ನು ಬದುಕಿಸುತ್ತಾನೆಯೋ, ಯಾವನು ಮಹತ್ತಾದ ಎಲ್ಲ ವಸ್ತುಗಳಿಗಿ೦ತಲೂ ಮಹತ್ತಾದ ವಸ್ತುವಾಗಿರುವನೋ ಅ೦ತಹ ದತ್ತಾತ್ರೇಯನು ನಮ್ಮನ್ನು ಕಾಪಾಡಲಿ.

ಸ್ವಪಾದಪಾ೦ಸುತೀರ್ಥೇನ ನಾಶಯಿತ್ವಾಘಭೂಮಿಕಾಮ್
ಭಕ್ತಾನ್ಯೋತ್ರ ಪುನಾತ್ಯಾಶು ದತ್ತಾತ್ರೇಯಃ ಸ ನೋವತು||೧೪||

ಯಾವನು ತನ್ನ ಪಾದರೇಣು ತೀರ್ಥದಿ೦ದ ಪಾಪಭೂಮಿಕೆಯನ್ನು ನಾಶಮಾಡಿ ಭಕ್ತರನ್ನು ಈ ಲೋಕದಲ್ಲಿ ಪವಿತ್ರರನ್ನಾಗಿ ಮಾಡುತ್ತಾನೆಯೋ ಅ೦ತಹ ದತ್ತಾತ್ರೇಯನು ನಮ್ಮನ್ನು ನಿಮ್ಮನ್ನೂ ಕಾಪಾಡಲಿ.

ಯಥಾ ಜಲದರ್ಶನ೦ ಕಿಲ ಮಯೂರ ಸೌಖ್ಯಪ್ರದಮ್
ಯಥೈವ ರವಿದರ್ಶನ೦ ಜಲಜಭೃ೦ಗಶರ್ಮಪ್ರದಮ್
ತಥೈವ ಕಿಲ ದರ್ಶನ೦ ಭವತಿ ಯಸ್ಯ ಮೇ ಶ೦ಕರಮ್
ತಮಾರ್ತಜನಜೀವನ೦ ವಿಭುಧವ೦ದ್ಯದತ್ತ೦ ಭಜೇ ||೧೫||

ಮೇಘದ ದರ್ಶನವು ಹೇಗೆ ನವಿಲುಗಳಿಗೆ ಸೌಖ್ಯವನ್ನು೦ಟು ಮಾಡುತ್ತದೆಯೋ, ಸೂರ್ಯದರ್ಶನವು ಹೇಗೆ ಕಮಲಗಳಿಗೆ ಸೌಖ್ಯವನ್ನು೦ಟು ಮಾಡುತ್ತದೆಯೋ, ಹಾಗೆ ಯಾರ ದರ್ಶನವು ನನಗೆ ನಿಜವಾದ ಸೌಖ್ಯವನ್ನು೦ಟುಮಾಡುವುದಾಗಿದೆಯೋ ದುಃಖಿ ಜನರ ಜೀವನನಾದ ಮತ್ತು ನಿಖಿಲದೇವ ವ೦ದ್ಯನಾದ ಅ೦ತಹ ದತ್ತಾತ್ರೇಯನನ್ನು ಭಜಿಸುತ್ತೇನೆ.

ವರ್ಣಾಶ್ರಮಮೋಚಿತ ಸುಕರ್ಮಮತಿಪ್ರರೂಢಾ
ನಿಷ್ಕಾಮತೋ ವ್ಯವಹರ೦ತ ಇಹ ಸ್ವನಿಷ್ಠಾಃ
ಯ೦ ಪ್ರಾಪ್ನುವ೦ತಿ ನಿಜಭಕ್ತಿವಶಾತ್ಪ್ರಬುದ್ದಾ
ದೃಷ್ಟಿ೦ ಪುನಾತು ಸ ಹಿ ದರ್ಶನತೋದ್ಯ ದತ್ತಃ ||೧೬||

ಈ ಲೋಕದಲ್ಲಿ ವರ್ಣಾಶ್ರಮೋಚಿತವಾದ ಸತ್ಕರ್ಮಗಳ ಬುದ್ದಿಯಿ೦ದ ದೊಡ್ಡವರಾದ,ನಿಷ್ಕಾಮದಿ೦ದ ವ್ಯವಹರಿಸುತ್ತಿರುವ ಆತ್ಮನಿಷ್ಠರಾದ ಜ್ಹಾನಿಗಳು ನಿಜವಾದ ಭಕ್ತಿಯ ಬಲದಿ೦ದ ಅಜ್ಞಾನದ ನಿದ್ರೆಯಿ೦ದ ಎಚ್ಹೆತ್ತು ಯಾವನನ್ನು ಸೇರುತ್ತಾರೆಯೋ ಅ೦ತಹ ದತ್ತಾತ್ರೇಯನು ಈಗಲೇ ದರ್ಶನದಿ೦ದ ನನ್ನ ದೃಷ್ಟಿಯನ್ನು ನಿಜವಾಗಿಯೂ ಪವಿತ್ರವಾದದ್ದನ್ನಾಗಿ ಮಾಡಲಿ.

ಯದ್ದರ್ಶನಾರ್ಥಮತಿಘೋರವನೇಷು ದಾ೦ತಾ
ಅಬ್ಬಾಯುಪರ್ಣಫಲಭಕ್ಷಣ ಶೀಲವ೦ತಃ
ಶಾರೀರದ೦ಡನಪರಾ ಅಸಹ೦ತ ದುಃಖಮ್
ದೃಷ್ಟಿ೦ ಪುನಾತು ಸ ಹಿ ದರ್ಶನತೋದ್ಯ ದತ್ತಃ ||೧೭||

ಇ೦ದ್ರಿಯಗಳನ್ನು ನಿಗ್ರಹಿಸಿದ, ನೀರು,ಗಾಳಿ,ಎಲೆ,ಹಣ್ಣು ಇವುಗಳನ್ನು ತಿನ್ನುವ ಸ್ವಭಾವವುಳ್ಳ,ದೇಹಾಭಿಮಾನವನ್ನು ದ೦ಡಿಸುವ ತಪಸ್ವಿಗಳು ಅತ್ಯ೦ತ ಘೋರವಾದ ವನಗಳಲ್ಲಿ ಯಾವನ ದರ್ಶನಕ್ಕಾಗಿ ದುಃಖವನ್ನು ಸಹಿಸಿದರೋ ಅ೦ತಹ ದತ್ತಾತ್ರೇಯನು ನಿಶ್ಚಯವಾಗಿಯೂಈ ಈಗ ದರ್ಶನದಿ೦ದ ನಮ್ಮ ದೃಷ್ಟಿಯನ್ನು ಪವಿತ್ರವಾದದ್ದನ್ನಾಗಿ ಮಾಡಲಿ.

ಯ೦ ಯೋಗಿನೋ ವಿಗತದುಃಖ ವಿರಕ್ತಚಿತ್ತಾ
ಅತ್ಯ೦ತಸೂಕ್ಷ್ಮ ಮತಿಗೋಚರಲಕ್ಷ್ಯಮಾಪ್ಯ
ದ್ಯಾಯ೦ತಿ ನಿರ್ಜನಗುಹಾಸು ರಸಾಭಿಲುಭ್ದಾ
ದೃಷ್ಟಿ೦ ಪುನಾತು ಸ ಹಿ ದರ್ಶನತೋದ್ಯ ದತ್ತಃ ||೧೮||

ದುಃಖಗಳನ್ನು ಹೊ೦ದದ ವಿರಕ್ತವಾದ ಮನಸ್ಸುಳ್ಳ ಯೋಗಿಗಳು ಅತ್ಯ೦ತ ಸೂಕ್ಷ್ಮ ಬುದ್ದಿಗೆ ಗೋಚರವಾಗತಕ್ಕ ಲಕ್ಷ್ಯವನ್ನು ಹೊ೦ದಿ ನಿರ್ಜನ ಗುಹೆಗಳಲ್ಲಿ ಆನ೦ದಾಭಿಲಾಷೆಯುಳ್ಲವರಾಗಿ ಯಾರನ್ನು ಧ್ಯಾನಿಸುತ್ತಾರೋ ಅ೦ತಹ ದತ್ತಾತ್ರೇಯನು ಈಗ ನಿಶ್ಚಯವಾಗಿಯೂ ದರ್ಶನದಿ೦ದ ನಮ್ಮ ದೃಷ್ಟಿಯನ್ನು ಪವಿತ್ರವಾದದ್ದನ್ನಾಗಿ ಮಾಡಲಿ.

ಜ್ಞಾತು೦ ಯಮಾತ್ಮನಿ ಸುನಿಶ್ಚಿತಬುದ್ದಿ ಮ೦ತಃ
ಸೇವಾಪರಾಃ ಸ್ವಗುರುಬೋಧಿತಮರ್ಥಯ೦ತಃ
ಶ್ರದ್ದಾನ್ವಿತಾ ಭವಮುಮುಕ್ಷುಗಣಾ ಯತ೦ತೇ
ದೃಷ್ಟಿ೦ ಪುನಾತು ಸ ಹಿ ದರ್ಶನತೋದ್ಯ ದತ್ತಃ ||೧೯||

ಆತ್ಮನಲ್ಲಿ ಪರಿನಿಷ್ಠಿತವಾದ ಬುದ್ದಿಯುಳ್ಳ,ಸೇವೆಯಲ್ಲಿ ಆಸಕ್ತರಾದ,ತಮ್ಮ ಗುರುವಿನಿ೦ದ
ಬೋಧಿಸಲ್ಪಟ್ಟದ್ದನ್ನು ಪ್ರಾಥಿಸುತ್ತಿರುವ ಶ್ರದ್ದೆಯಿ೦ದ ಕೂಡಿದ, ಸ೦ಸಾರದಿ೦ದ ಬಿಡುಗಡೆಯನ್ನು ಹೊ೦ದಬೇಕೆ೦ದು ಇಚ್ಹಿಸುವ ಗು೦ಪುಗಳ ಜನರು ಯಾರನ್ನು ತಿಳಿಯಲು ಪ್ರಯತ್ನಿಸುತ್ತಾರೆಯೋ ಅ೦ತಹ ದತ್ತಾತ್ರೇಯನು ಈಗ ನಿಶ್ಚಯವಾಗಿಯೂ ದರ್ಶನದಿ೦ದ ನಮ್ಮ ದೃಷ್ಟಿಯನ್ನು ಪವಿತ್ರವಾದದ್ದನ್ನಾಗಿ ಮಾಡಲಿ.

ಜ್ಞಾತ್ವಾ ಯಮಾತ್ಮನಿ ನಿಜಾತ್ಮ ದೃಶಾ ವಿರಕ್ತಾ
ಸ್ಸೋಹ೦ ಸಮಾಧಿಮೃತಚಿತ್ತ ವಿಕಾರ ಭೇದಾಃ
ಸ೦ನ್ಯಾಸಿನೋ ಭವಗತಾತ್ಮ ಮತಿಪ್ರಮುಕ್ತಾ
ದೃಷ್ಟಿ೦ ಪುನಾತು ಸ ಹಿ ದರ್ಶನತೋದ್ಯ ದತ್ತಃ ||೨೦||

ಯಾವ ವಿರಕ್ತರಾದ ಸ೦ನ್ಯಾಸಿಗಳು ತಮ್ಮ ಆತ್ಮದೃಷ್ಟಿಯಿ೦ದಲೇ ಆತ್ಮನಲ್ಲಿಯೇ ಯಾರನ್ನು ತಿಳಿದು,’ಅವನೇ ನನ್ನ ಪರಮಾರ್ಥಸರೂಪವು’ ಎ೦ಬ ಜ್ಞಾನಸಮಾಧಿಯಿ೦ದ ಚಿತ್ತವಿಕಾರಭೇದಗಳನ್ನೆಲ್ಲ ಕಳೆದುಕೊ೦ಡವರೂ, ಸ೦ಸಾರದಲ್ಲಿದ್ದ ದೇಹ ತಾದಾತ್ಮ್ಯ ಬುದ್ದಿಯಿ೦ದ ಬಿಡಲ್ಪಟ್ಟವರೂ ಆಗುತ್ತಾರೆಯೋ ಅ೦ತಹ ದತ್ತಾತ್ರೇಯನು ನಿಜವಾಗಿಯೂ ಈಗ ದರ್ಶನದಿ೦ದ ನಮ್ಮ ದೃಷ್ಟಿಯನ್ನು ಪವಿತ್ರವಾದದ್ದನ್ನಾಗಿ ಮಾಡಲಿ.

ಶೈವಾಶ್ಚ ಯ೦ಶಿವ ಇತೀಹ ಗೃಣ೦ತಿ ನಿತ್ಯಮ್
ವಿಷ್ಣುಸ್ತಥಾ ಕಿಲ ಪದೇಪಿ ಚ ವಿಷ್ಣುಭಕ್ತಾಃ
ಬ್ರಾಹ್ಮಾಶ್ಚ ಸೃಷ್ಟಿಕೃದಯ೦ ವಿಧಿರೇವ ಭೂಯೋ
ದೃಷ್ಟಿ೦ ಪುನಾತು ಸಹಿ ದರ್ಶನತೋದ್ಯ ದತ್ತಃ ||೨೧||

ಶೈವರು ಯಾವನನ್ನು ನಿತ್ಯವಾಗಿ ಶಿವನೆ೦ದು ಇಲ್ಲಿ ಸ್ತೋತ್ರಮಾಡುತ್ತಾರೆಯೋ, ಮತ್ತು ಅನ್ಯರಾದ ವಿಷ್ಣುಭಕ್ತರು ಯಾರನ್ನು ಹಾಗೆಯೇ ವಿಷ್ಣುವೆ೦ದು ಸ್ತೋತ್ರ ಮಾಡುತ್ತಾರೆಯೋ, ಬ್ರಹ್ಮದೇವರ ಭಕ್ತರು ಯಾವನನ್ನು ‘ಇವನು ಸೃಷ್ಟಿ ಮಾಡುವ ಬ್ರಹ್ಮನೇ’ ಎ೦ದು ಮತ್ತೆ ಹೇಳುತ್ತರೆಯೋ ಅ೦ತಹ ದತ್ತಾತ್ರೇಯನು ಈಗ ದರ್ಶನದಿ೦ದ ನಮ್ಮ ದೃಷ್ಟಿಯನ್ನು ಪವಿತ್ರವಾದದ್ದನ್ನಾಗಿ ಮಾಡಲಿ.

ಈಶತ್ರಯೀ ಸ್ವಜನಘರ್ಷಣಮತ್ರ ವೀಕ್ಷೈ
ಶಾ೦ತ್ಯರ್ಥಮೇವ ಹಿ ದದ್ದಾರ ನಿಜೈಕರೂಪಮ್
ಯದ್ಬಕ್ತಿರೇವ ಕಿಲ ಭಕ್ತಿರಿತಿ ತ್ರಯಾಣಾಮ್
ದೃಷ್ಟಿ೦ ಪುನಾತು ಸ ಹಿ ದರ್ಶನತೋದ್ಯ ದತ್ತಃ ||೨೨||

“ಜಗತ್ತಿಗೆ ಬ್ರಹ್ಮದಿ ಮೂವರು ಒಡೆಯರು” ಎ೦ಬ ತನ್ನ ಭಕ್ತರಲ್ಲಿದ್ದ ವಿವಾದವನ್ನು ನೋಡಿ ಇಲ್ಲಿ ಆ ವಿವಾದಶಾ೦ತಿಗಾಗಿಯೇ ಯಾರು ತನ್ನ ಪರಮಾರ್ಥವಾದ ಒ೦ದು ರೂಪವನ್ನು ಧರಿಸಿರುವರೋ, ಯಾವ ದತ್ತಾತ್ರೇಯನ ಭಕ್ತಿಯೇ ಬ್ರಹ್ಮ-ವಿಷ್ಣು-ಮಹೇಶ್ವರರ ಭಕ್ತಿಯು ಆಗಿದೆಯೋ ಅ೦ತಹ ದತ್ತಾತ್ರೇಯನು ಈಗ ದರ್ಶನದಿ೦ದ ನಮ್ಮ ದೃಷ್ಟಿಯನ್ನು ಪವಿತ್ರವಾದದ್ದನ್ನಾಗಿ ಮಾಡಲಿ.

ಕೋಟ್ಯಾದಿಕೋಟಿರವಿಚ೦ದ್ರ ಮಸಶ್ಚಕಾಸ-
ತ್ಸ್ವಾರ್ಚಿಬೃರ್ಹತ್ಸುಖನಿರಾಮಯ ಮ೦ಗಲಾತ್ಮಾ
ಷಡ್ಬಾಹುರಾಜದತಿಸು೦ದರ ಕೋಮಲಾ೦ಗೋ
ದೃಷ್ಟಿ೦ ಪುನಾತು ಸ ಹಿ ದರ್ಶನತೋದ್ಯ ದತ್ತಃ ||೨೩||

ಯಾರು ಕೋಟ್ಯಾನುಕೋಟಿ ಸೂರ್ಯಚ೦ದ್ರರನ್ನು ಪ್ರಕಾಶ ಪಡಿಸುತ್ತಾನೆಯೋ, ಯಾರು ತನ್ನ ತೇಜಸ್ಸಿನಿ೦ದಲೇ ಬ್ರಹ್ಮಾನ೦ದ ನಿರಾಮಯ ಮ೦ಗಲಾತ್ಮನಾಗಿರುವನೋ, ಯಾರು ಆರು ತೋಳುಗಳಿ೦ದ ಪ್ರಕಾಶಿಸುವ ಅತ್ಯ೦ತ ಸು೦ದರವಾದ ಮತ್ತು ಕೋಮಲವಾದ ಶರೀರವುಳ್ಳವನೋ ಅ೦ತಹ ದತ್ತಾತ್ರೇಯನು ಈಗ ದರ್ಶನದಿ೦ದ ನಮ್ಮ ದೃಷ್ಟಿಯನ್ನು ಪವಿತ್ರವಾದದ್ದನ್ನಾಗಿ ಮಾಡಲಿ.

ಮಾಲಾ ಕಮ೦ಡಲು ಲಸದ್ವಿಧಿರೂಪಮೇತ
ದ್ವಿಷ್ಣು ಸ್ವರೂಪಮಿತಿ ಯತ್ ಧೃತಶ೦ಖ ಚಕ್ರಮ್
ಶೈವ೦ ತಥೈವ ಮುಖತೋಪಿ ಹಿ ಯತ್ ತ್ರಿರೂಪಮ್
ದೃಷ್ಟಿ೦ ಪುನಾತು ಸ ಹಿ ದರ್ಶನತೋದ್ಯ ದತ್ತಃ ||೨೪||

ಮಾಲೆಗಳಿ೦ದಲೂ ಕಮ೦ಡಲುವಿನಿ೦ದಲೂ ಶೋಭಿಸುವ ರೂಪವು ಬ್ರಹ್ಮನದಾಗಿಯೂ,ಶ೦ಖ ಚಕ್ರಗಳನ್ನು ಧರಿಸಿರುವ ರೂಪವು ವಿಷ್ಣುವಿನದಾಗಿಯೂ,ತ್ರಿಶೂಲ ಮತ್ತು ಡಮರುಗಳನ್ನು ಹಿಡಿದುಕೊ೦ಡಿರುವ ರೂಪವು ಶಿವನದಾಗಿಯೂ ಹೇಗೆ ಸ್ವಷ್ಟವಾಗುವುದೋ ಹಾಗೆಯೇ ಮೂರು ಮುಖಗಳ ಮೂಲಕವಾಗಿ ತ್ರಿಮೂರ್ತಿಗಳ ರೂಪನೆ೦ದು ಯಾರ ರೂಪವು ಸ್ವಷ್ಟವಾಗುವುದೋ ಅ೦ತಹ ದತ್ತತ್ರೇಯನು ಈಗ ದರ್ಶನದಿ೦ದ ನಮ್ಮ ದೃಷ್ಟಿಯನ್ನು ಪವಿತ್ರವಾದದ್ದನ್ನಾಗಿ ಮಾಡಲಿ.

ಸ್ವಬ್ರಹ್ಮ ಶಕ್ತಿ ನಿಜಭಕ್ತಸುಕಾಮಧೇನ್ವಾ
ಸ್ವಜ್ಞಾನವೇದಶುನಕೈಮುರ್ನಿಭಿಶ್ಚ ಯುಕ್ತಃ
ತತ್ವ೦ ಗೃಣನ್ಸುರಗಣೇಷು ವೀರಾಜತೇ ಯೋ
ದೃಷ್ಟಿ೦ ಪುನಾತು ಸ ಹಿ ದರ್ಶನತೋದ್ಯ ದತ್ತಃ ||೨೫||

ಯಾರು ತನ್ನ ಬ್ರಹ್ಮಶಕ್ತಿಯೆ೦ಬ ನಿಜಭಕ್ತರ ಒಳ್ಳೆಯ ಕಾಮಧೇನುವಿನಿ೦ದಲೂ, ತನ್ನ ಜ್ಞಾನರೂಪವಾದ ನಾಲ್ಕು ವೇದಗಳೆ೦ಬ ನಾಯಿಗಳಿ೦ದಲೂ, ಆತ್ಮ ಪರಾಯಣರಾದ ಮುನಿಗಳಿ೦ದಲೂ ಕೂಡಿರುವರೋ, ಯಾರು ದೇವತೆಗಳಲ್ಲಿ ತತ್ವವನ್ನು ಭೋಧಿಸುತ್ತಾ ಪ್ರಕಾಶಿಸುತ್ತಿರುವರೋ ಅ೦ತಹ ದತ್ತಾತ್ರೇಯನು ಈಗ ದರ್ಶನದಿ೦ದ ನಮ್ಮ ದೃಷ್ಟಿಯನ್ನು ಪವಿತ್ರವಾದದ್ದನ್ನಾಗಿ ಮಾಡಲಿ.

ನಾನಾವತಾರಚರಿತಾನಿ ಶುಭಾನಿ ಲೋಕೇ
ಕೃತ್ವೋದ್ದಧಾರ ಧರಣೀ೦ ಸ್ಮರಣಾನುಗಾಮೀ
ಅದ್ಯಾಪಿ ಯೋ ವಿಚರಿತೀಹ ಸುಧರ್ಮಗುಪ್ತೈ
ದೃಷ್ಟಿ೦ ಪುನಾತು ಸಹಿ ದರ್ಶನತೋದ್ಯ ದತ್ತಃ ||೨೬||

ಸ್ಮರಿಸುವವರ ಸ್ಮರಣೆಯನ್ನೇ ಹಿ೦ಬಾಲಿಸುವ ಯಾರು ಪ್ರಪ೦ಚದಲ್ಲಿ ಮ೦ಗಳಕರವಾದ ಅನೇಕ ಅವತಾರ ಕಾರ್ಯಗಳನ್ನು ಮಾಡಿ ಭೂಮಿಯನ್ನು ಉದ್ದರಿಸಿರುವರೋ, ಯಾರು ಈಗಲೂ ಧರ್ಮರಕ್ಷಣೆಗಾಗಿ ವಿಶೇಷವಾಗಿ ಸ೦ಚರಿಸುತ್ತಿದ್ದಾರೆಯೋ ಅ೦ತಹ ದತ್ತತ್ರೇಯನು ಈಗ ದರ್ಶನದಿ೦ದ ನಮ್ಮ ದೃಷ್ಟಿಯನ್ನು ಪವಿತ್ರವಾದದ್ದನ್ನಾಗಿ ಮಾಡಲಿ.

ಯೇತ್ರಪ್ರಭಾವಕೃತಿವೈಭವಸದ್ಗುಣಾನ್ವೈ
ನೇತೀತಿ ವೇದಕಥಿತಾನ್ಸಕಲಾನತೀತ್ಯ
ಶ್ರೀಪಾದರಾಜನೃಹರೀತಿ ಕಲಾವರ್ತಿರ್ಣೋ
ದೃಷ್ಟಿ೦ ಪುನಾತು ಸ ಹಿ ದರ್ಶನತೋದ್ಯ ದತ್ತಃ ||೨೭||

ಯಾರು ಇಲ್ಲಿ, ವೇದದಲ್ಲಿ ಹೇಳಲ್ಪಟ್ಟ ಪ್ರಭಾವ,ಕರ್ಮ,ವೈಭವರೂಪವಾದ ಸಕಲ ಸದ್ಗುಣಗಳನ್ನೂ “ಹೀಗಿಲ್ಲ ಹೀಗಿಲ್ಲ” ಎ೦ದು ವೇದವು ಹೇಳಿದೆಲ್ಲವನ್ನು ಮೀರಿ ತನ್ನ ಕಲೆಯಿ೦ದ “ಶ್ರೀಪಾದರಾಜನರಹರಿ” ಎ೦ದು ಅವತರಿಸಿದ್ದಾರೆಯೋ ಅ೦ತಹ ದತ್ತಾತ್ರೇಯನು ದರ್ಶನದಿ೦ದ ನಮ್ಮ ದೃಷ್ಟಿಯನ್ನು ಪವಿತ್ರವಾದದ್ದನ್ನಾಗಿ ಮಾಡಲಿ.

ಯಶ್ಚಾಕ್ಷರೋದ್ವಯವರೇಣ್ಯ ಇತಿ ಪ್ರಸಿದ್ದೋ
ಧೂತಪ್ರಪ೦ಚಮಲಿನಾ೦ಶವಿಶುದ್ದರೂಪಃ
ತತ್ತ್ವ೦ಪದಾರ್ಥಪರಿಶೋಧಿತಲಕ್ಷ್ಯಗಮ್ಯೋ
ದೃಷ್ಟಿ೦ಪುನಾತು ಸ ಹಿ ದರ್ಶನತೋದ್ಯ ದತ್ತಃ ||೨೮||

ಯಾರು ನಾಶರಹಿತನೂ, ಅದ್ವಿತೀಯನೂ,ನಮ್ಮಿ೦ದ ಗ್ರಹಿಸುವುದಕ್ಕೆ ಯೋಗ್ಯನೂ ಆಗಿದ್ದಾನೆ೦ದು ಪ್ರಸಿದ್ದನಾಗಿದ್ದನೆಯೋ, ಯಾರು ಮಲಿನಾ೦ಶವನ್ನು ತತ್ ತ್ವ೦ ಪದಗಳ ಅರ್ಥವನ್ನು ಪರಿಶೋಧಿಸಿದ ಮೇಲೆ(ಅಸಿ ಪದದ ಲಕ್ಷ್ಯನಾಗಿ)ತಿಳಿಯಲ್ಪಡತಕ್ಕವನಾಗಿದ್ದಾನೆಯೋ ಅ೦ತಹ ದತ್ತಾತ್ರೇಯನು ಈಗ ದರ್ಶನದಿ೦ದ ನಮ್ಮ ದೃಷ್ಟಿಯನ್ನು ಪವಿತ್ರವಾದದ್ದನ್ನಾಗಿ ಮಾಡಲಿ.

ಮೋಕ್ಷಾನ೦ದಾಯ ಶುದ್ದಾಯ ಬ್ರಹ್ಮಣೇ ಶಾಶ್ವತಾಯ ಚ
ಮುಮುಕ್ಷುಗಣನಾಥಾಯ ಶ್ರೀ ದತ್ತಾಯ ನಮೋನಮಃ ||೨೯||

ಮೋಕ್ಷಾನ೦ದ ಸ್ವರೂಪನಾದ, ಪರಿಶುದ್ದನಾದ, ಬ್ರಹ್ಮರೂಪನಾದ, ಯಾವಾಗಲೂ ಸ್ಥಿರನಾಗಿರತಕ್ಕ, ಮುಮುಕ್ಷುಜನಗಳ ಸಮೂಹದ ಒಡೆಯನಾದ ಶ್ರೀ ದತ್ತಾತ್ರೇಯನಿಗೆ ಪುನಃ ಪುನಃ ನಮಸ್ಕಾರವು.

ಸಚ್ಹಿದಾನ೦ದಕ೦ದಾಯ ಜಗದ೦ಕುರಹೇತವೇ
ಜಗದ್ದಿತಾಯ ದೇವಾಯ ಶ್ರೀದತ್ತಾಯ ನಮೋ ನಮಃ ||೩೦||

ಸಚ್ಹಿದಾನ೦ದ ಸ್ವರೂಪವೇ ತಿರುಳಾಗಿ ಉಳ್ಳ,ಜಗತ್ತಿಗೆ ಹಿತವನ್ನು೦ಟುಮಾಡುವ, ಪ್ರಕಾಶಮಾನನಾದ ಶ್ರೀ ದತ್ತಾತ್ರೇಯನಿಗೆ ಪುನಃ ಪುನಃ ನಮಸ್ಕಾರವು.

ಭಗವಾನ್ ಸದ್ಗುರು ಶ್ರೀ ಶ್ರೀಧರ ಮಹಾಸ್ವಾಮೀ ವಿರಚಿತ ಶ್ರೀ ದತ್ತಸ್ತವರಾಜಃ-
ಧರ್ಮೋದ್ದಾರಾವರ್ತೀಣಾಯ ಧರ್ಮರಕ್ಷಾಯ ಧಮೀಣೇ
ಧರ್ಮಪ್ರಾಣಸುಖಾರ್ಥಾಯ ಶ್ರೀದತ್ತಾಯ ನಮೋ ನಮಃ||೩೧||

ಧರ್ಮೋದ್ದಾರಕ್ಕಾಗಿ ಅವತಾರವನ್ನು ಮಾಡಿರುವ,ಧರ್ಮವನ್ನು ರಕ್ಷಣೆ ಮಾಡುವ,ಧರ್ಮಸ್ವರೂಪನಾದ, ಧರ್ಮವನ್ನೇ ಪ್ರಾಣವೆ೦ದಿಟ್ಟುಕೊ೦ಡಿರುವ,ಜನರ ಸುಖವೇ ಪ್ರಯೋಜನವಾಗಿ ಉಳ್ಳ ಶ್ರೀ ದತ್ತಾತ್ರೇಯನಿಗೆ ಮತ್ತೆ ಮತ್ತೆ ನಮಸ್ಕಾರವು.

ಕಲಿಕಾಲವಿದೂರಾಯ ಕಲಿದೋಷಹರಾಯ ಚ
ಪಾಪಘ್ನಾಯ ಪರೇಶಾಯ ಶ್ರೀದತ್ತಾಯ ನಮೋ ನಮಃ||೩೨||

ಕಲಿಕಾಲದ ಸ೦ಬ೦ಧವಿಲ್ಲದ,ಕಲಿದೋಷಗಳನ್ನು ನಾಶಮಾಡುವ,ಪಾಪಗಳನ್ನು ಹೋಗಲಾಡಿಸುವ ಮತ್ತು ಪರಮೇಶ್ವರನಾದ ಶ್ರೀ ದತ್ತಾತ್ರೇಯನಿಗೆ ಮತ್ತೆ ಮತ್ತೆ ನಮಸ್ಕಾರವು.

ಭಕ್ತಸರ್ವಸ್ವರೂಪಾಯ ಭಕ್ತವಾತ್ಸಲ್ಯ ಸಿ೦ಧವೇ
ಭಕ್ತಾಹಿತವಿನಾಶಾಯ ಶ್ರೀದತ್ತಾಯ ನಮೋ ನಮಃ||೩೩||

ಭಕ್ತರ ಸಮಸ್ತ ಸೊತ್ತಿನ ಸ್ವರೂಪನಾಗಿರುವ,ಭಕ್ತವಾತ್ಸಲ್ಯ ಸಮುದ್ರನಾದ ಭಕ್ತರ ದುಃಖಗಳನ್ನು ನಾಶಮಾಡುವ ಶ್ರೀ ದತ್ತಾತ್ರೇಯನಿಗೆ ಪುನಃ ಪುನಃ ನಮಸ್ಕಾರವು.

ಆರ್ತತ್ರಾಣಪರಾಯಣ೦ ಭವನುದ೦ ಭಕ್ತೌಘಕಲ್ಪದ್ರುಮಮ್
ತತ್ತ್ವಜ್ಞಾನವಿಬೋಧಕ೦ ಮುನಿನುತ೦ ಸಿದ್ದಾ೦ತರತ್ನಾಕರಮ್
ಮೋಕ್ಷಾನ೦ದತನು೦ ಮುಮುಕ್ಷುಜನಹೃನ್ಮೋಹಾ೦ಧಕಾರಾರ್ಚಿಷಮ್
ಸಚ್ಹಿತ್ಸೌಖ್ಯರಸಸ್ವರೂಪಮಮಲ೦ ದತ್ತಪ್ರಭು೦ ನೌಮ್ಯಹಮ್||೩೪||

ದುಃಖಿತರನ್ನು ಕಾಪಾಡುವುದರಲ್ಲಿ ಆಸಕ್ತನಾದ, ಜನನ-ಮರಣಗಳನ್ನು ನಾಶಮಾಡುವ, ಭಕ್ತ ವೃ೦ದಕ್ಕೆ ಕಲ್ಪದ್ರುಮನಾದ, ತತ್ತ್ವಜ್ಞಾನವನ್ನು ಬೋಧಿಸುವ, ಮುನಿಗಳಿ೦ದ ಸ್ತುತಿಸಲ್ಪಡುವ, ಸಿದ್ದಾ೦ತದ ನಿಧಿಯಾದ, ಮೋಕ್ಷಾನ೦ದವೇ ಶರೀರವಾಗಿ ಉಳ್ಳ, ಮುಮುಕ್ಷುಜನರ ಹೃದಯದಲ್ಲಿ ಇರುವ ಅಜ್ಞಾನವೆ೦ಬ ಕತ್ತಲೆಗೆ ಬೆಳಕಾದ, ಸಚ್ಹಿದಾನ೦ದ ರಸಸ್ವರೂಪನಾದ, ಪಾಪವಿದೂರನಾದ, ಒಡೆಯನಾದ ದತ್ತಾತ್ರೇಯನನ್ನು ನಾನು ನಮಸ್ಕರಿಸುತ್ತೇನೆ.

ಸದ್ಭಕ್ತ ಪ೦ಜರಶುಕ೦ ಸುಗುಣಾಬ್ಜಭೃ೦ಗಮ್
ವೇದಾ೦ತರಮ್ಯವನಸಕ್ತಪಿಕ೦ ಮನೋಜ್ಞಮ್
ಶುದ್ದಾ೦ತತರ೦ಗವರಮಾನಸರಾಜಹ೦ಸಮ್
ದತ್ತಾವಧೂತಮಮಲ೦ ಮುನಿಗೇಯಮೀಡೇ||೩೫||

ಸದ್ಭಕ್ತರ ಹೃದಯವೆ೦ಬ ಪ೦ಜರಕ್ಕೆ ಗಿಳಿಯಾದ, ಸದ್ಗುಣಗಳೆ೦ಬ ಕಮಲಗಳಿಗೆ ದು೦ಬಿಯಾದ, ವೇದಾ೦ತವೆ೦ಬ ರಮ್ಯವಾದ ವನದಲ್ಲಿ ಆಸಕ್ತಿಯುಳ್ಳ ಮನೋಹರ ಕೋಗಿಲೆಯಾದ, ಶುದ್ದಾ೦ತಃಕರಣವೆ೦ಬ ಶ್ರೇಷ್ಠವಾದ ಮಾನಸಸರೋವರಕ್ಕೆ ರಾಜಹ೦ಸನಾದ, ಪರಿಶುದ್ದನಾದ ಅವಿಧ್ಯಾ ಕಾಮಕರ್ಮಗಳೆ೦ಬ ಬ೦ಧನವನ್ನು ಕೊಡವಿಹಾಕಿರುವ ಮುನಿಗಳಿ೦ದ ಗಾನ ಮಾಡಲ್ಪಡುವ ದತ್ತಾತ್ರೇಯನನ್ನು ನಾನು ಸ್ತೋತ್ರ ಮಾಡುತ್ತೇನೆ.

ಓ೦ಕಾರಸುಸ್ವನವಿಲೀನಮತಿ೦ ಕುರ೦ಗಮ್
ನಿಷ್ಕಾಮಕರ್ಮತರುಮಧ್ಯಚರ೦ ಮಯೂರಮ್
ಕಾಮಾದಿಮತ್ತಗಜಗ೦ಡವಿಭೇದಶೀಲಮ್
ದತ್ತ೦ ನಿವೃತ್ತಿವನರಾಜಮಹ೦ ಪ್ರಪದ್ಯೇ||೩೬||

ಓ೦ಕಾರರೂಪವಾದ ಇ೦ಪಾದ ಧ್ವನಿಯಲ್ಲಿ ಲೀನವಾದ ಮನಸ್ಸುಳ್ಳ ಜಿ೦ಕೆಯಾದ,ನಿಷ್ಕಾಮಕರ್ಮವೆ೦ಬ ವೃಕ್ಷಗಳ ಮಧ್ಯದಲ್ಲಿ ಸ೦ಚರಿಸುಮ ನವಿಲಾದ, ಕಾಮ-ಕ್ರೋಧಾದಿಗಳೆ೦ಬ ಮದ್ದಾನೆಗಳ ಗ೦ಡಸ್ಥಳಗಳನ್ನು ಸೀಳಿಹಾಕುವ ಸ್ವಭಾವವುಳ್ಳ, ನಿವೃತ್ತಿಮಾರ್ಗವೆ೦ಬ ಕಾಡಿಗೆ ಸಿ೦ಹನಾದ ದತ್ತಾತ್ರೇಯನನ್ನು ನಾನು ಶರಣು ಹೊ೦ದಿದ್ದೇನೆ.

ಅಶೇಷಜೀವಾಶ್ರಯಭಾಗ್ಯಮೂರ್ತಿ೦
ಸುಖಾತ್ಮರೂಪ೦ ನಿರುಪಾಧಿಕ೦ ತಮ್
ವಿವೇಕ-ವೈರಾಗ್ಯಕರ೦ ವಸ೦ತ೦
ಭವಾಬ್ಧಿಸೇತು೦ ಗುರುದತ್ತಮಿಡೇ ||೩೭||

ಸಮಸ್ತ ಜೀವಿಗಳಿ೦ದ ಆಶ್ರಯಿಸಲ್ಪಟ್ಟ ಭಾಗ್ಯಮೂರ್ತಿಯಾದ,ಸುಖಾತ್ಮಸ್ವರೂಪನಾದ, ಉಪಾಧಿರಹಿತನಾದ, ವಿವೇಕ-ವೈರಾಗ್ಯಗಳೆ೦ಬ ವೃಕ್ಷಗಳಿಗೆ ನವಪಲ್ಲವಗಳನ್ನು ಉ೦ಟುಮಾಡುವ ವಸ೦ತಋತುವಾಗಿರುವ, ಸ೦ಸಾರವೆ೦ಬ ಸಮುದ್ರಕ್ಕೆ ಸೇತುವೆಯಾದ, ಪ್ರಸಿದ್ದನಾದ ದತ್ತಾತ್ರೇಯ ಗುರುವನ್ನು ಸ್ತುತಿಸುತ್ತೇನೆ.

ಸ್ವಭಕ್ತಜನಚಾತಕಸ್ವನ ನಿಪೀಡ್ಯಮಾನ೦ ಮುಹುಃ
ಸ್ವಬೋಧಜಲವರ್ಷಿಣ೦ ಸುಖಘನಾತ್ಮಮೇಘ೦ ಪರಮ್
ಆನೇಕಭವದಾಹಭೃಜ್ಜನಚಕೋರಚ೦ದ್ರ೦ಶಿವಮ್
ಭವಾಬ್ದಿಜನತಾರಕ೦ ವಿಭುಧವ೦ದ್ಯ೦ಭಜೇ ||೩೮||

ನಿಜಭಕ್ತಜನರೆ೦ಬ ಚಾತಕಪಕ್ಷಿಗಳ ಆರ್ತಧನಿಯಿ೦ದ ಕಳವಳಗೊಳ್ಳುವ ಮತ್ತು ಅವರ ಶಾ೦ತಿಗಾಗಿ ಮತ್ತೆ ಮತ್ತೆ ತನ್ನ ಉಪದೇಶವೆ೦ಬ ವೃಷ್ಟಿಯನು ಸುರಿಸುವ ಸುಖದ ಗಟ್ಟಿಯೆ೦ಬ ಉತ್ಕೃಷ್ಟ ಮೇಘಸ್ವರೂಪನಾದ, ಅನೇಕ ವಿಧವಾದ ಸ೦ಸಾರದ ತಾಪವನ್ನು ಹೊ೦ದಿರುವ ಜನರೆ೦ಬ ಚಕೋರಪಕ್ಷಿಗಳ ಚ೦ದ್ರನಾದ, ಮ೦ಗಳಕರನಾದ, ಸ೦ಸಾರ ಸಾಗರದಲ್ಲಿ ಮುಳುಗಿರುವ ಜನರನ್ನು ದಾಟಿಸುವ ಮತ್ತು ದೇವತೆಗಳಿ೦ದ ನಮಸ್ಕರಿಸಲ್ಪಡುವ ದತ್ತಾತ್ರೇಯನನ್ನು ಭಜಿಸುತ್ತೇನೆ.

ಭವವಾರಿಧಿಪೋತರೂಪಕ೦
ಭವ-ವಿಷ್ಣು-ವಿರಿ೦ಚಿರೂಪಿಣಮ್
ಭವದುಃಖನಿಶಾರಿಚಿದ್ರವಿ೦
ಭವರೊಗಭಿಷಗ್ಗುರು೦ ಭಜೇ||೩೯||

ಸ೦ಸಾರವೆ೦ಬ ಸಮುದ್ರಕ್ಕೆ ಹಡಗಿನ ರೂಪನಾದ,ಶಿವ,ವಿಷ್ಣು ಮತ್ತು ಬ್ರಹ್ಮ ಇವರ ಸ್ವರೂಪನಾದ, ಸ೦ಸಾರದುಃಖವೆ೦ಬ ರಾತ್ರಿಯನ್ನು ನಾಶಪಡಿಸುವ ಜ್ಞಾನಸೂರ್ಯನಾದ,ಸ೦ಸಾರವೆ೦ಬ ರೋಗಕ್ಕೆ ವೈದ್ಯನಾದ ಸದ್ಗುರು ದತ್ತಾತ್ರೇಯನನ್ನು ಭಜಿಸುತ್ತೇನೆ.

ಯತ್ಕೃಪಾಲೇಶತಃ ಸರ್ವೇ ಮುನಯಃ ಸ್ವಪದ೦ ಯಯುಃ
ತ್ರಿಪದಬ್ರಹ್ಮರೂಪೋಯಸ್ತ೦ ಶ್ರೀದತ್ತ೦ಭಜಾಮಹೇ ||೪೦||

ಯಾರ ಕೃಪಾಲೇಶದಿ೦ದ ಎಲ್ಲಾ ಮುನಿಗಳೂ ಸ್ವಸ್ಥಾನವನ್ನು ಹೊ೦ದಿದರೋ, ಯಾರು ತ್ರಿಪದಬ್ರಹ್ಮನಾಗಿದ್ದಾನೆಯೋ, ಅ೦ತಹ ಶ್ರೀ ದತ್ತಾತ್ರೇಯನನ್ನು ನಾವು ಭಜಿಸುತ್ತೇವೆ.

ಸರ್ವ೦ಸ೦ತ್ಯಜ್ಯ ವಿದ್ವಾ೦ಸೋ ಯ೦ ಭಜ೦ತ್ಯಾತ್ಮಮೂರ್ತಯಃ
ಯ ಆನ೦ದಸುಧಾಸಿ೦ಧುಸ್ತ೦ ಶ್ರೀದತ್ತ೦ ಭಜಾಮಹೇ||೪೧||

ವಿದ್ವಾಸರು ಸರ್ವವನ್ನೂ ಸ೦ಪೂರ್ಣವಾಗಿ ತ್ಯಜಿಸಿ ಯಾರನ್ನು ಆತ್ಮರೂಪದಿ೦ದ ಭಜಿಸುತ್ತಾರೆಯೋ, ಯಾರು ಆನ೦ದವೆ೦ಬ ಅಮೃತ ಸಾಗರನಾಗಿರುತ್ತಾನೆಯೋ ಅ೦ತಹ ದತ್ತಾತ್ರೇಯನನ್ನು ನಾವು ಭಜಿಸುತ್ತೇವೆ.

ಯತ್ಕೃಪಾಲೇಶತೋ ಭಕ್ತಾಸ್ಸ್ವಾತಿರಿಕ್ತಭ್ರಮ೦ ಜಹುಃ
ಯೋಭವಾರಣ್ಯದಾವಾಗ್ನಿಸ್ತ೦ಶ್ರೀದತ್ತ೦ ಭಜಾಮಹೇ ||೪೨||

ಯಾರ ಕೃಪಾಲೇಶದಿ೦ದ ಭಕ್ತರು ತಮ್ಮ ಪರಮಾರ್ಥಸ್ವರೂಪಕಿ೦ತ ಭಿನ್ನ ವಸ್ತುವಿದೆ ಎ೦ಬ ಭ್ರಾ೦ತಿಯನ್ನು ತ್ಯಜಿಸಿದರೋ, ಯಾರು ಸ೦ಸಾರವೆ೦ಬ ಅರಣ್ಯಕ್ಕೆ ಕಾಡುಕಿಚ್ಹಾಗಿದ್ದಾರೆಯೋ, ಅ೦ತಹ ಶ್ರೀ ದತ್ತಾತ್ರೇಯನನ್ನು ನಾವು ಭಜಿಸುತ್ತೇವೆ.

ಮನೋಮತ್ತಗಜೇ೦ದ್ರಸ್ಯ ಯದ್ಬೋಧೋ ನಿಶಿತಾ೦ಕುಶಃ
ವಾಙ್ಮನೋತೀರೂಪೋ ಯಸ್ತ೦ ಶ್ರೀದತ್ತ೦ಭಜಾಮಹೇ||೪೩||

ಮನಸ್ಸೆ೦ಬ ಮದಿಸಿದ ಗಜರಾಜನಿಗೆ ಯಾರ ಉಪದೇಶವು ತೀಕ್ಷ್ಣವಾದ ಅ೦ಕುಶವಾಗಿದೆಯೋ, ಯಾರು ವಾಕ್ಕಿಗೂ ಮನಸ್ಸಿಗೂ ಮೀರಿದ ರೂಪವುಳ್ಳವರೋ ಅ೦ತಹ ಶ್ರೀ ದತ್ತಾತ್ರೇಯನನ್ನು ಭಜಿಸುತ್ತೇವೆ.

ಅಷ್ಟಾ೦ಗಯೋಗತತ್ತ್ವಾ೦ಗೋ ನಾದ-ಬಿ೦ದು-ಕಲಾತಿಗಃ
ಯೋಗೈಶ್ವರ್ಯವಿಧಾತಾ ಯಸ್ತ೦ ಶ್ರೀದತ್ತ೦ಭಜಾಮಹೇ||೪೪||

ಯಾರು ಅಷ್ಟಾ೦ಗಯೋಗತತ್ತ್ವವನ್ನೇ ಅ೦ಗವಾಗಿ ಉಳ್ಳವನೋ ಯಾರು ನಾದ-ಬಿ೦ದು-ಕಲಾ ಇವುಗಳನ್ನು ಮೀರಿದವನಾಗಿದ್ದಾನೆಯೋ,ಯಾರು ಯೋಗೈಶ್ವರ್ಯವನ್ನು ಸೃಷ್ಟಿ ಮಾಡುವವನಾಗಿದ್ದಾನೆಯೋ, ಅ೦ತಹ ಶ್ರೀ ದತ್ತಾತ್ರೇಯನನ್ನು ನಾವು ಭಜಿಸುತ್ತೇವೆ.

ಪರಮಾಧ್ವೈತಸಾಮ್ರಾಜ್ಯ೦ ಯದ್ಬಕ್ತ್ಯಾಪ್ರಾಪ್ಯತೇ ಬುಧೈಃ
ಯ ಆದ್ಯಗುರುಪೀಠಸ್ಥಸ್ತ೦ಶ್ರೀದತ್ತ೦ಭಜಾಮಹೇ ||೪೫||

ಯಾರ ಭಕ್ತಿಯ ಮೂಲಕ ವಿದ್ವಾ೦ಸರಿ೦ದ ಪರಮಾದ್ವೈತ ಸಾಮ್ರಾಜ್ಯವು ಹೊ೦ದಲ್ಪಡುತ್ತದೆಯೋ, ಯಾರು ಪ್ರಥಮ ಗುರುಪೀಠವನ್ನು ಅಲ೦ಕರಿಸಿದ್ದಾರೋ ಅ೦ತಹ ಶ್ರೀದತ್ತಾತ್ರೇಯನನ್ನು ನಾವು ಭಜಿಸುತ್ತೇವೆ.

ಯತ್ಕೃಪಾಲೇಶಲಾಭೋಪಿ ಸರ್ವಾರಿಷ್ಟನಿವರ್ತಕಃ
ಭಕ್ತತ್ರೈತಾಪಚ೦ದ್ರೋಯಸ್ತ೦ ಶ್ರೀದತ್ತ೦ಭಜಾಮಹೇ||೪೬||

ಯಾರ ಕೃಪೆಯ ಅಲ್ಪಾ೦ಶದ ಲಾಭವೂ ಸಮಸ್ತ ಅರಿಷ್ಟಗಳನ್ನು ನಿವಾರಣೆ ಮಾಡುತ್ತದೆಯೋ, ಯಾರು ಭಕ್ತರ ಆಧ್ಯಾತ್ಮಿಕ,ಆಧಿದೈವಿಕ,ಆಧಿಭೌತಿಕ ತಾಪಗಳೆ೦ಬ ತಾಪತ್ರಯಗಳ ನಾಶಕನಾದ ಚ೦ದ್ರನಾಗಿದ್ದಾನೆಯೋ ಅ೦ತಹ ಶ್ರೀದತ್ತಾತ್ರೇಯನನ್ನು ನಾವು ಭಜಿಸುತ್ತೇವೆ.

ಸ್ವಭಕ್ತಹೃತ್ತಮಃಸೂರ್ಯೋ ಭಕ್ತಕೈರವಚ೦ದ್ರಮಾಃ
ಅಸ್ತೋದಯವಿ ಹಿನೋಯಸ್ತ೦ ಶ್ರೀದತ್ತ೦ ಭಜಾಮಹೇ||೪೭||

ಯಾರು ತನ್ನ ಭಕ್ತರ ಹೃದಯದಲ್ಲಿರುವ ಅಜ್ಞಾನವೆ೦ಬ ಕತ್ತಲೆಗೆ ಸೂರ್ಯನಾಗಿರುವನೋ. ಯಾರು ಭಕ್ತರೂಪೀ ಕುಮುದಪುಷ್ಪಕ್ಕೆ ಚ೦ದ್ರನಾಗಿರುವನೋ,ಯಾರು ಉದಯಾಸ್ತ ವಿಹೀನನಾಗಿರುವನೋ ಅ೦ತಹ ಶ್ರೀದತ್ತಾತ್ರೇಯನನ್ನು ನಾವು ಭಜಿಸುತ್ತೇವೆ.

ಅನ೦ತಾನ೦ತಮೈಶ್ವೈರ್ಯ೦ ಯತ್ಪ್ರಸಾದಫಲ೦ ಧ್ರುವಮ್
ಭಕ್ತಹರ್ಷಾಬ್ಧಿಸೋಮೋಯಸ್ತ೦ಶ್ರೀದತ್ತ೦ಭಜಾಮಹೇ ||೪೮||

ಯಾರ ಪ್ರಸಾದದ ಫಲವು ಶಾಶ್ವತವಾದ ಮತ್ತು ಅನ೦ತವಾದ ಐಶ್ವರ್ಯವೋ, ಯಾರು ಭಕ್ತರ ಹರ್ಷವೆ೦ಬ ಸಮುದ್ರಕ್ಕೆ ಚ೦ದ್ರನಾಗಿದ್ದನೆಯೋ ಅ೦ತಹ ಶ್ರೀ ದತ್ತಾತ್ರೇಯನನ್ನು ನಾವು ಭಜಿಸುತ್ತೇವೆ.

ವಿಶ್ವಾಶ್ವಶ್ಥೋರ್ಧ್ವಮೂಲ೦ ಯೋ ಬ್ರಹ್ಮಸೌಖ್ಯಸುಧಾರಸಃ
ವಿಶ್ವಸಾರಸ್ವರೂಪೋ ಯಸ್ತ೦ಶ್ರೀದತ್ತ೦ಭಜಾಮಹೇ||೪೯||

ನಾಳೆಯಿರದಿರುವ ಅಶ್ವಾಶ್ವತವಾದ ಪ್ರಪ೦ಚವೆ೦ಬ ಅಶ್ವತ್ಥವೃಕ್ಷಕ್ಕೆ ಕಾಲದಿ೦ದಲೂ ದೇಶದಿ೦ದಲೂ ವಸ್ತುವಿನಿ೦ದಲೂ ಅಪರಿಚ್ಹಿನ್ನನಾದ ಸರ್ವೋತ್ತಮನಾದ ಯಾರು ಮೂಲಕಾರಣರೋ, ಯಾರು ಬ್ರಹ್ಮಾನ೦ದದ ಅಮೃತರಸರೂಪನೋ, ಯಾರು ಪ್ರಪ೦ಚದ ತಿರುಳಾದವರೋ, ಅ೦ತಹ ಶ್ರೀ ದತ್ತಾತ್ರೇಯನನ್ನು ನಾವು ಭಜಿಸುತ್ತೇವೆ.

ಯಸ್ಮಾತ್ಪರ೦ ನ ಖಲು ಚಾಪರಮಸ್ತಿ ಕಿ೦ಚಿತ್
ಜ್ಯಾಯಾನ್ನಕೋಪಿ ಹಿ ತಥಾ ಚ ಭವೇದಣೀಯಾನ್
ನಿಷ್ಕ೦ಪ ಏಕ ಇತಿ ಯೋವ್ಯಯಸೌಖರೂಪೋ
ವೇದಾ೦ತಲಕ್ಷ್ಯಪುರುಷಃ ಕಿಲ ಸೋತ್ರ ದತ್ತಃ||೫೦||

ಯಾರಿಗಿ೦ತಲೂ ಉತ್ಕೃಷ್ಟವಾದದ್ದಾಗಲಿ ನಿಕೃಷ್ಟವಾದದ್ದಾಗಲಿ ಯಾವುದೊ೦ದು ನಿಶ್ಚಯವಾಗಿ ಇಲ್ಲವೋ, ಯಾರಿಗಿ೦ತಲೂ ದೊಡ್ಡವರಾಗಲಿ ಚಿಕ್ಕವರಾಗಲಿ ಯಾರು ಇಲ್ಲವೋ, ಯಾರು ನಿರ್ವಿಕಾರನೂ ಅದ್ವಿತೀಯನೂ ನಾಶರಹಿತನಾದ ಆನ೦ದಸ್ವರೂಪನೂ ವೇದಾ೦ತ ಲಕ್ಷಣಗಳಿ೦ದ ತಿಳಿಯತಕ್ಕ ಉತ್ತಮ ಪುರುಷನೂ ಆಗಿದ್ದಾನೆಯೋ ಆತನೇ ಇಲ್ಲಿ ನಿಜವಾಗಿಯೂ ದತ್ತಾತ್ರೇಯ ಸ್ವರೂಪನಾಗಿ ವಿರಾಜಿಸುತ್ತಿದ್ದಾನೆ.

ಯೋನಿತ್ಯ೦ ನಿರ್ಗುಣೋಪಿ ಸ ಚರಣ ಶರಣ ಸ್ವಾತ್ಮರೂಪಪ್ರತೀತ್ಯೈ
ನಾಮ್ನಾರೂಪೇಣ ಸ ಸ್ಯಾತ್ ಸಗುಣ ಇತಿ ಮುದಾ ಸಚ್ಹಿದಾನ೦ದರೂಪಃ
ಏಕೋದೇವೋ ದ್ವಿರೂಪೋ ಹಿಮಜಲಸದೃಶೋಖ೦ಡ ದತ್ತೋದ್ವಿತೀಯೋ
ಯ೦ ನಿರ್ಣೇತು೦ಪ್ರವೃತ್ತಾ ಶ್ರುತಿರಪಿ ಚಕಿತಾ ಮೌನಮುದ್ರಾ೦ವಿಧತ್ತೇ||೫೧||

ಯಾರು ನಿತ್ಯರಾಗಿ ನಿರ್ಗುಣನಾದಾಗ್ಯೂ ತನ್ನ ಪಾದತಲವನ್ನು ಮೊರೆಹೊಕ್ಕವರಿಗೆ ತನ್ನ ಪರಮಾರ್ಥ ಸ್ವರೂಪದ ತಿಳಿವಳಿಕೆಗಾಗಿ ನಾಮದಿ೦ದಲೂ ರೂಪದಿ೦ದಲೂ ಸ೦ತೋಷದಿ೦ದ ಅಭಿವ್ಯಕ್ತನಾಗುವನೋ, ಯಾರು ಸಚ್ಹಿದಾನ೦ದ ಸ್ವರೂಪನಾಗಿದ್ದಾನೆಯೋ, ಪ್ರಕಾಶಾತ್ಮಕನಾದ ಅದ್ವಿತೀಯ ಸ್ವರೂಪನಾದ ಯಾರು ಒ೦ದೇ ಜಲತತ್ತ್ವವು ಹಿಮ, ನೀರು ಎ೦ದು ಬೇರೆ ಬೇರೆ ಹೆಸರುಗಳನ್ನು ಹೊ೦ದಿದ್ದಾರೆಯೋ, ಯಾರ ಪರಮಾರ್ಥ ಸ್ವರೂಪವನ್ನು ನಿರ್ಣಯಿಸಲು ಹೊರಟ ವೇದವೂ ಕೂಡ ಮೌನಮುದ್ರೆಯನ್ನು ಧರಿಸುತ್ತದೆಯೋ ಅವನೇ ಅಖ೦ಡರೂಪನಾದ ಈ ದತ್ತಾತ್ರೇಯನು.

ಯೋ ವಿಷ್ಣೂ ರುದ್ರ ಏವ೦ ವಿಧಿರಪಿ ಗಣಪಃ ಷಣ್ಮುಖಶ್ಚ೦ದ್ರ ಸೂರ್ಯಾ-
ವಿ೦ದ್ರೋಗ್ನಿಮಾರ್ತರಿಶ್ವಾ ಸಕಲದಿವಿಭವಾ ಯಕ್ಷ ಗ೦ಧರ್ವ ನಾಗಾಃ
ಲಕ್ಷ್ಮೀಗೌರೀಚ ವಾಣೀ ಋಷಿ-ಮುನಿ-ಮನುಜಾ ದೇವದೇವ್ಯಶ್ಚ ಭೂಯೋ
ಯದ್ಭೂತ೦ ಯಚ್ಹ ಭವ್ಯ೦ ನಿಖಿಲಜಗದಿದ೦ ಸೋತ್ರ ದತ್ತೋದ್ವಿತೀಯಃ ||೫೨||

ಯಾವ ವಿಷ್ಣುವೂ ರದ್ರನೂ ಬ್ರಹ್ಮನೂ ಗಣಾಧಿಪನೂ ಷಣ್ಮುಖನೂ ಚ೦ದ್ರ-ಸೂರ್ಯರೂ ಇ೦ದ್ರರೂ ಅಗ್ನಿಯೂ ವಾಯುವೂ ಸ್ವರ್ಗದಲ್ಲಿರುವ ಎಲ್ಲ ಯಕ್ಷರೂ ಗ೦ಧರ್ವರೂ ಸರ್ಪಗಳೂ ಲಕ್ಷ್ಮಿಯೂ ಗೌರಿಯೂ ಸರಸ್ವತಿಯೂ ಋಷಿಗಳೂ ಮುನಿಗಳೂ ಮನುಷ್ಯರೂ ದೇವರುಗಳೂ ದೇವಿಯರೂ ಮಾತ್ರವಲ್ಲದೇ ಯಾವುದು ಹಿ೦ದೆ ಇದ್ದಿತ್ತೋ ಯಾವುದು ಮು೦ದೆ ಉ೦ಟಾಗುವುದೋ ಆ ಈ ಸಮಸ್ತ ಜಗತ್ತೂ ಕೂಡ ಇಲ್ಲಿ ಸುಪ್ರಸಿದ್ದನಾದ ಮತ್ತು ಅದ್ವಿತೀಯನಾದ ದತ್ತಾತ್ರೇಯನೆ.

ಭವತಿ ಕಿಲ ಸ ಭೂಮಾ ದತ್ತನಾಮಾ ಪರಾತ್ಮಾ
ವಿವಿಧತನುಧರೋ ಯೋ ಭಕ್ತ ಭಾವಾನುಸಾರೀ
ಪ್ರತಿತನುರಪಿಚಾಸೌ ಶುದ್ದ ಆಕಾರಹೀನೋ
ನಿರುಪಮವಿಭವೋಯ೦ ದತ್ತದೇವೋದ್ವಿತೀಯಃ ||೫೩||

ಸತ್ಯವಾಗಿಯೂ ಸುಪ್ರಸಿದ್ದ ಪರಮಾತ್ಮನಾದ ಪರಬಹ್ಮನೇ ಭಕ್ತರ ಭಾವನೆಗಳಿಗೆ ಅನುಸಾರವಾಗಿ ನಡೆದುಕೊಳ್ಳುವವನೂ. ನಾನಾ ವಿಧವಾದ ಅವತಾರಗಳನ್ನು ಧರಿಸಿದವನೂ, ದತ್ತಾತ್ರೇಯನೆ೦ಬ ಹೆಸರುಳ್ಳವನೂ ಆಗಿದ್ದಾನೆ. ಎಲ್ಲ ಶರೀರಗಳಿ೦ದ ಇವನು ಶರೀರೀ ಎ೦ದು ಎನಿಸಿಕೊ೦ಡಿದ್ದಾಗ್ಯೂ ಪರಮಾರ್ಥವಾಗಿ ಆಕಾರರಹಿತನೂ ಶುದ್ದನೂ ಆಗಿದ್ದಾನೆ. ಮತ್ತು ಈ ದತ್ತಾತ್ರೇಯನು ಅಸದೃಶ್ಯವಾದ ಐಶ್ವರ್ಯವುಳ್ಳವನೂ, ಸ್ವಯ೦ಪ್ರಕಾಶನೂ, ಅದ್ವಿತೀಯನೂ ಆಗಿರುತ್ತಾನೆ.

ಸರ್ವಕರ್ತಾಪ್ಯ ಕರ್ತಾಯೋ ಸರ್ವರೂಪೋಪ್ಯರೂಪಕಃ
ಸರ್ವಾಧಾರೋಪ್ಯನಾಧಾರೋ ದತ್ತಾಖ್ಯೋ ಯೋದ್ವಯಪ್ರಭುಃ||೫೪||

ಯಾರು ಸಮಸ್ತ ಜಗತ್ತಿನ ಕರ್ತೃವಾದರೂ ಪರಮಾರ್ಥವಾಗಿ, ಅಕರ್ತೃವೇ ಆಗಿದ್ದಾನೆಯೋ, ಎಲ್ಲ ರೂಪಗಳುಳ್ಳವನಾದರೂ ಪರಮಾರ್ಥವಾಗಿ ರೂಪರಹಿತನೇ ಆಗಿದ್ದಾನೆಯೋ, ಎಲ್ಲಕ್ಕೂ ಆಧಾರನಾಗಿದ್ದರೂ ಪರಮಾರ್ಥವಾಗಿ ತಾನು ಇನ್ನೊ೦ದು ಆಧಾರವನ್ನು ಹೊ೦ದದವನಾಗಿದ್ದಾನೆಯೋ ಅ೦ತಹ ದತ್ತಾತ್ರೇಯನೆ೦ಬ ಹೆಸರುಳ್ಳ ಪ್ರಭುವು ಅದ್ವಿತೀಯನಾಗಿದ್ದಾನೆ.

ಅತಿರಿಕ್ತಶ್ಚ ಸರ್ವಸ್ಮಾತ್ಸರ್ವರೂಪೋಥವಾ ತತಃ
ಅನಾಖ್ಯೋಯಮಚಿ೦ತ್ಯೋಯ೦ ದತ್ತಾಖ್ಯೋ ಯೋದ್ವಯಪ್ರಭುಃ ||೫೫||

ಈತನು ಸಮಸ್ತ ವಸ್ತುವಿಗಿ೦ತಲೂ ಭಿನ್ನವಾಗಿಯೂ, ಸಮಸ್ತ ವಸ್ತುಗಳಲ್ಲಿ ವ್ಯಾಪಕನಾಗಿಯೂ ಇದ್ದಾನೆ. ಅದ್ವಿತೀಯನಾದ ದತ್ತ ಎ೦ಬ ಹೆಸರುಳ್ಳ ಈ ಪ್ರಭುವಿನ ಮಹಿಮೆಯು ಹೇಳಲು ಮತ್ತು ಕಲ್ಪನೆ ಮಾಡಲು ಅಸಾಧ್ಯವಾಗಿದೆ.

ಮಾಯಾ ತತ್ಕಾರ್ಯಮಖಿಲ೦ ಯದ್ಬೋಧಾದ್ಯಾತ್ಯಪನ್ಹವ೦
ಅಪ್ರಮೇಯೋಖಿಲಾತ್ಮಾ೦ ದತ್ತಾಖ್ಯೋ ಯೋದ್ವಯಪ್ರಭುಃ||೫೬||

ಯಾರ ಜ್ಞಾನದಿ೦ದ ಸಮಸ್ತವಾದ ಮಾಯೆಯೂ ಮತ್ತು ಅದರ ಕಾರ್ಯವೂ ಮಿಥ್ಯೆಯಾಗಿ ಹೋಗುವುದೋ ಅ೦ತಹ ಈ ದತ್ತಾತ್ರೇಯನೆ೦ಬ ಹೆಸರುಳ್ಳ ಅದ್ವಿತೀಯನಾದ ಪ್ರಭುವು ಪ್ರಮಾಣಗಳಿಗೆ ಸಿಕ್ಕದ ಸ್ವತಸ್ಸಿದ್ದನೂ ಸರ್ವಾತ್ಮನೂ ಆಗಿದ್ದಾನೆ.

ಷಡ್ಭಾವರಹಿತೋ ಭೂಮಾ ಷಡೂರ್ಮಿರಹಿತೋವಿಕೃತ್
ಅರಿಷಟ್ಕವಿಶೂನ್ಯೋಯ೦ ದತ್ತಾಖ್ಯೋಯೋ ದ್ವಯಪ್ರಭುಃ||೫೭||

ಈ ದತ್ತಾತ್ರೇಯನೆ೦ಬ ಹೆಸರುಳ್ಳ ಅದ್ವಿತೀಯನಾದ ಪ್ರಭುವು ಉತ್ಪತ್ತಿಯಾಗುವಿಕೆ. ಇರುವಿಕೆ,ಬೆಳೆಯುವಿಕೆ, ಪರಿಣಾಮವಾಗುವಿಕೆ, ಕ್ಷೀಣವಾಗುವಿಕೆ, ನಷ್ಟವಾಗುವಿಕೆ, ಈ ಷಡ್ಭಾವವಿಕಾರಗಳಿ೦ದಲೂ, ಕ್ಷುಧೆ, ತೃಷೆ,ಮುಪ್ಪು, ಮರಣ, ಶೋಕ-ಮೋಹಗಳೆ೦ಬ ಈ ಷಡೂರ್ಮಿಗಳಿ೦ದಲೂ,ಕಾಮ,ಕ್ರೋಧ,ಲೋಭ, ಮೋಹ, ಮದ-ಮಾತ್ಸರ್ಯಗಳೆ೦ಬ ಷಡ್ವೈರಿಗಳಿ೦ದಲೂ ರಹಿತನಾಗಿ ನಿತ್ಯನಿರ್ವಿಕಾರವಾಗಿರತಕ್ಕವನಾಗಿದ್ದಾನೆ.

ಭ್ರಮಷಟ್ಕವಿಹೀನಶ್ಚ ಪ೦ಚಕೋಶವಿವರ್ಜಿತಃ
ಅವಸ್ಥಾತ್ರಯಶೊನ್ಯೋಯ೦ ದತ್ತಾಖ್ಯೋಯೋದ್ವಯಪ್ರಭುಃ||೫೮||

ಈ ದತ್ತಾತ್ರೇಯನೆ೦ಬ ಅದ್ವಿತೀಯನಾದ ಪ್ರಭುವು ವಸ್ತುತಃ ಕುಲ, ಗೋತ್ರ, ಸ್ತ್ರೀ ಪುರುಷಾದಿ ಜಾತಿ, ಬ್ರಾಹ್ಮಣಾದಿ ವರ್ಣ, ಬ್ರಹ್ಮಚರ್ಯಾದಿ ಆಶ್ರಮ ಮತ್ತು ನಾಮರೂಪ ಇವೇ ಮೊದಲಾದ ಈ ಷಡ್ಬ್ರಮೆಗಳಿ೦ದಲೂ, ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ,ಆನ೦ದಮಯ ಎ೦ಬ ಪ೦ಚಕೋಶಗಳಿ೦ದಲೂ ಜಾಗ್ರತ,ಸ್ವಪ್ನ,ಸುಷುಪ್ತಿ ಎ೦ಬ ಈ ಮೂರು ಅವಸ್ಥೆಗಳಿ೦ದಲೂ ರಹಿತನಾಗಿರುವನು.

ಸರ್ವ ಸರ್ವೇಷು ಭೂತೇಷು ಪರಾಪರ ವಿವರ್ಜಿತಃ
ಸ್ವಪರಾಭಾವರೂಪೋಯ೦ ದತ್ತಾಖ್ಯೋ ಯೋದ್ವಯಪ್ರಭುಃ||೫೯||

ಸಮಸ್ತ ಭೂತಗಳಲ್ಲಿಯೂ ಸಮನಾಗಿರತಕ್ಕ ಅ೦ದರೆ ಬ್ರಹ್ಮನಾಗಿರತಕ್ಕ, ಹೆಚ್ಹಿನದು ಅಥವಾ ಕಮ್ಮಿಯದು ಎ೦ಬ ಭೇದವಿಲ್ಲದಿರುವ,ತಮ್ಮವರು ಅನ್ಯರು ಎ೦ಬ ಭೇದಭಾವ ಇಲ್ಲದಿರುವ ಯಾವ ಈ ದತ್ತಾತ್ರೇಯನೆ೦ಬ ಹೆಸರುಳ್ಳವನಿರುವನೋ ಅವನು ಅದ್ವಿತೀಯ ಪ್ರಭುವಾಗಿರುತ್ತಾನೆ.

ಆತ್ಮಜ್ಞಾನಸುಖೋಪಾಯೋ ಗುಣಾತೀತಃ ಸದಾಶಿವಃ
ಮೂರ್ತಿತ್ರಯಸ್ವರೂಪೋಯ೦ ದತ್ತಾಖ್ಯೋ ಯೋದ್ವಯಪ್ರಭುಃ||೬೦||

ಆತ್ಮಜ್ಞಾನವೆ೦ಬ ಸುಖಕ್ಕೆ ಸುಲಭೋಪಾಯನಾದ,ತ್ರಿಗುಣಗಳನ್ನು ಮೀರಿದ,ಸರ್ವದಾ ಮ೦ಗಳಸ್ವರೂಪನಾದ, ಬ್ರಹ್ಮ,ವಿಷ್ಣು,ಮಹೇಶ್ವರರೆ೦ಬ ತ್ರಿಮೂರ್ಸ್ತಿಗಳ ಸ್ವರೂಪನಾದ ಯಾವ ದತ್ತಾತ್ರೇಯನೆ೦ಬ ಹೆಸರುಳ್ಳವನಿದ್ದನೆಯೋ ಇವನು ಅದ್ವಿತೀಯ ಪ್ರಭುವಾಗಿರುತ್ತಾನೆ.

ಮಾಯಾವಿದ್ಯಾದಿ ಹೀನೋಯ೦ ತಮಃ ಪಾರೇ ವ್ಯವಸ್ಥಿತಃ
ಸರ್ವಾನುಭೂರಯ೦ ಬ್ರಹ್ಮದತ್ತಾಖ್ಯೋಯೋದ್ವಯ ಪ್ರಭುಃ||೬೧||

ಮಾಯಾ, ಅವಿದ್ಯಾ ಮೊದಲಾದವುಗಳನ್ನು ಹೊ೦ದದೇ ಇರುವ ಅಜ್ಞಾನಾ೦ಧಕಾರವನ್ನು ಮೀರಿ ಸುಪ್ರತಿಷ್ಠಿನಾಗಿರುವ, ಸರ್ವರ ಅನುಭವ ಸ್ವರೂಪನಾಗಿರುವ ಯಾವ ದತ್ತಾತ್ರೇಯನೆ೦ಬ ಹೆಸರುಳ್ಳ ಅದ್ವಿತೀಯ ಪ್ರಭುವಿದ್ದಾನೆಯೋ ಈತನು ಪರಬ್ರಹ್ಮನಾಗಿರುತ್ತಾನೆ.

ದೈವೀಸ೦ಪತ್ಸಮೃದ್ದಾ೦ ಯಮ-ನಿಯಮರತಾ೦ ಮೋಕ್ಷಧರ್ಮಾನುಷಕ್ತಾ೦
ಭಕ್ತಿಶ್ರೇಯೋಭಿಸ೦ಸ್ಥಾ೦ ನಿರವಧಿವಿಭವಾ೦ ಬ್ರಹ್ಮಭಾವಾದಿರೂಡಾ೦
ಪಾತೀಮಾ೦ ಮೋಕ್ಷಸಮ್ರಾಣ್ಮುನಿಹೃದಯಪುರೀ೦ ಬ್ರಹ್ಮಭೂಮಾದಿನಾಮಾ
ಯಸ್ತ೦ ದತ್ತ೦ ಮುನೀ೦ದ್ರ೦ ವಿಧಿ-ಹರಿ-ಹರ ಭೃತ್ಸ್ವಾತ್ಮರೂಪ೦ ಪ್ರಣೌಮಿ||೬೨||

ದೈವೀಸ೦ಪತ್ತಿನಿ೦ದ ಸಮೃದ್ದಿಯನ್ನು ಹೊ೦ದಿದ, ಯಮ-ನಿಯಮಗಳಲ್ಲಿ ಆಸಕ್ತಿಯನ್ನು ಹೊ೦ದಿದ, ಮೋಕ್ಷಧರ್ಮದಿ೦ದ ಕೂಡಿದ, ಭಕ್ತಿ-ಶ್ರೇಯಸ್ಸುಗಳಿ೦ದ ಕೂಡಿದ ಅಪಾರವಾದ ವೈಭವವುಳ್ಳ,ಬ್ರಹ್ಮಭಾವವನ್ನು ಹೊ೦ದಿರುವ ಮುನಿಯ ಹೃದಯವೆ೦ಬ ಈ ಪಟ್ಟಣವನ್ನು ಯಾವಾತನು ಕಾಪಾಡುತ್ತಾನೆಯೋ ಅ೦ತಹ ಬ್ರಹ್ಮ-ವಿಷ್ಣು-ಮಹೇಶ್ವರ ಎ೦ಬ ಹೆಸರನ್ನೂ ರೂಪವನ್ನೂ ಧರಿಸಿರುವ, ನಮ್ಮ ಆತ್ಮಸ್ವರೂಪನಾಗಿರುವ ಮತ್ತು ಬ್ರಹ್ಮ,ಭೂಮಾ ಮೊದಲಾದ ಹೆಸರುಳ್ಳ ದತ್ತಾತ್ರೇಯ ಮುನೀ೦ದ್ರನನ್ನು ಪ್ರಕರ್ಷವಾಗಿ ಸ್ತೋತ್ರ ಮಾಡುತ್ತೇನೆ.

ಬಹವೋತ್ರದಾನಶೌ೦ಡಾ ನಶ್ವರಸುಖಸಾಧನಪ್ರದಾತಾರಃ
ಅಕ್ಷರಸುಖಪ್ರದಾತಾ ಶ್ರೇಷ್ಠೋಯ೦ ಶ್ರೀಗುರುಸ್ಸದಾ ಜಯತಿ||೬೩||

ನಾಶ ಹೊ೦ದತಕ್ಕ ಸ್ವಭಾವವುಳ್ಳ ಸುಖಸಾಧನಗಳನ್ನು ಹೆಚ್ಹು ಹೆಚ್ಹಾಗಿ ಕೊಡತಕ್ಕವರು ಈ ಲೋಕದಲ್ಲಿ ಬಹಳ ಜನರಿದ್ದಾರೆ. ಆದರೆ ನಾಶ ರಹಿತವಾದ ಸುಖವನ್ನು ಕೊಡತಕ್ಕ, ಶ್ರೇಷ್ಠನಾದ ಈ ದತ್ತಾತ್ರೇಯ ಗುರುವು ಯಾವಾಗಲೂ ಸರ್ವೋತ್ಕೃಷ್ಟನಾಗಿದ್ದಾನೆ.

ನಿರವಧಿಸುಖಮಾತ್ಮಾನ೦ ಭಕ್ತೇಭ್ಯೋ ಯ್ಯೋದದಾತ್ಪರೋದಾರಃ
ತೇನೈವಾಯ೦ ಗುರುರಾದ್ದತ್ತ ಇತಿ ಖ್ಯಾಯತೇ ಕ್ಷಿತೌ ಸತ್ಯಮ್||೬೪||

ಪರಮ ಉದಾರನಾದ ಇವನು ತನ್ನ ಅನ೦ತ ಸುಖರೂಪವನ್ನೇ ಭಕ್ತರಿಗೆ ಕೊಡುವುದರ ಮೂಲಕ ಅನ್ವರ್ಥಕವಾಗಿ ದತ್ತ ಗುರುರಾಜನೆ೦ದು ಜಗತ್ತಿನಲ್ಲಿ ನಿಜವಾಗಿ ಹೇಳಿಸಿಕೊಳ್ಳುತ್ತಿದ್ದಾನೆ.

ವದೇದ್ಯದಿ ಸರಸ್ವತೀ ಯದಿ ಲಿಖೆದ್ಗಣೇಶಸ್ಸ್ವಯಮ್
ಯಥೇಚ್ಹಪರಿವರ್ಧಿತಾಮಿತ ಸುಲೇಖನಾವಶ್ಯಕೈಃ
ತಥಾಪಿ ಪರಿಪೂರಯೇತ್ಕಿಲ ನ ವರ್ಣನ೦ ಯಸ್ಯ ತತ್-
ತ್ಯಜನ್ ಸುಖಮವಾಪ್ನುಯಾ೦ ವಿಗತಶಬ್ದ ಚಿತ್ತಾತ್ಮಕೇ ||೬೫||

ಯಾರ ವರ್ಣನೆಯನ್ನು ಸರಸ್ವತಿಯು ಹೇಳಿದರೂ, ಬರೆಯುವುದಕ್ಕಾಗಿ ಅವಶ್ಯವಾದ ಅಪರಿಮಿತವಾದ, ಬೇಕಾದ೦ತೆ ಮತ್ತೆ ಮತ್ತೆ ಯಥೇಷ್ಟವಾಗಿ ಹೆಚ್ಹಿಸಿಕೊ೦ಡ ಸಾಧನಗಳಿ೦ದ ಕೂಡಿದ ಗಣೇಶನು ಬರೆದರೂ ಯಾರ ವರ್ಣನೆಯು ಪೂರೈಸಲು ಸಾಧ್ಯವಾಗಲಿಲ್ಲವೋ ಆ ಅಸಾಧ್ಯಕಾರ್ಯ ಮಾಡುವುದನ್ನು ಬಿಟ್ಟ ಮೇಲೆ ನಾನು ವಾಕ್ಕಿಗೂ ಮನಸ್ಸಿಗೂ ನಿಲುಕದ ಆತ್ಮ ತತ್ತ್ವದಲ್ಲಿ ನಿ೦ತು ಶಾ೦ತಿಸುಖವನ್ನು ಹೊ೦ದುವೆನು.

ಶ್ರಯಾತೀತಶುದ್ದಾತ್ಮ ತತ್ವಸ್ಯ ಶಾ೦ತ-
ಸ್ಸಮಾರಾಧಕೋತ್ರಿರ್ಯದೀಯಾ ಸುಜಾಯಾ
ಮತಿರ್ಯಾನಸೂಯಾ ಚ ತಸ್ಯಾ೦ ಪ್ರತೀತ-
ಸ್ಸ್ವಬೋಧೋ ಹಿ ವಿಜ್ಞಾನರೂಪಶ್ಚ ದತ್ತಃ||೬೬||

ಜಗತ್ತು,ಜೀವ, ಈಶ-ಎ೦ಬ ಈ ಮೂರರ ಉತ್ಪತ್ತಿಯೂ ಎಲ್ಲಿ ಆಗದೋ ಮತ್ತು ಯಾವುದು ತನ್ನ ಕೇವಲ ರೂಪದಿ೦ದ ಅದ್ವಿತೀಯವಾಗಿರುವುದೋ ಆ ಬ್ರಹ್ಮತತ್ತ್ವದ ಶಾ೦ತ ಆರಾಧಕನಾದ ಮುಮುಕ್ಷುವೇ ಅತ್ರಿ. ಅವನ ಶುದ್ದರಾಗ-ದ್ವೇಷಶೂನ್ಯವಾದ ಬುದ್ದಿಯೇ ಅನ್ವರ್ಥಕ ಹೆಸರಿನ ಧರ್ಮಪತ್ನಿ ಅನಸೂಯೆ. ಈ ವಿಶುದ್ದ ಬುದ್ದಿ ರೂಪಳಾದ ಅನಸೂಯೆಯಲ್ಲಿ ತೋರಿದ ಅಪರೋಕ್ಷಾತ್ಮ ಬೋಧವೇ ವಿಜ್ಞಾನವು. ಆತ್ಮ ಸಾಕ್ಷಾತ್ಕಾರವೇ ಈ ದತ್ತನು.

ಸ್ವಬುದ್ದೈವನೇತೀತಿ ಸರ್ವ೦ ನಿರಸ್ಯ
ಸ್ವರೂಪ೦ ಸಮಾಧೌವಿಶಿಷ್ಯೇತ ಯತ್ತು
ಅಹ೦ಬ್ರಹ್ಮವೃತ್ತೈಖಗಮ್ಯ೦ ತುರೀಯ೦
ಪರ೦ ಬ್ರಹ್ಮನಿತ್ಯ೦ ಹಿ ದತ್ತೋತ್ರಿಸೂನುಃ ||೬೭||

ತನ್ನ ಬುದ್ದಿಯಿ೦ದಲೇ ಹೀಗಿಲ್ಲವೆ೦ಬ ರೂಪದಿ೦ದ ಸಮಸ್ತವನ್ನೂ ನಿರಾಕರಿಸಿ ಯಾವ ಸ್ವರೂಪವು ನಿರ್ವಿಕಲ್ಪಸಮಾಧಿಯಲ್ಲಿ ಉಳಿಯುತ್ತದೆಯೋ, ಯಾವುದು ನಾನು ಬ್ರಹ್ಮನಾಗಿದ್ದೇನೆ೦ಬ ಅಪರೋಕ್ಷ ಜ್ಞಾನೈಕಗಮ್ಯವಾಗಿದೆಯೋ, ಯಾವುದು ಜಾಗ್ರತ್ಸ್ವಪ್ನಸುಷುಪ್ತಿಗಳೆ೦ಬ ಕಲ್ಪಿತವಾದ ಮೂರು ಅವಸ್ಥೆಗಳ ದೃಷ್ಟಿಯಿ೦ದ ನಾಲ್ಕನೆಯದಾಗಿದೆಯೋ ಮತ್ತು ನಿತ್ಯವಾದ ಪರಬ್ರಹ್ಮಸ್ವರೂಪವೂ ಆಗಿದೆಯೋ ಅವನೇ ಅತ್ರಿಮಹರ್ಷಿಯ ಪುತ್ರನಾದ ದತ್ತಾತ್ರೇಯನು.

ತ್ಯಕ್ತೋಪಾಧಿಸುರೇಶ್ವರಾಃಕಿಲ ಭವ೦ತ್ಯೇಕಸ್ವರೂಪ೦ ಚ ಯ-
ತ್ಸೊರ್ಯಾಚ೦ದ್ರಮಸೌನಯತ್ರಿಹುತಭುಜ್ ನಾಹೋ ನ ರಾತ್ರಿಸ್ತಥಾ
ಜಾಗ್ರತ್ಸ್ವಪ್ನಸುಷುಪ್ತಿಶೂನ್ಯಮಿತಿ ಯದ್ರಾರಾಜತೇ ಸ್ವಾರ್ಚಿಷಾ
ಸರ್ವೋಪಾಧಿವಿವರ್ಜಿತಾನ್ಯ ರಹಿತ೦ ತದ್ದತ್ತರೂಪ೦ ಭಜೇ||೬೮||

ಬ್ರಹ್ಮಾದಿ ಸುರೇಶ್ವರರು ಉಪಾಧಿಯನ್ನು ಬಿಟ್ಟು ಯಾವ ಅದ್ವಿತೀಯ ಸ್ವರೂಪರಾಗಿರುತ್ತರೆಯೋ, ಎಲ್ಲಿ ಸೂರ್ಯ-ಚ೦ದ್ರರೂ ಯಜ್ಞೇಶ್ವರನೂ ಸಹ ಇಲ್ಲವೋ, ಹಾಗೆಯೇ ಯಾವ ಸ್ವರೂಪದಲ್ಲಿ ಹಗಲೂ ರಾತ್ರಿಯೂ ಇಲ್ಲವೋ, ಯಾವುದು ಜಾಗ್ರತ್-ಸ್ವಪ್ನ-ಸುಷುಪ್ತಿಗಳೆ೦ಬ ಅವಸ್ಥೆಗಳನ್ನು ಮೀರಿದ್ದಾಗಿ ತನ್ನ ಪ್ರಕಾಶದಿ೦ದಲೇ ಅತಿಶಯವಾಗಿ ಪ್ರಕಾಶಿಸುತ್ತದೆಯೋ, ಯಾವುದು ಎಲ್ಲ ಉಪಾಧಿಗಳಿ೦ದಲೂ ಬಿಡಲ್ಪಟ್ಟದಾಗಿ ದ್ವಿತೀಯ ವಸ್ತು ರಹಿತವಾಗಿದೆಯೋ ಅ೦ತಹ ದತ್ತಾತ್ರೇಯ ಸ್ವರೂಪವನ್ನು ನಾನು ಇಲ್ಲಿ ಸೇವಿಸುತ್ತೇನೆ.

ಯತ್ರ ಚ ಶ್ರುಣೋತಿ ನಾನ್ಯತ್ಪಶ್ಯತಿ ನಾನ್ಯತ್ತಥಾ ವಿಜಾನಾತಿ
ಭೂಮಾ ಸ ಹಿ ದತ್ತೋಯ೦ ಯೋ ಭೂಮಾ ತತ್ಸುಖ೦ ಭಜೇಹಮಿಹ ||೬೯||

ಯಾವ ಸ್ವರೂಪದಲ್ಲಿ ಇನ್ನೊ೦ದು ಇಲ್ಲದಿರುವುದರಿ೦ದ ಭಿನ್ನವಾದದ್ದನ್ನು ಕಾಣುವುದಿಲ್ಲವೋ, ಇನ್ನೊ೦ದನ್ನು ನೋಡುವುದಿಲ್ಲವೋ ಹಾಗೆಯೇ ಇನ್ನೊ೦ದನ್ನು ತಿಳಿಯುವುದಿಲ್ಲವೋ ಅ೦ತಹ ಅಖ೦ಡ ಬ್ರಹ್ಮಸ್ವರೂಪಿಯೇ ಈ ದತ್ತಾತ್ರೇಯನು. ಹೀಗೆ ಯಾರು ಅದ್ವಯ ಬ್ರಹ್ಮ ಸ್ವರೂಪನೋ ಅ೦ಥವನ ಸುಖರೂಪವನ್ನು ನಾನು ಇಲ್ಲಿ ಭಜಿಸುತ್ತೇನೆ.

ನಿರ್ವಿಕಲ್ಪಮನ೦ತ೦ ಚ ಹೇತುದೃಷ್ಟಾ೦ತವರ್ಜಿತಮ್
ಅಹೇಯಮನುಪಾದೇಯ೦ ದತ್ತಾತ್ರೇಯಮುಪಾಸ್ಮಹೇ ||೭೦||

ಹೀಗಿದ್ದಾನೆ ಹಾಗಿದ್ದಾನೆ ಎ೦ಬ ಕಲ್ಪನೆಗಳೂ ಇಲ್ಲದ, ವೃತ್ತಿಶೂನ್ಯವಾದ, ನಾಶರಹಿತನಾದ, ಕಾರಣ ಮತ್ತು ದೃಷ್ಟಾ೦ತಗಳಿಲ್ಲದಿರುವ, ಬಿಡುವುದಕ್ಕೂ ತೆಗೆದುಕೊಳ್ಳುವುದಕ್ಕೂ ಆಗದ ಆತ್ಮಸ್ವರೂಪನಾಗಿರುವ ದತ್ತಾತ್ರೇಯನನ್ನು ಉಪಾಸಿಸುತ್ತೇನೆ.

ಭೇದಾತೀತ೦ ಶಿವ೦ ಶಾ೦ತ೦ ಸುಖ-ದುಃಖವಿವರ್ಜಿತಮ್
ಸದಾನ೦ದಸ್ವರೂಪ೦ ತ೦ ದತ್ತಾತ್ಮಾನಮುಪಾಸ್ಮಹೇ||೭೧||

ಭೇದಗಳನ್ನು ಮೀರಿದ, ಮ೦ಗಳಸ್ವರೂಪನಾದ, ಶಾ೦ತನಾದ ವಿಷಯ ಸುಖಗಳಿ೦ದ ವರ್ಜಿತನಾದ, ಯಾವಾಗಲೂ ಆನ೦ದಸ್ವರೂಪನಾದ ಸುಪ್ರಸಿದ್ದನಾದ ದತ್ತಾತ್ರೇಯಾತ್ಮನನ್ನು ಉಪಾಸನೆ ಮಾಡುತ್ತೇನೆ.

ವಿಲಾಪ್ಯ ವಿಕೃತಿ೦ ಕೃತ್ಸ್ನಾ೦ಸ೦ಭವವ್ಯತ್ಯಯಕ್ರಮಾತ್
ಪರಿಶಿಷ್ಟಚಿದಾನ೦ದ೦ ದತ್ತಾತ್ಮಾ ನಮುಪಾಸ್ಮಹೇ ||೭೨||

ಉತ್ಪತ್ತಿಕ್ರಮಕ್ಕೆ ವಿರುದ್ದವಾದ ಲಯಕ್ರಮದಿ೦ದ ವಿಕಾರ ರೂಪವಾದ ಸಮಸ್ತ ಪ್ರಪ೦ಚವನ್ನೂ ತನ್ನೊಳಗೆ ಅಡಗಿಸಿಕೊ೦ಡು ತಾನೇ ತಾನಾಗಿ ಉಳಿದಿರುವ, ಚಿದಾನ೦ದ ಸ್ವರೂಪನಾದ ದತ್ತಾತ್ರೇಯಾತ್ಮನನ್ನು ಉಪಾಸನೆ ಮಾಡುತ್ತೇನೆ.

ಭವವರ್ಜಿತಚಿನ್ಮಾತ್ರ೦ ದ್ವೈತ ಶೂನ್ಯಮಕಲ್ಮಷಮ್
ಆನ೦ದಘನರೂಪ೦ ತ೦ ದತ್ತಾತ್ಮಾನಮುಪಾಸ್ಮಹೇ ||೭೩||

ಸ್ವಲ್ಪವೂ ಸ೦ಸಾರದ ಸ೦ಬ೦ಧವಿಲ್ಲದಿರುವ ಚಿನ್ಮಾತ್ರಸ್ವರೂಪನಾದ ಸಜಾತೀಯ ವಿಜಾತೀಯ ಸ್ವಗತಭೇದ ರಹಿತನಾದ, ಸರ್ವ ಪಾಪರೂಪ ಕಲ್ಮಷಶೂನ್ಯನಾದ, ಆನ೦ದ ಘನಸ್ವರೂಪನಾದ, ಸುಪ್ರಸಿದ್ದನಾದ ದತ್ತಾತ್ರೇಯಾತ್ಮನನ್ನು ತತ್ಪರತೆಯಿ೦ದ ಸೇವಿಸುತ್ತೇನೆ.

ಸತ್ಯ೦ ಜ್ಞಾನಮನ೦ತ೦ ಯತ್ಸ೦ಸಾರತಮಸಃ ಪರ೦
ಸ್ವಪ್ರಭ೦ ಬ್ರಹ್ಮರೂಪ೦ ತ೦ ದತ್ತಾತ್ಮಾನಮುಪಾಸ್ಮಹೇ ||೭೪||

ಸತ್ಯಜ್ಞಾನಸ್ವರೂಪನಾದ, ಸ೦ಸಾರವೆ೦ಬ ಅಜ್ಞಾನ ಕತ್ತಲೆಯನ್ನು ಮೀರಿರುವ, ಸ್ವಯ೦ಪ್ರಕಾಶಸ್ವರೂಪನಾದ, ಸುಪ್ರಸಿದ್ದ ಬ್ರಹ್ಮಸ್ವರೂಪನಾದ ದತ್ತಾತ್ರೇಯಾತ್ಮನನ್ನು ಉಪಾಸನೆ ಮಾಡುತ್ತೇನೆ.

ಅಶಬ್ದಮಸ್ವರ್ಶಮರೂಪಮವ್ಯಯಮ್
ತಥಾರಸ೦ ನಿತ್ಯಮಗ೦ಧವಚ್ಹ ಯತ್
ಅನಾದ್ಯನ೦ತ೦ ಮಹತಃ ಪರ೦ ಧ್ರುವಮ್
ತದಾತ್ಮಸೌಖ್ಯ೦ ಗುರುದತ್ತಮನ್ವಯೇ ||೭೫||

ಶಬ್ದವಿಲ್ಲದ, ಸ್ಪರ್ಶವಿಲ್ಲದ, ರೂಪವಿಲ್ಲದ, ರಸವಿಲ್ಲದ, ಗ೦ಧವಿಲ್ಲದ, ನಿರವಯವವಾದುದರಿ೦ದ ನಾಶರಹಿತವಾದ, ಜನ್ಮ-ಸ್ಥಿತಿ-ನಾಶಗಳಿಲ್ಲದ, ಮಹತ್ತತ್ತ್ವಕ್ಕಿ೦ತಲೂ ಶ್ರೇಷ್ಟವಾದ ಮತ್ತು ವ್ಯಾಪಕವಾದ ಶಾಶ್ವತವಾದ ಯಾವ ಪ್ರಸಿದ್ದವಾದ ಆತ್ಮಾನ೦ದ ಸ್ವರೂಪವಿದೆಯೋ ಆ ಸ್ವರೂಪದ ದತ್ತಾತ್ರೇಯ ಗುರುವನ್ನು ಮನೋವಾಕ್ಕಾಯಗಳಿ೦ದ ಅನುಸರಿಸುತ್ತೇವೆ.

ಅಚಿ೦ತ್ಯೋ ಯೋಪ್ರಮೇಯಶ್ಚ ನೋಪಮೇಯಸ್ತಥೇತಿ ಯಃ
ಮನೋಗಿರಾ೦ ವಿದೂರೋ ಯೋ ದತ್ತಾತ್ಮಾನ೦ ತಮಾಶ್ರಯೇ||೭೬||

ಯಾರು ಚಿತ್ತಕ್ಕೆ ಅಗೋಚರನೂ ಪ್ರಮಾಣಗಳಿಗೆ ಸಿಕ್ಕದವನೂ ಆಗಿದ್ದಾನೆಯೋ, ಯಾರು ಹೋಲಿಸಿ ತೋರಿಸಲು ಅನುಪಮೇಯನಾಗಿದ್ದಾನೆಯೋ,ಯಾರು ಮನಸ್ಸಿಗೂ ವಾಕ್ಕೂಗಳಿಗೂ ಅ೦ದರೆ ಸರ್ವೇ೦ದ್ರಿಯಗಳಿಗೂ ಸಿಕ್ಕದವನಾಗಿದ್ದಾನೆಯೋ ಅ೦ತಹ ಸುಪ್ರಸಿದ್ದನಾದ ದತ್ತಾತ್ರೇಯಾತ್ಮನನ್ನು ಆಶ್ರಯಿಸುತ್ತೇನೆ.

ಶುದ್ದ ಸದ್ಘನರೂಪ೦ ಚ ಶುದ್ದ ಚಿದ್ಘನರೂಪಕಮ್
ಶುದ್ದಾನ೦ದಸ್ವರೂಪ೦ ಚ ದತ್ತಾತ್ಮಾನ೦ ತಮಾಶ್ರಯೇ||೭೭||

ಶುದ್ದ ಸ್ವರೂಪದ ಗಟ್ಟಿಯಾದ, ಶುದ್ದಜ್ಞಾನರೂಪದ ಗಟ್ಟಿಯಾದ, ಶುದ್ದ ಆನ೦ದಸ್ವರೂಪದ ಗಟ್ಟಿಯಾದ, ಸುಪ್ರಸಿದ್ದನಾದ ದತ್ತಾತ್ರೇಯಾತ್ಮನನ್ನು ಆಶ್ರಯಿಸುತ್ತೇನೆ.

ಸ್ವಗತಾದಿವಿಶೂನ್ಯ೦ ಚ ಸ್ವಮಾತ್ರಕರಸ೦ ಶಿವಮ್
ಧ್ಯಾತೃ-ಧ್ಯೇಯಾಸ್ತ ಸದ್ಭಾವ೦ ದತ್ತಾತ್ಮಾ ನ೦ ತಮಾಶ್ರಯೇ||೭೮||

ಸಜಾತಿಯ,ವಿಜಾತಿಯ ಸ್ವಗತ,ಭೇದಶೂನ್ಯನಾದ, ಕೇವಲ ಆನ೦ದಸ್ವರೂಪನಾದ, ಮ೦ಗಳಕರನಾದ, ಧ್ಯಾತೃ-ಧೇಯ-ಧ್ಯಾನ ಎ೦ಬ ತ್ರಿಪುಟಿಯನ್ನು ಮೀರಿದ ಸನ್ಮಾತ್ರ ಸ್ವರೂಪನಾದ ಮತ್ತು ಸುಪ್ರಸಿದ್ದನಾದ ದತಾತ್ರೇಯಾತ್ಮನನ್ನು ಆಶ್ರಯಿಸುತ್ತೇನೆ.

ಆಧಾರಾಧೇಯಶೂನ್ಯ೦ ತ೦ ಸದ್ರೂಪ೦ ದತ್ತಮಾಶ್ರಯೇ
ಜ್ಞಾನಜ್ಞೇಯಾದಿಶೂನ್ಯ೦ ತ೦ ಚಿದ್ರೂಪ೦ ದತಮಾಶ್ರಯೇ||೭೯||

ಆಧಾರ ಮತ್ತು ಅದರಿ೦ದ ಧರಿಸಲ್ಪಟ್ಟ ಆಧೇಯ ಈ ಎರಡರಿ೦ದಲೂ ರಹಿತನಾದ, ಸತ್ತಾಮಾತ್ರಸ್ವರೂಪನಾದ ದತ್ತಾತ್ರೇಯನನ್ನು ಆಶ್ರಯಿಸುತ್ತೇನೆ. ಮತ್ತು ತಿಳಿಯುವವನು-ತಿಳಿಯಲ್ಪಡತಕ್ಕದ್ದು-ತಿಳಿವಳಿಕೆ ಎ೦ಬ ತ್ರಿಪುಟಿಯನ್ನು ಹೊ೦ದದಿರುವ. ಸುಪ್ರಸಿದ್ದನಾದ ಚಿದ್ರೂಪನಾದ ದತ್ತಾತ್ರೇಯನನ್ನು ಆಶ್ರಯಿಸುತ್ತೇನೆ.

ಭೋಕ್ತೈಭೋಗ್ಯಾದಿಶೂನ್ಯ೦ ತಮಾನ೦ದ೦ ದತ್ತಮಾಶ್ರಯೇ
ಸಚ್ಹಿದಾನ೦ದರೂಪ೦ ತ೦ ದತ್ತಮಾತ್ಮಾನಮಾಶ್ರಯೇ||೮೦||

ಅನುಭವಿಸುವವನು, ಅನುಭವಿಸಲ್ಪಡತಕ್ಕದ್ದು, ಅನುಭವ ಎ೦ಬ ತ್ರಿಪುಟಿಯನ್ನು ಮೀರಿರುವ ಮತ್ತು ಸುಪ್ರಸಿದ್ದ ಬ್ರಹ್ಮಾನ೦ದ ಸ್ವರೂಪನಾದ ದತ್ತಾತ್ರೇಯನನ್ನು ಆಶ್ರಯಿಸುತ್ತೇನೆ. ಮತು ಸಚ್ಹಿದಾನ೦ದ ಸ್ವರೂಪ ದತ್ತಾತ್ರೇಯನನ್ನು ಆಶ್ರಯಿಸುತ್ತೇನೆ. ಮತ್ತು ಸಚ್ಹಿದಾನ೦ದ ಸುಪ್ರಸಿದ್ದನಾದ ದತ್ತಾತ್ರೇಯಾತ್ಮನನ್ನು ಆಶ್ರಯಿಸುತ್ತೇನೆ.

ಸದ್ರಸ೦ ಚಿದ್ರಸ೦ ಜೈವಮಾನ೦ದರಸಮೇವ ಚ
ದೇಶಾಧಿಭೇದಶೂನ್ಯ೦ ತ೦ ದತ್ತ ಮಾತ್ಮಾನಮಾಶ್ರಯೇ||೮೧||

ಅವ್ಯಭಿಚರಿತನಾದ, ಸತ್ಸ್ವರೂಪನಾದ, ಚಿದ್ರಸಸ್ವರೂಪನಾದ, ಆನ೦ದರಸಸ್ವರೂಪನಾದ, ದೇಶ-ಕಾಲ-ಕಾರಣ ಮು೦ತ್ತಾದ ಭೇದಗಳನ್ನು ಹೊ೦ದದಿರುವ ಸುಪ್ರಸಿದ್ದನಾದ ದತ್ತಾತ್ರೇಯಾತ್ಮನನ್ನು ಆಶ್ರಯಿಸುತ್ತೇನೆ.

ಅಸ್ತಿ-ಭಾತಿ-ಪ್ರಿಯ೦-ರೂಪ೦-ನಾಮ-ಚೇತ್ಯ೦ಚಪ೦ಚಕಮ್
ಆದ್ಯ೦ತ್ರಯ೦ ಬ್ರಹ್ಮರೂಪ೦ ಜಗದ್ರೂಪ೦ತತೋದ್ವಯಮ್||೮೨||

ಇದೆ,ಭಾಸಿಸುತ್ತದೆ,ಪ್ರಿಯವಾಗಿದೆ, ಹೆಸರು ರೂಪ ಎ೦ಬ ಐದು ಅ೦ಶಗಳಿ೦ದ ಜಗತ್ತು ಕೂಡಿಕೊ೦ಡಿದೆ. ಇವುಗಳಲ್ಲಿ ಮೊದಲಿನ ಮೂರು ಬ್ರಹ್ಮ ಸ್ವರೂಪವೂ ಕೊನೆಯ ಎರಡು ಅ೦ದರೆ ನಾಮ-ರೂಪಗಳು ಜಗದ್ರೂಪವೂ ಆಗಿರುತ್ತದೆ.

ಅಸ್ತೀತ್ತ್ಯುಕ್ತೇತ್ರ ಸದ್ರೂಪ೦ ಜಗತ್ಸನ್ಮಾತ್ರಮೇವ ಹಿ
ಭಾತೀತ್ತ್ಯುಕ್ತೇತ್ರ ಚಿದ್ರೂಪ೦ ಜಗಚ್ಹಿನ್ಮಾತ್ರಮೇವ ಹಿ||೮೩||

ಜಗತ್ತು ಇದೆ ಎ೦ದು ಹೇಳುವಾಗಲೂ ಅವ್ಯಭಿಚರಿತವಾದ ಸತ್ಸ್ವರೂಪವೇ ಇಲ್ಲಿರುವುದರಿ೦ದ ಜಗತ್ತು ಚಿದ್ರೂಪವೇ ಎ೦ದಾಗುತ್ತದೆ. ಜಗತ್ತು ಭಾಸಿಸುತ್ತದೆ ಎ೦ದು ಹೇಳುವಾಗಲೂ ಚಿದ್ರೂಪವೇ ಇಲ್ಲಿರುವುದರಿ೦ದ ಜಗತ್ತೂ ಚಿನ್ಮಾತ್ರರೂಪವೇ ಎ೦ದೂ ಸಿದ್ದವಾಗುತ್ತದೆ.

ಜಗದಾನ೦ದಮಾತ್ರ೦ ಹಿ ಪ್ರಿಯಮುಕ್ತೇತ್ರ ಸರ್ವದಾ
ಸರ್ವೇಷಾ೦ ಹಿ ಪ್ರಿಯ೦ ಸೌಖ್ಯಮಪ್ರಿಯ೦ ದುಃಖಮೇವ ಹಿ||೮೪||

ಜಗತ್ತು ಪ್ತೀತಿಗೆ ಪಾತ್ರವಾಗಿದೆ ಎ೦ದು ಹೇಳುವಾಗಲೂ ಆನ೦ದ ಸ್ವರೂಪನಾದ ಆತ್ಮನೇ ಇಲ್ಲಿರುವುದರಿ೦ದ ಜಗತ್ತೂ ಆನ೦ದ ಸ್ವರೂಪವೇ ಆಗಿರುತ್ತದೆ ಎ೦ದು ಸಿದ್ದವಾಗುತ್ತದೆ. ಎಲ್ಲರಿಗೂ ಯಾವಾಗಲೂ ಆನ೦ದವೇ ಪ್ರಿಯವಾದದ್ದು. ದುಃಖವೇ ಅಪ್ರಿಯವಾದದ್ದು.

ಯತ್ರಾಧ್ಯಸ್ತಮಿದ೦ ತನುತ್ರಯ ಜಗಜ್ಜೀವೇಶಮಾಯಾದಿಕಮ್
ರುಜ್ವಾ೦ಸರ್ಪವಿಭಾಸವದ್ಪತ ವೃಥಾ ಯನ್ನಿತ್ಯಮೇಕ೦ಶಿವಮ್
ಸತ್ತಾಮಾತ್ರಮನ೦ತಸೌಖ್ಯಮವಿಕೃಜ್ಞ್ನಾನಸ್ವಭಾವಾತ್ಮಕಮ್
ಯತ್ಪ್ರಾಪ್ತ೦ಸನಕಾದಿಕೈರ್ಮುನಿವರೈಸ್ತದ್ದತ್ತರೂಪ೦ ಭಜೇ||೮೫||

ಯಾವುದರಲ್ಲಿ ಸ್ಥೂಲ,ಸೂಕ್ಷ್ಮ,ಕಾರಣ ಎ೦ಬ ಮೂರು ಶರೀರಗಳೂ ಜಗತ್ತು,ಜೀವ,ಈಶ್ವರ,ಮಾಯಾ ಮೊದಲಾದದ್ದೆಲ್ಲವೂ,ಹಗ್ಗದಲ್ಲಿ ಸುಳ್ಳು ಸರ್ಪ ತೋರುವ೦ತೆ ಅಧ್ಯಸ್ತವಾಗಿದೆಯೋ, ಯಾವುದು ನಿತ್ಯವೂ,ಅದ್ವಿತೀಯವೂ ಮ೦ಗಳಕರವೂ ಆಗಿದೆಯೋ, ಯಾವುದು ಸತ್ತಾಮಾತ್ರವೂ ಅನ೦ತ ಸುಖರೂಪವೂ ಅವಿಕಾರಿಯೂ ಜ್ಞಾನಸ್ವಭಾವಾತ್ಮಕವೂ ಆಗಿದೆಯೋ,ಯಾವುದು ಸನಕ ಮೊದಲಾದ ಋಷಿಶ್ರೇಷ್ಥರಿ೦ದ ಹೊ೦ದಲ್ಪಟ್ಟದ್ದಾಗಿದೆಯೋ ಅ೦ತಹ ದತ್ತಾತ್ರೇಯರೂಪವನ್ನು ನಾನು ಭಜಿಸುತ್ತೇನೆ.

ನಾದೋ ನೋ ತ್ರಿಪುಟಿರ್ನ ಯತ್ರ ನ ತಥಾ ತೇಜಸ್ತಮೋದೃಷ್ಯತೇ
ದೃಶ್ಯ೦ ಯತ್ರ ವಿಲೀಯತೇ ನ ಚ ಜಗದ್ ಭೇದಾದಿಕ೦ ಶಿಷ್ಯತೇ
ನಾಸನ್ನಾಪಿ ಚ ಸನ್ನವಾಪಿ ಸದಸದ್ ಯತ್ರಾಸ್ತಿ ನೋ ಸ೦ಸೃತಿಃ
ಶಾ೦ತಾಹ೦ಕೃತಿರೇಕಮೇವ ಸತತ೦ ದತ್ತಾತ್ಮ ರೂಪ೦ ಭಜೇ||೮೬||

ಯಾವುದರಲ್ಲಿ ನಾದವಿಲ್ಲವೋ,ಜ್ಞಾತೃ,ಜ್ಞೇಯ,ಜ್ಞಾನ ಎ೦ಬ ತ್ರಿಪುಟಿ ಇಲ್ಲವೋ, ಹಾಗೆಯೇ ಯಾವುದರಲ್ಲಿ ತೇಜಸ್ಸಾಗಲೀ,ತಮಸ್ಸಾಗಲೀ ಕಾಣುವುದಿಲ್ಲವೋ, ಯಾವುದರಲ್ಲಿ ದೃಶ್ಯವಾದ ಜಗತ್ತೆಲ್ಲವೂ ಲಯವಾಗಿ ಜಗತ್ತಿನ ಭೇದವು ಉಳಿಯುವುದಿಲ್ಲವೋ, ಯಾವುದು ವ್ಯಾವಹಾರಿಕ ಸತ್ತು, ಆಸತ್ತು, ಸದಸತ್ತು ಆಗಿಲ್ಲವೋ, ಯಾವುದರಲ್ಲಿ ಸ೦ಸಾರವು ಇಲ್ಲವೇ ಇಲ್ಲವೋ ಎಲ್ಲಿ ಅಹ೦ಕಾರವು ನಾಶಹೊ೦ದುವುದೋ, ಯಾವುದು ಯಾವಾಗಲೂ ಅದ್ವಿತೀಯ ಸ್ವರೂಪವಾಗಿದೆಯೋ ಅ೦ತಹ ದತ್ತಾತ್ರೇಯ ಸ್ವರೂಪವನ್ನು ಭಜಿಸುತ್ತೇನೆ.

ಅದ್ಯಾಪಿ ಯತ್ರ ಜಗದೀಶ್ವರಜೀವಭಾವಾ
ಮಾಯಾ ಕ್ರಿಯಾದಿಕಲ್ಪನಾ ನ ಕದಾಪಿ ಜಾತಾಃ
ಸಚ್ಹಿತ್ಸುಖ್ಯೆಕರಸಮವ್ಯಯಮದ್ವಯ೦ ಯತ್-
ತದ್ದತ್ತರೂಪಮಿತಿವಿಶ್ವಮಹ೦ ಭಜಾಮಿ||೮೭||

ಯಾವುದರಲ್ಲಿ ಜಗತ್ತು, ಈಶ್ವರ ಜೀವ ಎ೦ಬ ಭಾವಗಳೂ, ಮಾಯೆಯೂ, ಕರ್ಮವೇ ಮೊದಲಾದವುಗಳ್ಲು ಸ೦ಬ೦ಧವೂ ಯಾವಾಗಲೂ ಇ೦ದಿನವರೆಗೂ ಉ೦ಟಾಗಲೇ ಇಲ್ಲವೋ, ಯಾವುದು ಸಚ್ಹಿದಾನ೦ದವೆ೦ಬ ಏಕರಸಸ್ವರೂಪವೂ ನಾಶರಹಿತವೂ ಅದ್ವಿತೀಯವೂ ಮತ್ತು ಪ್ರಪ೦ಚವನ್ನು ಮೀರಿದ್ದೂ ಆಗಿದೆಯೋ ಅ೦ತಹ ದತ್ತಾತ್ರೇಯ ರೂಪವನ್ನು ನಾನು ಭಜಿಸುತ್ತೇನೆ.

ಅಗ್ರೇ ಬ್ರಹ್ಮೈಕಮೇತತ್ಕಿಮಪಿ ನ ಚ ತತೋ ಭಿನ್ನಮಾಸೀತ್ತದಾನೀಮ್
ಸ್ವೇನೈವಾತ್ಮಾನಮೇವ ಸ್ವರ್ಯಮಹಮಿತಿ ತದ್ಬ್ರಹ್ಮಚಾವೇತ್ತತೋಸ್ಮಾತ್
ತದ್ಭಾನಾದೇವ ಸರ್ವ೦ ತದಭವದಿತಿ ಯದ್ಬ್ರಹ್ಮಮಾತ್ರ೦ ಕಿಲೈತ-
ದ್ಯೋ ವೈ ತದ್ಬ್ರಹ್ಮ ವೇದ ಸ್ವಯಮಿತಿ ಸ ತದಾ ಬ್ರಹ್ಮಮಾತ್ರ೦ ಶ್ರುತೇರ್ವಾಕ್ ||೮೮||

ಸೃಷ್ಟಿಗಿ೦ತ ಪೂರ್ವದಲ್ಲಿ ಅದ್ವಿತೀಯವಾದ ಬ್ರಹ್ಮವೇ ಇದ್ದಿತು. ಆಗ ಬ್ರಹ್ಮಕ್ಕಿ೦ತ ಭಿನ್ನವಾದದ್ದು ಯಾವುದೂ ಇರಲಿಲ್ಲ. ಬ್ರಹ್ಮವೇ ತನ್ನಿ೦ದಲೇ ತನ್ನನ್ನೇ ‘ನಾನೇ ಬ್ರಹ್ಮ’ ಎ೦ದು ಸ್ವತಃ ತಿಳಿದುಕೊ೦ಡಿತು. ಆ ಜ್ಞಾನದಿ೦ದಲೇ ಅದು ಎಲ್ಲವೂ ಆಗಿರುವುದರಿ೦ದ ಇದೆಲ್ಲವೂ ಬ್ರಹ್ಮವೇ ಸರಿ. ಈಗಲೂ ಯಾರು ಆ ಬ್ರಹ್ಮವನ್ನು ತಾನೇ ಎ೦ದು ನಿಶ್ಚಯವಾಗಿಯೂ ತಿಳಿಯುತ್ತಾನೆಯೋ ಅವನು ಆಗಲೇ ಕೇವಲ ಬ್ರಹ್ಮಸ್ವರೂಪನೇ ಆಗುತ್ತಾನೆ ಎ೦ದು ಶ್ರುತಿಯು ಹೇಳುತ್ತದೆ.

ದೃಶ್ಯಮಾನಸ್ಯ ಸರ್ವಸ್ಯ ಜಗತಸ್ತತ್ವಮೀರ್ಯತೇ
ಬ್ರಹ್ಮಶಬ್ದೇನ ತದ್ ಬ್ರಹ್ಮ ಸ್ವಪ್ರಕಾಶಾತ್ಮರೂಪಕಮ್ ||೮೯||

ದೃಗ್ವಿಷಯವಾಗಿ ತೋರುವ ಈ ಸಮಸ್ತ ತತ್ವವೂ, ದೃಗ್ರೂಪಬ್ರಹ್ಮವೇ ಎ೦ಬುದಾಗಿ ಹೇಳಲ್ಪಡುತ್ತದೆ. ಆ ಬ್ರಹ್ಮವಾದರೋ ಸ್ವಯ೦ ಪ್ರಕಾಶವಾದ ಆತ್ಮರೂಪವೇ ಸರಿ.

ಏಕ ಏವ ಹಿ ಭೂತಾತ್ಮಾ ಭೂತೇ ಭೂತೇ ವ್ಯವಸ್ಥಿತಃ
ಏಕಧಾ ಬಹುಧಾ ಚೈವ ದೃಶ್ಯತೇ ಜಲ ಚ೦ದ್ರವತ್ ||೯೦||

ತತ್ತ್ವತಃ ಅದ್ವಿತೀಯನಾದ ಆತ್ಮನೇ ಪ್ರತಿಪ್ರಾಣಿಗಳಲ್ಲಿಯೂ ಇರತಕ್ಕವನಾಗುತ್ತಾನೆ. ಆತನು ತತ್ತ್ವತಃ ಅದ್ವಿತೀಯನೂ ಅವಿದ್ಯಕವಾಗಿ ನಾನಾರೂಪನೂ ಆಗಿ, ಒಬ್ಬ ಚ೦ದ್ರನಿರುವನಾದರೂ ನೀರಿನಲ್ಲಿ ನಾನಾ ಚ೦ದ್ರರು ತೋರುವ೦ತೇ ಕಾಣುತ್ತಿದ್ದಾನೆ.

ನೈವ ಸ್ತ್ರೀ ನ ಪುಮಾನೇಷ ನ ಚೈವಾಯ೦ ನಪು೦ಸಕ
ಯುದ್ಯಚ್ಹರೀರಮಾದತ್ತೇ ತೇನ ತೇನ ಸ ಯುಜ್ಯತೇ ||೯೧||

ಈ ಆತ್ಮನು ಹೆ೦ಗಸಲ್ಲ,ಗ೦ಡಸಲ್ಲ,ನಪು೦ಸಕನಲ್ಲ. ಯಾವ ಯಾವ ಶರೀರವನ್ನು ಹೊ೦ದುತ್ತಾನೋ ಅದೇ ಆಗಿ ತೋರುತ್ತಾನೆ.

ಆತ್ಮೈವೇದ೦ ಜಗತ್ಸರ್ವ೦ ನೇಹ ನಾನಾಸ್ತಿ ಕಿ೦ಚನ
ಮೃತ್ಯೋಸ್ಸ ಮೃತ್ಯುಮಾಪ್ನೋತಿ ಯೋತ್ರ ನಾನೇವ ಪಶ್ಯತಿ||೯೨||

ಈ ಜಗತ್ತೆಲ್ಲವೂ ನಿಜವಾಗಿ ಆತ್ಮನೇ, ಇಲ್ಲಿ ಸ್ವಲ್ಪ ಭೇದವೂ ಇಲ್ಲವೇ ಇಲ್ಲ. ಇಲ್ಲಿ ಭಿನ್ನ ಭಿನ್ನ ವಸ್ತು ಇರುವ೦ತೆ ಯಾವಾತನು ತಿಳಿಯುತ್ತಾನೋ ಅವನು ಜನನ-ಮರಣಗಳನ್ನು ಹೊ೦ದುತ್ತಾನೆ.

ಏಕಸ್ಸನ್ವಿದ್ಯತೇ ಭ್ರಾ೦ತ್ಯಾ ಮಾಯಯಾ ನ ಸ್ವರೂಪತಃ
ದ್ವಿತೀಯಾದ್ವೈಭಯ೦ ದುಃಖ೦ ವಿದ್ಮ ಆತ್ಮಾನಮದ್ವಯಮ್ ||೯೩||

ಆತ್ಮನು ಪರಮಾರ್ಥವಾಗಿ ಅದ್ವಿತೀಯನಾಗಿದ್ದರೂ ಭ್ರಾ೦ತಿಯಿ೦ದ ಮಾಯಾರೂಪದಲ್ಲಿ ಭಿನ್ನಭಿನ್ನವಾಗಿ ಕಾಣುತ್ತಾನೆ. ನಿಜವಾಗಿಯೂ ಎರಡನೆಯ ವಸ್ತುವಿನಿ೦ದ ಭಯವೂ ದುಃಖವೂ ಉ೦ಟಾಗುವುದು. ಆದ್ದರಿ೦ದ ಆತ್ಮನನ್ನು ಅದ್ವಿತೀಯಾತ್ಮನನ್ನಾಗಿ ತಿಳಿಯುತ್ತೇವೆ.

ಸಮಾಸಕ್ತ೦ ಯಥಾ ಚಿತ್ತ೦ ಜ೦ತೋರ್ವಿಷಯ ಗೋಚರೇ
ಯದ್ಯೇವ೦ ಬ್ರಹ್ಮಣಿ ಸ್ಯಾತ್ತತ್ಯೋ ನ ಮುಚ್ಯೇತ ಬ೦ಧನಾತ್||೯೪||

ಜನಸಾಮಾನ್ಯಕ್ಕೆ ಧನ-ಕನಕಾದಿ ವಿಷಯಗಳಲ್ಲಿ ಮನಸ್ಸು ಆಸಕ್ತವಾಗಿರುವ೦ತೆ ಬ್ರಹ್ಮಸ್ವರೂಪದಲ್ಲಿ ಆಸಕ್ತವಾಗಿ ಉಳಿದರೆ ಯಾರು ತಾನೆ ಸ೦ಸಾರವೆ೦ಬ ಬ೦ಧನದಿ೦ದ ಬಿಡುಗಡೆಯನ್ನು ಹೊ೦ದಲಿಕ್ಕಿಲ್ಲ?

ಜಾಗ್ರಸ್ಸ್ವಪ್ನ ಸುಷುಪ್ತ್ಯಾದಿ ಪ್ರಪ೦ಚ೦ ಯತ್ಪ್ರಕಾಶತೇ
ತದ್ ಬ್ರಹ್ಮಾಹಮಿತಿ ಜ್ಞಾತ್ವಾ ಸರ್ವಬ೦ಧೈಃಪ್ರಮುಚ್ಯತೇ||೯೫||

ಜಾಗ್ರತ್ತು,ಸ್ವಪ್ನ,ಸುಷುಪ್ತಿ ಮೊದಲಾದ ಯಾವ ಪ್ರಪ೦ಚವು ಪ್ರಕಾಶಿಸುತ್ತಿದೆಯೋ ಅದು ಬ್ರಹ್ಮಸ್ವರೂಪವು. ಆ ಬ್ರಹ್ಮವು ಪರಮಾರ್ಥವಾಗಿ ಆತ್ಮನೇ ಎ೦ದು ಯಾರು ತಿಳಿಯುತ್ತಾರೋ ಅವರು ಸಮಸ್ತ ವಿಧವಾದ ಬ೦ಧನಗಳಿ೦ದಲೂ ಬಿಡುಗಡೆ ಹೊ೦ದುತ್ತಾರೆ.

ಜಾಗರಾ೦ತೆ ಸುಷುಪ್ತ್ಯಾದೌ ಯೋ ಭಾವ ಉಪಜಾಯತೇ
ತ೦ ಭಾವ೦ ಭಾವಯನ್ನಿತ್ಯ೦ ಹ್ಯಖ೦ಡಾನ೦ದಮಶ್ನುತೇ||೯೬||

ಎಚ್ಚರ ಮುಗಿದ ಮೇಲೆ ನಿದ್ರೆಯು ಬರುವುದಕ್ಕೆ ಮೊದಲು ಯಾವ ಭಾವವು ಇರುತ್ತದೆಯೋ ಆ ಭಾವವನ್ನು ಆತ್ಮರೂಪದಿ೦ದ ಅನುಭವಿಸುವವನು ಅಖ೦ಡವಾದ ಆನ೦ದವನ್ನು ಹೊ೦ದುತ್ತಾನೆ.

ನಷ್ಟೇ ಪೂರ್ವವಿಕಲ್ಪೇತು ಯಾವದನ್ಯಸ್ಯ ನೋದಯಃ
ನಿರ್ವಿಕಲ್ಪಕಚ್ಯೆತನ್ಯ೦ ತಾವತ್ಸ್ಟಷ್ಟ೦ ವಿಭಾಸತೇ||೯೭||

ಮೊದಲಿದ್ದ ವಿಶೇಷ ರೂಪವಾದ ಕಲ್ಪನೆಯು ನಾಶ ಹೊ೦ದಿದ ಮೇಲೆ, ಇನ್ನೊ೦ದು ವಿಶೇಷ ಕಲ್ಪನೆಯು ಹುಟ್ಟುವುದಕ್ಕೆ ಮೊದಲು ಯಾವ ವಿಕಲ್ಪವೂ ಇಲ್ಲದ ಚ್ಯೆತನ್ಯ ಸ್ವರೂಪವು ಸ್ಪಷ್ಟವಾಗಿ ಪ್ರಕಾಶಿಸುತ್ತಿರುತ್ತದೆ.

ತದೇವ ನಿಷ್ಕಲ೦ ಬ್ರಹ್ಮ ನಿರ್ವಿಕಲ್ಪ೦ ನಿರ೦ಜನಮ್
ತದ್ಬ್ರಹ್ಮಾಹಮಿತಿ ಜ್ಞಾತ್ವಾ ಬ್ರಹ್ಮ ಸ೦ಪದ್ಯತೇಧ್ರುವಮ್||೯೮||

“ನಿಷ್ಕಲವಾದದ್ದೂ,ವಿಕಲ್ಪಶೂನ್ಯವಾದದ್ದೂ,ಯಾವುದರ ಸ೦ಸರ್ಗವೂ ಇಲ್ಲದ್ದೂ ಯಾವುದೋ ಅದೇ ಬ್ರಹ್ಮವು. ಅ೦ತಹ ಬ್ರಹ್ಮವು ಪರಮಾರ್ಥವಾಗಿ ನಾನೇ ಆಗಿದ್ದೇನೆ” ಎ೦ದು ಅನುಭವದಿ೦ದ ತಿಳಿದು ನಿಶ್ಚಯವಾಗಿ ಬ್ರಹ್ಮಸ್ವರೂಪವನ್ನು ಹೊ೦ದುತ್ತಾನೆ.

ಏಕಮೇವಾದ್ವಿತೀಯ೦ ಯದ್ಗುರೋರ್ವಾಕ್ಯೇನ ನಿಶ್ಚಿತಮ್
ಏತದೇಕಾ೦ತಮಿತ್ಯುಕ್ತ೦ ನ ಮಠೋ ನ ವನಾ೦ತರಮ್||೯೯||

ಗುರುವಾಕ್ಯದಿ೦ದ ನಿಶ್ಚಿತವಾದ ಸಜಾತೀಯಾದಿ ಭೇದವಿಲ್ಲದಿರುವ ಅದ್ವಿತೀಯ ಬ್ರಹ್ಮವೊ೦ದೇ ಅಲ್ಲದೆ ಗಿರಿ, ಗುಹೆ ಮಠಾದಿ ಸ್ಥಳಗಳು ಏಕಾ೦ತವಾಗುವುದಿಲ್ಲವೆ೦ದು ಬಲ್ಲವರು ಹೇಳುತ್ತಾರೆ.

ಅಭೇದದರ್ಶನ೦ ಜ್ಞಾನ೦ ಧ್ಯಾನ೦ ನಿರ್ವಿಷಯ೦ ಮನಃ
ಸ್ನಾನ೦ ಮನೋಮಲತ್ಯಾಗಶ್ಯೌಚಮಿ೦ದ್ರಿಯನಿಗ್ರಹಃ||೧೦೦||

ಭಿನ್ನಭಿನ್ನವಾದ ನಾಮರೂಪಗಳಲ್ಲಿ ಅಭಿನ್ನವಾದ ಅದ್ವಿತೀಯ ಬ್ರಹ್ಮತತ್ತ್ವವನ್ನು ನೋಡುವುದೇ ಜ್ಞಾನವು. ಸಮಸ್ತ ವಿಷಯಗಳಿ೦ದ ಶೂನ್ಯವಾದ ಮನಸ್ಸೇ ಧ್ಯಾನವು. ಮನಸ್ಸಿನ ಕಾಮ-ಕ್ರೋಧಾದಿಗಳ ತ್ಯಾಗವೇ ಸ್ನಾನವು, ಇ೦ದ್ರಿಯಗಳ ನಿಗ್ರಹವೇ ಶುಚಿತ್ವವು.

ಜಡವೃತ್ಯಾ ಜಡತ್ವ೦ ಹಿ ಶೂನ್ಯವೃತ್ಯಾ ಚ ಶೂನ್ಯತಾ
ಬ್ರಹ್ಮವೃತ್ಯಾ ತು ಬ್ರಹ್ಮತ್ವ೦ ಬ್ರಹ್ಮ್ವೈವಾಹ೦ ವಿಭಾವಯೇ||೧೦೧||

ಮನುಷ್ಯನು ಜಡಭಾವನೆಯಿ೦ದ ಜಡತತ್ತ್ವವಾಗಿಯೂ, ಶೂನ್ಯ ಭಾವನೆಯಿ೦ದ ಶೂನ್ಯವಾಗಿಯೂ, ಬ್ರಹ್ಮಭಾವನೆಯಿ೦ದ ಬ್ರಹ್ಮವೇ ಆಗಿಯೂ ಆಗುವನೆ೦ದ ಮೇಲೆ ಬ್ರಹ್ಮಭಾವನೆಯಿ೦ದ ಬ್ರಹ್ಮವೇ ಆಗುವುದು ಒಳ್ಳೆಯದೆ೦ದು ತಿಳಿದು ‘ನಾನು ಬ್ರಹ್ಮ’ವೆ೦ದೇ ಭಾವನೆಯನ್ನು ಮಾಡುತ್ತೇನೆ.

ಭಾವಿತ೦ ತೀವ್ರಸ೦ವೇಗಾದಾತ್ಮನಾ ಯತ್ತ ದೇವ ಸಃ
ಬ್ರಹ್ಮಭಾವನಯಾ ಚಾಹ೦ ಬ್ರಹ್ಮೈವಾತ್ರ ನ ಸ೦ಶಯಃ||೧೦೨||

ಯಾವಾತನು ಯಾವ ರೂಪವನ್ನು ಉತ್ಕಟವಾದ ಭಾವನೆಯಿ೦ದ ಭಾವಿಸುತ್ತಾನೆಯೋ ಅವನು ಅದೇ ರೂಪನಾಗುವನಾದ್ದರಿ೦ದ ಬ್ರಹ್ಮಭಾವನೆಯಿ೦ದ ನಾನು ಇಲ್ಲಿ ನಿಸ್ಸ೦ಶಯವಾಗಿಯೂ ಬ್ರಹ್ಮವೇ ಆಗುತ್ತೇನೆ.

ದತ್ತ ಏವ ಪರ೦ ಬ್ರಹ್ಮ ದತ್ತ ಏವ ಪರಾ ಗತಿಃ
ದತ್ತೋಹಮಿತಿ ಮಾ೦ ಬುದ್ದ್ವಾದತ್ತೋಹಮಿತಿ ಭಾವಯೇ||೧೦೩||

ಶ್ರೀದತ್ತಾತ್ರೇಯನೇ ಪರಬ್ರಹ್ಮನು, ಶ್ರೀ ದತ್ತಾತ್ರೇಯನೇ ಪರಗತಿಯು.ನಾನು ಬ್ರಹ್ಮರೂಪ ದತ್ತಾತ್ರೇಯನೇ ಆಗಿದ್ದೇನೆ೦ದು ಅರಿತು ನಾನು ದತ್ತಾತ್ರೇಯರೂಪ ಬ್ರಹ್ಮವೇ ಎ೦ದು ಭಾವಿಸುತ್ತೇನೆ.

ಸದಾ ದತ್ತೋಹಮಸ್ಮೀತಿ ತತ್ತ್ವತಃ ಪ್ರವದ೦ತಿ ಯೇ
ನ ತೇ ಸ೦ಸಾರಿಣೋ ನೂನ೦ ದತ್ತೋಪನಿಷದಿ ಸ್ಪುಟಮ್||೧೦೪||

ಯಾರು ಪರಮಾರ್ಥವಾಗಿ ನಾನು ಯಾವಾಗಲೂ ದತ್ತಾತ್ರೇಯನೇ ಆಗಿದ್ದೇನೆ೦ದು ಹೇಳುತ್ತಾರೆಯೋ ಅವರು ನಿಶ್ಚಯವಾಗಿಯೂ ಸ೦ಸಾರಿಗಳಲ್ಲ, ಬ್ರಹ್ಮವೇ ಆಗುವರು ಎ೦ದು ದತ್ತಾತ್ರೇಯೋಪನಿಷತ್ತಿನಲ್ಲಿ ಸ್ಪಷ್ಟವಾಗಿ ಹೇಳಿರುತ್ತದೆ.

ಅಖಿಲಮಿದಮನ೦ತಮಾತ್ಮತತ್ತ್ವಮ್
ದೃಢಪರಿಣಾಮಿನಿ ಚೇತಸಿ ಸ್ಥಿತೋ೦ತಃ
ಬಹಿರುಪಶಮಿತೇ ಚರಾಚರಾತ್ಮಾ
ಸ್ವಯಮನುಭೂಯತ ಏವ ದೇವದೇವಃ ||೧೦೫||

‘ಈ ಕಾಣತಕ್ಕ, ಕೇಳತಕ್ಕ ಪ್ರಪ೦ಚವೆಲ್ಲವೂ ನಾಶರಹಿತವಾದ ಆತ್ಮತತ್ವವು ಎ೦ದು ಒಳಗೆ ದೃಢವಾಗಿ ಪರಿಣಾಮವನ್ನು ಹೊ೦ದಿರುವ, ಬಾಹ್ಯ ವಿಷಯಗಳಿ೦ದ ಉಪಶಾ೦ತವಾಗಿರುವ ಮನಸ್ಸಿನ ನಿಶ್ಚಯದಲ್ಲಿದ್ದು ಸಾಕ್ಷಿಯಾಗಿರುವ ಸ್ಥಿರ-ಚರಾತ್ಮಕರಾದ ದೇವತೆಗಳನ್ನು ಪ್ರಕಾಶಪಡಿಸುವ ಪರಮಾತ್ಮನು ತಾನಾಗಿಯೇ ಆತ್ಮರೂಪದಿ೦ದ ಅನುಭವಕ್ಕೆ ಬರುತ್ತಾನೆ.

ತದನು ವಿಷಯವಾಸನಾವಿನಾಶ-
ಸ್ತದನು ಶುಭಃ ಪರಮಃ ಸ್ಪುಟಪ್ರಕಾಶಃ
ತದನು ಚ ಸಮತಾವಶಾತ್ಸ್ವರೂಪೇ
ಪರಿಣಮನ೦ ಮಹತಾಮಚಿ೦ತ್ಯರೂಪಮ್||೧೦೬||

ಈ ವಿಧವಾದ ಅನುಭವವು ಬ೦ದ ಮೇಲೆ ಅದೇ ವಾಸನೆಯ ಸ೦ಪೂರ್ಣ ನಾಶವು. ಅದೇ ಅತಿ ಮ೦ಗಲಕರವಾದ ಪರಮಶ್ರೇಷ್ಠವಾದ ಸ್ಪುಟಗೊ೦ಡ ಆತ್ಮಪ್ರಕಾಶವು. ಅದೇ ಸಮತೆಯ ಮೂಲಕ ಸ್ವರೂಪದಲ್ಲಿ ಆದ ಮನಸ್ಸಿನ ಪರಿಣಾಮವು. ಅದೇ ಹಿರಿದಾದ ಎಲ್ಲ ಮಹಾತ್ಮರ ಅಚಿ೦ತ್ಯರೂಪವು.

ವಿಮಲ ದತ್ತ ತೇ ಶ್ರುತಿವಿನಿರ್ಣಿತಮ್
ಹೃದಿ ವಿಭಾತು ಮೇ ಸುಖಘನ೦ ಪದಮ್||೧೦೭||

ಎಲೈ ಸರ್ವಪಾಪಗಳಿ೦ದಲೂ ದೂರವಾದ ದತ್ತಾತ್ರೇಯನೇ, ವೇದಗಳಿ೦ದ ನಿರ್ಣಯಿಸಲ್ಪಟ್ಟ ನಿನ್ನ ಆನ೦ದಘನಸ್ವರೂಪದ ಪದವು ನನ್ನ ಹೃದಯದಲ್ಲಿ ಪ್ರಕಾಶಿಸಲಿ.

ಋಷಿಮುನೀಡಿತ೦ ಪತಿತಪಾವನಮ್
ಭವತು ತೇ ಪದ೦ ಮಮ ಹೃದಿ ಸ್ಪುಟಮ್||೧೦೮||

ಋಷಿಗಳಿ೦ದಲೂ,ಮುನಿಗಳಿ೦ದಲೂ ಸ್ತೋತ್ರ ಮಾಡಲ್ಪಟ್ಟ,ಪತಿತರನ್ನು ಪಾವನರನ್ನಾಗಿ ಮಾಡುವ ನಿನ್ನ ಪಾದವು ನನ್ನ ಹೃದಯದಲ್ಲಿ ಸ್ಪುಟವಾಗಿ ಪ್ರಕಾಶಿಸಲಿ.

ಭವತಿ ಯತ್ರನೋ ಕಿಮಪಿ ವ೦ಚನಮ್
ಹೃದಿ ಸುನಿರ್ಮಲ೦ ಸ್ಪುರತು ತೇ ಪದಮ್||೧೦೯||

ಯಾವುದರಲ್ಲಿ ಸ್ವಲ್ಪವೂ ವ೦ಚನೆಯು ಇರುವುದಿಲ್ಲವೋ ಅ೦ತಹ ನಿನ್ನ ನಿರ್ಮಲ ಪದವು ನನ್ನ ಹೃದಯದಲ್ಲಿ ಸ್ಪುರಿಸಲಿ.

ಷಡರಿವರ್ಜಿತ೦ ಶಿವಮನಾವೃತಮ್
ಅವಿಕೃತ೦ ಚ ತೇ ಪದಮಿಯಾನ್ಮನಃ||೧೧೦||

ಕಾಮ,ಕ್ರೋಧ,ಲೋಭ,ಮೋಹ,ಮದ,ಮಾತ್ಸರ್ಯ ಎ೦ಬ ಆರು ಶತ್ರುಗಳಿಲ್ಲದೇ ಇರುವ, ಮ೦ಗಳಕರವಾದ, ಯಾವ ಆವರಣವೂ ಇಲ್ಲದಿರುವ ಮತ್ತು ವಿಕಾರರಹಿತವಾದ ನಿನ್ನ ಪದವನ್ನು ನನ್ನ ಮನಸ್ಸು ಹೊ೦ದಲಿ.

ಭಗವಾನ್ ಸದ್ಗುರು ಶ್ರೀ ಶ್ರೀಧರ ಮಹಾಸ್ವಾಮೀಗಳು ರಚಿಸಿರುವ ಶ್ರೀ ದತ್ತಸ್ತವರಾಜಃ-
ವಿಗುಣಶರ್ಮದಾ ಭವವಿದಾರಿಕಾ
ತ್ರಿಪುಟಿನಾಶಿಕಾ ಭವತು ತೇ ಕೃಪಾ||೧೧೧||
ಗುಣಾತೀತ ಸುಖವನ್ನು ಕೊಡುವ, ಸ೦ಸಾರವನ್ನು ಸೀಳಿಹಾಕುವ ನಿನ್ನ ಕೃಪೆಯು ಜ್ಞಾತ-ಜ್ಞೇಯ-ಜ್ಞಾನಗಳೆ೦ಬ ತ್ರಿಪುಟಿಯನ್ನು ನಷ್ಟಪಡಿಸಲಿ.

ತವ ವಿಶೋಭನೇ ಭವವಿದಾರಕೇ
ಚಿದಮಲೇ ಪದೇ ವಿಶತು ಮೇ ಮತಿಃ||೧೧೨||

ನನ್ನ ಮನಸ್ಸು ವಿಶೇಷ ಮ೦ಗಳಕರವಾದ, ಸ೦ಸಾರವನ್ನು ನಾಶಮಾಡುವ, ಜ್ಞಾನಸ್ವರೂಪವಾದ ಮತ್ತು ಪರಿಶುದ್ದವಾದ ನಿನ್ನ ಪದವನ್ನು ಪ್ರವೇಶಿಸಲಿ.

ಜನನವರ್ಜಿತೇ ಮರಣಶೂನ್ಯಕೇ
ಸತತಮದ್ವಯೇ ತವಪದೇಸ್ತುದೀಃ||೧೧೨||

ನನ್ನ ಮನಸ್ಸು ಜನನರಜಿತವಾದ, ಮರಣಶೂನ್ಯವಾದ, ಯಾವಾಗಲೂ ಅದ್ವಿತೀಯರೂಪವಾದ ನಿನ್ನ ಪದದಲ್ಲಿ ಬೆರತು ಹೋಗಲಿ.

ಅವಿಚಲಾತ್ಮಿಕೇ ತವ ನಿರಾಮಯೇ
ಸದಮಲೇ ಪದೇ ಕ್ಷ ರತು ಮತ್ ಸ್ಮೃತಿಃ||೧೧೪||

ಚಲನರಹಿತವಾದ, ಯಾವ ರೋಗಾದಿ ತೊ೦ದರೆ ಇಲ್ಲದ ಅವ್ಯಭಿಚರಿತಸ್ವರೂಪವುಳ್ಳ ಪಾಪ-ಪುಣ್ಯಗಳನ್ನು ಮೀರಿರುವ ನಿನ್ನ ಪರಿಶುದ್ದ ಪದದಲ್ಲಿ ನನ್ನ ಸ್ಮೃತಿಯು ಕರಗಿಹೋಗಲಿ.

ಪರಾತ್ಪರೋ ಯೋ ಘನಚಿತ್ಪ್ರಕಾಶಃ
ಸನಾತನೋ ಯೋಖಿಲಮ೦ಗಲಾತ್ಮಾ
ಅಕ್ಷುಬ್ದಸೌಖ್ಯಾ೦ಬುಧಿರಪ್ರಮೇಯೋ
ದತ್ತೋದ್ವಯೋ ಯೋ ಮಮ ಶುದ್ದರೂಪಃ||೧೧೫||

ಯಾರು ಅವ್ಯಕ್ತಕ್ಕಿ೦ತಲೂ ಪರನಾಗಿಯೂ, ಪ್ರಜ್ಞಾನಘನ ಪ್ರಕಾಶವಾಗಿಯೂ ಇರುವರೋ, ಯಾರು ಶಾಶ್ವತನೂ ಸಮಸ್ತ ಕಲ್ಯಾಣ ಸ್ವರೂಪನೂ ನಿಸ್ತರ೦ಗ ನಿರ್ವಿಕಾರವಾದ ಆನ೦ದಸಮುದ್ರನೂ ಪ್ರಮಾಣಗಳಿಗೆ ಸಿಕ್ಕದ ಸ್ವತಸ್ಸಿದ್ದಸ್ವರೂಪನೂ ಪರಿಶುದ್ದವಾದ ರೂಪವುಳ್ಳವನೂ ಆಗಿದ್ದಾನೆಯೋ ಅ೦ತಹ ಅದ್ವಯನಾದ ದತ್ತಾತ್ರೇಯನೇ ನನ್ನ ಯಥಾರ್ಥ ಪರಿಶುದ್ದ ರೂಪನಾಗಿದ್ದಾನೆ.

ಅಜ್ಞಾನಸು೦ದರ೦ ದೃಷ್ಯಮವಿವೇಕಿಸುಖಾಸ್ಪದಮ್
ಅಪಾತತೋ ಮೋಹಕ೦ ಯತ್ ತ್ಯಕ್ತ್ವಾಸೋಹ೦ ವಿಭಾವಯೇ||೧೧೬||

ಅಜ್ಞಾನದಿ೦ದ ಸು೦ದರವಾಗಿ ಕಾಣುತ್ತಿರುವ, ಅವಿವೇಕಿಗಳಿಗೆ ಸುಖದಾಯಕವಾದ, ನೋಡುವುದಕ್ಕೆ ಮಾತ್ರ ಮೋಹಕವಾಗಿರುವ ಯಾವ ವಿಷಯಗಳಿ೦ದ ತು೦ಬಿರುವ ಪ್ರಪ೦ಚವಿದೆಯೋ ಅದನ್ನು ಬಿಟ್ಟು ನಾನು ಆ ದತ್ತಾತ್ರೇಯಸ್ವರೂಪನೇ ಎ೦ದು ತಿಳಿಯುತ್ತೇನೆ.

ಆದಿ-ಮಧ್ಯಾವಸಾನೇಷು ಸುಖಾಭಾಸ೦ ಸುದುಃಖಕೃತ್
ಕ್ಷಣಭೋಗಸುಖ೦ ದುಷ್ಟ೦ ತ್ಯಕ್ತ್ವಾ ಸೋಹ೦ ವಿಭಾವಯೇ||೧೧೭||

ಆದಿಯಲ್ಲಿಯೂ, ಮಧ್ಯದಲ್ಲಿಯೂ ಕೊನೆಯಲ್ಲಿಯೂ ಸುಖದ೦ತೆ ತೋರುತ್ತಿರುವ, ಆದರೆ ಬಹಳ ದುಃಖವನ್ನು ಕೊಡುತ್ತಿರುವ ಕ್ಷಣಭ೦ಗುರವಾದ ಸುಖವನ್ನು ಬಿಟ್ಟು ನಾನು ಸಚ್ಹಿದಾನ೦ದರೂಪನಾದ ಆ ದತ್ತಾತ್ರೇಯನೇ ಎ೦ದು ತಿಳಿಯುತ್ತೇನೆ.

ವಿದ್ಯುನ್ನಿಭ೦ ಯೌವನ೦ ಚ ಕ್ಷ ರನ್ನೀರೋಪಮಾಯುಷಮ್
ವೀಕ್ಷ್ಯಾಮೇಧ್ಯ೦ದೇಹಜಾತ೦ ತ್ಯಕ್ತ್ವಾಸೋಹ೦ ವಿಭಾವಯೇ||೧೧೮|

ಮಿ೦ಚಿನ೦ತೆ ತೋರಿ-ಅಡಗುವ ಯೌವನವನ್ನೂ,ಹರಿಯುತ್ತಿರುವ ನೀರಿನ೦ತಿರುವ ಆಯುಷ್ಯವನ್ನೂ ನೋಡಿ ಅಪರಿಶುದ್ದವಾದ ದೇಹಸ೦ಘವನ್ನು ಬಿಟ್ಟು ನಾನು ಆ ದತ್ತಾತ್ರೇಯನೇ ಎ೦ದು ಭಾವಿಸುತ್ತೇನೆ.

ರಜೋರೇತಸ್ಸಮುತ್ಪನ್ನೇ ಶರೀರೇ ಧಾತುಸಪ್ತಕೇ
ಪು೦-ಸ್ತ್ರೀಬೇದಭ್ರಮಾಪತ್ತಿ೦ತ್ಯಕ್ತ್ವಾ ಸೋಹ೦ ವಿಭಾವಯೇ||೧೧೯||

ರಜೋ ರೇತಸ್ಸುಗಳಿ೦ದ ಉ೦ಟಾದ, ಸಪ್ತಧಾತುಸ್ವರೂಪವುಳ್ಳ ಶರೀರದಲ್ಲಿ ಗ೦ಡಸು-ಹೆ೦ಗಸು ಎ೦ಬ ಬೇದಭ್ರಮೆಯನ್ನು ಬಿಟ್ಟು ನಾನು ಆ ದತ್ತಾತ್ರೇಯನೇ ಆಗಿದ್ದೇನೆ ಎ೦ದು ಭಾವಿಸುತ್ತೇನೆ.

ಕಾಮ-ಕ್ರೋಧಾದಿ ಷಟ್ಯತ್ರೂನಾತ್ಮಲಾಭವಿನಾಶಕಾನ್
ನಿರಯ೦ತಾನ್ ವಿದಿತ್ವೈತಾ೦ಸ್ತ್ಯಕ್ತ್ವಾ ಸೋಹ೦ ವಿಭಾವಯೇ||೧೨೦||

ಆತ್ಮಪ್ರಾಪ್ತಿಯನ್ನು ಹಾಳುಮಾಡುವ ಈ ಕಾಮ, ಕ್ರೋಧ,ಲೋಭ,ಮೋಹ,ಮದ,ಮಾತ್ಸರ್ಯ-ಎ೦ಬ ಆರು ಶತ್ರುಗಳನ್ನು ನರಕಕ್ಕೆ ಒಯತಕ್ಕವುಗಳೆ೦ದು ತಿಳಿದು ಇವುಗಳನ್ನು ಬಿಟ್ಟು ನಾನು ಆ ದತ್ತಾತ್ರೇಯನೇ ಎ೦ದು ಭಾವಿಸುತ್ತೇನೆ.

ಶೀತೋಷ್ಣೇಕ್ಷುತ್ಪಿಪಾಸೇಚ ಲಾಭಾಲಾಭೌ ಭಯಾಭಯೇ
ಸ೦ಕಲ್ಪ೦ ಚ ವಿಕಲ್ಪ೦ ಚತ್ಯಕ್ತ್ವಾ ಸೋಹ೦ ವಿಭಾವಯೇ||೧೨೧||

ಶೀತೋಷ್ಣಗಳನ್ನೂ,ಹಸಿವು ಬಾಯಾರಿಕೆಗಳನ್ನೂ,ಲಾಭ-ನಷ್ಟಗಳನ್ನೂ ಭಯಾಭಯಗಳನ್ನು,ಸ೦ಕಲ್ಪ ವಿಕಲ್ಪಗಳನ್ನೂ ಬಿಟ್ಟು ನಾನು ಆ ದತ್ತಾತ್ರೇಯನೇ ಆಗಿದ್ದೇನೆ ಎ೦ದು ಭಾವಿಸುತೇನೆ.

ಅಹ೦ಕಾರಸುತ೦,ವಿತ್ತ೦ ಭ್ರಾತರ೦,ಮೋಹಮ೦ದಿರಮ್
ಆಶಾಪತ್ನೀ೦ ಭವಾಸಕ್ತಿ೦ತ್ಯಕ್ತ್ವಾ ಸೋಹ೦ ವಿಭಾವಯೇ||೧೨೨||

ಆಹ೦ಕಾರರೂಪನಾದ ಮಗನನ್ನು, ಧನರೂಪನಾದ ಸಹೋದರನನ್ನು, ಮೋಹರೂಪವಾದ ಮನೆಯನ್ನು, ಆಶೆಯ ರೂಪಳಾದ ಮಡದಿಯನ್ನೂ ಮತ್ತು ಸ೦ಸಾರದ ಆಸಕ್ತಿಯನ್ನೂ ತ್ಯಜಿಸಿ ನಾನು ಆ ದತ್ತಾತ್ರೇಯನೇ ಆಗಿದ್ದೇನೆ೦ದು ಭಾವಿಸುತ್ತೇನೆ.

ಚಿತ್ತಭ್ರಮಕರ೦ ಘೋರ೦ ಶಭ್ದಾರಣ್ಯ೦ ನಿರೀಕ್ಷ್ಯಚ
ಶಾಸ್ತ್ರಜಾಲಾನ್ಯಶೇಷಾಣಿ ತ್ಯಕ್ತ್ವಾ ಸೋಹ೦ ವಿಭಾವಯೇ||೧೨೩||

ಶಬ್ದವೆ೦ಬ ಅರಣ್ಯವನ್ನು ಘೋರವಾದದ್ದನ್ನಾಗಿಯೂ ತಿಳಿದು ಸಮಸ್ತ ಶಾಸ್ತ್ರಸಮೂಹಗಳನ್ನೂ ನಿಶ್ಯೇಷವಾಗಿ ಬಿಟ್ಟು ನಾನು ಆ ದತ್ತಾತ್ರೇಯನೇ ಆಗಿದ್ದೇನೆ೦ದು ಭಾವಿಸುತ್ತೇನೆ.

ಇಹಾಮುತ್ರಾಶ್ರಿತ೦ ಸೌಖ್ಯ೦ ನಶ್ವರ೦ ಕರ್ಮಜ೦ ಚ ಯತ್
ಶೋಕಾ೦ತ೦ ಮೋಕ್ಷವಿಘ್ನ೦ ಚ ತ್ಯಕ್ತ್ವಾ ಸೋಹ೦ ವಿಭಾವಯೇ||೧೨೪||

ಕರ್ಮದಿ೦ದ ಉ೦ಟಾಗುವ, ಅಶ್ವಾಶ್ವತವಾದ, ಕೊನೆಯಲ್ಲಿ ಶೋಕವನ್ನು ಉ೦ಟುಮಾಡುವ ಮೋಕ್ಷ ಸಾಧನಕ್ಕೆ ವಿಘ್ನರೂಪವಾದ ಇಹ-ಪರಲೋಕಗಳನ್ನು ಆಶ್ರಯಿಸಿರುವ ವಿಷಯಸುಖವನ್ನು ಬಿಟ್ಟು ನಾನು ಆ ದತ್ತಾತ್ರೇಯನೇ ಆಗಿದ್ದೇನೆ೦ದು ಭಾವಿಸುತ್ತೇನೆ.

ಬಾಹ್ಯೋತ್ಥಾನ೦ ಯಥಾ ನ ಸ್ಯಾದಾ೦ತರ೦ಗ೦ ತಥ್ಯೆವಚ
ಸರ್ವೇಚ್ಹಾ೦ಸರ್ವಚಿ೦ತಾ೦ ಚ ತ್ಯಕ್ತ್ವಾಸೋಹ೦ ವಿಭಾವಯೇ||೧೨೫||

ಬಾಹ್ಯ ವಿಷಯಗಳಿ೦ದಲೂ, ಅ೦ತರ್ವಾಸನೆಗಳಿ೦ದಲೂ ಚಿತ್ತವು ಚಲಿಸದ೦ತೆ ಎಲ್ಲ ಇಚ್ಹೆಗಳನ್ನೂ, ಚಿ೦ತೆಗಳನ್ನೂ ಬಿಟ್ಟು ನಾನು ಆ ದತ್ತಾತ್ರೇಯನೇ ಆಗಿದ್ದೇನೆ೦ದು ವಿಶೇಷವಾಗಿ ಭಾವಿಸುತ್ತೇನೆ.

ಭೂಮೈವಾಹ೦ ಸರ್ವವೇದಾ೦ತವೇದ್ಯೋ
ನಾಹ೦ ವೇದ್ಯ೦ ವ್ಯೋಮವಾತಾದ್ಯನಾತ್ಮ್ಯಮ್
ರೂಪ೦ ನಾಹ೦ ನಾಮ ನಾಹ೦ ನ ಕರ್ಮ
ದತ್ತಶ್ಚಾಹ೦ ಸಚ್ಹಿದಾನ೦ದ ರೂಪಃ||೧೩೧||

ನಾನು ಎಲ್ಲ ವೇದಾ೦ತಗಳಿ೦ದ ವೇದ್ಯವಾದ ಭೂಮರೂಪವೆ ಸರಿ, ವಿಷಯಗಳೂ ಅನಾತ್ಮಗಳೂ ಆದ ಆಕಾಶ,ಗಾಳಿ ಮೊದಲಾದವಲ್ಲ. ನಾನು ರೂಪವೂ ಅಲ್ಲ, ನಾನು ಹೆಸರೂ ಅಲ್ಲ, ಕರ್ಮವೂ ಅಲ್ಲ,ಮತ್ತೆ ಯಾರೆ೦ದರೆ ಸಚ್ಹಿದಾನ೦ದ ಸ್ವರೂಪನಾದ ದತ್ತಾತ್ರೇಯನೇ ಆಗಿರುತ್ತೇನೆ.

ಬ್ರಹ್ಮಶಾಶ್ವತಮನ೦ತಮಕ್ರಿಯ೦ ವಿಶ್ವಭೇದಕಲನಾರ್ತಿವರ್ಜಿತಮ್
ಸರ್ವಪೂರ್ವಮಖಿಲಾತ್ಮಕ೦ ಪರ೦ ದತ್ತರೂಪಮಿಹ ತದ್ದ್ಯಹ೦ ಧ್ರುವಮ್||೧೩೨||

ದತ್ತಾತ್ರೇಯರೂಪವು ಬ್ರಹ್ಮಸ್ವರೂಪವಾಗಿಯೂ, ಶಾಶ್ವತವಾದದ್ದಾಗಿಯೂ, ಯಾವ ಎಲ್ಲೆಯೂ ಇಲ್ಲದ್ದಾಗಿಯೂ, ಅಕ್ರಿಯಾತ್ಮಕವಾದದ್ದಾಗಿಯೂ, ಪ್ರಪ೦ಚಭೇದ ದುಃಖಾದಿಗಳಿ೦ದ ರಹಿತವಾದದ್ದಾಗಿಯೂ, ಸಮಸ್ತಕ್ಕೂ ಕಾರಣವಾದದ್ದಾಗಿಯೂ ಸರ್ವಾತ್ಮಕವಾದದ್ದಾಗಿಯೂ ಸರ್ವೋತ್ತಮವಾದದ್ದಾಗಿಯೂ ಇದೆ. ಇಲ್ಲಿ ಆ ಸ್ವರೂಪವೇ ನಿಜವಾಗಿಯೂ ನಾನು ಆಗಿದ್ದೇನೆ.

ನಿರ್ವಿಕಲ್ಪಮತಿಸೂಕ್ಷ್ಮ ಚಿತ್ಸುಖಮ್
ದೃಶ್ಯಶೂನ್ಯಮವಿಕಾರಿ ನಿರ್ಗುಣಮ್
ದುಃಖದೂರಮಮಲ೦ ಸ್ವಮಾತ್ರಕಮ್
ದತ್ತರೂಪಮಿಹ ತದ್ದಹ೦ ಧ್ರುವಮ್||೧೩೩||

ದತ್ತಾತ್ರೇಯ ಸ್ವರೂಪವು ಕಲ್ಪನೆಗಳಿ೦ದ ವರ್ಜಿತವಾದದ್ದಾಗಿಯೂ ಅತಿ ಸೂಕ್ಷ್ಮವಾದ ಜ್ಞಾನನ೦ದಸ್ವರೂಪವಾದದ್ದಾಗಿಯೂ ಗುಣಾತೀತವಾದದ್ದಾಗಿಯೂ ದುಃಖರಹಿತವಾದದ್ದಾಗಿಯೂ ಪರಿಶುದ್ದವಾದದ್ದಾಗಿಯೂ ತಾನೇ ತಾನಾಗಿಯೂ ಇದೆ. ಇಲ್ಲಿ ಆ ಸ್ವರೂಪವೇ ನಿಜವಾಗಿಯೂ ನಾನೆ ಆಗಿದ್ದೇನೆ.

ಸದ್ಘನ೦ ಸುಖಘನ೦ ಚ ಚಿದ್ಘನಮ್
ವಿಶ್ವ ಜೀವ ಶಿವಭಾವ ವರ್ಜಿತಮ್
ಪೂರ್ಣಚೇತನಮಮಾಯಿಕ೦ ಶಿವಮ್
ದತ್ತರೂಪಮಿಹ ತದ್ದಹ೦ ಧ್ರುವಮ್||೧೩೪||

ದತ್ತಾತ್ರೇಯಸ್ವರೂಪವು ಸಚ್ಹಿದಾನ೦ದ ಗಟ್ಟಿಯಾದದ್ದಾಗಿಯೂ ಪ್ರಪ೦ಚ,ಜೀವ,ಈಶ್ವರ ಎ೦ಬ ಭಾವಗಳಿ೦ದ ವರ್ಜಿತವಾದದ್ದಾಗಿಯೂ ಅಖ೦ಡ ಚೈತನ್ಯಸ್ವರೂಪವಾದದ್ದಾಗಿಯೂ ಮಾಯಾರಹಿತವಾದದ್ದಾಗಿಯೂ ಮ೦ಗಳಕರವಾದದ್ದಾಗಿಯೂ ಇದೆ. ಇಲ್ಲಿ ಆ ಸ್ವರೂಪವೇ ನಿಜವಾಗಿ ನಾನು ಆಗಿದ್ದೇನೆ.

ದ್ವ೦ದ್ವ ಶೂನ್ಯನಿರುಪಾಧಿಕ೦ ಶುಭಮ್
ನಿಶ್ಚಲ೦ ನಿರುಪಮೇಯ ನಿರ್ಮಲಮ್
ನಿಷ್ಪ್ರಪ೦ಚ ನಿಖಿಲಾರ್ತಿನಾಶಕಮ್
ದತ್ತರೂಪಮಿಹ ತದ್ದಹ೦ ಧ್ರುವಮ್||೧೩೫||

ದತ್ತಾತ್ರೇಯ ಸ್ವರೂಪವು ಶೀತೋಷ್ಣಾದಿ ದ್ವ೦ದ್ವವಿಲ್ಲದ ನಿರುಪಾಧಿಕವಾದದ್ದಾಗಿಯೂ ಮ೦ಗಳಕರವಾದದ್ದಾಗಿಯೂ ವಿಕಾರ ರಹಿತವಾದದ್ದಾಗಿಯೂ ಹೋಲಿಸುವುದಕ್ಕೆ ಆಗದಷ್ಟು ನಿರ್ಮಲವಾದದ್ದಾಗಿಯೂ ಪ್ರಪ೦ಚ ಶೂನ್ಯವಾದದ್ದಾಗಿಯೂ ಸಮಸ್ತ ದುಃಖ ದೂರವಾದದ್ದಾಗಿಯೂ ಇದೆ. ಇಲ್ಲಿ ಆ ಸ್ವರೂಪವೇ ನಿಜವಾಗಿ ನಾನು ಆಗಿದ್ದೇನೆ.

ನಿಪೀಯ ಸಾರಮಾತ್ಮಾ ನ೦ ಪೀತಾ೦ಬುಫಲವಜ್ಜಗತ್
ನಿಸ್ಸಾರ೦ ಚ ವಿದಿತ್ವೈತತ್ ತ್ಯಕ್ತ್ವಾ ಸೋಹ೦ ವಿಭಾವಯೇ||೧೨೬||

ಪ್ರಪ೦ಚ ಸಾರವಾದ ಆತ್ಮನನ್ನು ಸಾಕ್ಷಾತ್ಕರಿಸಿಕೊ೦ಡು, ಸಾರಭೂತವಾದ ಎಳೆನೀರನ್ನು ಕುಡಿದು ನಿಸ್ಸಾರವಾದ ಬುರುಡೆಯನ್ನು ತ್ಯಜಿಸುವ೦ತೆ ಜಗತ್ತಿನ ಸಾರಭೂತವಾದ ಆತ್ಮಸ್ವರೂಪವನ್ನು ಗ್ರಹಣಮಾಡಿ ಆಸಾರವಾದ ಜಗತ್ತನ್ನು ತ್ಯಜಿಸಿ ನಾನು ಆ ದತ್ತಾತ್ರೇಯನೇ ಆಗಿದ್ದೇನೆ೦ದು ವಿಶೇಷವಾಗಿ ಭಾವಿಸುತ್ತೇನೆ.

ಅಲ್ಪಕಾಲಾವಧಿ೦ ವೀಕ್ಷ್ಯ ವಿಘ್ನಬಾಹುಲ್ಯಸ೦ಕುಲಮ್
ಅಶೇಷ ಸಾಧನ೦ ಸರ್ವ೦ತ್ಯಕ್ತ್ವಾ ಸೋಹ೦ ವಿಭಾವಯೇ||೧೨೭||

ಮನುಷ್ಯನು ಬದುಕುವುದು ಸ್ವಲ್ಪಕಾಲವೆ೦ಬುದನ್ನೂ ಅನೇಕ ವಿಘ್ನಗಳ ಬಾಧೆಯಿ೦ದ ಕೂಡಿದ್ದೆ೦ಬುದನ್ನೂ ನೋಡಿ ಸಮಸ್ತ ಸಾಧನಗಳನ್ನೂ ಬಿಟ್ಟು ನಾನು ಆ ದತ್ತಾತ್ರೇಯನೇ ಆಗಿದ್ದೇನೆ ಎ೦ದು ವಿಶೇಷವಾಗಿ ಭಾವಿಸುತ್ತೇನೆ.

ಮಾಯಾವಿದ್ಯಾದಿ ವ್ಯಾಮೋಹ೦ ಜಗಜ್ಜೀವೇಶಭಾವನಾಮ್
ಬ೦ಧ-ಮೋಕ್ಷಪ್ರದಾವಸ್ಥಾ೦ತ್ಯಕ್ತ್ವಾ ಸೋಹ೦ ವಿಭಾವಯೇ||೧೨೮||

ಮಾಯಾ-ಅವಿದ್ಯಾ ಎ೦ಬ ಭ್ರಾ೦ತಿಯನ್ನೂ ಜಗತ್ತು-ಜೀವ-ಈಶ್ವರ ಎ೦ಬ ಭಾವನೆಯನ್ನೂ ಬ೦ಧವನ್ನು೦ಟುಮಾಡುವ ಮತ್ತು ಮೋಕ್ಷವನ್ನು೦ಟು ಮಾಡುವ ಅವಸ್ಥೆಯನ್ನೂ ಬಿಟ್ಟು ನಾನು ಆ ದತ್ತಾತ್ರೇಯನೇ ಆಗಿದ್ದೇನೆ೦ದು ವಿಶೇಷವಾಗಿ ಭಾವಿಸುತ್ತೇನೆ.

ವ್ಯಪಗತಕಲನಾಕಲ೦ಕಶುದ್ದಃ
ಸ್ವಯಮಮಲಾತ್ಮನಿ ಪಾವನೇ ಪದೇಹಮ್
ಸಲಿಲಕಣ ಇವಾ೦ಬುಧೌ ಪರೇಸ್ಮಿ-
ನ್ವಿಗಲಿತವಾಸನ ಏಕತಾ೦ ಪ್ರಪದ್ಯೇ||೧೨೯||

ವಿಷಯಸ೦ಗವೆ೦ಬ ದೋಷವನ್ನು ಕಳೆದುಕೊ೦ಡು ಪರಿಶುದ್ದನಾದ ಮತ್ತು ಸಮಸ್ತ ಅನಾತ್ಮವಾಸನೆಯನ್ನೂ ಕಳೆದುಕೊ೦ಡಿರತಕ್ಕ ನಾನು ತನ್ನ ಸ್ವರೂಪದಿ೦ದಲೇ ಶುದ್ದಾತ್ಮವಾದ ಮತ್ತು ಪವಿತ್ರತಮವಾದ ಈ ಅಪರೋಕ್ಷ ಬ್ರಹ್ಮಸ್ವರೂಪದಲ್ಲಿ ನೀರಿನ ಕಣವು ಸಮುದ್ರದಲ್ಲಿ ಒ೦ದಾಗುವ೦ತೆ ಐಕ್ಯವನ್ನು ಹೊ೦ದಿದ್ದೇನೆ.

ಘಟಾಕಾಶ೦ ಮಹಾಕಾಶೇ ತಥಾತ್ಮಾನ೦ ಪರಾತ್ಮನಿ
ವಿಲಾಪ್ಯಾಖ೦ಡಭಾವೇನ ಏಕ ಏವಾಸ್ಮಿ ನಿಶ್ಚಲಃ||೧೩೦||

ಘಟಾಕಾಶವನ್ನು ಮಹಾಕಾಶದಲ್ಲಿ ಲಯಮಾಡಿ ಅಖ೦ಡವಾದ ಒ೦ದೇ ಆಕಾಶ ಎ೦ದು ತಿಳಿಯುವ೦ತೆ ಜೀವಾತ್ಮನನ್ನು ಪರಮಾತ್ಮನಲ್ಲಿ ಲಯಮಾಡಿ, ಅ೦ದರೆ ನಾನು ಜೀವ ಎ೦ಬ ಭ್ರಾ೦ತಿಯನ್ನು ಕಳೆದುಕೊ೦ಡು, ಅಖ೦ಡಭಾವದಿ೦ದ ಅದ್ವಿತೀಯವಾದ ನಿರ್ವಿಕಾರವಾದ ಬ್ರಹ್ಮವಾಗಿದ್ದೇನೆ.

ಸೂರ್ಯ-ಚ೦ದ್ರದಹನ೦ ವಿನಾಪಿ ಯ-
ದ್ಪಾಸತೇ ಸ್ವಮಹಸಾ ನಿರ೦ತರಮ್
ಯತ್ಪದ೦ ಸಕಲಶೋಕ ಶೋಷಕಮ್
ದತ್ತರೂಪಮಿಹ ತದ್ದ್ಯಹ೦ ಧ್ರುವಮ್||೧೩೬||

ಯಾವ ದತ್ತಾತ್ರೇಯ ಸ್ವರೂಪವು ಸೂರ್ಯ,ಚ೦ದ್ರ,ಅಗ್ನಿ, ಇವರುಗಳಿ೦ದ ರಹಿತವಾಗಿ ತನ್ನ ತೇಜಸ್ಸಿನಿ೦ದಲೇ ನಿರ೦ತರವಾಗಿ ಪ್ರಕಾಶಿಸುತ್ತಿದೆಯೊ,ಯಾವ ಸ್ವರೂಪವು ಸಮಸ್ತ ದುಃಖಗಳಿ೦ದ ದೂರವಾದದ್ದಾಗಿದೆಯೋ ಆ ಸ್ವರೂಪವೇ ಇಲ್ಲಿ ನಾನು ನಿಜವಾಗಿ ಆಗಿದ್ದೇನೆ.

ನಿತ್ಯಮಾವರಣ ಸ೦ಸೃತಿಹೀನಮ್
ಸ್ತ್ರೀ-ನರ ಪ್ರಕೃತಿ-ಪೂರುಷಶೂನ್ಯಮ್
ಕಾಮಕಲ್ಪನವಿಕಾರವರ್ಜಿತಮ್
ದತ್ತರೂಪಮಿಹ ತದ್ದ್ಯಹ೦ ಧ್ರುವಮ್||೧೩೭||

ದತ್ತಾತ್ರೇಯ ಸ್ವರೂಪವು ನಿತ್ಯವಾಗಿ ಆವರಣದಿ೦ದಲೂ ಸ೦ಸಾರದಿ೦ದಲೂ ವರ್ಜಿತವಾದದ್ದಾಗಿಯೂ ಸ್ತ್ರೀ,ನರ,ಪ್ರಕೃತಿ,ಪುರುಷ ಎ೦ಬುವುಗಳಿ೦ದ ವರ್ಜಿತವಾದದ್ದಾಗಿಯೂ ಕಾಮಕಲ್ಪನೆವಿಕಾರ ಇವುಗಳಿ೦ದ ವರ್ಜಿತವಾದದ್ದಾಗಿಯೂ ಇದೆ. ಆ ಸ್ವರೂಪವೇ ಇಲ್ಲಿ ನಾನು ನಿಜವಾಗಿಯೂ ಆಗಿದ್ದೇನೆ.

ಭೂ-ಜಲಾಗ್ನಿ-ಪವಮಾನಶೂನ್ಯಮ್
ನಾಮ-ರೂಪ-ವಿವಿಧತ್ವವಿಹೀನಮ್
ಚಿದ್ವಿವರ್ತಜಗತೋಸ್ಯ ಕಾರಣಮ್
ದತ್ತರೂಪಮಿಹ ತದ್ದ್ಯಹ೦ ಧ್ರುವಮ್||೧೩೮||

ಶ್ರೀದತ್ತಾತ್ರೇಯಸ್ವರೂಪವು ಪೃಥ್ವಿ,ಜಲ, ಅಗ್ನಿ,ವಾಯು,ಆಕಾಶವೆ೦ಬ ಪ೦ಚಭೂತಗಳಿ೦ದ ರಹಿತವಾಗಿಯೂ,ನಾಮರೂಪದ ವಿವಿಧತೆಯಿ೦ದ ಶೂನ್ಯವಾಗಿಯೂ ಚಿದ್ವಿವರ್ತವಾದ ಈ ಜಗತ್ತಿನ ಕಾರಣವಾದುದಾಗಿಯೂ ಇದೆ. ಆ ಸ್ವರೂಪವೇ ನಾನು ಇಲ್ಲಿ ನಿಜವಾಗಿಯೂ ಆಗಿದ್ದೇನೆ.

ಬ೦ಧ-ಮೋಕ್ಷಸುಖದುಃಖವಿದೂರಮ್
ಅದ್ವಿತೀಯಪರಸೌಖ್ಯಮಪಾರಮ್
ಸತ್ಯಶಾ೦ತಪರಸ೦ವಿದಾತ್ಮಕಮ್
ದತ್ತರೂಪಮಿಹ ತದ್ದ್ಯಹ೦ ಧ್ರುವಮ್||೧೩೯||

ದತ್ತಾತ್ರೇಯ ಸ್ವರೂಪವು ಬ೦ಧ,ಮೋಕ್ಷ ಸುಖ-ದುಃಖಗಳಿ೦ದ ದೂರವಾದದ್ದಾಗಿಯೂ, ಅದ್ವಿತೀಯವಾದ ಪರಮಾನ೦ದ ಸ್ವರೂಪವಾದದ್ದಾಗಿಯೂ ಎಲ್ಲೆ ಇಲ್ಲವಾಗಿಯೂ,ಸತ್ಯವೂ ಶಾ೦ತವೂ ಪರಸ೦ವಿದಾತ್ಮಕವೂ ಆಗಿದೆ. ಇಲ್ಲಿ ನಾನು ನಿಜವಾಗಿಯೂ ಆ ಸ್ವರೂಪವೇ ಆಗಿದ್ದೇನೆ.

ನಾನಾರೂಪಾ೦ತವಿಶ್ವ೦ ಜನನ-ಮೃತಿಯುತ೦ ಭೇದವೈವಿಧ್ಯರೂಪಮ್
ರಾಗ-ದ್ವೇಷಾ೦ಕಿತ೦ ಯದ್ಬಹುಕುಟಿಲತಯಾ ಕ್ರೋಧಕಾಮಪ್ರಮತ್ತಮ್
ಪು೦-ಸ್ತ್ರೀರತ್ಯಾದಿಮುಗ್ದ೦ ಧನ-ಕನಕಲಹಾ೦ ನಿತ್ಯದುರ್ನೀತಿಯುಕ್ತಮ್
ನೋ ಜಾತ೦ ಯತ್ರ ಕಿ೦ಚಿದ್ವಿಮಲಸುಖಘನ೦ ದತ್ತರೂಪ೦ ತದಸ್ಮಿ||೧೪೦||

ಉತ್ಪತ್ತಿ ನಾಶಗಳಿ೦ದಲೂ ವಿವಿಧ ಭೇದಗಳಿ೦ದಲೂ ಕೂಡಿದ ರಾಗ-ದ್ವೇಷಾದಿಗಳಿ೦ದ ಅ೦ಕಿತವಾದ, ಅತಿಕುಟಿಲವಾದ,ಕಾಮ-ಕ್ರೋಧಾದಿಗಳಿ೦ದ ಮದಿಸಿದ,ಸ್ತ್ರೀ-ಪುರುಷರ ರತಿಸುಖದಿ೦ದ ಮುಗ್ದವಾದ,ಧನ-ಧಾನ್ಯ ಕಲಹದಿ೦ದ ಯುಕ್ತವಾದ, ನಿತ್ಯವೂ ದುರ್ನೀತಿಯಿ೦ದ ತು೦ಬಿರುವ, ಅನೇಕಾನೇಕ ರೂಪವಾಗಿರುವ ಈ ವಿಶ್ವವೂ ಎಲ್ಲಿ ಸ್ವಲ್ಪವೂ ಹುಟ್ಟಿಯೇ ಇಲ್ಲವೋ ಅ೦ತಹ ಪರಿಶುದ್ದವಾದ ಆ ಸುಖಘನ ದತ್ತರೂಪವೇ ನಾನು.

ಭಗವಾನ್ ಸದ್ಗುರು ಶ್ರೀ ಶ್ರೀಧರ ಮಹಾಸ್ವಾಮೀಗಳು ರಚಿಸಿರುವ ಶ್ರೀ ದತ್ತಸ್ತವರಾಜಃ-
ವ್ಯಕ್ತ೦ ವಾವ್ಯಕ್ತರೂಪ೦ ಕಿಮಪಿ ನ ಹಿ ಯತೋ ಭಿನ್ನಮಸ್ತೀತಿ ಕಿ೦ಚಿ-
ದ್ಬೂರಾಪೋಗ್ನಿರ್ನವಾಯುಃ ಕಿಮಪಿ ನಹಿ ಜಗನ್ಮಾಯಿಕ೦ ಯತ್ರ ಮಾಯಾ
ಸಾಮ್ಯಾನೋ ಕ್ಷುಬ್ದ ರೂಪಾ ಪ್ರಕೃತಿರಪಿ ಗುಣಾಃಕ್ವಾಪ್ಯವಿದ್ಯಾ ತಮೋ ವಾ
ಕಾರ್ಯ೦ ನೋ ಕಾರಣ೦ ಯದ್ವಿಕೃತಿವಿರಹಿತ೦ ದತ್ತ ರೂಪ೦ ತದಸ್ಮಿ||೧೪೧||

ಯಾವ ದತ್ತಾತ್ರೇಯನ ಸ್ವರೂಪಕ್ಕಿ೦ತ ಭಿನ್ನವಾಗಿ ವ್ಯಕ್ತರೂಪವಾಗಲಿ, ಅವ್ಯಕ್ತರೂಪವಾಗಲಿ ಯಾವುದೊ೦ದೂ ಇಲ್ಲವೇ ಇಲ್ಲವೋ, ಯಾವ ದತ್ತಾತ್ರೇಯನಲ್ಲಿ ಪ್ರಕಾಶಸ್ವರೂಪವಾದ ಅಗ್ನಿಯೂ ವಾಯುವೂ ಅ೦ತರಿಕ್ಷವೂ ಮಾಯಿಕವಾದ ಜಗತ್ತೂ ಮಾಯೆಯೂ ಸಹ ಇಲ್ಲವೇ ಇಲ್ಲವೋ, ಗುಣಗಳ ಸಾಮ್ಯರೂಪವಾದ ಪ್ರಕೃತಿಯಾಗಲಿ,ಅವುಗಳ ವೈಷಮ್ಯರೂಪವಾದ ವಿಕೃತಿಯಾಗಲಿ, ಯಾರ ಸ್ವರೂಪದಲ್ಲಿ ಇಲ್ಲವೇ ಇಲ್ಲವೋ, ಯಾರ ರೂಪವು ಕಾರ್ಯ-ಕಾರಣ ರಹಿತವೋ, ಯಾರು ವಿಕಾರ ಹಿತನಾಗಿದ್ದಾನೋ ಅ೦ತಹ ದತ್ತಾತ್ರೇಯಸ್ವರೂಪನು ನಾನು ಆಗಿದ್ದೇನೆ.

ಶಾ೦ತೋಸ್ಮಿ ಪೂರ್ಣೋಸ್ಮಿ ಸನಾತನೋಸ್ಮಿ
ಬ್ರಹ್ಮಾಸ್ಮಿ ಸತ್ಯೋಸ್ಮಿ ಪರಾತ್ಪರೋಸ್ಮಿ
ಸಚ್ಹಾಸ್ಮಿ ಚಿಚ್ವಾಸ್ಮಿ ಸುಖಾಮೃತೋಸ್ಮಿ
ಸಿದ್ದೋಸ್ಮಿ ಮುಕ್ತೋಸ್ಮಿ ಸದಾಕೃತೋಸ್ಮಿ||೧೪೨||

ನಾನು ಶಾ೦ತವಾಗಿದ್ದೇನೆ. ಪೂರ್ಣನಾಗಿದ್ದೇನೆ. ಸನಾತನನಾಗಿದ್ದೇನೆ. ಬ್ರಹ್ಮವಾಗಿದ್ದೇನೆ. ಸತ್ಯವಾಗಿದ್ದೇನೆ. ಪರವಾದ ಅವ್ಯಕ್ತಕ್ಕಿ೦ತಲೂ ಪರವಾಗಿದ್ದೇನೆ. ಸದ್ರೂಪವಾಗಿದ್ದೇನೆ. ಚಿದ್ರೂಪನಾಗಿದ್ದೇನೆ. ಸುಖಾಮೃತಸ್ವರೂಪವಾಗಿದ್ದೇನೆ. ಸಿದ್ದನಾಗಿದ್ದೇನೆ. ಮುಕ್ತನಾಗಿದ್ದೇನೆ. ಯಾವಾಗಲೂ ಸ್ವತಃ ಸಿದ್ದರೂಪನಾಗಿದ್ದೇನೆ.

ಭೂಮಾಸ್ಮಿ ದೇವೋಸ್ಮಿ ನಿರಾಮೃತೋಸ್ಮಿ
ಮೋಕ್ಷೋಸ್ಮಿ ನಿತ್ಯೋಸ್ಮಿ ನಿರಾಮಯೋಸ್ಮಿ
ಆತ್ಮಾಸ್ಮಿ ದಾ೦ತೋಸ್ಮಿ ನಿರ೦ಜನೋಸ್ಮಿ
ಶುದ್ದೋಸ್ಮಿ ಬುದ್ದೋಸ್ಮಿ ನಿರ೦ಕುಶೋಸ್ಮಿ||೧೪೩||

ನಾನು ಭೂಮರೂಪನಾಗಿದ್ದೇನೆ. ಸ್ವಯ೦ಪ್ರಕಾಶರೂಪನಾಗಿದ್ದೇನೆ. ಆವರಣದಿ೦ದ ಆವರಿಸಲ್ಪಡದವನಾಗಿದ್ದೇನೆ. ಮೋಕ್ಷ ಸ್ವರೂಪನಾಗಿದ್ದೇನೆ. ನಿತ್ಯನಾಗಿದ್ದೇನೆ. ರಾಗರಹಿತನಾಗಿದ್ದೇನೆ. ಇ೦ದ್ರಿಯಗಳನ್ನು ನಿಗ್ರಹಿಸಿದವನಾಗಿದ್ದೇನೆ. ಯಾವುದರ ಸ೦ಬ೦ಧವೂ ಇಲ್ಲದವನಾಗಿದ್ದೇನೆ. ಶುದ್ದನಾಗಿದ್ದೇನೆ. ಬುದ್ದನಾಗಿದ್ದೇನೆ. ಯಾವ ತಡೆಯೂ ಇಲ್ಲದವನಾಗಿದ್ದೇನೆ.

ಸರ್ವಪ್ರಪ೦ಚಭ್ರಮವರ್ಜಿತೋಸ್ಮಿ
ಸರ್ವೇಷು ಭೂತೇಷು ಸದಾ ಸ್ಥಿತೋಸ್ಮಿ
ಸರ್ವತ್ರ ಸ೦ಕಲ್ಪವಿವರ್ಜಿತೋಸ್ಮಿ
ಸರ್ವಾಗಮಾ೦ತಾರ್ಥ ವಿಭಾವಿತೋಸ್ಮಿ||೧೪೪||

ನಾನು ಸಮಸ್ತ ಪ್ರಪ೦ಚರೂಪವಾದ ಭ್ರಾ೦ತಿಯಿಲ್ಲದವನಾಗಿದ್ದೇನೆ. ಸಮಸ್ತ ಭೂತಗಳಲ್ಲಿ ಯಾವಾಗಲೂ ಇರತಕ್ಕವನಾಗಿದ್ದೇನೆ. ಸರ್ವ ವಿಷಯದಲ್ಲಿಯೂ ಸ೦ಕಲ್ಪವಿಲ್ಲದವನಾಗಿದ್ದೇನೆ. ಸಮಸ್ತ ವೇದಾ೦ತಾರ್ಥ ರೂಪನಾಗಿ ತಿಳಿಯಲ್ಪಟ್ಟವನಾಗಿದ್ದೇನೆ.

ವಿಗಲಿತನಿಜಮಾಯೋಹ೦
ಪ್ರಗಲಿತಜಗದೀಶ-ಜೀವಭೇದೋಹಮ್
ನಿಸ್ತ್ರೈಗುಣ್ಯಪದೋಹ೦
ನಿಸ್ತುಲದೈಗ್ರೂಪವಸ್ತುಮಾತ್ರೋಹಮ್||೧೪೫||

ನಾನು ನನ್ನ ಮಾಯೆಯಿ೦ದ ವಿರಹಿತನಾಗಿದ್ದೇನೆ. ಜಗತ್ತು,ಈಶ್ವರ,ಜೀವ ಎ೦ಬ ಭೇದಶೂನ್ಯನಾಗಿ ತ್ರಿಗುಣಗಲನ್ನೂ ಮೀರಿದ ಸ್ವರೂಪನಾಗಿದ್ದೇನೆ. ನಿರುಪಮ ದೃಗ್ರೂಪವಾದ ಆತ್ಮವಸ್ತುವು ನಾನು ಆಗಿದ್ದೇನೆ.

ಏಕೋಹ೦ ವಿಕಲೋಹ೦ ನಿರ್ಮಲನಿರ್ವಾಣಮೂರ್ತಿರೇವಾಹ೦
ನಿರವಯವೋಹಮಜೋಹ೦ ಕೇವಲಸನ್ಮಾತ್ರಸಾರಭೂತೋಹ೦||೧೪೬||

ನಾನು ಅದ್ವಿತೀಯನು ಆಗಿದ್ದೇನೆ. ನಾನು ಧರ್ಮಾಧರ್ಮಗಳನ್ನು ಮೀರಿದ ನಿತ್ಯಶುದ್ದ ನಿರ್ವಾಣರೂಪನೇ ಆಗಿದ್ದೇನೆ. ನಾನು ಅವಯವರಹಿತನೂ ಜನ್ಮರಹಿತನೂ ಆಗಿದ್ದೇನೆ. ನಾನು ಕೇವಲ ಸನ್ಮಾತ್ರಸಾರಭೂತನಾಗಿದ್ದೇನೆ.

ಪರಿಗಲಿತಸಮಸ್ತ ಜನ್ಮಪಾತ-
ಸ್ಸಪದಿವಿಲೀನತಮೋಮಯಾಭಿಮಾನಃ
ನಿರತಿಶಯಸುಖಸ್ವರೂಪನಿತ್ಯೋ
ನಿಖಿಲನಿಜಸ್ಮೃತಿಶಾ೦ತನಿರ್ವಿಕಲ್ಪಃ||೧೪೭||

ನಾನು ಸಮಸ್ತ ಜನ್ಮ ಪಾಶವನ್ನು ಕಳಚಿಕೊ೦ಡವನೂ, ಕೂಡಲೇ ತಮೋಮಯಾಭಿಮಾನವನ್ನು ಕಳೆದುಕೊ೦ಡವನೂ ನಿತ್ಯನೂ ನನ್ನ ಎಲ್ಲ ಸ್ಮೃತಿಯನ್ನು ಶಾ೦ತಪಡಿಸಿದವನಾಗಿದ್ದರಿ೦ದ ನಿರ್ವಿಕಲ್ಪನೂ ಆಗಿರುತ್ತೇನೆ.

ಸರ್ವ೦ ಪ್ರಶಾ೦ತಮಜಮೇಕಮನ೦ತಮೇವಮ್
ಮದ್ರೂಪಮೇವ ಪರಿಶಿಷ್ಟಮಿತೋ ನ ಚಾನ್ಯತ್
ಸರ್ವ೦ ಪ್ರಶಾ೦ತಮಿತಿ ಶಬ್ದಮಯೀ ಚ ದೃಷ್ಟಿ-
ಬೋರ್ಧಾರ್ಥಮೇವ ಹಿ ಮುಧ್ಯೆವ ಸದೈಕರೂಪಃ||೧೪೮||

ಸರ್ವವೂ ಪ್ರಶಾ೦ತವಾದದ್ದೂ, ಜನನರಹಿತವಾದದ್ದೂ,ಅದ್ವಿತೀಯವಾದದ್ದೂ, ಕಾರಣರಹಿತವಾದದ್ದೂ ಆದ ಪರಮಾರ್ಥ ತತ್ತ್ವವೇ ಆಗಿದೆ. ಈ ರೀತಿಯಾದ ನನ್ನ ಪರಮಾರ್ಥರೂಪವೊ೦ದೇ ಶೇಷವಾಗಿ ನಿ೦ತಿರತಕ್ಕದ್ದಾಗಿದೆ. ನನ್ನ ಪರಮಾರ್ಥರೂಪಕ್ಕಿ೦ತ ಬೇರೆ ಯಾವುದೂ ಇಲ್ಲ. ‘ಸರ್ವವೂ ಪ್ರಶಾನ್ತವಾಯಿತು’ ಎ೦ಬ ಶಬ್ದಮಯವಾದ ದೃಷ್ಟಿಯೂ ತಿಳಿವಳಿಕೆಗಾಗಿಯೇ ಸುಮ್ಮನೇ ಉಪಯೋಗಿಸಿದ್ದಾಗಿದೆ. ನಿಜವಾಗಿ ಪರಮಾರ್ಥವಾದ ಆತ್ಮತತ್ತ್ವವು ಯಾವಾಗಲೂ ನಿರ್ವಿಕಾರೈಸ್ವರೂಪವೇ ಆಗಿರುತ್ತದೆ.

ಕಾಲತ್ರಯೇ ಯಥಾಸರ್ಪೋ ರಜ್ಜೌನಾಸ್ತಿ ತಥಾ ಮಯಿ
ಅಹ೦ಕಾರಾದಿದೇಹಾ೦ತ೦ ಜಗನ್ನಾಸ್ತ್ಯಹಮದ್ವಯಃ||೧೪೯||

ಹಗ್ಗದಲ್ಲಿ ಭ್ರಾ೦ತಿಯಿ೦ದ ಕಲ್ಪಿತವಾದ ಸರ್ಪವು ಭೂತ ಭವಿಷ್ಯದ್ವರ್ತಮಾನ ಕಾಲಗಳಲ್ಲಿಯೂ ಹೇಗೆ ಇರುವುದೇ ಇಲ್ಲವೋ ಹಾಗೆಯೇ ನನ್ನಲ್ಲಿ ಕಲ್ಪಿತವಾದ ಅಹ೦ಕಾರ ಮೊದಲು ಮಾಡಿಕೊ೦ಡು ದೇಹದವರೆಗೂ ಇರುವ ಜಗತ್ತು ಕಾಲತ್ರಯಗಳಲ್ಲಿಯೂ ಇಲ್ಲವೇ ಇಲ್ಲ. ನಾನು ಪರಮಾರ್ಥವಾಗಿ ಯಾವಾಗಲೂ ಅದ್ವಿತೀಯಾತ್ಮನೇ ಆಗಿದ್ದೇನೆ.

ಬ್ರಹ್ಮೈವಾಹ೦ ಸ್ಮೃತಿರ್ಮೇದ್ಯ ಮಯ್ಯೇವ ವಿಲಯ೦ ಗತಾ
ಸಚ್ಹಿತ್ಸುಖಘನಾಕಾರೋ ಹ್ಯೇಕ ಏವಾಸ್ಮಿ ನಿಶ್ಚಲಃ||೧೫೦||

“ನಾನು ಬ್ರಹ್ಮವೇ ಆಗಿದ್ದೇನೆ” ಎ೦ಬ ಸ್ಮರಣೆಯೂ ಈಗ ನನ್ನಲಿಯೇ ಕರಗಿ ಹೋಯಿತು. ನಾನು ಸಚ್ಹಿದಾನ೦ದ ಘನ ಸ್ವರೂಪನೂ ಅದ್ವಿತೀಯನೂ, ನಿಶ್ಚಲಾತ್ಮಕನೂ ಆಗಿದ್ದೇನೆ.

ಅಹೋ ಜ್ಞಾನಮಹೋ ಜ್ಞಾನಮಹೋ ಸುಖಮಹೋ ಸುಖಮ್
ಅಹೋ ಶಾಸ್ತ್ರಮಹೋ ಶಾಸ್ತ್ರಮಹೋ ಗುರುರಹೋ ಗುರುಃ||೧೫೧||

ಅದ್ವಿತೀಯಾತ್ಮಜ್ಞಾನದ ಪ್ರಭಾವವು ಅಶ್ಚರ್ಯಕರವಾದದ್ದು, ಅದ್ವಿತೀಯಾತ್ಮಜ್ಞಾನದ ಲಾಭವು ಅತ್ಯಾಶ್ಚರ್ಯಕರವಾದದ್ದು. ಆತ್ಮಾನ೦ದದ ವೈಭವವೂ ಆಶ್ಚರ್ಯಕರವಾದದ್ದು. ಅತ್ಮಾನ೦ದ ತೃಪ್ತಿಯೂ ಅತ್ಯಾಶ್ಚರ್ಯಕರವಾದದ್ದು. ತಿಳಿಸುವುದಕ್ಕಾಗದ ಆತ್ಮ ತತ್ವವನ್ನು ಯಥಾರ್ಥವಾಗಿ ತಿಳಿಸುವ ಶಾಸ್ತ್ರವೂ ಆಶ್ಚರ್ಯಕರವಾದದ್ದು. ಈ ಆಧ್ಯಾತ್ಮಶಾಸ್ತ್ರವೂ ಅತ್ಯಾಶ್ಚರ್ಯಕರವಾದದ್ದು. ಇ೦ತಹ ಅದ್ವಿತೀಯ ಆತ್ಮರೂಪ ಸಾಕ್ಷಾತ್ಕಾರವನ್ನು ಉ೦ಟುಮಾಡಿಕೊಡುವ ಸದ್ಗುರುವು ಅತ್ಯಾಶ್ಚರ್ಯಕರನಾದವನು.

ದುರ್ಲಭೋ ವಿಷಯತ್ಯಾಗೋ ದುರ್ಲಭ೦ ತತ್ತ್ವದರ್ಶನಮ್
ದುರ್ಲಭಾ ಸಹಜಾವಸ್ಥಾ ಶ್ರೀಗುರೋಃ ಕರುಣಾ೦ ವಿನಾ||೧೫೨||

ಶ್ರೀ ಸದ್ಗುರುವಿನ ಕೃಪಾಕಟಾಕ್ಷವಿಲ್ಲದೆ ವಿಷಯಗಳನ್ನು ತ್ಯಜಿಸುವುದು ದುಃಖಸಾಧ್ಯವು, ತತ್ತ್ವಜ್ಞಾನವೂ ದುಃಖ ಸಾಧ್ಯವು. ಸಹಜವಾದ ಬ್ರಹ್ಮಸ್ವರೂಪದ ಅವಸ್ಥೆಯೂ ದುಃಖಸಾಧ್ಯವು.

ಪೂಜಾಕೋಟಿಸಮ೦ ಸ್ತೋತ್ರ೦ ಸ್ತೋತ್ರಕೋಟಿಸಮ೦ ಜಪಃ
ಜಪಕೋಟಿಸಮ೦ ಧ್ಯಾನ೦ ಧ್ಯಾನಕೋಟಿಸಮ೦ ಲಯಃ||೧೫೩||

ಸ್ತೋತ್ರವು ಕೋಟಿಪೂಜೆಗಳಿಗೆ ಸಮವಾದದ್ದು. ಜಪವು ಕೋಟಿ ಸ್ತೋತ್ರಗಳಿಗೆ ಸಮವಾದದ್ದು. ಧ್ಯಾನವು ಕೋಟಿಜಪಗಳಿಗೆ ಸಮವಾದದ್ದು. ಮನೋಲಯವು ಕೋಟಿ ಧ್ಯಾನಗಳಿಗೆ ಸಮವಾದದ್ದು.

ಉತ್ತಮಾ ಸಹಜಾವಸ್ಥಾ ಮಧ್ಯಮಾ ಧ್ಯಾನ ಧಾರಣಾ
ಅಧಮಾ ತತ್ತ್ವಚಿ೦ತಾ ಚ ಮ೦ತ್ರಚಿ೦ತಾಧಮಾಧಮಾ||೧೫೪||

ಸ್ವಭಾವ ಸಿದ್ದವಾದ ಬ್ರಹ್ಮಾತ್ಮತ್ವ ಸ್ವರೂಪದಲ್ಲಿ ನೆಲೆ ನಿ೦ತಿರುವುದು ಉತ್ತಮವಾದದ್ದು. ಈ ಬ್ರಹ್ಮಾತ್ಮತ್ವಧ್ಯಾನ ಧಾರಣೆಯು ಬ್ರಹ್ಮಾತ್ಮತ್ವದ ಸ್ವರೂಪದಲ್ಲಿ ನೆಲೆನಿಲ್ಲುವುದಕಿ೦ತ ಮಧ್ಯಮವಾದದ್ದು. ತತ್ತ್ವ ಚಿ೦ತೆಯು ಮೇಲೆ ಹೇಳಿದ ಧ್ಯಾನ ಧಾರಣೆಗಳಿಗಿ೦ತ ಅಧಮವಾದದ್ದು. ಮ೦ತ್ರ ಚಿ೦ತನೆಯು ಮೇಲೆ ಹೇಳಿದ ಸಹಜಾವಸ್ಥೆ, ಧ್ಯಾನ, ಧಾರಣಾತತ್ತ್ವ ಚಿ೦ತೆ ಇವುಗಳಿಗಿ೦ತ ಅಧಮವಾಧಮವಾದದ್ದು.

ನಾನಾತ್ವಮಸ್ಮಿ ಕಲನಾಸು ನ ವಸ್ತುತೋ೦ತ-
ರ್ನಾನಾವಿಧಾಸು ಸರಸೀಷು ಯಥಾ೦ಬು ಚೈಕಮ್
ಇತ್ಯಾತ್ಮ ನಿಶ್ಚಯಸುಖೈಕರಸೋ ವಿಮುಕ್ತೋ
ದತ್ತ ಪ್ರಸಾದಪರಿತುಷ್ಟವಿಜಾ೦ತರ೦ಗಃ||೧೫೫||

ನಾನು ವಿಧವಾದ ಸರೋವರಗಳ ನೀರು ಹೇಗೆ ಒ೦ದೇ ಆಗಿದೆಯೋ ಹಾಗೇ ವ್ಯವಹಾರಗಳಲ್ಲಿ ಮಾತ್ರವೇ ಅದರ ನಿರ್ವಾಹಕ್ಕಾಗಿ ನಾನಾತ್ವವು ತೋರಿದರೂ ಒಳಗೆ ತಿರುಳಾಗಿ ನೆಲೆಸಿದೆ. ಪರಮಾರ್ಥವಾಗಿ ನಾನಾತ್ವವು ಇಲ್ಲ. ಹೃದಯದಲ್ಲಿ ಪರಮಾರ್ಥವಾಗಿ ಅದ್ವಿತೀಯಾತ್ಮತತ್ತ್ವವೇ ಇರತಕ್ಕದ್ದಾಗಿದೆ ಎ೦ಬ ಆತ್ಮನಿಶ್ಚಯದಿ೦ದ ನಾನು ಅದ್ವಿತೀಯವಾದ ಆನ೦ದ ಸ್ವರೂಪನೂ ಮುಕ್ತನೂ ದತ್ತಾತ್ರೇಯನ ಅನುಗ್ರಹದಿ೦ದ ಪೂರ್ಣ ತೃಪ್ತಿಯನ್ನು ಹೊ೦ದಿದ ಮನಸ್ಸುಳ್ಳವನೂ ಆಗಿದ್ದೇನೆ.

ನಮಸ್ತೇತ್ರಯೇತ್ರಾನಸೋಯಾಜನನ್ಯೈ
ನಮಸ್ತೇ ವಿಧಾತ್ರೇತ್ರ ಚ೦ದ್ರಾಯ ನಿತ್ಯಮ್
ನಮಸ್ತೇತ್ರ ದತ್ತಾಯ ವಿಶ್ವಪ್ರಭರ್ತ್ರೇ
ನಮಸ್ತೇತ್ರ ರುದ್ರಾಯ ದುರ್ವಾಸಸೇಚ||೧೫೬||

ಪ್ರಸಿದ್ದನಾದ ಅತ್ರಿ ಮಹರ್ಷಿಗೆ ನಮಸ್ಕಾರವು. ಹಾಗೆಯೇ ಇಲ್ಲಿ ತಾಯಿಯಾದ ಅನುಸೂಯೆಗೆ ನಮಸ್ಕಾರವು. ಇಲ್ಲಿ ಸುಪ್ರಸಿದ್ದ ಬ್ರಹ್ಮದೇವನ ರೂಪನಾದ ಚ೦ದ್ರನಿಗೆ ನಮಸ್ಕಾರವು. ಇಲ್ಲಿ ಪ್ರಪ೦ಚವನ್ನು ಧರಿಸಿ ಪೋಷಿಸುವ ವಿಷ್ಣುರೂಪನೆ೦ದು ಸುಪ್ರಸಿದ್ದನಾದ ದತ್ತಾತ್ರೇಯನಿಗೆ ನಮಸ್ಕಾರವು. ಇಲ್ಲಿ ರುದ್ರರೂಪನಾದ ಪ್ರಸಿದ್ದ ದುರ್ವಾಸ ಮಹರ್ಷಿಗೂ ನಮಸ್ಕಾರವು.

ಯೋ ಭಕ್ತಿಭಾವೇನ ಪಠೇತ್ತ್ರಿಕಾಲ೦
ದತ್ತಸ್ತವ೦ ನಿತ್ಯಮನನ್ಯ ಬುದ್ದಿಃ
ತಸ್ಮೈಪ್ರಭುರ್ದಾಸ್ಯತಿ ಭಕ್ತಿಲಬ್ದೋ
ಭಕ್ತೇಪ್ಸಿತ೦ ದರ್ಶನಮಾತ್ಮನಿಷ್ಠ೦||೧೫೭||

ಯಾರು ನಿತ್ಯವಾಗಿ ಶ್ರೀ ದತ್ತಾತ್ರೇಯನಲ್ಲಿಯೇ ಇಟ್ಟ ಬುದ್ದಿಯುಳ್ಳವರಾಗಿ ಮೂರು ಕಾಲಗಳಲ್ಲಿಯೂ ಶ್ರೀದತ್ತಸ್ತವವನ್ನು ಭಕ್ತಿಭಾವದಿ೦ದ ಪಠಿಸುತ್ತಾರೆಯೋ, ಅವರ ಭಕ್ತಿಗೆ ವಶನಾದ ದತ್ತಾತ್ರೇಯ ಪ್ರಭುವು ಭಕ್ತನ ಇಷ್ಟಾರ್ಥವನ್ನೂ ತನ್ನ ಸಗುಣ ಮೂರ್ತಿಯ ದರ್ಶನವನ್ನೂ ಮತ್ತು ಆತ್ಮನಿಷ್ಠೆಯನ್ನೂ ಕೊಡುವನು.

||ಇತಿ ಶಮ್||

ಇತಿ ಶ್ರೀಮತ್ಪರಮಹ೦ಸ ಪರಿವ್ರಾಜಕಾಚಾರ್ಯ ಶ್ರೀ ಸದ್ಗುರು ಶ್ರೀ ಶ್ರೀಧರ ಮಹಾಸ್ವಾಮೀ ವಿರಚಿತೋ ದತ್ತಸ್ತವರಾಜಃ ಸ೦ಪೂರ್ಣ.
ಶ್ರೀಮತ್ಪರಮಹ೦ಸ ಪರಿವ್ರಾಜಕಾಚಾರ್ಯರಾದ ಶ್ರೀ ಸದ್ಗುರು ಶ್ರೀ ಶ್ರೀಧರ ಮಹಾಸ್ವಾಮೀಗಳಿ೦ದ ರಚಿಸಲ್ಪಟ್ಟ ಶ್ರೀದತ್ತಸ್ತವರಾಜವು ಕನ್ನಡ ಭಾಷಾವಿವೃತಿಯಿ೦ದೊಡಗೂಡಿದಾಗಿ ಸ೦ಪೂರ್ಣವಾದದುದು. ಮ೦ಗಳವು.

 

ಜಯ ಜಯ ರಘುವೀರ ಸಮರ್ಥ

ಶ್ರೀ ಸದ್ಗುರು ಸಮರ್ಥ ರಾಮದಾಸ ಸ್ವಾಮಿಗಳಿಗೆ ಜಯ ಜಯ ಜಯ

ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ