ಸ್ತೋತ್ರಂ
ರಚನೆ: ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿ ಮಹಾರಾಜ
(Many thanks to Shri Shiva Kumar of Bengaluru for sharing the doc file of these stotrams)

ಜಯದೇವ ಜಯದೇವ ಜಯ ಶ್ರೀ ಗುರುವರಗೇ ಜಯ ಸದ್ಗುರುವರಗೇ
ಜಯ ಜಯ ನಿತ್ಯ ನಿರಂಜನ ನಿರುತಾನಂದನಿಗೇ ಜಯದೇವ ಜಯದೇವ ॥ಪ॥

ಮೂರುಗುಣಗಳಕಾರ್ಯದಿ ಸೇರದಿರುವವಗೆ- ಸೇರದಿರುವವಗೆ
ತೋರುವ ಈ ವಿಶ್ವಕೆ ಆಧಾರವೆನಿಸಿಹಗೆ
ಧೀರನಾಗಿಹ ಚಿತ್ಸುಖ ಸಾರರೂಪನಿಗೆ- ಸಾರರೂಪನಿಗೆ
ನಾರೀನರ ಭೇದಗಳ್ಮತಿ ತೋರದ ಪ್ರಭುವರಗೆ ಜಯದೇವ ಜಯದೇವ ॥೧॥
ಗಣನೆಗೆಸಿಗದಿಹನಗಣಿತ ಘನಚಿದ್ರೂಪನಿಗೆ – ಘನಚಿದ್ರೂಪನಿಗೆ
ದಿನಮಣಿಶಶಿವಹ್ನಿಗಳನು ಅನುದಿನ ಬೆಳಗಿಪಗೆ
ಜನಮೃತಿ ಇರದಿಹನದ್ವಯ ಚಿನುಮಯನೆನಿಸಿಹಗೆ-ಚಿನುಮಯನೆನಿಸಿಹಗ
ಮುನಿಜನಹೃದಯವಿಹಾರಿಗೆ ಘನಗುಮೂರುತಿಗ
ಜಯದೇವ ಜಯದೇವ ॥೨॥

ರಜತಮಸಾತ್ವಿಕವಿರಹಿತ ಅಜನೆನಿಸಿರುವವಗೆ- ಅಜನೆನಿಸಿರುವವಗ
ನಿಜಜೀವೇಶರಿಗಾಶ್ರಯ ತ್ರಿಜಗವ್ಯಾಪಕಗೆ
ಅಜಹರಿಹರ ಜಗವಂದಿತ ಭಜಕರ ಸಲಹುವಗೆ – ಭಜಕರ ಸಲಹುವಗೆ
ಸುಜನರ ನಿಜ ಮೃದು ಹೃದಯದಿ ವಿಜಯದಿ ನಲಿಯುವಗೆ
ಜಯದೇವ ಜಯದೇವ ॥೩॥

ಸಾಧನೆಯಿಂ ಪರಿಪಕ್ವದ ಸಾಧಕ ಜನಮನಕೆ – ಸಾಧಕ ಜನಮನಕ
ಮೋದದಿ ತನ್ನಯ ತತ್ವದ ಬೋಧವನರುಹಲಿಕೆ
ಆದಿಮೂರುತಿ ಶ್ರೀ ಪ್ರಭು ತಾ ದಯಗೊಳ್ಳುತಲಿ – ತ  ದಯಗೊಳ್ಳುತಲಿ
ಮೇದಿನಿಯೊಳಗವತರಿಸಿಹ ಶ್ರೀಧರ ನಾಮದಲಿ
ಜಯದೇವ ಜಯದೇವ ॥೪॥

ಜಯದೇವ ಜಯದೇವ ಜಯ ಶ್ರೀ ಗುರುವರಗೇ ಜಯ ಸದ್ಗುರುವರಗೇ
ಜಯ ಜಯ ನಿತ್ಯ ನಿರಂಜನ ನಿರುತಾನಂದನಿಗೇ ಜಯದೇವ ಜಯದೇವ

ಶ್ರೀ ಸದ್ಗುರು ಸ್ತೋತ್ರ೦

ಶ್ರೀಧರ೦ ಪರಮಾನ೦ದ೦ ಲೋಕಾನುಗ್ರಹಕಾರಕ೦ ।
ಭಕ್ತ ಹೃತ್ಪದ್ಮಖಮಣಿ೦ ಗುರುರಾಜ೦ ನಮಾಮ್ಯಹಮ್ ॥೧॥
ವ೦ದಾರುಜನಮ೦ದಾರ೦ ಯತಿವೃ೦ದ ಶಿಖಾಮಣಿ೦ ।
ಬ್ರಹ್ಮ ವಿಷ್ಣು ಶಿವಾಭಿನ್ನ೦ ಗುರುರಾಜ೦ ನಮಾಮ್ಯಹಮ್ ॥೨॥
ವರ್ತಮಾನಾಘವಿದ್ವ೦ಸಕಾರಿಣ೦ ಭಾವಿ ಪುಣ್ಯದ೦  ।
ಪೂರ್ವಪುಣ್ಯ ಫಲಾದ್ದೃಷ್ಟ೦ ಗುರುರಾಜ೦ ನಮಾಮ್ಯಹಮ್ ॥೩॥
ಸಚ್ಹಿದಾನ೦ದದುಗ್ದಾಬ್ಧಿ೦ ನಿಜಸತ್ಯ ಹಿತೋಕ್ತಿಭೀ ।
ಲೋಪಯ೦ತ೦ ಹೃದಜ್ಹಾನ೦ ಗುರುರಾಜ೦ ನಮಾಮ್ಯಹಮ್
ಭೋ! ಗುರೋಮನ್ಮನೋಭೃ೦ಗಃ ತ್ವತ್ಪದಾಬ್ಜೇನಿಲೀಯತೇ ।
ತ್ವದುಕ್ತಿಮಕರ೦ದೇನ ಪೋಷಯ ಶ್ರೀಧರ ಪ್ರಭೋ ॥೫॥

ಶ್ರೀರಾಮಮ೦ತ್ರರಾಜಸ್ತೋತ್ರ೦

ಶ್ರೀರಾಮಃ ಶ್ರೀಕರಃ ಶ್ರೀದಃ ಶ್ರೀಸೇವ್ಯಃ ಶ್ರೀನಿಕೇತನಃ ।
ರಾಕ್ಷಸಾ೦ತಕರೋ ಧೀರೋ ಭಕ್ತಭಾಗ್ಯವಿವರ್ಧನಃ ॥೧॥
ಮರೇತ್ಯಪಿ ಚ ಯನ್ನಾಮ ಜಪನ್ ವ್ಯಾಧೋಭವನ್ಮುನಿಃ।
ಜನ್ಮದುಃಖನುದ೦ ಕಾವ್ಯ೦ ದಿವ್ಯ೦ ವ್ಯರಚಯನ್ಮಹತ ॥೨॥
ಯದಾ ಯದಾ ಭವೇದ್ ಗ್ಲಾನಿರ್ಧರ್ಮಸ್ಯ ಸ ತದಾ ತದಾ ।
ರಾಕ್ಷಸಾ೦ತಕರೋ ರಾಮಃ ಸ೦ಭವತ್ಯಾತ್ಮಮಾಯಯಾ ॥೩॥
ಮಹಾಮೋಹಕರೀ ಮಾಯಾ ಯತ್ಪಸಾದಾದ್ವಿನಶ್ಯತಿ ।
ಜಘನ್ಯಾ ಅಪಿ ಪೂಜ್ಯಾಶ್ಚ ಪಾವನಾ ಬಹವೋಭವನ ॥೪॥
ಯಸ್ಯ ಪ್ರಸಾದತೋ ಜಾತೋ ಹನುಮಾನ್ ಮಹತೋ ಮಹಾನ್ ।
ಜನ್ಮಮೃತ್ಯುಜರಾದುಃಖಾನ್ಮಕ್ತೋದ್ಯಾಪಿ ವಿರಾಜತೇ ॥೫॥
ಯಸ್ಮಾತ್ಪರತರನ್ನಾಸ್ತಿ ಯಸ್ಯ ನಾಮ ಮಹದ್ಯಶಃ ।
ರಾಮ೦ ಲೋಕಾಭಿರಾಮ೦ ತ೦ ವ್ರಜಾಮಃ ಶರಣ೦ ಮುದಾ
ಮಮೈತ ಇತಿ ನಃ ಸರ್ವಾನ್ ಸ೦ಸಾರಾತ್ತಾರಯಿಷ್ಯತಿ ।
ಶ್ರೀರಾಮ ಜಯರಾಮೇತಿ ಜಯಜಯೇತಿ ಜಪಾದ್ದ್ರುವಮ್
ರಾಮ ಏವ ಪರಬ್ರಹ್ಮ ರಾಮ ಏವ ಪರಾ ಗತಿಃ ।
ಮನಃಶಾ೦ತಿಕರೋ ರಾಮೋ ಮನ್ಮಥಾರಿನಮಸ್ಕೃತಃ ॥೮॥
ಜಯತ್ರಯಯುತಃ ಶ್ರೇಷ್ಟೋ ರಾಮತ್ರಯಯುತೋ ಮನುಃ ।
ಯತ್ರ ಶ್ರೀರಾಮಮಹಿಮಾ ತ್ರಿಸತ್ಯಮಿತಿ ವರ್ಣ್ಯತೇ ॥೯॥
ರಾಮಃ ಶ್ರೀಸೀತಯಾ ಯುಕ್ತಃ ಸರ್ವೈಶ್ವರ್ಯದ ಇತ್ಯಪಿ ।
ಮಹತ್ವ ಮಸ್ಯಾನ೦ತ೦ ಯತ್ ತಚ್ಛ್ರೀರಾಮಪದೇ ಸ್ಥಿತಮ್ ॥೧೦॥
ಜಯರಾಮಪದೇನಾಯ೦ ಜಯರೂಪ ಇತೀಯತೇ ।
ಯತೋಸೌ ಜಯರೂಪೋ ಹಿ ಜಯಾರ್ಹೋ ಜಯದಸ್ತಥಾ
ಜಯಜಯೇತಿ ಪದೇರ್ಧೋಯ೦ ದ್ಯೋತತೇ ಸರ್ವಸಿದ್ದಿದಃ ।
ಯಸ್ಮಿನ್ನ ಮಾಯಾ ನಾವಿದ್ಯಾ ತಸ್ಮಿನ್ ಮೋಹಃ ಕಥ೦ ಭವೇತ್
ರಾಮತ್ರಯೇ ದಾಶರಥಿಶ್ಛೇಶೋ ಬ್ರಹ್ಮೇತಿ ಕಥ್ಯತೇ ।
ಮಾರುತಾತ್ಮಜಸ೦ತ್ರಾತಾ ಮೋಚಯೇನ್ಮದನಾದಪಿ ॥೧೩॥
ಶ್ರೀರಾಮೇತಿ ಪದ೦ ಪೂರ್ವ೦ ಜಯರಾಮೇತಿ ವೈ ತತಃ ।
ರಾಮೋತ್ರ ದ್ವಿರ್ಜಯಾತ್ಪಶ್ಚಾದ್ವರ್ತತೇ ಮನುರಾಜಕೇ ॥೧೪॥
ಮಹಾಸ೦ಸಾರವ್ಯಾಮೋಹಾನ್ಮೋಚಯತ್ಯಾಶು ಯ೦ ಮನುಃ ।
ಜಪನೀಯಃ ಕೀರ್ತನಿಯೋ ಮುದಾ ಸರ್ವೈಶ್ಚ ಸರ್ವದಾ ॥೧೫॥
ಯಕ್ಷರಾಕ್ಷಸಭೂತಾದ್ಯಾ ಪೀಡಾನೇನ ವಿನಶ್ಯತಿ ।
ರಾಮೋ ಧನುರ್ಧರೋ ನಿತ್ಯ೦ ಸ೦ರಕ್ಷತಿ ಪದೇ ಪದೇ ॥೧೬॥
ಮದೋನ್ಮತ್ತನರೈಶ್ಚಾಪಿ ನ ದುಃಖ೦ ಲಭತೇ ತದಾ ।
ಜನ್ಮಸ೦ತಾಪಚ೦ದ್ರೋಯ೦ ಜ್ಞಾನವಿಜ್ಞಾನದೋ ಮನುಃ
ಯತ್ರ ಕುತ್ರಾಪಿ ಜಪ್ಯೋಯ೦ ಶುಚಿರ್ವಾಪ್ಯಶುಚಿಸ್ತಥಾ ।
ಜಪತಃ ಶಾ೦ತಿಮಾಪ್ನೋತಿ ಪ್ರಶಸ್ತೆಸ್ಮಿನ್ ಸತಾ೦ ಮತಃ ॥೧೮॥
ಯಜ್ಞಾನಾ೦ ಜಪಯಜ್ಞೋಸ್ಮಿ ಭಗವದ್ವಾಕ್ಯಮೀದೃಶಮ್ ।
ರಾಮೇಣೈವ ಪುರಾದಿಷ್ಟಃ ಷಡ೦ಗಾದಿವಿವರ್ಜಿತಃ ॥೧೯॥
ಮರುತ್ಸಾತಾವತಾರಾಯ ರಾಮದಾಸಾಯ ಧೀಮತೇ ।
ಶ್ರೀರಾಮವರಯುಕ್ತೋಯ೦ ಸುಲಭೋ ಫಲಾದಿತಃ ॥೨೦॥
ರಾಜತೇತ್ರ ಮನುಃ ಸಾಕ್ಷಾತ್ ಸ್ತವೇಸ್ಮಿನ್ನಿಜತೇಜಸಾ ।
ಮಹಾಸ೦ಸಾರದುಃಖೌಘಃ ಪಠನಾದಸ್ಯ ನಶ್ಯತಿ ॥೨೧॥
ಭಕ್ತಿ ಜ್ಞಾನ೦ ವಿರಕ್ತಿ೦ ಚ ಭೂರಿವೈಭವಮೇವ ಚ ।
ಆತ್ಮನಿಷ್ಠಾ೦ ಧರ್ಮನಿಷ್ಠಾ೦ ನ್ಯಾಯ೦ ನೀತಿ೦ ಚ ವಿ೦ದತಿ
ಇತಿ ಶ್ರೀರಾಮಮ೦ತ್ರರಾಜಸ್ತೋತ್ರ೦ ಸ೦ಪೂರ್ಣಮ್

ಶ್ರೀ ಗುರು ಶಿವಾನ೦ದ ಸ್ತೋತ್ರ೦

ಶಿವಾನ೦ದ೦ ದಯಾಸಿ೦ಧು೦ ಸು೦ದರಾನ೦ದವಿಗ್ರಹಮ್ ।
ಭವಾಬ್ಧಿತಾರಕ೦ ವ೦ದೇ ಜ್ಞಾನವಿಜ್ಞಾನದ೦ ಶುಭಮ್ ॥೧॥
ಸಚ್ಹಿತ್ಸುಖಘನಾಕಾರ೦ ಜಗತಃ ಸ್ಥಿತಿಕಾರಣಮ್ ।
ಆತ್ಮರೂಪ೦ ಪರ೦ ಶಾ೦ತ೦ ಶಿವಾನ೦ದಗುರು೦ ಭಜೇ ॥೨॥
ಅಹ೦ಸ್ಪೂರ್ತಿತರ೦ಗಸ್ಥ೦ ಚಿದಾನ೦ದಾಬ್ಧಿರೂಪಕಮ್ ।
ಮುಮುಕ್ಷುನಲಿನೀಚ೦ದ್ರ೦ ಶಿವಾನ೦ದಗುರು೦ ಸ್ತುವೇ ॥೩॥
ಅಜ್ಞಾನರಜನೀಸೂರ್ಯ೦ ತಪ್ತಚಿತ್ತಸುಧಾಘನಮ್ ।
ಭವರೋಗಭಿಷಗ್ರತ್ನ೦ ಶಿವಾನ೦ದ೦ ಗುರು೦ ಶ್ರಯೇ ॥೪॥
ಕು೦ಡಲೇ ಕಟಕ೦ ಯದ್ವತ್ ಮೃಗಾ೦ಭಸಿ ಚ ಆತಪಃ ।
ತದ್ವಜ್ಜಗತಿ ಯತ್ಸತ್ಯ೦ ತಸ್ಮಿನ್ ಶಿವಪದೇ ರಮೇ ॥೫॥
ಇತಿ ಶ್ರೀ ಗುರು ಶಿವಾನ೦ದ ಸ್ತೋತ್ರ೦ ಸ೦ಪೂರ್ಣಮ್

ಶ್ರೀದುರ್ಗಾ೦ಬಾ ಸ್ತೋತ್ರ೦

ವರದಪುರನಿವಾಸಿನೀಂ ನಿರವಧಿಸುಖರೂಪಿಣೀಮ್ ।
ನಿಗಮವನವಿಹಾರಿಣೀಂ ಮುನಿಜನಜನನೀಂ ಭಜೇ ॥೧॥

ವಿಮಲಹೃದಯಗಾಹಿನೀಂ ವಿಮಲಮತಿಸುವಾಸಿನೀಮ್ ।
ಸಕಲವಿಭವಧಾರಿಣೀಂ ಮುನಿಜನಜನನಿಂ ಭಜೇ ॥೨॥

ವಿಮಲಭಜನಸೇವಿನೀಂ ತ್ವಮಿತಿ ತದಸಿ ಬೋಧಿನಿಮ್ ।
ಭಜಕಸುಜನತೋಷೀಣಿ0 ಮುನಿಜನಜನನಿಂ ಭಜೇ ॥೩॥

ಚಿದಮಲತನುಶೋಭಿನೀಂ ಸುಕ್ರತಿಕುಸುಮಮಾಲಿನೀಮ್ ।
ಸಕಲಸುಗುಣಸು0ದರೀ0 ಮುನಿಜನಜನನಿಂ ಭಜೇ ॥೪॥

ನಿಜಸುಜನವಿಭೂಷಣೀಂ ವಿಮಲವಿರತಿದಾಯಿನೀಮ್ ।
ನಿರವಧಿಸುಖಕಾರಿಣೀಂ ಮುನಿಜನಜನನಿಂ ಭಜೇ ॥೫॥

ಭಜಕಭವವಿನಾಶಿನೀಂ ವಿಷಯಸುಖನಿವಾರಿಣೀಮ್ ।
ಸಕಲಭಯಾವಿಘಾತಿನೀಂ ಮುನಿಜನಜನನಿಂ ಭಜೇ ॥೬॥

ಸುರನರಪರಿಪಾಲಿನೀಂ ಅಮೃತಸುಖಸುವರ್ಷಿಣೀಮ್ ।
ಕುಜನಕುಮತಿನಾಶಿನೀಂ ಮುನಿಜನಜನನಿಂ ಭಜೇ ॥೭॥

ಅಶುಭಪದನಿವಾರಿಣೀಂ ಅಶುಭಗತಿನಿರೋಧಿನೀಮ್ ।
ಸಕಲಶುಭವಿವರ್ಧಿನಿಂ ಮುನಿಜನಜನನಿಂ ಭಜೇ ॥೮॥

ನಿಗಮಸುಗಮಧರ್ಮಿಣೀಂ ಶ್ರುತಿಕೃತಿಜನತಾರಿಣೀಮ್ ।
ನಿಗಮಮತವಿತಾರಿಣೀಂ ಮುನಿಜನಜನನಿಂ ಭಜೇ ॥೯॥

ಅಚಲಪದವಿಧಾಯಿನೀಂ ಅವಿಚಲಸುಖದರ್ಶಿನೀಮ್ ।
ಸಕಲಜನಹಿತೈಷಿಣೀಂ ಮುನಿಜನಜನನಿಂ ಭಜೇ ॥೧೦॥

ಶ್ರೀಧರೇಣ ಕೃತ0 ಸ್ತೋತ್ರ೦ ವಿಜಯದಶಮೀದಿನೇ ।
ಯೇ ಪಠ್0ತಿ ಮುದಾ ಭಕ್ತ್ಯಾ ತೇ ನರಾ ಮೊಕ್ಷ ಭಾಗಿನ ॥೧೧॥

ಶ್ರೀ ಶಾರದಾ ಸ್ತೋತ್ರ೦

ವಿಬುಧವ೦ದಿತೇ ಬುಧಜನಾಶ್ರಿತೇ ।
ಜನನಿ ಶಾರದೇ ಭವತು ತೇ ಕೃಪಾ ॥೧॥

ಮತಿವಿಕಾಸಿತೇ ಮತಿವಿಶೋಧಿತೇ ।
ಮತಿವರಾರ್ಚಿತೇ ಕುರು ಕೃಪಾ೦ ಶಿವೇ ॥೨॥

ವಿಮಲಬೋಧಿತೇ ನಿಜಸುಖಾತ್ಮಿಕೇ ।
ಯದಿ ತು ತೇ ಕೃಪಾ ಸ ತು ಸುಖೀ ಭವೇತ್ ॥೩॥

ಜನನಿ ತೇ ಪದ೦ ಜಡವಿಭಾಸಕ೦ ।
ಸ್ಪುರತು ಸರ್ವದಾ ಸ್ಪುಟತರ೦ ಹೃದಿ ॥೪॥

ಚಿದವಲ೦ಬ್ಯ ಹೇ ಜನನಿ ಮನ ಇದಮ್ ।
ಅತಿ ಸುಶೋಭನ೦ ವಿಶತು ತವ ಪದಮ್ ॥೫॥

ತವ ಸುಶೋಭನ೦ ವಿಮಲ೦ರೂಪಕಮ್ ।
ಜಗತಿ ವಿಸ್ತೃತ೦ ಕುರು ದಯಾನ್ವಿತೇ ॥೬॥

ತವ ಕೃಪಾನ್ವಿತಾ ಜಗತಿ ನೈಕಶಾ ।
ಸ್ತಿಮಿರಹಾರಕಾಃ ಸ೦ತು ಬುಧಜನಾಃ ॥೭॥

ಮಲಹರಾತ್ಮಕೇ ವಿಮಲಜನಪುರೇ ।
ಜನನಿ ತ್ವ೦ ಸದಾ ನಿವಸ ಜ್ಞಾನದೇ ॥೮॥

ಜಯತು ಜಯತು ನಿತ್ಯ೦ ಶಾರದಾ ವೇದಮಾತಾ ।
ಜಯತು ಜಯತು ದೇವಿ ಜ್ಞಾನದಾ ಮೋಕ್ಷದಾ ಚ ॥
ಜಯತು ಜಯತು ಯಾ ಶ್ರೀಃ ಸರ್ವದೇವೈರುಪಾಸ್ಯಾ ।
ಜಯತು ಜಯತು ನಿತ್ಯ೦ ಭಾರತೀ ಚಿತ್ಸ್ವರೂಪಾ ॥೯॥

ಇತಿ ಶ್ರೀ ಶಾರದಾ ಸ್ತೋತ್ರ೦ ಸ೦ಪೂರ್ಣಮ್

ಜೈ ಜೈ ರಘುವೀರ ಸಮರ್ಥ
ಶ್ರೀ ಸದ್ಗುರು ಸಮರ್ಥ ರಾಮದಾಸ ಸ್ವಾಮೀ ಮಹಾರಾಜ್ ಕಿ ಜೈ
ಶ್ರೀಮತ್ ಪರಮಹ೦ಸ ಪರಿವ್ರಾಜಕಾಚಾರ್ಯ ಸದ್ಗುರು ಬಗವಾನ್ ಶ್ರೀ ಶ್ರೀಧರ ಸ್ವಾಮೀ ಮಹಾರಾಜ್ ಕಿ ಜೈ

 

 

 

(Tags - भगवान श्रीधर स्वामी महाराज,श्रीधर साहित्य,श्रीधर स्वामी,ಶ್ರೀಧರ್ ಸ್ವಾಮಿ,ಭಗವಾನ್ ಶ್ರೀಧರ ಸ್ವಾಮಿ,bhagavan,bhagawan,sridhara,bhagvan,sridhara,sreedhara,Ramdasi,ramadasi,sajjanagada,sajjanagarh,sajjangad,sajjanagada,Sajjangarh,Samarth Ramdas,sheedhara sahitya,Shreedhar Swami,shreedhar swamy,Shreedhara Swamy,sridhara sahitya,Shridhara Swamiji,sreedhar swami books,sreedhar swamy,sreedhara sahitya,sreedhara swami,sreedhara swamy,sreedhara swamy books,sridhar sahitya,sridhara sahitya,sridhara swami,sridhara swami books,Varadahalli,varadalli,Varadapur,varadapura,Varadpur,Vardalli,shridharsahitya.com)