ವಿಶ್ವಧರ್ಮಾಭ್ಯುದಯಮ್
(Many thanks to Mrs Vani Akka Shastri of Gurupura, Kansur, Sirsi, Karnataka for sharing this
ಪರಿಹರಿಸುತಜ್ಞಾನ ತಮವನು|
ಮರೆಯಿಸುತಲಾ ವಿಶಯ ತಾಪವ|
ಇರುತಾನಿರುತಾವದು ವಿಶುದ್ಧದಿ ಜಗವರಕ್ಷಿಪುದೋ||
ಪರವಿರತಿ ಪರವಾಗುತನುದಿನ|
ವರಮುಮುಕ್ಷು ಚಕೋರಭಾವದಿ|
ಪರಮವಿಮಲ ಬ್ರಹ್ಮಸುಖವನು ಕೋರುತಲಿ ನಿತ್ಯ|| ೧||
ಯಾವ ವಿಧುವನು ದುಃಖನೀಗಲು |
ಭಾವದಿದಂದಲಿ ಸೇವಿಸುವುದದು|
ತೀವಿಬೆಳಗುವ ಜಗದಿದೊಂದೇ ವಿಶ್ವಧರ್ಮವಲಾ||
ಆವ ಬ್ರಹ್ಮವು ನಿತ್ಯಮಂಗಲ
ಸಾವುನೋವುಗಳಿಂದ ರಹಿತವೋ|
ಆ ವಿಮಲ ಸುಖ ಶರಧಿಯಿಂದಲಿ ಜನಿಸಿ ಜಗದೊಳಗೆ ||೨||
ಅರಳಿಸುತ ಹೃತ್ಕುಮುದ ಸಿರಿಯನು|
ಭರದಿ ನಾಶಿಸಿ ವಿಶ್ವ ದುಃಖವ|
ಪರಮ ಬ್ರಹ್ಮಾನಂದ ಬೀರುತ ವಿಶ್ವ ಧರ್ಮವಿದೂ ||
ವರಕಣಾ ಪರಬ್ರಹ್ಮ ನಿನದು |
ಕರಚರಣದಿಂ ರಹಿತಾನಾಗಿಹೆ |
ಮರಣ ಭಯ ನಿನಗಿಲ್ಲವೆಂಬುದು ಸಾರುವುದು ಸತತ ||೩||
ಇದುವೆ ವೈದಿಕ ವಿಶ್ವಧರ್ಮವು|
ಇದುವೆ ನಿಜ ಭವ ಮೋಕ್ಷ ಕಾರಣ |
ಇದುವೆ ವಿಶ್ವದ ಧರ್ಮ ಕಿರಣದಿ ತಾನೆ ಬೆಳಗಿಪುದು||
ಇದುವೆ ನಿತನಿಜಸುಖದ ಶರಧಿಯು|
ಇದುವೆ ನಿತ ನಿಜ ಶಾಂತಿ ನಿಲಯವು|
ಇದುವೆ ನಿತ ಆಶ್ರಯಿಸಿ ನಿಜಸುಖ ಕೋರಿ ಸಜ್ಜನರಾ ||೪||
ರಚನೆ – ಶ್ರೀ ಶ್ರೀಧರ ಸ್ವಾಮೀಜಿ
ಮನ್ಮಥ ಸಂ| ರದ ಕಾರ್ತೀಕ ಶುದ್ಧ ಪೌರ್ಣಮಿ (1955)
ಮಂಗಳೂರು.