ಶ್ರೀ ಸದ್ಗುರು ಭಗವಾನ ಶ್ರೀಧರ ಸ್ವಾಮಿಗಳ ಹಾಡುಗಳು

(ಸೌಜನ್ಯ / ರಚನೆ – ಶ್ರೀ ಸತ್ಯ.ಪಿ.ಎ Facebook)

 
ಶ್ರೀಧರಾ… ಶ್ರೀಧರಾ… ಶ್ರೀಧರಾ… 

ನನ್ನ ತಾಯಿಯೇ… 
ನನ್ನ ತಾಯಿಯಾಗಿಯೇ ನನಗೆ ತಂದೆಯಾದ ತಾಯಿಯೇ…

ನನ್ನ ತಾಯಿಯೇ… 
ನನ್ನ ತಾಯಿಯಾಗಿಯೇ ನನಗೆ ತಂದೆಯಾದ ತಾಯಿಯೇ…

ತಾಯಿಯೇ ತಂದೆಯೇ…
ತಂದೆತಾಯಿಯಾಗಿ ಬಂದ ಕರುಣಾ ಸಾಗರ ಭಗವಾನನೇ…

ನಾನು ನಾನಾಗಿಯೇ ನಂಬಿ ಬಂದೆ…
ನಾನು ನಾನಾಗಿಯೇ ನಂಬಿ ಬಂದೆ…

ದಯಮಾಡಿ ದಯಮಾಡಿ
ನನ್ನ ಬಿಟ್ಟು ಹೋಗಬೇಡ… ಹೋಗಬೇಡ…
ರಾಮದಾಸ… ಶ್ರೀರಾಮದಾಸ…

ಕೃಪೆ ತೋರು… ಕೃಪೆ ತೋರು…
ಕರುಣೆಯಾ ತೋರು… ಕರುಣೆಯಾ ತೋರು…
ಶ್ರೀಧರಾ… ಶ್ರೀಧರಾ… ಶ್ರೀಧರಾ…

ಶಾಶ್ವತವಾಗಿ ಇರುವುದು ಕಾಯುವುದು ಒಂದೇ ಅದೇ ನಾಮಜಪ ದಯವಿಟ್ಟು ಎಲ್ಲರೂ ಭಗವಂತನ ನಾಮಜಪವನ್ನು ಯಥೇಚ್ಛವಾಗಿ ಮಾಡಿ ಭಗವಂತನ ಕೃಪೆಗೆ ಪಾತ್ರರಾಗಿ

ಶ್ರೀರಾಮ ಜಯ ರಾಮ ಜಯ ಜಯ ರಾಮ
ಶ್ರೀರಾಮ ಜಯ ರಾಮ ಜಯ ಜಯ ರಾಮ
ಶ್ರೀರಾಮ ಜಯ ರಾಮ ಜಯ ಜಯ ರಾಮ

ಜೈ ಗುರುದೇವ ದತ್ತ ಶ್ರೀಧರ……
 
 
❀~●~❁~●~❀~●~❁~●~❀~●~❁~●~❀
 
 
ತಿಳಿಯಣ್ಣ ನೀನು ತಿಳಿಯಣ್ಣ
ನಿಜ ತತ್ವವ ತಿಳಿಯಣ್ಣ || ಪ ||
 
ನೋಡಣ್ಣ ನೀನು ನೋಡಣ್ಣ
ಗುರುವಿನ ಪಾದವ ನೋಡಣ್ಣ  1
 
ಕೇಳಣ್ಣ ನೀನು ಕೇಳಣ್ಣ
ಗುರುವಿನ ಪದಗಳ ಕೇಳಣ್ಣ  2
 
ಉಸಿರಾಡಣ್ಣ ನೀನು ಉಸಿರಾಡಣ್ಣ
ಗುರುವಿನ ನಾಮದಿ ಉಸಿರಾಡಣ್ಣ 3
 
ಮಾತಾಡಣ್ಣ ನೀನು ಮಾತಾಡಣ್ಣ
ಗುರುವಿನ ಪದಗಳ ಮಾತಾಡಣ್ಣ 4
 
ಅನುಭವಿಸಣ್ಣ ನೀನು ಅನುಭವಿಸಣ್ಣ
ಗುರುವಿನ ಜ್ಞಾನವ ಅನುಭವಿಸಣ್ಣ 5
 
ಮುಗಿಯಣ್ಣ ನೀನು ಕೈ ಮುಗಿಯಣ್ಣ
ಗುರುವಿನ ಚರಣಕೆ ಕೈ ಮುಗಿಯಣ್ಣ 6
 
ನಡೆಯಣ್ಣ ನೀನು ನಡೆಯಣ್ಣ
ಶ್ರೀಕ್ಷತ್ರ ವರದಪುರಕ್ಕೆ ನಡೆಯಣ್ಣ  7
 
ಶರಣಾಗಣ್ಣ ನೀನು ಶರಣಾಗಣ್ಣ
ಶ್ರೀಗುರು ಶ್ರೀಧರಣ್ಣನಿಗೆ ನೀನು ಶರಣಾಗಣ್ಣ 8
 
ಕೊಡ್ತಾನಣ್ಣ ನಿನಗೆ ಕೊಡ್ತಾನಣ್ಣ
ಪರಮಾನಂದವ ಕೊಡ್ತಾನಣ್ಣ  9
 
 
❀~●~❁~●~❀~●~❁~●~❀~●~❁~●~❀
 
 
 
ಕಾಲ ಪುರುಷನು ಹೊಂಚು ಹಾಕಿರುವನು…
 
ಧರ್ಮದ ಮುಖವಾಡ ಧರಿಸಿದವನ ಅಡಗಿಸಲು…
 
ಅಧರ್ಮಕ್ಕೆ ಬೆನ್ನು ಕೊಟ್ಟು ಬೆಂಗಾವಲಾಗಿ ಕಾದಿರುವವನ ಮಟ್ಟ ಹಾಕಲು…
 
ಹುಚ್ಟೆದ್ದು ನಗುವ ಆ ನಗುವನ್ನು ಅಡಗಿಸಲು…
 
ಮದವೇರಿ ಹಟ್ಟ ಹಾಸವ ಮಾಡುವವನ ಮಟ್ಟ ಹಾಕಲು…
 
ರಕ್ತ ಬೀಜಾಸುರನಂತಿರುವವನ ರಕ್ತ ಸಮೇತ ನುಂಗಲು…
 
ಹಣದ ವ್ಯಾಮೋಹಕ್ಕೆ ಕಟ್ಟಿಕೊಂಡ ಹೆಂಡತಿಯನ್ನು ಮಾರುವವನ ಮಗ್ಗಲು ಮುರಿಯಲು…
 
ಧರ್ಮದ ಹೆಸರಿನಲ್ಲಿ ಅಧರ್ಮವ ಮಾಡುವವನ ಅಹಂಕಾರ ನಾಶಮಾಡಲು…
 
ದಯೆಯೇ ಇಲ್ಲದೆ ದರಿದ್ರರ ರೀತಿಯ ನೆಡೆಯುವವನ ದಾರಿಗೆ ತರಲು…
 
ಕಾಯುತಿರುವನು ಕಾಯುತಿರುವನು
ಕಾಲಪುರುಷನು ಕರುಣೆ ಇಲ್ಲದೆ ಅಂತ್ಯ ಮಾಡಲು
 
ಕಾಯುತಿರುವನು ಹೊಂಚು ಹಾಕಿ ಸಂಚು ಮಾಡಿ ಮಟ್ಟ ಮಾಡಲು
 
ಕಾಯುತಿರಿವನು ಕಾಲಪುರುಷನು ಕಾಯುತಿರುವನು
 
ಇನ್ನಾದರೂ ಶರಣಾಗಿ ಶ್ರೀಗುರು ಶ್ರೀಧರನಿಗೆ ಜ್ಞಾನ ನೀಡಿ ಕಾಯ್ವನು…
 
ರಕ್ಷಣೆ ನೀಡಿ ಕಾಯ್ವನು ನಮ್ಮ ಶ್ರೀಧರನು…
 
ಬಿಡದೆ ಕಾಯ್ವನು ಬಿಡದೆ ಕಾಯ್ವನು ಇದು ಸತ್ಯ ಇದು ಸತ್ಯ…
 
 
❀~●~❁~●~❀~●~❁~●~❀~●~❁~●~❀
 

 

ಅಪರಿಮಿತ ಆನಂದ ಸಿಗುವುದು ಶ್ರೀಧರರಲ್ಲಿ

ಅಜ್ಞಾನ ಅಂದಕಾರ ನಾಶವಾಗುವುದು ಶ್ರೀಧರರಲ್ಲಿ

ಜ್ಞಾನ ನಿಧಿಯು ಸಿಗುವುದು ಶ್ರೀಧರರಲ್ಲಿ

ಶ್ರೀಂ ಎನ್ನುವು ಮಹಾ ಸಂಪತ್ತಿನ ಭಾಂಡಾರ ಇರುವುದು ಶ್ರೀಧರರಲ್ಲಿ

ಮೋಕ್ಷ ಶ್ರೀಯನ್ನು ನೀಡುವುದರಲ್ಲಿ ಮುಂದಿರುವರು

ಭಕ್ತರ ಕಷ್ಟಕ್ಕೆ ಕರಗುವುದರಲ್ಲಿ ಮುಂದಿರುವರು

ಎಲ್ಲವೂ ಅವರೇ ಅವರೇ ಎಲ್ಲವೂ ಆಗಿರುವ ನನ್ನ ಭಗವಾನರು ಶ್ರೀಧರರು

 

❀~●~❁~●~❀~●~❁~●~❀~●~❁~●~❀

 

 
ಶ್ರೀಧರ ಗುರುವೇ ಶ್ರೀಧರ ಗುರುವೇ…
 
ಕುದಿಯುತಿರುವುದು ಅಹಂಕಾರವೆಂಬ ಬೆಂಕಿ
ತಣ್ಣಗಾಗುವ ಮಾರ್ಗತಿಳಿಯುತ್ತಿಲ್ಲ ಶ್ರೀಧರ ಗುರುವೇ…
 
ದಿಕ್ಕು ತಿಳಿಯುತ್ತಿಲ್ಲ ಮೋಹವೆಂಬ ಮಾಯೆ
ನನ್ನ ಕಣ್ಣುಗಳನ್ನು ಮುಚ್ಚಿಹಾಕಿದೆ ಶ್ರೀಧರ ಗುರುವೇ…
 
ಧ್ಯಾನ ನಿಲ್ಲುತ್ತಿಲ್ಲ ಮನಸ್ಸೆಂಬ ಕೋತಿ
ತನಗೆ ಇಷ್ಟ ಬಂದಂತೆ ಆಟವಾಡುತ್ತಿದೆ ಶ್ರೀಧರ ಗುರುವೇ…
 
ಚಿತ್ತಕ್ಕೆ ಶಾಂತಿ ದೋರಕುತ್ತಿಲ್ಲ ಮಾಯೆಯು
ತನಗೆ ಇಷ್ಟ ಬಂದಂತೆ ನಟಿಸುತ್ತಿದೆ ಶ್ರೀಧರ ಗುರುವೇ…
 
ಪ್ರಪಂಚವು ಸತ್ಯವೂ ಮಿಥ್ಯವೋ ತಿಳಿಯುತ್ತಿಲ್ಲ
ಇದರಲ್ಲಿ ಸಿಕ್ಕಿ ಹಾಕಿಕೊಂಡು ನರಳುತ್ತಿರುವೆ ಶ್ರೀಧರ ಗುರುವೇ…
 
ಸತ್ಯ ಎನ್ನುವ ಭ್ರಮೆಯಲ್ಲಿ ಜೀವನ ನಡೆಸುತ್ತಿರುವೆ
ಆದರೆ ಅದು ಸತ್ಯವಲ್ಲ ಎಂದು ಗೊತ್ತು ಶ್ರೀಧರ ಗುರುವೇ…
 
ಗೊತ್ತಿಲ್ಲದ ದಾರಿಯಲ್ಲಿ ಗೊತ್ತು ಎಂದು ನಡೆಯುತ್ತಿರುವೆ
ಆದರೆ ಅದು ಗೊತ್ತಿಲ್ಲದ ದಾರಿ ಶ್ರೀಧರ ಗುರುವೇ…
 
ಎಲ್ಲವೂ ಗೊತ್ತು ಎನ್ನುವ ಮಾಯೆಯಲ್ಲಿ ಇದ್ದೆ
ಆದರೆ ಏನು ಗೊತ್ತಿಲ್ಲ ಎನ್ನುವ ಸತ್ಯ ತಿಳಿಯಿತು ಶ್ರೀಧರ ಗುರುವೇ…
 
ನನ್ನ ಅರ್ಧ ಜೀವನ ಮುಗಿಯಿತು ಇನ್ನೂ
ಆಧ್ಯಾತ್ಮಿಕದ ಹಾದಿಯನ್ನು ಹಿಡಿದಿಲ್ಲ ಶ್ರೀಧರ ಗುರುವೇ…
 
ನನಗೆ ಬರುವ ಆಲೋಚನೆಗಳು ನನ್ನವು ಎನ್ನುವ
ಅಹಂಕಾರದಲ್ಲಿ ಮೆರೆಯುತಿರುವೆ ಶ್ರೀಧರ ಗುರುವೇ…
 
ನನ್ನದು ಏನು ಇಲ್ಲ ನಿನ್ನದೇ ಎಲ್ಲಾ ಎನ್ನುವ
ಸಂಪೂರ್ಣ ಜ್ಞಾನವನ್ನು ನೀಡು ಶ್ರೀಧರ ಗುರುವೇ…
 
ಕಿಂಚಿತ್ತು ಇಲ್ಲದ ಜ್ಞಾನದ ಅಹಂಕಾರದ
ದರ್ಪವು ನನಗೆ ಯಾಕೆ ಶ್ರೀಧರ ಗುರುವೇ…
 
ನನ್ನಲ್ಲಿ ಇರುವ ಅಹಂಕಾರವನ್ನು
ನಿನ್ನ ಪಾದಕ್ಕೆ ಒಪ್ಪಿಸಿಕೊ… ಶ್ರೀಧರ ಗುರುವೇ…
 
ನನ್ನಲ್ಲಿ ಇರುವ ಕಾಮವನ್ನು
ನಿನ್ನ ಕಾಮವನ್ನಾಗಿ ಬದಲಿಸಿಕೊ… ಶ್ರೀಧರ ಗುರುವೇ…
 
ನನ್ನಲ್ಲಿ ಇರುವ ಕ್ರೋಧವನ್ನು
ನಿನ್ನ ಕರುಣೆಯಿಂದ ನಾಶಮಾಡು… ಶ್ರೀಧರ ಗುರುವೇ…
 
ನನ್ನಲ್ಲಿ ಇರುವ ಮಮಕಾರವನ್ನು
ನಿನ್ನ ಕಡೆಗೆ ತಿರುಗಿಸಿಕೊ… ಶ್ರೀಧರ ಗುರುವೇ…
 
ನನ್ನಲ್ಲಿ ಲೋಭವು ಜಾಸ್ತಿ ಆಗಿದೆ
ಅದರ ಹುಟ್ಟಡಗಿಸು… ಶ್ರೀಧರ ಗುರುವೇ…
 
ನನ್ನಲ್ಲಿ ಮದವು ಮದವೇರಿ ಆರ್ಭಟಿಸುತ್ತಿದೆ
ಆ ಮದವನ್ನು ಮಟ್ಟಹಾಕು… ಶ್ರೀಧರ ಗುರುವೇ…
 
ನನ್ನಲ್ಲಿರುವ ಮತ್ಸರ್ಯ ಮಹತ್ತಾದ ನಿನ್ನನ್ನು
ತಿಳಿಯಲು ಅಡ್ಡ ಬರುತ್ತಿದೆ ಅದರ ನಾಶಮಾಡು… ಶ್ರೀಧರ ಗುರುವೇ…
 
ನನ್ನಲ್ಲಿರುವ ಎಲ್ಲಾ ಗುಣಗಳನ್ನು ಹೇಳಿದೆ ನನ್ನ ಗುರುವೇ…
ನಿಜವಾಗಿಯೂ ಒಂದು ಸಹ ಒಳ್ಳೆಯ ಗುಣವು ನನ್ನಲ್ಲಿ ಇಲ್ಲ…
 
ಹೇ ನನ್ನ ಗುರುವೇ ಶ್ರೀಧರ ನನ್ನನ್ನು ಕಾಪಾಡು ಎಂದು
ನಾನು ಕೇಳುವುದಿಲ್ಲ ಕಾರಣ ನಿನ್ನ ಭಕ್ತರ ಹೊಣೆ ನಿನ್ನದೇ…
 
ನೀರಿನಲ್ಲಿ ಹಾಕಿದರು ನೀನೇ ಗುರು…
ಹಾಲಿನಲ್ಲಿ ಹಾಕಿದರು ನೀನೇ ಗುರು…
ಏನು ಮಾಡುವೆಯೋ…
 
ಎಲ್ಲವೂ ನಿನ್ನ ಇಚ್ಚೆಯಂತೆ ಆಗಲಿ…
ನನ್ನ ಇಚ್ಚೆಯಂತೆ ಒಂದು ಮಾತ್ರ ನೆಡಿಸಿಕೊಡು…
ಸದಾಕಾಲವೂ ನಿನ್ನ ನಾಮ ಸ್ಮರಣೆಯಲ್ಲಿ ಇರುವ
ಸೌಭಾಗ್ಯವನ್ನು ನಡೆಸಿಕೊಡು ಓ ನನ್ನ ಗುರುವೇ ನಡಿಸಿಕೊಡು…
 
ಭಗವಂತನ ನಾಮ ಸ್ಮರಣೆ ಒಂದು ಸತ್ಯ ಮತ್ತು ಶಾಶ್ವತ
ಶ್ರೀರಾಮ ಜಯ ರಾಮ ಜಯ ಜಯ ರಾಮ
ಶ್ರೀರಾಮ ಜಯ ರಾಮ ಜಯ ಜಯ ರಾಮ
ಶ್ರೀರಾಮ ಜಯ ರಾಮ ಜಯ ಜಯ ರಾಮ
 
 

❀~●~❁~●~❀~●~❁~●~❀~●~❁~●~❀

 

ಸುಮ್ಮನೆ ಸ್ಮರಿಸೋ ದತ್ತನನ್ನ….
 
ಸುಮ್ಮನೆ ಸ್ಮರಿಸೋ ದತ್ತನನ್ನ
ಸುಮ್ಮನೆ ಸ್ಮರಿಸೋ ದತ್ತನನ್ನ… ಪ
 
ಅತ್ರಿ ದತ್ತನ್ನ ಅನಸೂಯ ದತ್ತನನ್ನ
ಆನಂದ ಘನನ್ನ ಆನಂದ ರೂಪನನ್ನ
ಸುಮ್ಮನೆ ಸ್ಮರಿಸೋ ದತ್ತನನ್ನ… 1
(ದತ್ತ ದತ್ತ ದತ್ತ…)
 
ಚಿನ್ಮಯ ರೂಪನನ್ನ ಚಿತ್ ಸ್ವರೂಪನನ್ನ
ಯೋಗಿಯ ರೂಪನನ್ನ ಭೋಗಿಯ ವೇಶನನ್ನ
ಸುಮ್ಮನೆ ಸ್ಮರಿಸೋ ದತ್ತನನ್ನ… 2
(ದತ್ತ ದತ್ತ ದತ್ತ…)
 
ಅನಂತನನ್ನ ಅಪರಿಮಿತನನ್ನ
ಅನವರತನನ್ನ ಅಗೋಚರನನ್ನ
ಸುಮ್ಮನೆ ಸ್ಮರಿಸೋ ದತ್ತನನ್ನ… 3
(ದತ್ತ ದತ್ತ ದತ್ತ …)
 
ಬ್ರಹ್ಮ ರೂಪನನ್ನ ವಿಷ್ಣು ರೂಪನನ್ನ
ಶಿವರೂಪನನ್ನ ಗುರು ಸ್ವರೂಪನನ್ನ
ಸುಮ್ಮನೆ ಸ್ಮರಿಸೋ ದತ್ತನನ್ನ… 4
(ದತ್ತ ದತ್ತ ದತ್ತ …)
 
ಶ್ರೀಧರ ರೂಪನನ್ನ ಶ್ರೀಪಾದ ರೂಪನನ್ನ
ಶ್ರೀಗುರು ಕನ್ನೇಶ್ವರನನ್ನ ಶ್ರೀಗುರು ಮಲ್ಲೇಶ್ವರ ಸ್ವರೂಪನನ್ನ
ಸುಮ್ಮನೆ ಸ್ಮರಿಸೋ ದತ್ತನನ್ನ… 5
(ದತ್ತ ದತ್ತ ದತ್ತ …)
 
ಶಾಶ್ವತವಾಗಿ ಇರುವುದು ಕಾಯುವುದು ಒಂದೇ ಅದೇ ನಾಮಜಪ ದಯವಿಟ್ಟು ಎಲ್ಲರೂ ಭಗವಂತನ ನಾಮಜಪವನ್ನು ಯಥೇಚ್ಛವಾಗಿ ಮಾಡಿ ಭಗವಂತನ ಕೃಪೆಗೆ ಪಾತ್ರರಾಗಿ
ಶ್ರೀರಾಮ ಜಯ ರಾಮ ಜಯ ಜಯ ರಾಮ
ಶ್ರೀರಾಮ ಜಯ ರಾಮ ಜಯ ಜಯ ರಾಮ
ಶ್ರೀರಾಮ ಜಯ ರಾಮ ಜಯ ಜಯ ರಾಮ
 
ಜೈ ಗುರುದೇವ ದತ್ತ ಶ್ರೀಧರ……
 
 
❀~●~❁~●~❀~●~❁~●~❀~●~❁~●~❀
 
 
(ಸೌಜನ್ಯ / ರಚನೆ – ಶ್ರೀ ಸುರೇಶ ಭಟ್, ಮೈಸೂರು)
 
ರಕ್ಷಿಸು ಶ್ರೀಧರ ಸದ್ಗುರು ಕೃಪಾಕರ
ರಾಮನಾಮಸಹಿತಸುಂದರಮಂದಿರ
ರಾಮದಾಸ ಯತಿ ಸಮರ್ಥ ಗುರುವರ
ರಾಘವೇಂದ್ರ ಶ್ರೀಗುರು ಜ್ಞಾನಸರೋವರ
 
ರಮಣೀಯ ರೂಪ ಮಂಗಳ ಮನೋಹರ 
ರವಿಕಿರಣತೇಜ ವೇದಾಂತ ಭಾಸ್ಕರ 
ರಾಮದೂತಗುರು ಅದ್ವೈತ ರತ್ನಾಕರ
ರಾಜೀವಲೋಚನ ತತ್ವಾಮೃತ ಓಂಕಾರ
 
ರಾಗದ್ವೇಷರಹಿತ ನಿಜ ಮುನಿವರ
ರಾಘವಪ್ರಿಯ ಋಷಿ ದತ್ತಯತಿವರ 
ರಮ್ಯತಾಣನಿರ್ಮಿತ ಶ್ರೀ ವರದಕರ
ರಾರಾಜಿಸುವ ಸ್ವಾನಂದಸುಖ ಸಾಗರ
 
❀~●~❁~●~❀~●~❁~●~❀~●~❁~●~❀