जेनुगवी अवधूत श्री नंजुंड स्वामी
JENUGAVI AVADHUTA
(खालील माहिती मूळ कानडीतून मराठीत भाषांतर केल्याबद्दल सौ भामतीअक्का श्रीधर हेगडे (Facebook), सातारा यांचे ShridharSahitya.com ऋणी आहे)

श्रीमत् परमहंस परिव्राजकाचार्य सदगुरू भगवान श्री श्रीधर स्वामी महाराजांचे अनुग्रहित शिष्य, जेनुगवी अवधूत श्री नंजुंड स्वामींच्याबद्दल माहिती असणारे लोक आज फार कमी आहेत. मैसूरच्या चामुंडी पहाडी च्या पायथ्याशी १९७० सालच्या सुमारास “श्री श्रीधर सेवाश्रम” या नावाने भगवान श्री श्रीधर स्वामी महाराजांच्या स्मृत्यर्थ एक आश्रम बांधण्यात आला होता, तोच आज जेनुगवी अवधूत श्री नंजुंड स्वामींचा आश्रम आहे. चामुंडी पहाडी च्या गुहेतच अधिक काळ व्यतीत करणारे श्री नंजुंड स्वामी कधीकधी आश्रमातील भजनादी कार्यक्रमात भक्तांच्या बरोबर सहभागी होत असत. ते आश्रमात येणाऱ्या लोकांचे दुखः निवारण करीत असे. कधी कधी ते आश्रमात येणाऱ्या भक्तांना “श्रीधरप्पा” म्हणून संबोधित असत. भगवान श्री श्रीधर स्वामी महाराजांनी त्यांना कुठे, कधी व कसा अनुग्रह दिला होता ही माहिती मात्र अद्याप निगूढ आहे. एकदा भगवान श्री श्रीधर स्वामी महाराजांनी फेकलेला हार श्री नंजुंड स्वामींच्या गळ्यात कसा अवचितपणे येऊन पडला होता याबद्दल त्यांचे भक्त आजही बोलतात.

एकदा जेनुगवी अवधूत श्री नंजुंड स्वामी, भगवान श्री श्रीधर स्वामी महाराजांच्या दर्शनाला गेले होते. तेव्हा श्री श्रीधर स्वामीजींनी “पहा मैसूर चा ‘प्रकाश’ आला आहे” असे उद्गार काढल्याची आठवण आजही त्यांचे भक्त काढतात. श्री नंजुंड स्वामी यांच्या आईच्या स्वप्नात भगवान श्री श्रीधर स्वामी महाराज ७ वेळा आले होते व प्रत्येक वेळेस त्यांना म्हणत असत कि “योग्य वेळ आली कि मी तुझ्या घरी येईन” पण त्यांची आई म्हणत असे कि “ते आलेच नाहीत!!”.

आजून एक प्रसंग भक्तांच्या स्मरणात आहे. तो म्हणजे जेनुगवी अवधूत श्री नंजुंड स्वामी व “पुत्तूर अज्ज” (पुत्तूर चे आजोबा) म्हणून नावाजलेले एका थोर अधिकारी संताची अविस्मरणीय भेट. एकदा पुत्तूर अज्जांना त्यांचे एक भक्त श्री नंजुंड स्वामींकडे घेऊन आले होते. तेव्हा श्री नंजुंड स्वामी म्हणाले “अहो ह्या वेडप्पाला येथे का घेऊन आला आहात?? हे तर माझ्यापेक्षाही मोठे वेडे आहेत!!”. “अंतर्निष्ठांच्या खुणा अंतर्निष्ठ जाणती” हेच खरे.

जेनुगवी अवधूत श्री नंजुंड स्वामी १९९७ साली महासमाधी घेई पर्यंत चामुंडी डोंगरावरच राहत होते पण त्यांनी देह ठेवल्यावर त्यांची समाधी डोंगराच्या पायथ्याशी असलेल्या “श्री श्रीधर सेवाश्रम” या आश्रमात बांधण्यात आली.

जेनुगवी अवधूत श्री नंजुंड स्वामी १९७० साली ६ महिने एकांतात होते. एकांतात जाण्यापूर्वी त्यांनी श्री श्रीधर सेवाश्रमातील भक्तांना पुढील प्रकारे “बोधवाक्ये” लिहून पाठविली होती –

ता. १२/१२/१९७०, शनिवार.

आपले सर्वांचे आराध्य श्रीदत्तप्रभूंचा येणारा जयंती महोत्सव उत्तम प्रकारे करावा अशी श्रीसद्गुरूंची मला प्रेरणा झाली आहे. जयंती महोत्सव पूर्ण वैभवाने व ऐश्वर्याने पार पडावा म्हणून मी तुमच्या सर्वांबरोबर उपस्थित राहीन व महाप्रसाद स्वीकार करीन. या कार्याला तुमच्या सर्वांचे सहकार्य हवे आहे. मी माझे “प्रतिबिंब” पाहण्यास निघालेलो आहे…… पण तसे करण्यास, न भंगलेला आरसा मला हवा……. जर तुम्ही भंगला तर मला माझे “प्रतिबिंब” दिसणार नाही…… मला परिपूर्ण होण्यास तुम्ही सगळ्यांनी अवकाश करून द्यावा हे तुमचे कर्तव्य आहे. म्हणून तुम्ही सगळ्यांनी १२ डिसेंबर पर्यंत किंवा निदान दिवाळी सणा पर्यंत तरी माझा गुहेतील एकांत भंग पावणार नाही ह्याची काळजी घ्यावी. तुम्ही सगळे पहिल्या प्रमाणे, तुम्हला अनुकूल असेल त्या वेळेत येथे मठात येऊन भजनपुजानादी करून आनंदात राहावे. माझे मौन व एकांत संपल्यावर मी तुमच्या बरोबर तत्व-भजनात सहभागी होईन. कोणीही काही गैसमज करून घेऊ नये. सहा महिने मी एकांताची अपेक्षा करीत असल्याने हे मी लिहित आहे. इथे माझ्याबद्दल लोक उलटसुलट विचार करतात असे मला समजले आहे. पण त्याचे मला काहीच दुख वाटत नाही कारण मी तुमच्या सगळ्यांच्या सहकार्याने एक “लिंग” होण्यास निघालेलो आहे. म्हणजे हे नश्वर, भंग पावणारे शरीर विसरण्यास मी प्रयत्न करीत आहे. एक “लिंग” व्हायचे असल्यास एक हजार ठोके खावे लागतात अशी म्हण आहे. म्हणून लवकरात लवकर मला एक हजार ठोके पडावे अशीच मी वाट पाहत आहे. माझे “लिंग” होण्यासाठी पुण्यात्मे मला छन्नी हातोडी ने घाव घालीत आहेत. आता जरी दुखत असले तरी पूजेला योग्य होईन. त्यामुळे पुण्यात्मे हे काम खुशाल करोत. माझी घाण काढण्यासाठीच प्रार्थना करीत आहे. आपले दुर्गुण आपल्याला कळत नसतात. म्हणून सज्जन लोक धैर्याने ज्ञानी व्हावयास निघालेल्या माणसाला, त्याच्यात उरलेले अज्ञान निर्देशनास आणून पुण्य गाठी बांधून घेतात. या प्रकारे माझ्या मध्ये, म्हणजे माझ्या प्रारब्ध शरीरात संचित कर्मशेषा पासून राहिलेल्या अज्ञानाला उजळी देऊन पुण्य कमावून घ्या, अशी मी विनंती करतो. माझ्यात कुठलेही पांडित्य, सिद्धी, तपःशक्ती किंवा इतर काही चांगले असे काहीच नाही. एखाद्या वेळी या बद्दल तुम्हाला कोणी काही सांगितले तरी विश्वास ठेऊ नका. मी एक वेडा आहे, तेवढेच खरे. पण मला तुम्हा सर्वांवर एकसारखे प्रेम आहे. कारण तुम्ही सारेजण वेगवेगळ्या प्रकारे माझी सेवा करून माझ्यावर उपकार करीत आहात. म्हणून तुम्ही सगळेजण मला एकसारखेच आहात. सुज्ञानी, तत्वज्ञानी व गुरुभक्त असे तुम्ही सर्व. तुमचे सर्वांचे प्रेम, आदर यांस मी चिर ऋणी आहे. येथे येणारे तुम्ही सगळे कधीही एकमेकांचा द्वेष, असूया यांना अजिबात अवकाश न देता शांती ने एका कुटुंबासारखे सौहार्दपूर्ण राहून यापुढे सुद्धा माझ्या गुरुसेवेला सहकार्य कराल असा मी विश्वास ठेवतोय. तुम्हा सर्वांचे श्रीसदगुरू सदासर्वदा रक्षण करोत अशी त्यांच्या चरणी मी प्रार्थना करतो. माझी निजस्थिती सांगितल्यामुळे सुज्ञानी लोकांनी या अज्ञानी ची कुठल्याही प्रकारे परीक्षा न घेता सोडून द्यावे अशी मी प्रार्थना करतो. कारण मी एक वेडा आहे. एकदा हसतो, एकदा रडतो, एकदा पूजा करतो तर एकदा गप्प बसून राहतो. आणि कधीकधी तर बसल्या बसल्याच प्रपंच व हे जग विसरून जातो. मी कुठलेही पांडित्य, सिद्धी व तपःशक्ती कमावलेली नाहीये हे तुम्हाला सर्वांना समजावून दिल्याने कृपा करून माझी कुठल्याही प्रकारची परीक्षा न पहावी.

तुमच्या सर्वांसाठी श्रीसद्गुरुंकडे प्रार्थना करणारा एक वेडा अज्ञानी,
विद्वत्-जनविधेय सद्गुरुपादशिरोधारी,
नंजुंड स्वामी,
श्री श्रीधर सेवाश्रम,
चामुंडी बेट्टपाद,
मैसुरू.

ॐ शांती! ॐ शांती!! ॐ शांती!!!

ॐ समस्तमंगलानी भवन्तु!!!

(हे संपूर्ण लिखाण श्री मंजुनाथ, मैसूर यांनी पाठविलेल्या मजकूर व त्यांच्या आशया प्रमाणे येथे लिहिला आहे. त्यांनी म्हटल्या प्रमाणे स्वतः श्री मंजुनाथ, मैसूर यांना श्री नंजुंड स्वामी यांचा दर्शनाचा लाभ मिळालेला नसला तरी स्वामींच्या भक्तांकडून व त्यांचे स्नेही व मित्र श्री नागेंद्र कुमार यांनी गोळा केलीली माहिती या लेखाला मूळ आधार आहे.)

❀~●~❁~●~❀~●~❁~●~❀~●~❁~●~❀

 

ಶ್ರೀಧರ ಸ್ವಾಮಿಗಳಿಂದ ಅನುಗ್ರಹೀತ ಜೇನುಗವಿ ಅವಧೂತ ಶ್ರೀ ನಂಜುಂಡಸ್ವಾಮಿಗಳು ‘ಪುತ್ತೂರ ಅಜ್ಜ’ನ ಬಗ್ಗೆ ಮಾಡಿದ ಉದ್ಗಾರ …..’ಇವನಾದರೋ ನನಗಿಂತ ದೊಡ್ಡ ಹುಚ್ಚ!’

ಶ್ರೀ ಶ್ರೀಧರ ಸ್ವಾಮಿಗಳಿಂದ ಅನುಗ್ರಹೀತರಾದ ಅಧಿಕಾರೀ ಪುರುಷ ಜೇನುಗವಿ ಅವಧೂತ ಶ್ರೀ ನಂಜುಂಡ ಸ್ವಾಮಿಗಳ ಬಗ್ಗೆ ಗೊತ್ತಿರುವದು ….. ಗೊತ್ತಿರುವವರು …… ತುಂಬಾ ಕಡಿಮೆ!
೧೯೭೦ಕ್ಕಿಂತ ಮೊದಲಿಂದಲೂ ‘ಶ್ರೀಧರ ಸೇವಾಶ್ರಮ’ ಎಂಬ ನಾಮಾಂಕಿತ ಮಠ ಮೈಸೂರಿನ ಚಾಮುಂಡಿ ಬೆಟ್ಟದ ಬುಡದಲ್ಲಿ ಇದ್ದಿರಬೇಕು! …..
ಅದೇ ಈಗ ಚಾಮುಂಡಿ ಬೆಟ್ಟದ ಮೆಟ್ಟಿಲ ಹತ್ತಿರ ಇರುವ ‘ಜೇನುಗವಿ ಅವಧೂತ ಶ್ರೀ ನಂಜುಂಡ ಸ್ವಾಮಿಗಳ ಆಶ್ರಮ!’
ಬೆಟ್ಟದ ಜೇನುಗವಿಯಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದ …… ಅವಧೂತ ಶ್ರೀ ನಂಜುಂಡ ಸ್ವಾಮಿಗಳು …… ಆಶ್ರಮದಲ್ಲಿ ಭಜನೆ ಮೊದಲಾದ ಕಾರ್ಯಕ್ರಮದಲ್ಲಿ …… ಭಕ್ತರೊಂದಿಗೆ ಸೇರಿ …. ಅವರ ಕಷ್ಟಗಳನ್ನು ಪರಿಹರಿಸುತ್ತಿದ್ದರು!
ಶ್ರೀ ಶ್ರೀಧರ ಸ್ವಾಮಿಗಳಿಂದ ಅನುಗ್ರಹಿತರಾದ ಇವರು …… ಕೆಲವೊಮ್ಮೆ ಬಂದ ಭಕ್ತರನ್ನೂ ….. ‘ಶ್ರೀಧರಪ್ಪ’ ಎಂದೇ ಸಂಬೋಧಿಸಿ ಮಾತನಾಡಿಸುತ್ತಿದ್ದರು!
ಅವಧೂತ ಶ್ರೀ ನಂಜುಂಡ ಸ್ವಾಮಿಗಳು ಶ್ರೀ ಶ್ರೀಧರ ಸ್ವಾಮಿಗಳ ದರ್ಶನವನ್ನು ಎಲ್ಲಿ, ಯಾವಾಗ, ಹೇಗೆ ಮಾಡಿ ಅನುಗ್ರಹೀತರಾದರೆಂಬುದು …… ನಮಗೆ ತಿಳಿಯದ ನಿಗೂಢ!
ಆದರೆ ಶ್ರೀ ಶ್ರೀಧರ ಸ್ವಾಮಿಗಳು ಎಸೆದ ಹಾರ …… ಅವಧೂತರ ಕೊರಳಿಗೆ ಬಿದ್ದ ಸಂದರ್ಭ …… ಭಕ್ತಜನ …… ಈಗಲೂ ಆಡಿಕೊಳ್ಳುತ್ತಾರೆ!
ಶ್ರೀ ಶ್ರೀಧರ ಸ್ವಾಮಿಗಳ ದರ್ಶನಕ್ಕೆ ಅವಧೂತ ಶ್ರೀ ನಂಜುಂಡ ಸ್ವಾಮಿಗಳು ಹೋದಾಗೊಮ್ಮೆ …… ಶ್ರೀ ಶ್ರೀಧರ ಸ್ವಾಮಿಗಳು … ‘ಮೈಸೂರಿನ ಬೆಳಕು ಬಂದಿದೆ’ …… ಎಂದಂದ ಸಂಗತಿಯನ್ನೂ ….. ಭಕ್ತರು ನೆನಪಿಸಿಕೊಳ್ಳುತ್ತಾರೆ!
ಇನ್ನೊಂದು ಪ್ರಸಂಗ ಭಕ್ತರು ಹಂಚಿಕೊಳ್ಳುವದೆಂದರೆ ….. ಅವಧೂತ ಶ್ರೀ ನಂಜುಂಡ ಸ್ವಾಮಿ ಮತ್ತು ‘ಪುತ್ತೂರ ಅಜ್ಜ’ ಎಂದೇ ಹೆಸರಾದ ಅಧಿಕಾರೀ ಪುರುಷರ ಸಂಗಮ ….. ಪುತ್ತೂರ ಅಜ್ಜನನ್ನು ಅವಧೂತರಲ್ಲಿಗೆ …… ಅವರ ಭಕ್ತರೊಬ್ಬರು ……. ಕರೆದುಕೊಂಡು ಬಂದಾಗ ಅವಧೂತರೆಂದರು
‘ಈ ಹುಚ್ಚಪ್ಪನನ್ನು ಇಲ್ಲೇಕೆ ಕರೆತಂದಿರಿ? …… ಇವನಾದರೋ ನನಗಿಂತ ದೊಡ್ಡ ಹುಚ್ಚ!’ ….. ಬಲ್ಲವರೆ ಬಲ್ಲಿದರು ಬಲ್ಲವರ ಮಾತು!
ಅವಧೂತ ಶ್ರೀ ನಂಜುಂಡ ಸ್ವಾಮಿಗಳ ತಾಯಿ ಶ್ರೀ ಶ್ರೀಧರ ಸ್ವಾಮಿಗಳ ದರ್ಶನ ಮಾಡಿದ್ದರು! ……
ಆ ತಾಯಿ ಹೇಳಿದ ಮಾತು ಭಕ್ತರ ಮನಸ್ಸಿನಲ್ಲಿ ಈಗಲೂ ಇದೆ …… ಆ ತಾಯಿಯ ಕನಸಿನಲ್ಲಿ …… ಸತತ ಏಳು ಬಾರಿ ……. ಶ್ರೀ ಶ್ರೀಧರ ಸ್ವಾಮಿಗಳು ‘ಸಮಯ ಬಂದಾಗ ನಿಮ್ಮ ಮನೆಗೆ ಬರುತ್ತೇನೆ!’ ….. ಎಂದಿದ್ದರು! ….. ಆದರೆ ‘ತಮ್ಮ ಮನೆಗೆ ಬರಲೇ ಇಲ್ಲ’ ಎಂದುಕೊಳ್ಳುತ್ತಿದ್ದರು ಆ ತಾಯಿ!
೧೯೯೭ರಲ್ಲಿ ಮಹಾಸಮಾಧಿಯಾಗುವವರೆಗೂ ಚಾಮುಂಡಿ ಬೆಟ್ಟದಲ್ಲೇ ಇದ್ದ …… ಇವರ ಸಮಾಧಿ ಈಗ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿದೆ!
ಅವಧೂತ ಶ್ರೀ ನಂಜುಂಡ ಸ್ವಾಮಿಗಳು ೧೯೭೦ರ ಸುಮಾರಿಗೆ ಆರು ತಿಂಗಳು ಏಕಾಂತದಲ್ಲಿದ್ದರು!
ಶ್ರೀಧರ ಸೇವಾಶ್ರಮದ ಭಕ್ತ ಜನರಿಗೆ ತಾವು ಏಕಾಂತಕ್ಕೆ ಹೋಗುವ ಮೊದಲಿನ ಈ ಮಾತು ಸಾಧಕರಿಗೆ ಬೋಧ್ಯಯೋಗ್ಯವಾಗಿದೆ! …… ಅವರಂತಃಕರಣದ ತಿರುಳೇನೋ ಎನಿಸುತ್ತಿದೆ!
ಅವರು ಬರೆದು ತಿಳಿಸಿದ ಆ ಮಾತುಗಳನ್ನೇ ಇಲ್ಲಿ ಅವತರಿಣಿಸಿದ್ದೇನೆ ……..
‘ತಾ| ೧೨/೧೨/೧೯೭೦, ಶನಿವಾರ ನಮ್ಮ ಆರಾಧ್ಯದೈವ ದತ್ತಾತ್ರೇಯ ಜಯಂತಿ ಮಹೋತ್ಸವ ನಡೆಸಬೇಕೆಂದು ……. ಸದ್ಗರುವಿನ ಪ್ರೇರಣೆಯಾಗಿರುವದರಿಂದ ….. ಆ ದಿವಸ ನಿಮ್ಮೆಲ್ಲರೊಡನೆ … ಈ ಕಾರ್ಯಕ್ರಮವಗಳನ್ನು ವಿಜ್ರಂಭಣೆಯಿಂದ ನೆರವೇರಿಸಿ …… ನಿಮ್ಮೆಲ್ಲರೊಡನೆ ಪ್ರಸಾದ ಸ್ವೀಕರಿಸುತ್ತೇನೆ!
ಈ ಕಾರ್ಯಕ್ಕೆ ನಿಮ್ಮೆಲ್ಲರ ಸಹಾಯ ಬೇಕಾಗಿದೆ!
ನಾನು ನನ್ನ ಪ್ರತಿಬಿಂಬ ನೋಡಲು ಹೊರಟವನು ….. ಅಂದರೆ ಅದಕ್ಕೆ ಕನ್ನಡಿ ಬೇಕು! …. ಆದರೆ ಕನ್ನಡಿ ಭಿನ್ನವಿಲ್ಲದೇ ಶುದ್ಧವಾಗಿದ್ದರೆ ಆಗ ನಮ್ಮ ಬಿಂಬ ಚೆನ್ನಾಗಿ ಕಾಣುತ್ತದೆ! …..ಆದ್ದರಿಂದ ನೀವೆಲ್ಲಾ ಭಿನ್ನವಾದರೆ ನನಗೆ ಬಿಂಬ ಕಾಣುವದಿಲ್ಲ ….. ನೀವೆಲ್ಲಾ ನನಗೆ ಪರಿಪೂರ್ಣತೆ ಹೊಂದಲು ಅವಕಾಶ ಕಲ್ಪಿಸಿ ಕೊಡಬೇಕಾದುದು ನಿಮ್ಮೆಲ್ಲರ ಕರ್ತವ್ಯ! ….. ಆದ್ದರಿಂದ ತಾವೆಲ್ಲಾ ಡಿಸೆಂಬರ ೧೨ನೆಯ ತಾರೀಖಿನವರೆಗೆ ಅಲ್ಲದಿದ್ದರೂ ದೀಪಾವಳಿಯ ಹಬ್ಬದವರೆಗಾದರೂ ನನ್ನ ಏಕಾಂತಕ್ಕೆ ಭಂಗ ಬರದ ರೀತಿಯಲ್ಲಿ ಗವಿಯಲ್ಲಿ ನಾನೊಬ್ಬನೇ ಇರಲು ಅವಕಾಶ ಕಲ್ಪಿಸಿ ಕೊಡಿ!
ನೀವೆಲ್ಲ ಮೊದಲಿನಂತೆ ನಿಮಗೆ ಅನುಕೂಲವಾದ ಸಮಯದಲ್ಲಿ ಇಲ್ಲಿಗೆ ಬಂದು …… ಅಂದರೆ ಮಠದಲ್ಲಿ ಭಜನೆ ಇತ್ಯಾದಿ ನಿಮ್ಮ ಕಾರ್ಯಕ್ರಮಗಳನ್ನು ನಡೆಸಿ ಆನಂದ ಪಡೆಯಿರಿ!
ಅನಂತರ ನನ್ನ ಮೌನವೃತ ಮುಗಿದ ಮೇಲೆ ನಿಮ್ಮ ತತ್ವ ಭಜನೆಯಲ್ಲಿ ನಾನೂಪಾಲ್ಗೊಳ್ಳುತ್ತೇನೆ! …. ಇದನ್ನು ಯಾರೂ ತಪ್ಪು ತಿಳಿಯಬಾರದು ….. ಅಂದರೆ ಕೇವಲ ಆರು ತಿಂಗಳು ನಾನು ಏಕಾಂತ ಬಯಸುತ್ತಿರುವದರಿಂದ ಈ ರೀತಿ ಬರೆದು ತಿಳಿಸಿದ್ದೇನೆ!
ಇಲ್ಲಿ ನನ್ನ ಬಗ್ಗೆ ಇಲ್ಲಸಲ್ಲದ ವಿಚಾರಮಾಡುತ್ತಿದ್ದಾರೆಂದು ತಿಳಿದುಬಂತು ….. ಆದರೆ ಅದಕ್ಕೆ ನನಗೆ ಯಾವ ರೀತಿಯ ಸಂಕಟವಿಲ್ಲ …. ಕಾರಣ ….. ನಾನು ನಿಮ್ಮೆಲ್ಲರ ದಯದಿಂದ ಒಂದು ಲಿಂಗವಾಗಲು ಹೊರಟವನು! ….. ಅಂದರೆ ಭಂಗ ಶರೀರವನ್ನು ಮರೆಯಲು ಪ್ರಯತ್ನಿಸುತ್ತಿರುವನು! ….. ಆದ್ದರಿಂದ ಒಂದು ಲಿಂಗವಾಗಬೇಕಾದರೆ ಒಂದು ಸಾವಿರ ಪೆಟ್ಟನ್ನಾದರೂ ತಿನ್ನಬೇಕೆಂಬ ಗಾದೆಯಿದೆ ….. ಆದ್ದರಿಂದ ದಯವಿಟ್ಟು ಆದಷ್ಟು ಜಾಗ್ರತೆ ಸಾವಿರ ಪೆಟ್ಟು ಬೀಳಲೆಂದೇ ಕಾಯುತ್ತಾ ಕುಳಿತಿದ್ದೇನೆ!
ಹಾಗಿರುವಾಗ …. ಪುಣ್ಯಾತ್ಮರು ನನ್ನನ್ನು ಲಿಂಗ ಮಾಡಲು ಉಳಿಯಿಂದ ಕುಟ್ಟುತ್ತಿದ್ದಾರೆ! ….. ಈಗ ನೋವಾದರೂ ಅನಂತರ ಪೂಜೆಗೆ ಅರ್ಹತೆ ಹೊಂದುತ್ತದೆ! ….. ಆದ್ದರಿಂದ ಪುಣ್ಯ ಕಟ್ಟಿಕೊಳ್ಳುವರು ಈ ಕೆಲಸ ಮಾಡಿ ….. ನನ್ನ ಹೊಲಸು ತೆಗೆಯಬೇಕೆಂದು ಪ್ರಾರ್ಥಿಸುತ್ತೇನೆ!
ಅದಲ್ಲದೇ, ನಮ್ಮ ದುರ್ಗುಣಗಳು ನಮಗೆ ತಿಳಿಯುವದಿಲ್ಲ …… ಆದ್ದರಿಂದ ಸಜ್ಜನರು ಧೈರ್ಯದಿಂದ ಜ್ಞಾನಿಯಾಗಬಯಸುವನಿಗೆ ಅವನಲ್ಲಿ ಉಳಿದಿರುವ ಅಜ್ಞಾನವನ್ನು ಎತ್ತಿ ತೋರಿಸಿ ಪುಣ್ಯ ಕಟ್ಟಿ ಕೊಳ್ಳುತ್ತಾರೆ! ….. ಆ ರೀತಿ ನನ್ನಲ್ಲಿ …. ಅಂದರೆ ….. ಪ್ರಾರಬ್ಧ ಶರೀರದಲ್ಲಿ ….. ಸಂಚಿತ ಕರ್ಮಶೇಷದಿಂದ ….. ಉಳಿದಿರುವ ಅಜ್ಞಾನಕ್ಕೆ …. ಬೆಳಕು ಹಚ್ಚಿ ಪುಣ್ಯ ಕಟ್ಟಿಕೊಳ್ಳಬೇಕೆಂದು ಬೇಡಿಕೊಳ್ಳುತ್ತೇನೆ!
ನನ್ನಲ್ಲಿ ಯಾವ ಪಾಡಿತ್ಯವಾಗಲೀ ….. ಸಿದ್ಧಿಯಾಗಲೀ ….. ತಪಃಶಕ್ತಿಯಾಗಲೀ ……. ಮಹತ್ತಾಗಲೀ …
ಯಾವುದೂ ಇಲ್ಲ! ….. ಒಂದು ವೇಳೆ ಇದರ ಬಗ್ಗೆ ಯಾರಾದರೂ ಹೇಳಿದರೂ ನಂಬಬೇಡಿ!
ನಾನೊಬ್ಬ ಹುಚ್ಚ ಅಷ್ಟೇ!
ಆದರೆ ನನಗೆ ನಿಮ್ಮೆಲ್ಲರಲ್ಲೂ ಒಂದೇ ರೀತಿಯ ಪ್ರೀತಿ ಇದೆ …… ಕಾರಣ ಒಬ್ಬೊಬ್ಬರು ಒಂದೊಂದು ವಿಧದ ಸೇವೆ ಮಾಡಿ ನನಗೆ ಉಪಕಾರ ಮಾಡುತ್ತಿದ್ದೀರಿ! ಆದ್ದರಿಂದ ನೀವೆಲ್ಲರೂ ನನಗೆ ಒಂದೇ!
ಸುಜ್ಞಾನಿಗಳೂ, ತತ್ವಜ್ಞಾನಿಗಳೂ, ಗುರುಭಕ್ತರೂ ಆದ ನಿಮ್ಮೆಲ್ಲರ ಪ್ರೀತಿ, ಆದರಕ್ಕೆ ನಾನು ಚಿರಋಣಿ! ಮತ್ತು ಇಲ್ಲಿಗೆ ಬರತಕ್ಕ ನೀವೆಲ್ಲ ಯಾವ ಕಾಲದಲ್ಲಿಯೇ ಆಗಲೀ …… ಒಬ್ಬರಿಗೊಬ್ಬರು ದ್ವೇಷ-ಅಸೂಯೆಗೆ ಅವಕಾಶ ಕೊಡದೇ ……ಶಾಂತಿಯಿಂದ ಒಂದು ಕುಟುಂಬದವರಂತೆ ….. ಸೌಹಾರ್ದತೆಯಿಂದಿದ್ದು ….. ಇನ್ನು ಮುಂದೆಯೂ ಮಾಮೂಲಿನಂತೆ ನನ್ನ ಗುರುಸೇವೆಗೆ ….. ನೆರವಾಗುತ್ತೀರೆಂದು ….. ನಂಬಿರುವದಲ್ಲದೇ ….. ನಿಮ್ಮೆಲ್ಲರಿಗೂ ಸದ್ಗುರುವು ….. ಸದಾಕಾಲದಲ್ಲಿಯೂ ರಕ್ಷಿಸುತ್ತಿರಲೆಂದು …. ಆ ಸದ್ಗುರುವಿನಲ್ಲಿ ಪ್ರಾರ್ಥಿಸುತ್ತಿರುತ್ತೇನೆ!
ನನ್ನ ನಿಜಸ್ಥಿತಿ ತಿಳಿಸಿರುವದರಿಂದ ಸುಜ್ಞಾನಿಗಳು ಈ ಅಜ್ಞಾನಿಯನ್ನು ಯಾವ ರೀತಿಯಿಂದಲೂ ಪರೀಕ್ಷಿಸದೇ ಬಿಟ್ಟು ಬಿಡಬೇಕಾಗಿ ಪ್ರಾರ್ಥಿಸಿಕೊಳ್ಳುತ್ತೇನೆ! …… ಕಾರಣ ನಾನು ಹುಚ್ಚ! …. ಒಮ್ಮೆ ನಗುತ್ತೇನೆ ….. ಒಮ್ಮೆ ಅಳುತ್ತೇನೆ ….. ಒಮ್ಮೆ ಪೂಜೆ ಮಾಡುತ್ತೇನೆ ….. ಒಮ್ಮೆ ಸುಮ್ಮನಿರುತ್ತೇನೆ! ಮತ್ತೂ ಒಮ್ಮೊಮ್ಮೆ ಕುಳಿತಂತೆಯೇ ಪ್ರಪಂಚವನ್ನೇ ಮರೆತು ಬಿಡುತ್ತೇನೆ!
ನಾನು ಯಾವ ಪಾಂಡಿತ್ಯವಾಗಲೀ …… ಸುಜ್ಞಾನವಾಗಲೀ ….. ಮಹತ್ತಾಗಲೀ …. ಸಿದ್ಧಿಯಾಗಲೀ
ಪಡೆದವನಲ್ಲವೆಂದು ತಿಳಿಸಿರುವದರಿಂದ ….. ಇನ್ನು ಮುಂದೆ ….. ದಯವಿಟ್ಟು ನನ್ನನ್ನು ಯಾವ ವಿಧದಲ್ಲಿಯೂ ಪರೀಕ್ಷಿಸದೇ ….. ನಾನೊಂದು ನಿಮ್ಮೆಲ್ಲರ ಪರವಾಗಿ ಸದ್ಗುರು ಪ್ರಾರ್ಥನೆ ಮಾಡುತ್ತಿರುವ ಹುಚ್ಚು ಭ್ರಾಂತಿ ಹಿಡಿದ ಅಜ್ಞಾನಿ ….. ಮತ್ತು ವಿದ್ವತ್ ಜನ ವಿಧೇಯ ಸದ್ಗುರುಪಾದ ಶಿರೋಧಾರಿ!
ನಂಜುಂಡಸ್ವಾಮಿ
ಶ್ರೀಧರ ಸೇವಾಶ್ರಮ
ಚಾಮುಂಡೀ ಬೆಟ್ಟದ ಪಾದ, ಮೈಸೂರು
ಓಂ ಶಾಂತಿಃ ಓಂ ಶಾಂತಿಃ ಓಂ ಶಾಂತಿಃ
ಓಂ ಸಮಸ್ತ ಸನ್ಮಂಗಳಾನಿ ಭವಂತು

ಈ ಬರಹ ಸಂಪೂರ್ಣವಾಗಿ ಮಂಜುನಾಥ ಮೈಸೂರವರು ಕಳುಹಿಸಿದ ವಿವರಗಳ ಮೇಲಿಂದ, ಅವರ ಆಶಯದಂತೆ ಬರೆದು ಇಲ್ಲಿ ಹಚ್ಚಿದ್ದೇನೆ!
ಅವರೆಂದಂತೆ, ಸ್ವತಃ ಮಂಜುನಾಥ ಮೈಸೂರವರಿಗೆ ಶ್ರೀ ನಂಜುಂಡ ಸ್ವಾಮಿಗಳ ದರ್ಶನಲಾಭ ಸಿಗದೇ ಹೋದರೂ ಅವರು ಭಕ್ತರಿಂದ ಮತ್ತು ಅವರ ಸ್ನೇಹಿತ ನಾಗೇಂದ್ರಕುಮಾರರಿಂದ ಸಂಕಲಿಸಿದ ಮಾಹಿತಿಗಳೇ ಈ ಬರಹಕ್ಕೆ ಮೂಲ ಆಧಾರ!