ಶ್ರೀಧರ ಸ್ವಾಮಿಯವರ ಅಪ್ರಕಾಶಿತ ವಾಂಙ್ಮಯದಿಂದ ಶ್ರೀ ಸ್ವಾಮಿಯವರ ಕೆಲವು ನೆನಪುಗಳು

(ಶ್ರೀಧರ ಸಂದೇಶದ ಮರಾಠಿ ಮಾಸಿಕ ದಿಂದ ಕನ್ನಡಕ್ಕೆ ಅನುವಾದಿಸಿದವರು ಭಾಮತಿ ಹೆಗಡೆ ಸಾತಾರ.)

ಪ್ರಸಾದ

ನಿವೇದಕರು: ಕಿಶನ್ ರಾವ್ ಚಿಂಚೋಲೀಕರ

ನನ್ನ ಮಾವ ದಾಸ ರಾವ್ ತೋ ರಂಕರ್( ಸೋನ ಟಕ್ಕೆ) ಅವರು ತಮ್ಮ ತಂಗಿಯನ್ನು ಬೆಟ್ಟಿ ಮಾಡಲು ಹೈದರಾಬಾದಿಗೆ ಬಂದರು. ಮಹಾರಾಜರ ಜನ್ಮ ಉತ್ಸವವನ್ನು ಮಠದಲ್ಲಿ ನೋಡಿದೆ. ತಕ್ಷಣ ಮನಸ್ಸಿನಲ್ಲಿ ಸಂಕಲ್ಪ ಮಾಡಿದೆ. ನನ್ನ ಮನಸ್ಸಿನ ಇಚ್ಛೆ ಪೂರ್ಣ ವಾದರೆ ಈಪ್ರಕಾರ ಮಾಡುತ್ತೇನೆ. ಹೋದ ತಕ್ಷಣ ಅವರ ಜಮೀನಿನ ಸಮಸ್ಯೆ ಪರಿಹಾರವಾಯಿತು. ಮತ್ತು ಮಗನ ಮದುವೆ ನಿಶ್ಚಯವಾಯಿತು. ಆಮೇಲೆ ಅವರು ಏನು ಸಂಕಲ್ಪ ಮಾಡಿದ್ದರೋ, ಅದನ್ನು ಶ್ರೀ ಕ್ಷೇತ್ರ ವರದಪುರಕ್ಕೆ ಹೋಗಿ ಪೂರ್ಣ ಮಾಡಿದರು.
ಎರಡನೆಯ ಅನುಭವ ಅವರ ಸೊಸೆಯ ಸಂದರ್ಭದಲ್ಲಿ ಆಯಿತು. ಸೊಸೆಗೆ ಮಕ್ಕಳಾಗಲಿಲ್ಲ ಎಂಬ ಚಿಂತೆ ಅವರ ಹೆಂಡತಿಗೆ ಆಗಿತ್ತು. ಆ ವೇಳೆಗೆ ಏನೋ ನಿಮಿತ್ತದಿಂದ ನಾನು ಅಲ್ಲಿಗೆ ಹೋದೆ. ಅವರ ಹತ್ತಿರ ಮಾತನಾಡುವ ಸಂದರ್ಭ ಬಂತು ಆಗ ನಾನು ಸ್ವಾಮೀಜಿಯವರ ಪುಸ್ತಕ ಶ್ರೀಧರ ವಿಜಯ ಓದಲಿಕ್ಕೆ ಹೇಳಿದೆ ಒಂದು ತಿಂಗಳಾದ ನಂತರ ಅದರ ಪರಿಣಾಮ ಸಿಕ್ಕಿತು ಅವರಿಗೆ ಗಂಡು ಮಗು ಹುಟ್ಟಿತು. ಹೆಣ್ಣು ಮಗಳ ಮದುವೆಯೂ ಆಯಿತು. ಇದೆಲ್ಲವೂ ಸದ್ಗುರು ಕೃಪೆಯಿಂದ ಸಾಧ್ಯವಾಯಿತು.

❀~●~❁~●~❀~●~❁

 

ಮುಕ್ತಿ ಮೂಲಮ್ ಗುರು ಕ್ರುಪಾಳು

ನಿವೇದಕರು:* ಶ್ರೀ ಭವಾನಿ ದಾಸರಾವ್ ವಕೀಲ
 
ಪರಮಪೂಜ್ಯ, ಸಂತ ನಾರಾಯಣ ಮಹಾರಾಜ ರವರ ಮಠ ಹೈದರಾಬಾದಿನ ಹುಸೇನಿ ಆಲಂ ನಲ್ಲಿ ಇದೆ. ಇದೇ ಮಠದಲ್ಲಿ ಮಹಾರಾಜರು ಆಗಿನ ಕಾಲದಲ್ಲಿ ಇರುತ್ತಿದ್ದರು. ಇಲ್ಲಿ ಶ್ರೀರಾಮಮಂದಿರ ಇದೆ. ಇದರ ಪರಿಸರದಲ್ಲಿ ಆಂಜನೇಯನ ದೇವಸ್ಥಾನವು ಇದೆ. ಶ್ರೀ ದತ್ತ ಮತ್ತಿತರ ದೇವರುಗಳು ಇಲ್ಲಿ ಇವೆ. ಇದೇ ಪರಿಸರದಲ್ಲಿ ಶ್ರೀ ಸಮರ್ಥ ಸಂಪ್ರದಾಯದ ಸತ್ಪುರುಷ ನಾರಾಯಣ ಮಹಾರಾಜರ ಸಮಾಧಿಯು ಇದೆ.
ಭಗವಾನ್ ಶ್ರೀಧರ ಸ್ವಾಮಿ ಮಹಾರಾಜ್ ತಮ್ಮ ಬಾಲ ವಯಸ್ಸಿನಲ್ಲಿ, ಇದೇ ಪರಿಸರದಲ್ಲಿ ಇರುತ್ತಿದ್ದರು. ಇಲ್ಲಿ ಶ್ರೀ ರಾಮರಾಯರ ಎದುರುಗಡೆಯಲ್ಲಿ ಸತತವಾಗಿ ಕೀರ್ತನೆ, ಭಜನೆ, ನಡೆಯುತ್ತಿತ್ತು. ಸದ್ಗುರು ಶ್ರೀಧರ ಸ್ವಾಮಿಯವರು ತಮ್ಮ ಬಾಲ ವಯಸ್ಸಿನಲ್ಲಿ ಶಾಲೆಯ ವೇಳೆಯನ್ನು ಹೊರತಾಗಿ ಈ ದೇವಸ್ಥಾನದಲ್ಲಿ ಯಾವಾಗಲೂ ಬರುತ್ತಿದ್ದರು ರಾಮನಾಮ ಸ್ಮರಣೆಯಲ್ಲಿ ತಲ್ಲೀನರಾಗಿ ಹೋಗುತ್ತಿದ್ದರು
 
ಇಲ್ಲಿ ದತ್ತಾತ್ರೇಯನ ಮೂರ್ತಿ ಒಂದು ಔದುಂಬರ ಮರದ ಅಡಿಗೆ ಇದೆ. ಮಠವು ಸಣ್ಣದಿದ್ದರೂ ಶಹರ ದಿಂದ ದೂರ ಶಾಂತ ಸ್ಥಳದಲ್ಲಿ ಇದೆ. ರಮಣೀಯ ಪರಿಸರ ಇರುತ್ತದೆ. ಮನಸ್ಸಿಗೆ ಸಮಾಧಾನ ವಾಗುತ್ತದೆ. ನಾರಾಯಣ ಮಹಾರಾಜರು ದೊಡ್ಡ ಸತ್ ಪುರುಷರಿದ್ದು, ಮೇಲಿಂದ ಮೇಲೆ ಸಜ್ಜನಗಡದ ವಾರಿ ಮಾಡುತ್ತಿದ್ದರು. ಅಕ್ಕಪಕ್ಕದ ಸ್ಥಳವೆಲ್ಲಾ ಇಸ್ಲಾಮ ರಿಂದ ತುಂಬಿತ್ತು. ಆ ಕಾಲದಲ್ಲಂತೂ, ನಮ್ಮ ನಮ್ಮ ಜನರು ಬರುವದು ಕಷ್ಟವಾಗಿತ್ತು. ಈ ಪ್ರತಿಕೂಲ ಪರಿಸ್ಥಿತಿಯಲ್ಲಿ ನಾರಾಯಣ ಮಹಾರಾಜರು ಹೇಗೆ ದೇವಕಾರ್ಯ ಮಾಡುತ್ತಿದ್ದರು,
 ಇದೊಂದು ಚಿಂತನೆಯ ವಿಷಯ.
 
ಇಲ್ಲಿಯ ಔದುಂಬರ ವೃಕ್ಷದ ಮೇಲೆ ಒಂದು ಬ್ರಹ್ಮ ಪಿಶಾಚಿ ಇತ್ತು. ನಮ್ಮ ಸ್ವಾಮಿಯವರು ಈ ಜಾಗಕ್ಕೆ ಬಹಳವೇಳೆ ಬಂದಿದ್ದರು. ಅವರ ಕೃಪೆ ಅಸಂಖ್ಯ ಜನರ ಮೇಲೆ ಬಿದ್ದಿತ್ತು. ಈ ಭಾಗದಲ್ಲಿ ಅವರ ಕೀರ್ತಿಯು ತುಂಬಾ ಪರಿಚಿತವಾಗಿತ್ತು. ತುಂಬಾ ಜನರ ಬಾಧೆಯನ್ನು ಅವರು ನಿವಾರಣೆ ಮಾಡಿದ್ದರು. ಮತ್ತೆ ಈ ಜಾಗವು ಅವರಿಗೆ ಅಪವಾದ ಇರಬಹುದೇ? ಈ ಜಾಗದಲ್ಲಿ ಇರುವ ಬ್ರಹ್ಮ ಪಿಶಾಚಿಯ ಉದ್ಧಾರ ವಾಗುವ ಕಾಲ ಬಂದಿತ್ತು. ದ್ರವ್ಯ ದಾನ ವಸ್ತ್ರದಾನ ಅನ್ನದಾನ ಭೂಮಿ ದಾನ ಎಲ್ಲವನ್ನೂ ಮಾಡಬಹುದು ಆದರೆ ಅಧೋಗತಿಗೆ ಇಳಿದ ಜೀವಕ್ಕೆ ಉದ್ಧಾರ ಮಾಡುವುದು ಸಾಮಾನ್ಯ ಜನರಿಗಂತೂ ದೂರದ ಮಾತು,ದೇವ ಗಂಧರ್ವ ಯಕ್ಷರಿಗೂ ಅಶಕ್ಯವಿರುತ್ತದೆ.ಯಾರ ಹತ್ತಿರ ಏನು ಇದೆಯೋ ಅದನ್ನೇ ಅವರು ಕೊಡುತ್ತಾರೆ .ಕರ್ಮಫಲವನ್ನು ಅವರವರೇ ಭೋಗಿಸಬೇಕಾಗುತ್ತದೆ.ಅದು ನಮ್ಮ ಜೊತೆಗೇ ಬರುತ್ತದೆ. ಅದನ್ನು ಅನುಭವಿಸಿಯೇ ತೀರಿಸ ಬೇಕಾಗುತ್ತದೆ
 
❀~●~❁~●~❀~●~❁
 
ಬೆಣ್ಣೆಯಂತೆ ಮೃದು.
ಮೂಲ ಮರಾಠಿ ಲೇಖಕರು: ಸೌ ನಾಗರತ್ನ ಕುಲಕರ್ಣಿ.
ನಾನು ನನ್ನ ಅತ್ತಿಗೆಯ ಜೀವನದಲ್ಲಿ ನಡೆದ ಶ್ರೀಧರ ಸ್ವಾಮಿಗಳು ಅನುಭವವನ್ನು ಕುರಿತು ನನಗೆ ಗೊತ್ತಿರುವ ಮಾಹಿತಿಯನ್ನು ಹೇಳುತ್ತಿದ್ದೇನೆ. ಇ.ಸ.1960 ರಲ್ಲಿ ನಡೆದ ಘಟನೆ ನನ್ನ ಅತ್ತಿಗೆಗೆ ಆಗತಾನೆ ಮದುವೆಯಾಗಿತ್ತು. ಅವಳನ್ನು ಧಾರವಾಡ ಜಿಲ್ಲೆಯ ಸಿಕಗಾವನಲ್ಲಿಗೆ ಕೊಟ್ಟಿತ್ತು. ಅವಳ ಯಜಮಾನರು ಕನ್ನಡ ಶಾಲೆಯ ಮಾಸ್ತರ ರಿದ್ದರು. ಮನೆಯಲ್ಲಿ ಅತ್ತೆ ಮಾವ ಇದ್ದರು. ಹಳ್ಳಿಯಲ್ಲಿ ಅವರಿಗೆ ಸ್ವಲ್ಪ ದೂರದ ಬಾವಿಯಿಂದ ನೀರನ್ನು ತರಬೇಕಾಗಿತ್ತು. ನಿತ್ಯದಂತೆ ಒಂದು ದಿನ ಅವರು ಬಾವಿಯ ನೀರು ತರಲಿಕ್ಕೆ ಹೋಗಿದ್ದರು ನೀರಿಗಾಗಿ ಮೆಟ್ಟಿಲನ್ನು ಇಳಿದು ಕೆಳಗೆ ಹೋಗಬೇಕಾಗಿತ್ತು. ನಾಲ್ಕು ಮೆಟ್ಟಿಲು ಕೆಳಗೆ ಇಳಿದರು ಕೊಡವನ್ನು ಕೆಳಗೆ ಇಟ್ಟು ಮತ್ತು ಅಳುವುದಕ್ಕೆ ಪ್ರಾರಂಭಿಸಿದರು. ಮಾತನಾಡುವುದಕ್ಕೆ ಆಗಲಿಲ್ಲ. ಅಲ್ಲೇ ಕುಳಿತುಬಿಟ್ಟರು ಕೆಳಗೂ ಹೋಗಲಿಕ್ಕಾಗುವುದಿಲ್ಲ. ಮೇಲು ಬರುವುದಿಲ್ಲ ಏನಾಯಿತೆಂದು ಯಾರಿಗೂ ತಿಳಿಯದೇ ಹೋಯಿತು ಡಾಕ್ಟರನ್ನು ಕರೆದುಕೊಂಡು ಬಂದರು ಅವರು ಹೇಳಿದರು ಇವರಿಗೆ ಏನೂ ಆಗಲಿಲ್ಲ ಮತ್ತೆ ಏನಾದರೂ ಇದ್ದರೆ ನೀವೇ ನೋಡಿ. ಅಲ್ಲಿದ್ದವರ ಪೈಕಿ ಒಬ್ಬರು ಹೇಳಿದರು ಇಲ್ಲಿಂದ 5 ಕಿಲೋಮೀಟರ್ ದೂರದಲ್ಲಿ ಶ್ರೀಧರಸ್ವಾಮಿಗಳವರು ಬಂದಿದ್ದಾರೆ ನೀವು ಅವರ ಹತ್ತಿರ ಹೋಗಿರಿ ನಿಮಗೆ ನಿಶ್ಚಿತವಾಗಿ ಉಪಯೋಗವಾಗುತ್ತದೆ ಎಂದು. ಎತ್ತಿನ ಗಾಡಿಯನ್ನು ಕಟ್ಟಿಕೊಂಡು ಅವರು ಅಲ್ಲಿಗೆ ಹೋಗಿ ಸ್ವಾಮಿಗಳ ದರ್ಶನವನ್ನು ಮಾಡುತ್ತಾರೆ. ಸ್ವಾಮಿಗಳು ವಿಭೂತಿಯನ್ನು ಕೊಟ್ಟರು. ಅದನ್ನು ಹಚ್ಚಿ ಸ್ನಾನ ಮಾಡಿಸಲು ಹೇಳಿದರು ಮತ್ತು ಮೈಮೇಲಿನ ಈಗ ಧರಿಸಿರುವ ಬಟ್ಟೆಯನ್ನು ಇನ್ಮುಂದೆ ಬಳಸದೇ ಒಗೆದು ಬಿಡಿಲಿಕ್ಕೆ ಹೇಳಿದರು ಮತ್ತು ದಿನಾಲು ವಿಭೂತಿಯನ್ನು ಹಚ್ಚಲಿಕ್ಕೆ ಹೇಳಿದರು ಅಷ್ಟರ ನಂತರ ನನ್ನ ಅತ್ತಿಗೆಗೆ ಆ ತ್ರಾಸು ಆಗಲಿಲ್ಲ ಸ್ವಾಮಿಗಳ ಕೃಪೆಯಿಂದ ಅವರು ಆರಾಮಾಗಿ ಉಳಿದರು ಈಗ ಅವರು ವಿಜಾಪುರದ ಹತ್ತಿರ ಇಳಕಲ್ಲನಲ್ಲಿ ಇದ್ದಾರೆ.
 
 ಸದ್ಗುರು ಭಗವಾನ್ ಶ್ರೀಧರ ಸ್ವಾಮಿ ಮಹಾರಾಜ ಕಿ ಜೈ
 
 
❀~●~❁~●~❀~●~❁
 
ನನ್ನ ಅಮೂಲ್ಯವಾದ ನೆನಪು*
*ನಿವೇದ ಕರು.*   ಶ್ರೀಮತಿ ಸುಶೀಲಾಬಾಯಿ ಪಾನಸರೆ
ಆ ಕಾಲದ  ಅಪರೂಪದ ಅನುಭವವೊಂದನ್ನು ಶ್ರೀಮತಿ ಸುಶೀಲಾಬಾಯಿ  ಪನ್ಸಾರೆ ಯವರು, ಬರೆಯುತ್ತಾರೆ.
  ತೆಲಂಗಾಣ ರಾಜ್ಯದ ” ರಾಜೇಂದ್ರ ನಗರ  “ನ ಊರಿನವರಾದ ನಮ್ಮ ಕುಟುಂಬದ ಆರಾಧ್ಯ ದೇವರೇ ಆದ ಶ್ರೀ ಶ್ರೀಧರ ಸ್ವಾಮಿಗಳು, ನಮ್ಮ ಬದುಕಿನಲ್ಲಿ  ಸೃಷ್ಟಿಸಿದ ದೈವಿಕ ಘಟನೆ ಇದಾಗಿದೆ.
ವಾಸ್ತವಿಕವಾಗಿ ನಾವು ಪಾಮರರು.ಆರ್ಥಿಕವಾಗಿಯಾಗಲೀ,ಧಾರ್ಮಿಕವಾಗಿಯಾಗಲೀ ಅಶಕ್ತರು. ನಮ್ಮ ಮನೆಯಿಂದ ಸುಮಾರು ಒಂದು ಮೈಲಿ ದೂರದಲ್ಲಿ, ಒಂದು ಪುಟ್ಟ ಹೊಳೆ ಹರಿದಿದೆ. ಮಳೆಗಾಲದ ನಂತರದ ಒಂದು ದಿನ ಹೊಳೆಯ ದಂಡೆಯಲ್ಲಿ ನಡೆದಾಡುತ್ತಿರುವಾಗ ಅಕಸ್ಮಾತ್ ಒಂದು ಕಲ್ಲು ಹಲಗೆ ಕಂಡು ಬಂದಿತು. ಅದು ಮಣ್ಣಿನಿಂದ ಕೊಂಚ ಹೊರಗೆ ಕಾಣುತ್ತಿತ್ತು. ಕುತೂಹಲ ಮೂಡಿತು. ಕೈಯಿಂದಲೇ ಮಣ್ಣು ಬಗೆಯಲು ಪ್ರಾರಂಭಿಸಿದೆ. ನಾಲ್ಕಾರು ಇಂಚಿನಷ್ಟು ಮಣ್ಣು ಬಗೆದು ನೋಡುವಾಗ ಬೆರಗು ಮೂಡಿತು. ಸುಂದರ ಕುಸುರಿಯ ಚಿತ್ರಣದಂತೇ ತೋರಿತು.
ಅಲ್ಲಿಯೇ ಕೊಂಚ ದೂರದ ಹೊಲದಲ್ಲಿ ಒಂದಿಷ್ಟು ಕೂಲಿಯಾಳುಗಳು ಕೆಲಸ ಮಾಡುತ್ತಿರುವುದು ಕಾಣಿಸಿತು. ತಕ್ಷಣ ಅಲ್ಲಿಗೆ ಹೋಗಿ ಅವರಲ್ಲಿ, ಮಣ್ಣಿನ ಆಳದಲ್ಲಿ ಒಂದು ಅಪರೂಪದ ವಸ್ತುವಿದೆ. ಹೊರತೆಗೆಯಲು ಸಹಾಯ ಮಾಡಿ ಎಂದು ಕೇಳಿಕೊಂಡೆ. ಅವರೆಲ್ಲ ಖುಷಿಯಿಂದ ಓಡಿ ಬಂದರು. ಕೆಲವೇ ಸಮಯದಲ್ಲಿ ಮಣ್ಣಿನಡಿ ಐದಾರು ಅಡಿ ಆಳದಲ್ಲಿ ಹುಗಿದಿದ್ದ ಬೃಹತ್ತಾದ ಮೂರ್ತಿಯೊಂದು ನೆಲದಮೇಲೆ ಪ್ರತ್ಯಕ್ಷವಾಯಿತು. ನಾವೆಲ್ಲರೂ ರೋಮಾಂಚನಗೊಂಡೆವು. ಹೊಳೆಯ ನೀರಿನಲ್ಲಿ ಮೂರ್ತಿಯನ್ನು ತೊಳೆದು ಶುದ್ಧಗೊಳಿಸಿದೆವು. ಅಬ್ಬಾ ಅದೆಂಥ ಸುಂದರ!. ಶಂಖ ಚಕ್ರಧಾರಿ ಮಹಾವಿಷ್ಣುವಿನ 
ಬಿಂಬವಾಗಿತ್ತು. ಮೂರ್ತಿ ಚಿಕ್ಕದಾಗಿರಲಿಲ್ಲ.ಸುಮಾರು ಐದು ಅಡಿ ಎತ್ತರ,ನಾಲ್ಕುಅಡಿ ಅಗಲವಿರುವ,ಪುರುಷಾಕಾರದ ಭವ್ಯ ಮೂರ್ತಿ.
ಸೇರಿದ ಜನರೆಲ್ಲ ಮಹಾವಿಷ್ಣುವಿಗೆ ಭಕ್ತಿಯಿಂದ ನಮಸ್ಕರಿಸಿದರು.
ಯಾವುದೋ ವ್ಯಾಪಾರಿ ಕೆಲವು ವರ್ಷಗಳ ಹಿಂದೆ ದೇವಾಲಯ ನಿರ್ಮಿಸಲು ಈ ಮೂರ್ತಿಯನ್ನು ತಂದಿದ್ದನಂತೆ. ಕಾರಣಾಂತರದಿಂದ ದೇವಾಲಯ ನಿರ್ಮಾಣ ಸಾಧ್ಯವಾಗದೇ ವ್ಯಾಪಾರಿ ಈ ಮೂರ್ತಿಯನ್ನು, ನದಿಗೆ ಅರ್ಪಿಸಿದ್ದನಂತೆ. ಅಲ್ಲಿ ಸೇರಿದ ಜನರು ಈ ಸಂಗತಿಯನ್ನು ತಿಳಿಸಿದರು.
   ಈ ವಿಷಯವನ್ನು ಕೇಳಿ ನಮಗೆ ಆತಂಕವಾಯಿತು.
ನಮ್ಮ ಜೀವನವೇ ಕಷ್ಟದಲ್ಲಿದೆ.ಜೀವನ ಸಾಗಿಸುವುದೇ ದುಸ್ತರ. ಮೂರ್ತಿಯನ್ನಂತೂ  ಹೊರಪ್ರಪಂಚಕ್ಕೆ ತಂದಾಗಿದೆ. ಹಾಗೆಯೇನ ಅನಾಥವಾಗಿ ಬಿಟ್ಟು ಹೋಗುವುದು ಮಹಾಪಾಪ. ಇಂಥ ಸಂಧಿಗ್ಧ ಸಮಯದಲ್ಲಿ ನಮ್ಮ ಸ್ಮರಣೆಗೆ ಬಂದವರು
ಪೂಜ್ಯ ಶ್ರೀ ಶ್ರೀಧರರು.
   ನಮ್ಮ ಊರಿನ ಸಮೀಪದಲ್ಲಿಯೇ ಅವರ ಸವಾರಿ ಬಂದು ನೆಲೆಸಿತ್ತು.
ನಾನು ಮತ್ತು ನನ್ನ ಪತಿಯವರು ಅವರ ಸನ್ನಿಧಾನಕ್ಕೆ ಧಾವಿಸಿದೆವು.
ಶ್ರೀಗಳ ಪಾದಕ್ಕೆ ನಮಿಸಿ ನಮ್ಮ ಗೊಂದಲವನ್ನು ನಿವೇದಿಸಿಕೊಂಡೆವು.
ಅವರ ಮುಖದಲ್ಲಿ ಕರುಣೆಯ ಮಂದಹಾಸ ಮೂಡಿತು. ಕ್ಷಣಕಾಲ ಕಣ್ಣು ಮುಚ್ಚಿ ಧ್ಯಾನಸ್ಥರಾದರು. ಕರದಲ್ಲಿ ಫಲಮಂತ್ರಾಕ್ಷತೆಯನ್ನು ಹಿಡಿದು, ನನ್ನ ಪತಿ ಪಾನ್ಸರೆಯವರನ್ನು ಬಳಿಗೆ ಕರೆದು, “ನಿಮ್ಮಿಂದ ಅಪೂರ್ವವಾದ ಲೋಕ ಕಲ್ಯಾಣದ  ಕೆಲಸ ನಡೆಯುತ್ತದೆ. ಧೈರ್ಯ ಮತ್ತು ಭಕ್ತಿಯಿಂದ ಮುನ್ನುಗ್ಗಿರಿ.” ಎಂದು ಆಶೀರ್ವದಿಸಿದರು.
ಶ್ರೀಗುರುವಿನ ಆಜ್ಞೆ  ನಮ್ಮೊಳಗೆ ಎಲ್ಲಿಲ್ಲದ ಆತ್ಮವಿಶ್ವಾಸ ತುಂಬಿತು.
ಶ್ರೀಗಳ ಸನ್ನಿಧಿಯಿಂದ ತಂದ ಫಲಮಂತ್ರಾಕ್ಷತೆ ಒಂದುವಾರ ಕಾಲ ನಮ್ಮ ಮನೆಯಲ್ಲೇ ಉಳಿಯಿತು.
     ಒಂದುದಿನ ಶುಭಮುಹೂರ್ತದಲ್ಲಿ ಇಬ್ಬರು ಸಹಾಯಕರೊಂದಿಗೆ ನಾವು ದಂಪತಿಗಳು,ವಾಹನದಲ್ಲಿ ಮೂರ್ತಿಯಿರುವ ಸ್ಥಳಕ್ಕೆ ತಲುಪಿದೆವು. ಮೂರ್ತಿಗೆ ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿ,ಶ್ರೀಗುರುಗಳ ಆದೇಶದಂತೇ ಶ್ರೀ ವಿಷ್ಣುಶಿಲ್ಪಕ್ಕೆ ಫಲಮಂತ್ರಾಕ್ಷತೆಯನ್ನು ಸಮರ್ಪಿಸಿದೆವು.
ಮುಂದಿನ ಕೆಲಸ ಮೂರ್ತಿಶಿಲ್ಪವನ್ನು ವಾಹನಕ್ಕೇರಿಸುವುದು. ನಮ್ಮ ಸಹಾಯಕರೊಂದಿಗೆ ನಾವೂ ಕೈಜೋಡಿಸಿದೆವು. ಆದರೆ ಮೂರ್ತಿ ಮೇಲೇಳಲೇ ಇಲ್ಲ. ಆಗ ಮತ್ತೆ ಹೊಲದ ಕೆಲಸಗಾರರ ಸಹಾಯ ಕೇಳಿದೆವು. ಇಪ್ಪತ್ತು ಮೂವತ್ತು ಜನ ಉತ್ಸಾಹದಿಂದ ಬಂದು ವಾಹನಕ್ಕೆ ಮೂರ್ತಿಯನ್ನು ಏರಿಸಲು ಸಹಾಯ ಮಾಡಿದರು.
   ಮಾರನೆಯ ದಿನ ನಮ್ಮ ಗ್ರಾಮದ ಎಲ್ಲ ಜನರನ್ನೂ ಆಮಂತ್ರಿಸಿ ಸಭೆಯನ್ನು ಸಂಘಟಿಸಿದೆವು. ಅವರೆದುರು ,”ನಮ್ಮ ಬಳಿಗೇ ದೇವರು ಆಗಮಿಸಿದ್ದಾನೆ. ಇದು ನಮ್ಮ ಗ್ರಾಮದ ಸೌಭಾಗ್ಯ.ನಾವೆಲ್ಲ ಒಂದಾಗಿ ಒಗ್ಗಟ್ಟಿನಿಂದ ದೇವಾಲಯ ನಿರ್ಮಿಸೋಣ” ಎಂದು ಮನವಿ ಮಾಡಿಕೊಂಡಾಗ ಎಲ್ಲರೂ ಒಕ್ಕೊರಲಿನಿಂದ ಒಪ್ಪಿಗೆಯನ್ನಿತ್ತರು. ಆದರೆ ಒಬ್ಬ ಜಮೀನುದಾರ ಮಾತ್ರ,ತನ್ನ ಹೊಲದ ಕೆಲಸಕ್ಕೆ ಬಂದ ಕೂಲಿಗಳು  ಮೂರ್ತಿಯನ್ನೆತ್ತಲು ಹೋಗಿ,ತನಗೆ ನಷ್ಟವನ್ನುಂಟು ಮಾಡಿದ್ದಾರೆ. ಮುನ್ನೂರು ರೂಪಾಯಿಗಳ ನಷ್ಟವನ್ನು ತುಂಬಿಕೊಡಲೇಬೇಕೆಂದು,ಹಟ ಹಿಡಿದ.
 ಅಲ್ಲಿ ಸೇರಿದ ಹಿರಿಯರು, ಈ ಪುಣ್ಯಕಾರ್ಯದ ಪ್ರಾರಂಭವೇ ನಿಮ್ಮಿಂದಾಗಿದೆ. ಆದರೂ ತಮಗೆ ಹತ್ತುರೂಪಾಯಿ ನಷ್ಟ ಪರಿಹಾರವನ್ನು,ಪಾನ್ಸರೆಯವರು ತುಂಬಿಕೊಡುತ್ತಾರೆ, ಎಂದಾಗ ಅವರೂ ಒಪ್ಪಿಗೆಯಿತ್ತರು.
   ಮರುದಿನದಿಂದಲೇ  ಶುಭಕಾರ್ಯ ಪ್ರಾರಂಭ ಗೊಂಡಿತು. ಹತ್ತಿರದಲ್ಲಿರುವ ಉನ್ನತ ಪರ್ವತದ ಶಿಖರದ ಮೇಲೆ ವಿಶಾಲವಾದ ಪ್ರಾಂಗಣದಲ್ಲಿ  ಶ್ರೀ ವಿಷ್ಣುದೇವಾಲಯದ ಪ್ರಾರಂಭೋತ್ಸವ ಜರುಗಿತು.
  ಅಂದಿನಿಂದ ಪ್ರಾರಂಭವಾದ ದೇವಾಲಯದ ಕಟ್ಟಡ ನಿರ್ವಿಘ್ನವಾಗಿ ನಿರ್ಮಾಣಗೊಳ್ಳತೊಡಗಿತು. ಎಲ್ಲಿಂದಲೋ ಧನ ಸಂಗ್ರಹವಾಯಿತು. ಕಟ್ಟಿಗೆ ಸಿಮೆಂಟು, ಇಟ್ಟಿಗೆ ಉಚಿತವಾಗಿ ಒದಗಿ ಬಂದಿತು. ಕರಸೇವಕರು ಸ್ವಯಿಚ್ಛೆಯಿಂದ ಬಂದು ಸೇವೆಗೈದರು. ಕೆಲವೇ ತಿಂಗಳಲ್ಲಿ ಭವ್ಯವಾದ,ದಿವ್ಯವಾದ, ಸುಂದರ ಕಟ್ಟಡ ನಿರ್ಮಾಣಗೊಂಡಿದ್ದು  ಒಂದು ಕನಸಿನ ಹಾಗೇ ಕಾಣತೊಡಗಿತು.
   ಶ್ರೀದೇವರ ಪ್ರತಿಷ್ಠಾಪನೆ ವೈಭವಪೂರ್ಣವಾಗಿ ನೆರವೇರಿತು. ಆ ಪವಿತ್ರ ದಿನದಂದು ನಾಲ್ಕುಸಾವಿರ ಭಕ್ತವೃಂದ ಸೇರಿತ್ತು.
    ನಂತರ ದಿನದಿಂದ ದಿನಕ್ಕೆ ಈ ಶ್ರೀ ಕ್ಷೇತ್ರ ಮಹಾ ಶಕ್ತಿಪೀಠವಾಗಿ ಬೆಳೆದು ನಿಂತಿದೆ. ಶ್ರೀವಿಷ್ಣುವಿನ ಶಾಸ್ತ್ರೋಕ್ತ ಪೂಜಾ ವಿಧಿ ವಿಧಾನಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಲಕ್ಷಾಂತರ ಭಕ್ತರ ಕಷ್ಟಗಳನ್ನು ಪರಿಹರಿಸುತ್ತಿದೆ.
   ದೇವಾಲಯದ ಪ್ರಗತಿಯ ಹಿನ್ನೆಲೆಯಲ್ಲಿ, ಭಕ್ತರ ಇಷ್ಟಾರ್ಥ ಗಳು ನೆರವೇರುವಲ್ಲಿ,ಶ್ರೀದೇವರ ಕೃಪೆಯೊಂದಿಗೆ, ಶ್ರೀ ಗುರುಗಳ ದಿವ್ಯಸಾನ್ನಿಧ್ಯವೂ ನೆರವಾಗಿದೆ.
ಶ್ರೀ ಶ್ರೀಧರ ಸ್ವಾಮಿಗಳ ಚರಣಕ್ಕೆ ಅನಂತ ನಮನಗಳನ್ನು ಸಲ್ಲಿಸೋಣ.ಸದಾ ಶ್ರೀಗಳ ನಾಮ ಜಪಿಸುವ ಮೂಲಕ ಧನ್ಯರಾಗೋಣ.
 
❀~●~❁~●~❀~●~❁
 
ಭಾಗ್ಯ
ಉದಯವಾಯಿತು ನಿನ್ನ ಚರಣ ಸ್ಪರ್ಶದಿಂದ*
 
*ನಿವೇದ ಕರು:* ಶ್ರೀ ರಘೋತ್ತಮ ರಾವ್ ದೇಶಪಾಂಡೆ.
 
ಇ ,ಸ,1959.ರ ಸಂದರ್ಭ , ಆ ವೇಳೆಯಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯರು ಭಾಗ್ಯನಗರಿಗೆ ಬಂದಿದ್ದರು ಅವರ ದರುಶನಕ್ಕೆ ಹೋದಾಗ ಮತ್ತೊಂದು ವಿಷಯ ನಮಗೆ ತಿಳಿಯಿತು ಈ ಊರಿಗೆ ಮತ್ತೊಬ್ಬ ಸನ್ಯಾಸಿಗಳು ಬಂದಿದ್ದಾರೆ.
 
ಜನರಿಂದ ನಮಗೆ ತಿಳಿಯಿತು ಅವರು ಜನರ ದುಃಖ ದೂರವಾಗಲಿ ಕ್ಕೆ ಉಪಾಯವನ್ನು ಹೇಳುತ್ತಾರೆ.
ಎಲ್ಲಾ ಕಡೆಯಲ್ಲೂ ಧುಖ್ಖಿ  ಜನರು  ಕಷ್ಟದಲ್ಲಿದ್ದ ಜನರು ಇದ್ದೇ ಇರುತ್ತಾರೆ ಹಾಗೆಯೇ ನಮಗೂ ತೊಂದರೆ ಇತ್ತು ನಮ್ಮ ಹೊಲವು ಹತ್ತು ವರ್ಷದಿಂದ ಜಗಳದಲ್ಲಿ ಇತ್ತು ಎದುರುಗಡೆಯ ಪಾರ್ಟಿಯು ತುಂಬಾ ಬಲಿಷ್ಠವಾಗಿತ್ತು ಆದುದರಿಂದ ಈಡೇರುತ್ತಿರಲಿಲ್ಲ ಮತ್ತೊಂದು ಎಂದರೆ ನಮ್ಮ ಮನೆಯಲ್ಲಿ ಸ್ವಲ್ಪ ಬಾಧೆ ಇತ್ತು ಅದರಿಂದ ನಮಗೆ ತುಂಬಾ ತ್ರಾಸ್ ಆಗುತ್ತಿತ್ತು ಎಲ್ಲರಿಗೂ ಅನಾರೋಗ್ಯ ಹಿಂದೆ ಮುಂದೆ ತೋರುತ್ತಿತ್ತು. ಆರ್ಥಿಕ ಸಂಕಟವು ಆಗುತ್ತಿತ್ತು. ಅದಕ್ಕಾಗಿ ನಮ್ಮ ದೊಡ್ಡಣ್ಣ ನವರು ನಮ್ಮಲ್ಲಿಗೆ ಬಂದ ಸನ್ಯಾಸಿ ಶ್ರೀಧರ ಸ್ವಾಮಿಯವರನ್ನು ಭೆಟ್ಟಿ ಮಾಡಲಿಕ್ಕೆ ಹೋಗಲು ಪ್ರೋತ್ಸಾಹಿಸಿದರು. ನಾವು ಸ್ವಾಮಿಗಳು ಇದ್ದ ಸೋಮಜಿಗುಡಕ್ಕೆ ಹೋದೆವು. ಸ್ವಾಮಿಯವರು ಬೆನ್ನಮೇಲೆ ಕೈಯಾಡಿಸಿ ನಮಗೆ ಸಮಾಧಾನ ಕೊಟ್ಟರು. ಮತ್ತು ಉಪಾಸನೆಯನ್ನು ಮಾಡಲಿಕ್ಕೆ ಹೇಳಿದರು. ಮತ್ತೊಂದ್ ಎಂದರೆ ನಮಗೆ ಸ್ವಾಮಿಯವರನ್ನು ಕರೆದು ಪಾಧ್ಯ ಪೂಜೆ ಮಾಡಬೇಕು ಅಂತ ಇಚ್ಛೆ ಇತ್ತು ಆದರೆ ಪಾದಪೂಜೆಗೆ ಸ್ವಲ್ಪ ಖರ್ಚು ಬರುತ್ತದೆ ಆದರೆ ನಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಇರಲಿಲ್ಲ ಅದಕ್ಕೋಸ್ಕರ ನಾವು ವಿಚಾರಕ್ಕೆ ಒಳಗಾಯಿತು. ಆದರೆ ನನ್ನ ಅಣ್ಣನಿಗೆ ಮಾತ್ರ ಖಾತ್ರಿ ಎನಿಸಿತ್ತು ಸ್ವಾಮಿಯವರು ನಮ್ಮ ಮನೆಗೆ ಬರುತ್ತಾರೆ ಎಂದು ಅಣ್ಣನು 1 ಚೀಟಿಯನ್ನು ನನ್ನ ಕೈಯಲ್ಲಿ ಕೊಟ್ಟನು ನಾನು ಅದನ್ನು ಸ್ವಾಮಿಯವರಿಗೆ ಕೊಟ್ಟೆ. ಆಶ್ಚರ್ಯವೆಂದರೆ ಸ್ವಾಮಿಯವರು ನಮ್ಮ ಮನೆಗೆ ಪಾದಪೂಜೆಗೆ ಬರಲಿಕ್ಕೆ ಒಪ್ಪಿದರು ಮತ್ತು ನಿಶ್ಚಿತವಾದ ದಿವಸ ಬಂದು ಪಾದಪೂಜೆ ಮುಗಿಸಿದ ಮೇಲೆ ನಮಗೆಲ್ಲರಿಗೂ ಆಶೀರ್ವಾದ ಕೊಟ್ಟರು ನಮಗೆ ತುಂಬಾ ಸಂತೋಷವಾಯಿತು ನಂತರ ಎಲ್ಲಾ ಸಮಸ್ಯೆಗಳು ಪರಿಹಾರವಾಯಿತು ಆರ್ಥಿಕವಾಗಿಯೂ ಮತ್ತು ಶಾರೀರಿಕವಾಗಿಯೂ ನಾವು ಸದೃಢಗೊಂಡೆವು
ನಮ್ಮ ತುಂಬಾ ದಿವಸದಿಂದ ಸಿಕ್ಕಿಹಾಕಿಕೊಂಡ ಹೊಲದ ಕೆಲಸವು ನಮ್ಮಂತೆಯೇ ತೀರ್ಮಾನವಾಯಿತು
ನಂತರ ತುಂಬಾ ಮಹತ್ವದ ಘಟನೆ ನಡೆಯಿತು 1975ರಲ್ಲಿ ನನ್ನನ್ನು ಆಣಿ ಬಾಣಿಯ ಕಾಲದಲ್ಲಿ ನೌಕರಿಯಿಂದ ತೆಗೆದುಹಾಕಿದರು ಮಕ್ಕಳು ಹೆಂಡತಿ ಮದುವೆಗೆ ಬಂದ ಮಗಳು ಎಲ್ಲಾ ಜವಾಬ್ದಾರಿ ಅಣ್ಣನ ಮೇಲೆ ಬಿತ್ತು ರಾತ್ರಿ ನಿದ್ರೆ ಬರದಂತಾಯಿತು. ಅದರಲ್ಲೂ ಹೆಂಡತಿಗೆ ಆರಾಮ್ ಇಲ್ಲದೆ ಅನ್ನ ಪಚನವಾಗದೇ ದಿಕ್ಕು ತೋಚದಂತಾಯಿತು ಔಷಧಿ ತಾಗದೇ ಹೋಯಿತು ಅವಳ ಅನಾರೋಗ್ಯ ಹೆಚ್ಚಾಗುತ್ತಾ ಹೋಯಿತು.
ಆ ವೇಳೆಯಲ್ಲಿ ಸಚ್ಚಿದಾನಂದ ಸ್ವಾಮಿಯವರು ನಮ್ಮಲ್ಲಿಗೆ ಬಂದಿದ್ದರು ಅವರು ಸ್ವಾಮಿಗಳ ಉಪಾಸನೆಯನ್ನು ಹೆಚ್ಚು ಮಾಡಲಿಕ್ಕೆ ಹೇಳಿದರು
ನಮ್ಮ ಮನಸ್ಸಿನಲ್ಲಿ 1 ವಿಚಾರವಿತ್ತು ಏನೆಂದರೆ ಒಮ್ಮೆ ವರದ ಪುರಕ್ಕೆ ಹೋಗಿ ಬರಬೇಕು ಆದರೆ ಕೈಯಲ್ಲಿ ಹಣವಿಲ್ಲ ಮತ್ತು ಹೆಂಡತಿಯ ಅನಾರೋಗ್ಯ ದೈವೀ ಕೃಪೆ ಎನ್ನುವುದೇ ಸರಿ ನಾವೆಲ್ಲರೂ ಹೇಗೋ ಹೇಗೋ ವರದ ಪುರಕ್ಕೆ ಹೋಗಿ ಬಂದೆವು ಆಶ್ಚರ್ಯವೆಂದರೆ ನನ್ನ ಹೆಂಡತಿಗೆ ಅಲ್ಲಿ ಏನು ಕಷ್ಟವಾಗಲಿಲ್ಲ ಮತ್ತು ಆಮೇಲೆ ಅವರ ಆರೋಗ್ಯವು ಸುಧಾರಿಸಿತು. ಹೋಗುವ ಮೊದಲು ನನ್ನ ಒಬ್ಬ ಮಗನಿಗೆ ಎಚ್ಚರತಪ್ಪಿ ಬೀಳುವ ರೋಗ ಪ್ರಾರಂಭವಾಗಿತ್ತು ಅಲ್ಲಿಗೆ ಹೋಗಿ ಬಂದಮೇಲೆ ಅವನಿಗೂ ತುಂಬಾ ಆರಾಮ್ ಆಯಿತು ಪರಮ ಆಶ್ಚರ್ಯವೆಂದರೆ ಆಮೇಲೆ ನನಗೆ ನೌಕರಿಗೂ ಹಾಜರ್ ಆಗಲಿಕ್ಕೆ ಹೇಳಿದರು ಎಲ್ಲ ನಮ್ಮ ಗುರು ಕೃಪೆಯಿಂದ ಸಾಧ್ಯವಾಯಿತು
 
 
❀~●~❁~●~❀~●~❁
 
ಅನಾಥರ ನಾಥರು
 
ನಿವೇದಕರು: ಶ್ರೀಮತಿ ವೇಣು ಬಾಯಿ ಕುಲಕರ್ಣಿ
ನಾನೊಬ್ಬಳು ಅಜ್ಞಾನಿ ಸ್ತ್ರೀ ಶ್ರೀಧರ ಸ್ವಾಮಿಗಳ ಮೇಲೆ ನನ್ನದು ತುಂಬಾ ಶ್ರದ್ಧೆ. 22 ವರ್ಷದ ಹಿಂದೆ ನಡೆದ ಘಟನೆ ಕರ್ಮ ಧರ್ಮ ಸಂಯೋಗದಿಂದ ನನಗೆ ಪರಮಪೂಜ್ಯ ಸ್ವಾಮಿಗಳ ದರ್ಶನವಾಯಿತು. ಅದರ ನಂತರ ನನಗೆ ಪದೇ ಪದೇ ಸ್ವಾಮಿಗಳು ನನ್ನ ಬಾಗಿಲಲ್ಲಿ ಜೋಳಿಗೆ ಹಿಡಿದುಕೊಂಡು ಭಿಕ್ಷೆ ಕೇಳುತ್ತಿದ್ದಾರೆ ಅನಿಸುತ್ತಿತ್ತು ಒಂದು ದಿವಸ ನಾನು ಅವರಿಗೆ ಭಿಕ್ಷೆ ಹಾಕಿದೆ ಅಂತ ನನಗೆ ದೃಷ್ಟಾಂತ ವಾಗುತ್ತಿತ್ತು. ತುಂಬಾ ಪ್ರಶ್ನೆಗಳು ಮನಸ್ಸಿನಲ್ಲಿ ಎದ್ದು ಗೊಂದಲ ಮಾಡುತ್ತಿತ್ತು. ಕೊನೆಗೂ ಆ ಯೋಗವು ಬಂದಿತು ಸಾವಿರ 1959ರ ಒಂದು ಅವಿಸ್ಮರಣೀಯ ದಿವಸ ಮನೆಯ ಎದುರು ಸಾರಿಸಿ ರಂಗೋಲಿ ಹಾಕಿದ್ದೆವು ಸೂರ್ಯೋದಯದ ವೇಳೆಯಲ್ಲಿಯೇ ಸ್ವಾಮಿಯವರು ನಮ್ಮ ಮನೆಗೆ ಸುಹಾಸ್ಯ ವದನದಿಂದ ಆಗಮಿಸಿದರು ನಮ್ಮ ಆನಂದ ಕ್ಕೆ ಪಾರವೇ ಇರಲಿಲ್ಲ ಆಯುಷ್ಯದ ಸಾರ್ಥಕವಾದಂತೆ ಅನಿಸಿತು
ಬಂದ ತಕ್ಷಣ ಅವರು ನಮ್ಮ ದೇವರ ಕೊಠಡಿಗೆ ಬಂದರು ಹೊಸದೇವರು ಯಾವುದು ಅನ್ನುವುದನ್ನು ಅವರು ಗುರುತು ಹಿಡಿದರು
ನಮಗೆಲ್ಲರಿಗೂ ಅವರ ಕೃಪಾಶೀರ್ವಾದ ದೊರೆಯಿತು. ನಮ್ಮ ಸಣ್ಣ ಮಗಳಿಗೆ ರಕ್ತದ ವಾಂತಿ ಯಾಗುತ್ತಿತ್ತು ಅದನ್ನು ನಾವು ಸ್ವಾಮಿಯವರ ಕಿವಿಯ ಮೇಲೆ ಹಾಕಿದೆವು ತಕ್ಷಣ ಸ್ವಾಮಿಯವರು ನಮ್ಮ ಮಗಳನ್ನು ಕಾಲಿನಿಂದ ತುಳಿಯಲಿಕ್ಕೆ ಪ್ರಾರಂಭಿಸಿದರು ನಮಗೆ ತುಂಬಾ ಆಶ್ಚರ್ಯವೆನಿಸಿತು ಕುಂಬಾರನು ಹೇಗೆ ಮಣ್ಣನ್ನು ತುಳಿಯುತ್ತಾನೆ ಹಾಗೆ ನಮ್ಮ ಮಗಳನ್ನು ಅವರು ತುಳಿದರು ಆದರೆ ಮಗಳಿಗೆ ಏನುಕಷ್ಟ  ಆಗಲಿಲ್ಲ ಅದಲ್ಲದೇ ಅವಳಿಗೆ ಅದರ ನಂತರ ರಕ್ತದ ವಾಂತಿ ಆಗಲಿಲ್ಲ. ಸ್ವಾಮಿಯವರು ಕೃಪೆಯಿಂದ ಈಗ ಅವಳು ಪರದೇಶದಲ್ಲಿ ಒಳ್ಳೆಯ ಹುದ್ದೆಯಲ್ಲಿ ನೌಕರಿ ಮಾಡುತ್ತಿದ್ದಾಳೆ ಹಾಗೆಯೇ ಎರಡನೆಯ ಮಗಳಿಗೂ ಒಳ್ಳೆಯದಾಗುತ್ತದೆ ಎಂದು ಆಶೀರ್ವಾದ ಕೊಟ್ಟರು ಅದರಂತೆಯೇ ಆಯಿತು.
ಹೀಗೆಯೇ ಮತ್ತೊಂದು ಅನುಭವ ಹೇಳುವುದೆಂದರೆ, ನನ್ನ ಭಾವ ಈಗಿನ ಡಾಕ್ಟರ್ ಭಗವಾನ್ ಮತ್ತು ನನ್ನ ಅತ್ತಿಗೆ ಅಣ್ಣ ಯಥೋಚಿತವಾಗಿ ಸ್ವಾಮಿಯವರ ಪೂಜೆಗೆ ಕುಳಿತುಕೊಂಡರು ಪೂಜೆಯಾದ ಮೇಲೆ ನನ್ನ ಭಾವನು ಸ್ವಾಮಿಯವರಿಗೆ ತನ್ನ ಡಾಕ್ಟರ್ ವ್ಯವಸಾಯ ಚೆನ್ನಾಗಿ ನಡೆಯಬಹುದೇ ಅಂತ ಕೇಳಿದನು ಅದಕ್ಕೆ ಸ್ವಾಮಿಯವರು ಹೇಳಿದರು ನೀನು ಆಸ್ಪತ್ರೆ ತೆಗೆದು ಮೊದಲನೆಯ ದಿವಸವೇ ನಿನ್ನ ಕೈಯಲ್ಲಿ ಬರೀ 12 ಆಣೆಇತ್ತು. ಆ ದಿನ ನಿನ್ನ ಹತ್ತಿರ ಭಿಕ್ಷೆ ಬೇಡಲು ಬಂದ 2 ಬ್ರಾಹ್ಮಣರಿಗೆ ನೀನು ಅದನ್ನು ಕೊಟ್ಟಿದ್ದೆ ಅಲ್ಲವೇ ಅಂತ ಕೇಳಿದರು. ಅಂತರ ಜ್ಞಾನಿ ಸ್ವಾಮಿಯವರ ಈ ಮಾತನ್ನು ಕೇಳಿ ನಮಗೆಲ್ಲಾ ತುಂಬಾ ಆಶ್ಚರ್ಯವಾಯಿತು. ಮತ್ತು ಅವರು ಹೇಳಿದರು ನಿನಗೆ ಯಾವತ್ತೂ ಏನು ಕಡಿಮೆಯಾಗುವುದಿಲ್ಲ
ಸ್ವಾಮಿಯವರು ಆಶೀರ್ವಾದ ಕೊಟ್ಟು ಹೊರಡಲು ಅನುವಾದರು ಅಷ್ಟರಲ್ಲಿ ನನ್ನ ನೆಗೆಣ್ಣಿಗೆ ತಲೆ ತಿರುಗಿದಂತಾಗಿ ಕಣ್ಣು ಕತ್ತಲು ಬಂದಿತು ಏನಂತ ನಾವು ಯೋಚನೆಗೆ ಬಿದ್ದೆವು. ಅಷ್ಟರಲ್ಲಿ ಸ್ವಾಮಿಯವರು 1 ತಾಮ್ರದ ಕೊಡದಲ್ಲಿ ನೀರು ತರಲಿಕ್ಕೆ ಹೇಳಿದರು ನೀರನ್ನು ಮಂತ್ರಿಸಿ ಅವಳ ಮೈಮೇಲೆ ಸಿಂಪಡಿಸಿದರು ಅವಳು ಕಣ್ಣು ತೆರೆದಳು ಜಾಗೃತಳಾದಳು. ಸ್ವಾಮಿಯವರು ಅವಳಿಗೆ ಕೇಳಿದರು ನಿನಗೆ ಯಾರು ಕಂಡರು ಅವಳು ಹೇಳಿದಳು ನನ್ನ ತಂದೆ ಕಂಡರು ಅವಳಿಗೂ ಆಶೀರ್ವದಿಸಿ ಸ್ವಾಮಿಯವರು ಹೊರಡಲು ಅನುವಾದರು  ಸ್ವಾಮಿಯವರಿಗೆ ಇದು ಏನಾಯಿತು ಅಂತ ನನ್ನ ಅಣ್ಣನು ಕೇಳಿದನು ಅದಕ್ಕೆ ಸ್ವಾಮಿಯವರು ಹೇಳಿದರು ಅವಳ ತಂದೆಗೆ ಶ್ರೀ ಟೇಂಬೆ ಸ್ವಾಮಿಯವರನ್ನು ಭೆಟ್ಟಿಮಾಡುವ ತುಂಬಾ ಇಚ್ಛೆ ಇತ್ತು ಆದರೆ ಅದು ಆಗಲಿಲ್ಲ ವಾಗಿತ್ತು ಅವರು ಈಗ ನನ್ನ ಸ್ವರೂಪದಲ್ಲಿ ಶ್ರೀ ಟೇಂಬೆ ಸ್ವಾಮಿಯವರನ್ನು ದರ್ಶನ ಮಾಡಿದರು ಇಲ್ಲಿಯವರೆಗಿನ ಅವರ ಇಚ್ಛೆ ಪೂರ್ಣವಾಯಿತು.
ಆ ಮಂತ್ರಿಸಿದ ನೀರನ್ನು ನಾವು ಇಟ್ಟುಕೊಂಡು ತುಂಬಾ ದಿವಸ ಉಪಯೋಗ ಪಡೆದುಕೊಂಡೆವು ಸ್ವಾಮಿಯವರ ಕೃಪೆಯಿಂದ ನಮ್ಮ ಜೀವನ ಪಾವನ ವಾದಂತೆ ಅನಿಸಿತು
 
❀~●~❁~●~❀~●~❁
 
ತಸ್ಮೈ ಶ್ರೀ ಗುರವೇ ನಮಃ
ನಿವೇದ ಕರು: ಕು ರೇಖಾ ಆಲೆ ಗಾಂವಕರ.
 
ಮಹಾರಾಷ್ಟ್ರ ತಪಸ್ವಿಗಳ ಭೂಮಿ ಅವರು ತಪಶ್ಚರ್ಯ ಮಾಡಿ ಅಮರ ಕೀರ್ತಿ ಪಡೆದರು ಕಲಿಯುಗದಲ್ಲಿ ಅಧರ್ಮವು ಶಿಖರವೇರಿ ತು ಧರ್ಮವು ಲುಪ್ತವಾಯಿತು.
ಈ ಸಂದರ್ಭದಲ್ಲಿ ಭಕ್ತರ ರಕ್ಷಣೆ ಮಾಡಲಿಕ್ಕಾಗಿ ಶ್ರೀ ದತ್ತ ಪ್ರಭು, ಶ್ರೀಧರ ಸ್ವಾಮಿಯ ರೂಪದಲ್ಲಿ ಅವತಾರ ಪಡೆದರು.
ಸ್ವಾಮಿಯವರು ಭ್ರಮಣ ಮಾಡುತ್ತಾ ಮಾಡುತ್ತಾ,1959ನೇಇಸವಿಯಲ್ಲಿ ದತ್ತ ಜಯಂತಿಯ ಉತ್ಸವದ ಸಲುವಾಗಿ ಭಾಗ್ಯ ನಗರಿಗೆ ಬಂದರು ಆಗ ನಮಗೆ ತುಂಬಾ ಅನುಭವವು ಆಯ್ತು.
ನಾರಾಯಣ ಬುವಾ ಅವರ ಮಠದಲ್ಲಿ ಸ್ವಾಮಿಗಳು ಪಾದಾರ್ಪಣೆ ಮಾಡಿದರು ಭಕ್ತಜನರು ಪ್ರಿಯ ಸ್ವಾಮಿಯವರ ಪ್ರವಚನ ಕೇಳಿ ತೃಪ್ತರಾಗಿ ಸ್ವಾಮಿಯವರ ಜಯ ಜಯ ಕಾರ ಮಾಡಿ ಅವರವರ ಮನೆಗೆ ಹೋದರು. ಆದರೆ ನನ್ನ ಮಾವ ಒಂದು ಮೂಲೆಯಲ್ಲಿ ಚಿಂತಾ ತುರನಾಗಿ ಕುಳಿತುಬಿಟ್ಟಿದ್ದ. ಅವನಿಗೆ ಪ್ರವಚನ ಮುಗಿದುಹೋದ ಅರಿವೇ ಇರಲಿಲ್ಲ. ಸ್ವಾಮಿಯವರ ಲಕ್ಷ್ಯ ಅವನಕಡೆ ಹೋಯಿತು ಅವರು ಮಾವನನ್ನು ಶಿಷ್ಯರ ಮುಖಾಂತರ ಕರೆಸಿಕೊಂಡರು. ಮಗ ನಿನಗೆ ಏನು ತೊಂದರೆ ಯಾಕೆ ಚಿಂತಾ ಮಗ್ನನಾಗಿದ್ದೀಯೆ ಅಂತ ಕೇಳಿದರು. ನನ್ನ ಮಾವನು ಹೇಳಿದನು ನನಗೆ ನೌಕರಿ ಇಲ್ಲ. ಅದಕ್ಕೆ ಸ್ವಾಮಿಯವರು ಅವನಿಗೆ ಐದು ಶುಕ್ರವಾರ ಮತ್ತು 5 ಹುಣ್ಣಿಮೆ ಮಾಡು ಮಗಾ ಸಮರ್ಥರು ನಿನ್ನ ಇಚ್ಛೆಯನ್ನು ಪೂರ್ಣ ಮಾಡುತ್ತಾರೆ ಅಂದರು. ಸಂತರ ವಾಕ್ಯವು ಅಸತ್ಯವಾಗುವುದಿಲ್ಲ ವಲ್ಲ.  ಐದನೇ ಹುಣ್ಣಿಮೆ ಮುಗಿಯುತ್ತಿದ್ದಂತೆಯೇ ಮಾವನಿಗೆ ಸರಕಾರಿ ನೌಕರಿಗೆ ಕರೆ ಬಂದಿತು. ಅವರ ಕುಟುಂಬಕ್ಕೆ ಆನಂದವಾಯಿತು.
 
ನನ್ನ ತಂಗಿ ಚಿತ್ರಾ ಒಂದು ವರ್ಷದವಳಿದ್ದಳು ಅವಳಿಗೆ ತುಂಬಾ ಅನಾರೋಗ್ಯ ವಾಗಿತ್ತು ಉಳಿಯುವ ಶಕ್ಯತೆಯೇ ಇಲ್ಲವಾಗಿತ್ತು.
ಆಗ ಸ್ವಾಮಿಯವರ ಪ್ರವಚನ ಸೋಮಾಜಿಗುಡದಲ್ಲಿ ನಡೆಯುತ್ತಿತ್ತು.
ನನ್ನ ಅಜ್ಜಿ ಹೇಳಿದರು. ಸೋಮಾಜಿಗುಡ ದಲ್ಲಿ ಸ್ವಾಮಿಯವರು ಬಂದಿದ್ದಾರೆ, ಈ ಮಗುವನ್ನು ಅವರ ಪಾದದ ಮೇಲೆ ಹಾಕೋಣ ಆಮೇಲೆ ಏನು ಆಗುತ್ತದೆಯೋ ಆಗಲಿ. ನನ್ನ ಅಜ್ಜಿ ಮತ್ತು ಆಯಿ ನನ್ನ ತಂಗಿಯನ್ನು ಕರೆದುಕೊಂಡು ಸ್ವಾಮಿ ಅವರಿದ್ದಲ್ಲಿಗೆ ಹೋದರು ಆಗ ಸ್ವಾಮಿಯವರು ಪೂಜೆ ಮಾಡುತ್ತಿದ್ದರು ಒಂದು ಮೂಲೆಯಲ್ಲಿ ನನ್ನ ಅಜ್ಜಿ ಮತ್ತು ಆಯಿ ತುಂಬಾ ಆರಾಮಿಲ್ಲದ ನನ್ನ ತಂಗಿಯನ್ನು ಕರೆದುಕೊಂಡು ಕುಳಿತುಕೊಂಡಿದ್ದರು ಈ ವಿಷಯ ಸ್ವಾಮಿಯವರಿಗೆ ಅಂತರದಿಂದಲೇ ತಿಳಿಯಿತು ಅವರು ಪೂಜೆಯ ಮಧ್ಯದಲ್ಲಿಯೇ ನನ್ನ ಆಯಿಗೆ ಕರೆಸಿಕೊಂಡರು. ಮಗ ನಿನ್ನ ಮಗಳ ಸ್ಥಿತಿ ತುಂಬಾ ಗಂಭೀರವಾಗಿದೆ ನೀನು ಎಲ್ಲರ ಹೆದರಿಕೆಯಿಂದ ನನ್ನ ಮುಂದೆ ಬರಲಿಲ್ಲ ಅಲ್ಲವೇ ಅಂದರು. ನಾನು ನಿನ್ನ ಮಗಳಿಗೆ ತೀರ್ಥ ಮತ್ತು ಅಂಗಾರವನ್ನು ಕೊಡುತ್ತೇನೆ. ಅವಳಿಗೆ ಜೀವನವಿಡಿ ಅನಾರೋಗ್ಯ ಬಾಧಿಸುವುದಿಲ್ಲ ಅಂತ ಹೇಳಿದರು ಗಜಾನನ ಮಹಾರಾಜರು ಜಾನರಾವ ದೇಶಮುಖ ರಿಗೆ ಹೇಗೆ ಜೀವದಾನ ಕೊಟ್ಟರೋ ಹಾಗೆ ಸ್ವಾಮಿಯವರು ನನ್ನ ತಂಗಿಗೆ ತೀರ್ಥ ಅಂಗಾರ ಕೊಟ್ಟು ಜೀವದಾನ ಮಾಡಿದರು ಈಗ 23 ವರ್ಷ ಕಳೆಯಿತು ನನ್ನ ತಂಗಿ ಮಕ್ಕಳು ಮರಿಗಳೊಂದಿಗೆ ಸುಖವಾಗಿ ಸಂಸಾರ ಮಾಡುತ್ತಿದ್ದಾಳೆ.
 
ನಾನು ನಿಮ್ಮ ಮುಂದೆ ಈ ವಿಷಯವನ್ನು ಹೇಳುವ ಕಾರಣವೆಂದರೆ ನನ್ನ ಅನುಭವದಿಂದ ಕೆಲವು ಜನರಿಗಾದರೂ ಸ್ವಾಮಿಗಳ ಸಾನ್ನಿಧ್ಯದ ಪ್ರೇರಣೆಯಾದರೆ ನನ್ನ ಜೀವನ ಧನ್ಯ, ಅಂತ ತಿಳಿದಿದ್ದೇನೆ
 
❀~●~❁~●~❀~●~❁
 
ಅತ್ಯುಚ್ಚ ಯತಿಗಳು
ನಿವೇದಕರು: ಶ್ರೀ ನಾರಾಯಣ ರಾವ್ ಪೋತದಾರ.
 
ನಾನು ಮತ್ತು ಶ್ರೀಧರ ಬಾಲ್ಯ ಮಿತ್ರರು ಸುಲತಾನ ಬಜಾರದ ಮಧ್ಯೆ ನಾಲ್ಕು ರಸ್ತೆ ಕೂಡುವ ಕೆಳಗಿನ ಭಾಗದಲ್ಲಿ ಕಿಶನ್ ರಾವ್ ಅಫಜಲಪುರಕರರ ಮನೆಯ ಹಿಂದುಗಡೆ ನಮ್ಮ ಮನೆ ಇತ್ತು. ನಾವಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಇರುತ್ತಿರಲಿಲ್ಲ. ಅವನಿಗೆ ಹಸಿವಾದರೆ ನಾನು ಚುಡುವಾ ತೆಗೆದುಕೊಂಡು ಹೋಗುತ್ತಿದ್ದೆ ನಾವಿಬ್ಬರೂ ಸೇರಿ ಒಂದು ಕಡೆ ಕುಳಿತುಕೊಂಡು ತಿನ್ನುತ್ತಿದ್ದೆವು ನಮ್ಮದು ಹಿಟ್ಟಿನ ಗಿರಣಿ ಇತ್ತು. ಅವನು ನನಗೆ ಅರೇ… ನೀನು ಮದುವೆ ಮಾಡಿಕೋ ಅಂತ ಹೇಳುತ್ತಿದ್ದ. ನಾನೇನೋ ಮದುವೆಯಾದೆ ಆದರೆ ಅವನು ಮಾತ್ರ ಬೇರೆ ದಾರಿಯನ್ನು ನೋಡಿದ.
 
ಕಂದಸ್ವಾಮಿ ಬಗೀಚೆಯ ಹತ್ತಿರ, ಹನುಮಾನ್ ವ್ಯಾಯಾಮ ಶಾಲೆ ಇದೆ. ನಾವಿಬ್ಬರೂ ಅಲ್ಲಿ ಹೋಗುತ್ತಿದ್ದೆವು  ವ್ಯಾಯಾಮ ಮಾಡುತ್ತಿದ್ದೆವು,  ಕುಸ್ತಿ ಆಡುತ್ತಿದ್ದೆವು . ಜಮದಗ್ನಿ ಯವರು ನಮ್ಮ ವ್ಯಾಯಾಮ ಶಾಲೆಯ ಶಿಕ್ಷಕರಾಗಿದ್ದರು. ಗಾಡಗೀಳ, ಮಾಲ ಕೋಟೆಕರ, ಹರ್ಡೀಕರ, ಭೋಲೆ, ಇವರೆಲ್ಲರೂ ನಮ್ಮ ಸಹಧ್ಯಾಯಿಗಳಿದ್ದರು. ನಾವು ಶ್ರೀಧರನನ್ನು, ದೇಗಲೂರಕರ್, ಅಂತ ಕರೆಯುತ್ತಿತ್ತು.
ಸಣ್ಣಕ್ಕಿದ್ದಾಗಲೂ ಶ್ರೀಧರನಿಗೆ ಪುರಾಣ, ಪ್ರವಚನ, ದೇವಧರ್ಮ, ಇದರಲ್ಲಿ ತುಂಬಾ ಆಸಕ್ತಿ ಇತ್ತು. ಸಣ್ಣಕ್ಕಿದ್ದಾಗ ಅವನು ಎಷ್ಟು ಸಾತ್ವಿಕ ನಿದ್ದನೋ,ಅಷ್ಟೇ ಪ್ರೇಮಮಯಿ ಇದ್ದನು.
ಆದರೆ ನನ್ನ ಬಾಲಮಿತ್ರ ಆಮೇಲೆ ಪುಣೆಗೆ ಹೋದ ಅಲ್ಲಿಂದ ಸಜ್ಜನ ಗಡ್ಡಕ್ಕೆ ಹೋಗಿ ಸಮರ್ಥಕೃಪಾಂಕಿತ ರಾಗಿ, ಉಚ್ಚ ಪದವನ್ನು ಪಡೆದ, ಜನರು ಅವನಿಗೆ ಸ್ವಾಮಿ ಎಂದು ಹೇಳಲಾರಂಭಿಸಿದರು.
 
ಯಾವಾಗ ಶ್ರೀಧರಸ್ವಾಮಿ ಎಂದು ಅವರು ನನ್ನನ್ನು ಭೇಟಿಯಾದರೋ, ಅದು ವರ್ಣಿಸಲಾಗದ ಅನುಭವ. ನಾನು ಸಜ್ಜನಗಡ ಕ್ಕೆ ಹೋದಾಗ ಅವರು ಜನಸಂದಣಿಯಲ್ಲಿ ನನ್ನನ್ನು ನೋಡಿ ಹತ್ತಿರ ಕರೆದರು ಹರ್ಷದಿಂದ ಆಲಂಗಿಸಿದರು. ಉಚ್ಚ ಪದವನ್ನು  ಮುಟ್ಟಿದ ಅವರು ಬಾಲ ಮಿತ್ರನನ್ನು ಮರೆಯಲಿಲ್ಲ. ನನ್ನ ಹೆಂಡತಿಯನ್ನು ಗುರುತಿಸಿದರು.
ನಮ್ಮಲ್ಲಿಗೆ ಬಂದಾಗ ಅವರನ್ನು ನಾನು ಪಾದಪೂಜೆಗೆ ಕರೆಸಿಕೊಂಡೆ. ನಮ್ಮ ಮನೆಗೆ ಬರುವಾಗ ಸಮರ್ಥ ರಾಮದಾಸ ಸ್ವಾಮಿ ಮಹಾರಾಜ ಕೀ ಜೈ ! ಶ್ರೀ ಗೊಂದವಲೇಕರ್ ಮಹಾರಾಜ್ ಕೀ ಜೈ! ಅಂತ ಘೋಷಣೆ ಮಾಡುತ್ತ, ತಮ್ಮ ಶಿಷ್ಯರ ಸಂಗಡ ನಮ್ಮ ಮನೆ ಪ್ರವೇಶ ಮಾಡಿದರು. ಗೊಂದವಲೇಕರ್ ಮಹಾರಾಜ ಅವರು ನಮ್ಮ ಮಾತೋಶ್ರೀ ಯವರ ಗುರು. ನಮ್ಮ ಮಾತೃಶ್ರೀ ಅವರು ಇದ್ದರು ಆದುದರಿಂದ ವಾತಾವರಣವು ಆನಂದಮಯವಾಗಿ ಹೋಯಿತು.
ಅವರು ಮೊದಲು ದೇವರ ಕೋಣೆ ಗೆ ಬಂದರು ಗಣಪತಿ ಮತ್ತು ಸಾಲಿಗ್ರಾಮದಲ್ಲಿ ಸ್ವಲ್ಪ ದೋಷ ಇರುವುದನ್ನು ಹೇಳಿದರು ನಾವು ಅವರ ಭಕ್ತಿ ಭಾವದಿಂದ ಪಾದಪೂಜೆಯನ್ನು ಮಾಡಿದೆವು .ನಮ್ಮ ಮನೆಯಲ್ಲಿ ಇಬ್ಬರಿಗೆ ಹೊರಗಿನ ಬಾಧೆ ಇತ್ತು. ಒಬ್ಬ ನಮ್ಮ ಮಗ ಪ್ರಕಾಶ, ಮತ್ತೊಬ್ಬಳು ನನ್ನ ತಮ್ಮನ ಹೆಂಡತಿ ಆ ಭಾದೆಯನ್ನು ಸ್ವಾಮಿಯವರು ತೆಗೆದು ಹಾಕಿದರು. ಆ ವೇಳೆಯಲ್ಲಿ ನಮಗೆ ತುಂಬಾ ಕಷ್ಟವಾಗುತ್ತಿತ್ತು ಪದೇ ಪದೇ ನಮ್ಮ ಮನೆಯಲ್ಲಿ ಕಳ್ಳತನ ವಾಗುತ್ತಿತ್ತು ಸ್ವಾಮಿಯವರು ಬಂದು ಹೋದ ಮೇಲೆ ನಮ್ಮ ಜೀವನ ಸುರಳೀತ ನಡೆಯಿತು ಕಳುವಾಗುವುದು ಬಂದಾಯ್ತು ನಾವು ಸ್ವಾಮಿಗಳ ಪಾದಪೂಜೆ ಮಾಡಿದ ತೀರ್ಥವನ್ನು ಎಲ್ಲಿ ಹಾಕಿದ್ದೆವೋಅಲ್ಲಿ ಒಂದು ಔದುಂಬರ ಗಿಡ ಹುಟ್ಟಿಕೊಂಡಿತು. ಅದಕ್ಕೆ ನಾವು ಕಟ್ಟೆ ಕಟ್ಟಿದೆವು. ಈಗಲೂ ಅದು ನಮಗೆ ಒಂದು ಸವಿನೆನಪು. ಈಗ ಅದು ತುಂಬಾ ದೊಡ್ಡ ಮರವಾಗಿ ದೆ.ಅದನ್ನು ನೋಡಿದರೆ ನಮಗೆಈಗಲೂ ಸ್ವಾಮಿಯವರ ಆಶೀರ್ವಾದದ ಅನುಭವವಾಗುತ್ತದೆ. ಸಜ್ಜನಗಡ ದಿಂದಲೂ ಅವರು ನಮಗೆ ಪ್ರಸಾದವನ್ನು ಕಳಿಸುತ್ತಿದ್ದರು
ನಮ್ಮಂತ ಸಣ್ಣವರನ್ನು ಮರೆಯದೆ ಆಶೀರ್ವಾದ ಕೊಡುವ ಅತ್ಯುಚ್ಚ ಪದದಲ್ಲಿರುವ ಭಕ್ತವತ್ಸಲ ವಿಶಾಲ ಹೃದಯ, ಸದ್ಗುರು ಮಹಾಪುರುಷರ ಥೋರ ವಿಭೂತಿಯ ಜಯ  ಜಯಕಾರ ಮಾಡಿ ಅವರ ಆಶೀರ್ವಾದ ಪಡೆಯಲು ಎಲ್ಲರಿಗೂ ಅವಕಾಶ ಸಿಕ್ಕಲಿ ಅಂತ ಹಾರೈಸುತ್ತೇನೆ.
 
ಅಲ್ಪಮತಿಗೆ ತಿಳಿದಂತೆ ಅನುವಾದಿಸಿದ್ದೇನೆ ತಾವು ದೊಡ್ಡ ಮನಸ್ಸಿನಿಂದ ತಪ್ಪಿದ್ದರೆ ತಿದ್ದಿ ಓದು ವಿರಾಗಿ ನಂಬಿದ್ದೇನೆ
 
❀~●~❁~●~❀~●~❁
 
ಸಂತರ ಸಹವಾಸದಮಹಿಮೆ
ನಿವೇದ ಕರು : ಶ್ರೀಮತಿ ಭಿಡೆ ಮಾಮಿ(ಅತ್ತೆ).
 
ವಾಸ್ತವಿಕವಾಗಿ ನೋಡಿದರೆ ಪಾದಪೂಜೆ ಅಂದರೆ ಏನು ಅನ್ನುವುದು  ಗೊತ್ತಿರಲಿಲ್ಲದಿದ್ದರೂ ಈ ನನ್ನ ಕೈಯಲ್ಲಿ ನಡೆದ ಪಾದಪೂಜೆ.
 
1959ರಲ್ಲಿ ಭಾಗ್ಯ ನಗರಿಗೆ ಸ್ವಾಮಿಯವರ ಆಗಮನವಾಯಿತು. ಆಗ ಮನೆಮನೆಗೆ ಸ್ವಾಮಿಯವರ ಪಾದಪೂಜೆ ನಡೆಯುತ್ತಿತ್ತು ನಾನೂ ನನ್ನ, ನೆಂಟರ ಸಂಗಡ ದರ್ಶನಕ್ಕೆ ಹೋಗುತ್ತಿದ್ದೆ ಪ್ರಸಾದ ತೆಗೆದುಕೊಂಡು ಬರುತ್ತಿದ್ದೆ ಇದೆಲ್ಲ ನೋಡಿದಮೇಲೆ ನನಗೂ ಸ್ವಾಮಿಯವರ ಪಾದಪೂಜೆ ಮಾಡುವ ಇಚ್ಛೆಯಾಯಿತು ಆದರೆ ಮನಸ್ಸಿಗೆ ಅನಿಸಿತು ನನ್ನ ಯಜಮಾನರಿಗೆ ಹೇಳುವುದು ಹೇಗೆ. ಆ ಯೋಗವು ಕೂಡಿಬಂದಿತ್ತು ಹಾಲಿನಲ್ಲಿ ಸಕ್ಕರೆ ಬಿದ್ದಂತೆ ಆಯಿತು. ಅದೇನಂದರೆ ನನ್ನ ಯಜಮಾನರು ಮತ್ತು ಸ್ವಾಮಿಯವರು ವರ್ಗ ಮಿತ್ರ ರೆಂಬುದು ತಿಳಿಯಿತು ಅವರಿಬ್ಬರೂ ಎದುರಾಎದುರು ಬಂದನಂತರ ಸ್ವಾಮಿಯವರು ಅವರ ಧ್ವನಿಯಿಂದಲೇ ಅವರನ್ನು ಗುರುತಿಸಿಬಿಟ್ಟರು.
 
 
ನಂತರ ನನ್ನ ಅತ್ತಿಗೆ  ಪಾರ್ವತಿಬಾಯಿ ಗೋಗಟೆ ಇವರ ಮನೆಯಲ್ಲಿ ನಾವೆಲ್ಲರೂ ಸೇರಿ ಪಾದಪೂಜೆ ಮಾಡಿದೆವು ಆ ವೇಳೆಯಲ್ಲಿ ನಮ್ಮ ಯಜಮಾನರು ಸ್ವಾಮಿಯವರಿಗೆ ಹೇಳಿದರು ನಮಗೆ ಗಂಡು ಮಕ್ಕಳಿಲ್ಲ. ಅದಕ್ಕೆ ಸ್ವಾಮಿಯವರು ಹೇಳಿದರು ನಿನ್ನ ಹೆಂಡತಿ ಹಿಂದಿನ ಜನ್ಮದಲ್ಲಿ ಊಟಕ್ಕೆ ಕುಳಿತ ಬ್ರಾಹ್ಮಣನನ್ನು ಎಬ್ಬಿಸಿದ್ದಾಳೆ. ಆದುದರಿಂದ ನಿಮಗೆ ಗಂಡು ಮಕ್ಕಳು ಆಗುವದಿಲ್ಲ ಆದರೆ ನಿಮ್ಮ ಮಗಳಿಗೆ ಮಗ ಹುಟ್ಟುತ್ತಾನೆ. ಆದರೂ ಸಹಿತ ನೀವು ಗಾಣಗಾಪುರಕ್ಕೆ ಹೋಗಿ ಮಧುಕರೀಭಿಕ್ಷೆಯನ್ನು ಹಾಕಿ. ಅದರಂತೆ ನಾವು ಮಾಡಿದೆವು ನಮ್ಮ ಮಗಳಿಗೆ ಗಂಡು-ಹೆಣ್ಣು ಮಕ್ಕಳು ಹುಟ್ಟಿ ಅವರು ಸುಖವಾಗಿದ್ದಾರೆ.
 
ಮತ್ತೊಂದು ವಿಶೇಷವೆಂದರೆ ನಮ್ಮ ಮನೆಯಲ್ಲಿ ,ನಾವು, ದೇವ ದೀಪಾವ
ಲಿ ಹಬ್ಬವನ್ನು, ಮಾಡುವುದಿಲ್ಲ ಎನ್ನುವುದನ್ನು ಅವರು ಗುರುತಿಸಿದರು. ಹಬ್ಬದಲ್ಲಿ ನಮ್ಮ ಅತ್ತೆಯವರ ದೊಡ್ಡ ಮಗನು ತೀರಿಕೊಂಡಿದ್ದರು ಅದರಿಂದ ಬೇಸರವಾಗಿ ನಮ್ಮ ಅತ್ತೆಯವರು ಹಬ್ಬ ಮಾಡುವುದನ್ನು ನಿಲ್ಲಿಸಿದ್ದರು ಆಗ ಅವರು ಇನ್ನುಮುಂದೆ ಹಬ್ಬವನ್ನು ಮಾಡಿ ಅಂತ ಹೇಳಿದರು.
ಇದನ್ನೆಲ್ಲ ಹೇಳುವ ವಿಶೇಷ ಕಾರಣವೆಂದರೆ ಸಾಧು-ಸಂತರ ಸಾಮರ್ಥ್ಯ ತುಂಬಾ ಇರುತ್ತದೆ ಎನ್ನುವ ಅನುಭವ ನಮಗಾಗಿ ನಮ್ಮ ಜೀವನವು ಸಾರ್ಥಕವಾಯಿತು ಇಂಥ ಸಂತರ ದರ್ಶನವಾಯಿತು ಜೀವನ ಕೃತಕೃತ್ಯ ವಾಯಿತು ಅಂತ ಅನಿಸಿತು.
ನನಗೆ ಚಿಕ್ಕವಳಿದ್ದಾಗಿನಿಂದಲೇ ಗಾಣಗಾಪುರದ ದತ್ತಾತ್ರೇಯನ ಮೇಲೆ ತುಂಬಾ ಶ್ರದ್ಧೆ ಇತ್ತು ನಾನು ಅಲ್ಲಿಗೆ ಹೋಗುತ್ತಿದ್ದೆ ಅದೇ ರೀತಿ ಸ್ವಾಮಿಯವರ ಶಾಂತಮೂರ್ತಿ  ನೋಡುತ್ತಿದ್ದರೆ ನನಗೆ ಪ್ರತ್ಯಕ್ಷ ದತ್ತನನ್ನು, ನೋಡಿದಂತೆ ಅನಿಸಿತು. ಪಾದ ಪೂಜೆ ಮಾಡುವಾಗ ಪ್ರತ್ಯಕ್ಷ ದತ್ತನ ಪೂಜೆ ಮಾಡುತ್ತಿದ್ದಂತೆ ಅನಿಸಿತು ನಮ್ಮಿಬ್ಬರಿಗೂ ಜೀವನ ಕೃತಕೃತ್ಯ ವಾದಂತೆ ಅನಿಸಿತು. ಶಾಂತ ವಿಚಾರವಿಟ್ಟು,ಷಡ್ರಿಪುವನ್ನು ಜಯಿಸುವ ದಾರಿಯಲ್ಲಿ ಪ್ರಯತ್ನಪಟ್ಟು, ಜೀವನದ ಧನ್ಯತೆಯನ್ನು ಅನುಭವಿಸುತ್ತಿದ್ದೇವೆ. 
 
ಈ ಅಲ್ಪ ಮತಿ ತನಗೆ ತಿಳಿದಂತೆ ಅನುವಾದಿಸಿದ್ದಾಳೆ ತಪ್ಪಿದ್ದರೆ ತಿದ್ದಿ ಓದು ವಿರಾಗಿ ನಂಬಿದ್ದೇನೆ.
ಅಥವಾ ಮರಾಠಿಯಿಂದ ಕನ್ನಡಕ್ಕೆ ಸುಂದರವಾಗಿ ಭಾಷಾಂತರಿಸಲು ಸಾಧ್ಯವಿದ್ದ ವರು ಇದ್ದರೆ ಮುಂದೆ ಬರಬಹುದು. ನನ್ನ ದೂರವಾಣಿ ನಂ ಎಡ್ಮಿನ ಹತ್ತಿರ ಇದೆ. ಸದ್ಗುರುವೇ ನಮ:
 
❀~●~❁~●~❀~●~❁
 
ಸಾಕ್ಷಾತ್ಕಾರ               
ನಿವೇದಕರು. ಸರೋಜಿನಿ ಆಪಟೆ 
 
ಜನರ ಉದ್ಧಾರಕ್ಕಾಗಿ ಸಂತರ ಅವತಾರವಾಗುತ್ತದೆ. ನಮ್ಮ ದೇಶದಲ್ಲಿ ತುಂಬಾ ಸಂತ ಮಹಾತ್ಮರು ಆಗಿಹೋಗಿದ್ದಾರೆ. ಅದರಲ್ಲಿಯೇ ಭಗವಾನ್ ಶ್ರೀಧರ ಸ್ವಾಮಿ ಮಹಾರಾಜ್ ಒಬ್ಬ ಮಹಾನ್ ಸಂತರು. ಮತ್ತು ದತ್ತ ಅವತಾರಿ ಪುರುಷರು.
1959ನೇಇಸವಿಯಲ್ಲಿ, ಸ್ವಾಮಿಯವರು ಹೈದರಾಬಾದಿಗೆ ಬಂದಿದ್ದರು. ಆಗ ಶ್ರೀ ದತ್ತ ಮತ್ತು ಶ್ರೀಧರ ಸ್ವಾಮಿ ಅವರ ಜಯಂತಿ ಉತ್ಸವ ತುಂಬಾ ವಿಜ್ರಂಭಣೆಯಿಂದ ತುಳಜಾಭವನದಲ್ಲಿ ನೆರವೇರಿತು. ನಾನು ಎಂಟು ದಿವಸ ಈ ಉತ್ಸವದ ಆನಂದವನ್ನು ಮನದುಂಬಿ ಅನುಭವಿಸಿದೆ. ಡಿಸೆಂಬರ್ 18ರಂದು ನಾನು ನನ್ನ ತಂದೆ ತಾಯಿಯವರಿಗೆ ಸ್ವಾಮಿಯವರ ಅನುಗ್ರಹ ಸಿಕ್ಕಿತು. ಸ್ವಾಮಿಯವರು ಅತ್ಯಂತ ದಯಾಳು, ಕೃಪಾಳು, ಭಕ್ತವತ್ಸಲ, ಶಾಂತ, ಸಹನಶೀಲರಾಗಿದ್ದರು.
ಅತ್ಯಂತ ಮೃದು ಮಧುರ ವಾಣಿಯಲ್ಲಿ ಅವರ ಪ್ರವಚನ ಇರುತ್ತಿತ್ತು. ಜನರ ಮನೋಕಾಮನ ಪೂರ್ತಿ ಮಾಡುವ ದುಃಖವನ್ನು ದೂರ ಹರಿಸುವ ಜನರಿಗೆ ಧರ್ಮಮಾರ್ಗದಲ್ಲಿ ನಡೆಯುವ ಸೂಚನೆ ಅವರ ತಳಮಳದ ಅಂತಃಕರಣ ದಿಂದ ಹೊರಡುವ ಶಬ್ದ ವನ್ನು, ಕೇಳುತ್ತಿದ್ದರೆ ನಾವು ತಲ್ಲೀನರಾಗಿ ಹೋಗುತ್ತಿದ್ದೆವು.
ಜನರ ಸುಖ-ದುಃಖವನ್ನು ಆಸ್ಥೆಯಿಂದ ಕೇಳಿ ಅದರ ಪರಿಹಾರ ಹೇಳುವುದು, ಅವರ ನಿತ್ಯದ ವಿಷಯವಾಗಿತ್ತು.
 
ಸ್ವಾಮಿಯವರು ಹೈದರಾಬಾದಿಗೆ ಬಂದಾಗ ಅವರನ್ನು ಮನೆಗೆ ಕರೆಯುವ ಪರಿಸ್ಥಿತಿ ನನ್ನದಿಲ್ಲ ವಾಗಿತ್ತು ಅದೊಂದು ಇಚ್ಛೆ ಉಳಿದುಹೋಗಿತ್ತು. ಆದರೆ ಆಮೇಲೆ ಅವರ ದೃಷ್ಟಾಂತವಾಗಿ, ನಾನು ಬೆಳಗಾವಿಗೆ ಹೋಗಿ, ಅವರ ಸಾನಿಧ್ಯದ ಆನಂದದ ಅನುಭವ ಪಡೆದೆ.
 
ಸ್ವಾಮಿಯವರು ಸಾವಿರ ಒಂಬೈನೂರ 1973 ನೇ ಇಸವಿಯಲ್ಲಿ ಸಮಾಧಿ ಪಡೆದರು. ಅದರ ನಂತರ ನಡೆದ ಅನುಭವ ವೆಂದರೆ, ಸ್ವಪ್ನದಲ್ಲಿ ಸದ್ಗುರು ಮಾವುಲಿ ನಮ್ಮ ಮನೆಯ ಕಾಲನಿಯಲ್ಲಿ ನನ್ನನ್ನು ಹುಡುಕುತ್ತಾ ಜೀಪಿನಲ್ಲಿ ತಿರುಗಾಡುತ್ತಿದ್ದಾರೆ. ನಮ್ಮ ಪಕ್ಕದ ಮನೆಯಲ್ಲಿ ವಿಚಾರಿಸುತ್ತಿದ್ದಾರೆ ಅವರೂ ಹೇಳುತ್ತಿದ್ದಾರೆ ಹೌದು ಇದೆ ಸರೋಜಳ ಮನೆ ಅಂತ ತೋರಿಸಿದರು. ಸ್ವಾಮಿಯವರು ನಮ್ಮ ಮನೆಗೆ ಬಂದರು ನಾನು ಅವರ ಕಾಲಮೇಲೆ ತಲೆಯಿಟ್ಟು, ನಮಸ್ಕರಿಸಿದೆ. ಅವರು ದೇವರ ಕೋಣೆಗೆ ಹೋಗಿ ದೇವರ ಕಪಾಟಿನ ಬಾಗಿಲು ತೆಗೆದರು ಮತ್ತು ಆನಂದದಿಂದ ಕುಣಿಯತೊಡಗಿದರು. ನಾವು ಕೇಳಿದೆವು ಸ್ವಾಮಿ ನೀವು ಏಕೆ ಕುಣಿಯುತ್ತಿದ್ದೀರಿ. ಅವರು ಹೇಳಿದರು ಸುಂದರವಾದ ಪೂಜೆ ನೋಡಿ ನನಗೆ ತುಂಬಾ ಆನಂದವಾಗಿದೆ.
ಅಷ್ಟರ ನಂತರ ಸರಿಯಾಗಿ ನಾಲ್ಕು ತಿಂಗಳ ನಂತರ ಸಚ್ಚಿದಾನಂದ ಸ್ವಾಮಿಗಳು ನಮ್ಮ ಮನೆಯ ಎಡ್ರೆಸ್ಸನ್ನು ಕೇಳುತ್ತಾ ರಾತ್ರಿ 12 ಗಂಟೆಗೆ ನಮ್ಮ ಮನೆಗೆ ಬಂದರು ನಾವು ಅವರಿಗೆ ಲಕ್ಷ್ಮಣ ಗಿರಿ ಮಠದಲ್ಲಿ ಉಳಿಯುವ ವ್ಯವಸ್ಥೆ ಮಾಡಿದೆವು. ಮರುದಿವಸ ಬೆಳಿಗ್ಗೆ ನಮ್ಮ ಮನೆಯಲ್ಲಿ ಅವರು ಬಂದು ರುದ್ರಾಭಿಷೇಕದ ಪೂಜೆ ಆಯಿತು ಅವರ ಲಕ್ಷ್ಯವೂ ನಮ್ಮ ದೇವರ ಕಡೆ ಇತ್ತು ಅವರು ಸ್ವಾಮಿಯವರ ಪಾದುಕೆಯನ್ನು ನೋಡುತ್ತಿದ್ದರು ಆಗ ಪಾದುಕೆಯ ಮೇಲಿದ್ದ ಎರಡು ಹೂವು ಕೆಳಗೆ ಬಿತ್ತು ಅದನ್ನು ಅವರು ನಮಗೆ ತೋರಿಸಿ,  ಈ ದಿವಸ ಗುರುಗಳಿಗೆ ತುಂಬಾ ಆನಂದವಾಗಿದ್ದರ ಸಂಕೇತ ಇದು ಅಂತ ಹೇಳಿದರು 
ಆ ದಿವಸ ಆರತಿ ಮಾಡುತ್ತಿದ್ದಾಗ ನನಗೆ ಸಚ್ಚಿದಾನಂದ ಸ್ವಾಮಿಯವರ ಜಾಗದಲ್ಲಿ ಸ್ವಾಮಿಯವರೇ ಇದ್ದಂತೆ ಭಾಸವಾಯಿತು ನನ್ನ ಗಂಟಲು ಕಟ್ಟಿತ್ತು ಕಣ್ಣಲ್ಲಿ ನೀರು ಬಂದಿತ್ತು. ಆರತಿ ಮಾಡಲಿಕ್ಕೆ ಆಗಲಿಲ್ಲ ಸ್ವಾಮಿಯವರು ನನ್ನ ಉಳಿದ ಆಸೆಯನ್ನು ಈ ರೀತಿ ಪೂರ್ಣಮಾಡಿಕೊಂಡರು 
ಸಚ್ಚಿದಾನಂದ ಸ್ವಾಮಿಯವರು ನಮ್ಮ ಮನೆಯಲ್ಲಿ ಎಲ್ಲಾ ಕಡೆ ಓಡಾಡಿ ನಮಗೆಲ್ಲ ಆಶೀರ್ವಾದ ಕೊಟ್ಟರು. ಹೀಗಿದ್ದಾರೆ ನಮ್ಮ ಗುರು ಮಾವುಲಿ.
ಸದ್ಗುರುವೇ ನಮ:
 
 
❀~●~❁~●~❀~●~❁
 
ಬಾಲ್ಯದ ನೆನಪು
 
ನಿವೇದಕರು : ಶ್ರೀಮತಿ ಛೋಟುತಾಯಿ ಭಗೋಜಿ
 
ಶ್ರಿಧರ ನನ್ನ ಬಾಲಮಿತ್ರ!ನಾನು ಅವನು ಐದನೇ ಕ್ಲಾಸಿನಲ್ಲಿ, ಒಂದೇ ವರ್ಗದಲ್ಲಿ ವಿವೇಕ ವರ್ಧಿನಿ ಶಾಲೆಯಲ್ಲಿ ಇದ್ದೆವು.ನಮ್ಮಕ್ಲಾಸಿನಲ್ಲಿ ,ಮೆಹಂದಳೇಕರ ,ಶೌಚೆ,ಗೋದಾವರಿ,ವಿಜಯಾಮೊಹೋಳಕರ,ಕ್ರುಷ್ಣಾಬಾಯಿ , ಶರ್ಮಾ, ಮನುಗೋಗಟೆ,ಗಾಡ್ಗೀಳ್,ಭಿಡೆ.ಹೀಗೆಲ್ಲ ಗಂಡು,ಹೆಣ್ಣುಮಕ್ಕಳು ಒಟ್ಟು ಇತ್ತು.ಶ್ರೀಧರನ ನೆನಪು ತೆಗೆದ ತಕ್ಷಣ,ಇಡೀವರ್ಗದ ಚಿತ್ರ,ನನ್ನ  ಕಣ್ಣಮುಂದೆ ಬಂತು.ಸಯೀಬಾಯಿ ಪ್ರಮೀಳಾ ಬಾಯಿ ಇವರು ನಮ್ಮ ಶಿಕ್ಷಕಿಯರು.ನಾಶಿಕಕರ,ನಾಗರಸ, ಅವರು ನಮ್ಮಶಿಕ್ಷಕರು.ಶ್ರೀಧರಮತ್ತು ನಾನು ಒಟ್ಟು ಕುಳಿತು ಕೊಳ್ಳುತ್ತಿದ್ದೆವು .ಒಟ್ಟು ತಿಂಡಿ ತಿನ್ನುತ್ತಿದ್ದೆವು.
ಯಾವುದೇ ತಿಂಡಿ ಇದ್ದರೂ ಅವನು, ನನ್ನನ್ನುಬಿಟ್ಟು ತಿನ್ನುತ್ತಿರಲಿಲ್ಲವಾಗಿತ್ತು.ಅವನಮನೆಯು ದೂರದ ಹುಸೇನಿ ಆಲಂ ನಲ್ಲಿ ಒಂದು ಮಠವಿದೆ.ಅಲ್ಲಿಯ ಒಂದು ಗಲ್ಲಿಯಲ್ಲಿತ್ತು. ಅಲ್ಲಿ ಎಲ್ಲಾ ಮುಸ್ಲೀಂ ವಸತಿಇತ್ತು.ಸರ್ವಸಾಮಾನ್ಯವಾಗಿ ಹೆಣ್ಣುಮಕ್ಕಳು ಸೇತುವೆ ದಾಟಿ ಆಕಡೆ ಒಬ್ಬರು ಇಬ್ಬರು ಹೋಗುವಂತಿರಲಿಲ್ಲ. 
 
1960ನೇ ಇಸವಿ! ಸುಮಾರು 40ವರ್ಷಕಳೆದಿತ್ತು .ಮುಗ್ಧ ಬಾಲ್ಯಯಾವಾಗಲೋ ಕಳೆದುಹೋಗಿತ್ತು ಶಾಲೆಯ, ಗೆಳೆಯ ಗೆಳತಿಯರು ಎಲ್ಲೆಲ್ಲೋ ವಿಂಗಡಿಸಿ ಹೋಗಿದ್ದರು.ಸುಖದು:ಖವನ್ನು ಸಹಿಸಿ ಮನಸ್ಸು ಪರಿಪಕ್ವ ವಾಗಿತ್ತು. ದೈನಂದಿನ ವ್ಯವಹಾರದಲ್ಲಿ ಬರುವತೊಂದರೆ ಅದರಿಂದ ಪಾರಾಗುವ ಮಾರ್ಗ ಹುಡುಕುವುದು ,ಹೀಗೆ ದಿನಚರಿ ನಡೆದಿತ್ತು.ಆದರೂ ಬಾಲ್ಯದ ನೆನಪು ಮಾತ್ರ ಅಳಿಸಿರಲಿಲ್ಲ.ಇದೇ ವೇಳೆಯಲ್ಲಿ ಯಾರೋ ಸಜ್ಜನಗಡದ ಶ್ರೀಧರ ಸ್ವಾಮಿ ಎನ್ನುವವರು ಬಂದಿದ್ದಾರೆ, ಚೆನ್ನಾಗಿ ಪ್ರವಚನ ಮಾಡುತ್ತಾರೆ, ಅಂತ ಕೇಳಿ ಬಂತು .ನಾನೂ ಪ್ರವಚನ ಕೇಳಲು ಹೋದೆ.ಮುಖ ನೋಡಿ ಯಾರೋಪರಿಚಯದವರುಇವರು ಅಂತ ಅನಿಸಿತು.ಜನಸಂದಣಿಯಲ್ಲಿ ಮುಂದೆ ನುಗ್ಗಿ ಹತ್ತಿರ ಹೋದೆ ತುಂಬಾ ಪರಿಚಯದವರು ಯಾರಿರಬಹುದು ಇವರು ಎಂದು ನಾನು ವಿಚಾರಮಗ್ನಳಾಗಿದ್ದಾಗಲೇ,ಅರೇನೀನುಇಲ್ಲಿಎಲ್ಲಿ,ಆರಾಮಿದ್ದೀಯಾ?ಹ್ಯಾಗ ನಡೆದಿದೆ ಅಂತ ಪ್ರಶ್ನೆ ಗಳ ಮೇಲೆ ಪ್ರಶ್ನೆ ಕೇಳಿಬಂತು ಸ್ವಾಮಿಗಳುನನ್ನನ್ನು ತತ್ಕ್ಷಣ ಗುರುತಿಸಿದ್ದರು
ತುಂಬಾ ಆನಂದದಿಂದ ನನ್ನನ್ನು ಪ್ರಶ್ನಿಸುತ್ತಿದ್ದರು ನನ್ನ ಬಾಲಮಿತ್ರ ದೇಗಲೂರಕರ ಈಗ, ಶ್ರೀಧರ ಸ್ವಾಮಿ ಯಾಗಿ,ನನ್ನ ಎದುರು ನಿಂತಿದ್ದರು.ಸಾವಿರಾರು ಜನರು ಅವರ ಹಿಂದೆ ಮುಂದೆ ಇರುತ್ತಿದ್ದರು.ಮನೆಗೆ ಕರೆಯುತ್ತಿದ್ದರು , ಪೂಜೆ ಮಾಡುತ್ತಿದ್ದರು.ಅನುಗ್ರಹ ಪಡೆಯುತ್ತಿದ್ದರು.ಅವರ ಮ್ರುದು ಮಧುರ ಮಾತನ್ನು ಕೇಳಲಿಕ್ಕೆ ಹಾತೊರೆಯುತ್ತಿದ್ದರು .ಅವರ ಸಿಹಿಯಾದ ಮಾತು ,ಸದಾನಗುಮುಖ, ಮೈಮೇಲೆ ಭಗವಾ ವಸ್ತ್ರ.ಬಹುಜನಪ್ರಿಯರಾಗಿದ್ದರೂ ಅಲಿಪ್ತ ಸ್ಥಿತಿ ಯಲ್ಲಿರುತ್ತಿದ್ದರು.
 
 
ಸೋಮಾಜಿಗುಡದ ಬಂಗಲೆಯಲ್ಲಿ ತುಂಬಾ ಜನಸಂದಣಿಯಲ್ಲಿ ಒಮ್ಮೆ ನನಗೆ ಒಳಗೆ ಬಿಡುತ್ತಿರಲಿಲ್ಲ.ಯಾರನ್ನ ಅಡ್ಡಸ್ತಿದೀರಿ,ಅವಳು ನನ್ನ ತಂಗಿ ಅವಳಿಗೆ ಒಳಗೆ ಬಿಡಿ ಅಂತ ಹೇಳಿದರು ಇಷ್ಟು ದೊಡ್ಡ ವಿಭೂತಿ ನನಗೆ ತಂಗಿ ಅಂದದ್ದನ್ನು ಕೇಳಿ ಮನಸ್ಸು ತ್ರುಪ್ತಿಯಿಂದ ಗದ್ಗದಿತವಾಯಿತು .
 
ನಾನು ದಿನಾಲೂ ಅವರ ಪ್ರವಚನಕ್ಕೆ ಹೋಗುತ್ತಿದ್ದೆ.ಅವರುಸೋಮಾಜಿಗುಡದ ಧುಂಡಿರಾಜರ ಬಂಗಲೆಯಲ್ಲಿ ,ಇರುತ್ತಿದ್ದಾಗ ನಮ್ಮ ಕೈಮೇಲೆ ಪ್ರಸಾದ ವನ್ನು ಇಡುತ್ತಿದ್ದರು.ಹಾಲುಅನ್ನತುಂಬಾ ಮಧುರವಾಗಿರುತ್ತಿತ್ತು .ಕೈಮೇಲೇ ಅವರು ಕರತಲಭಿಕ್ಷೆ ತೆಗೆದುಕೊಳ್ಳುತ್ತಿದ್ದರು.ಊಟ ತಿಂಡಿಯಕಡೆ ಅವರ ಲಕ್ಷ್ಯವೇಇಲ್ಲವಾಗಿತ್ತು .ಕೆಲವೇ ತುತ್ತು ಆಹಾರ ತೆಗೆದುಕೊಳ್ಳುತ್ತಿದ್ದರು.ನನಗೆಪ್ರಸಾದವನ್ನು ಕೊಟ್ಟೇ ಕೊಡುತ್ತಿದ್ದರು 
 
ನನಗೆ ಅನಿಸಿತು ಸ್ವಾಮಿಗಳನ್ನು ಮನೆಗೆ ಕರೆಯಬೇಕು.ನಾನು ಆಮಂತ್ರಣಕೊಡುವಷ್ಟರಲ್ಲಿ , ನಾನು ನಿನ್ನ ಮನೆಗೆ ಊಟಕ್ಕೆ ಬರುತ್ತೇನೆ ಅಂದರು.
ನಾವು ಎಲ್ಲಾ ತಯಾರಿ ಮಾಡಿ ದಾರಿ ನೋಡುವಷ್ಟರಲ್ಲಿ ,ಜಯಜಯರಘುವೀರ ಸಮರ್ಥದ ಘೋಷಣೆಮಾಡುತ್ತಾಮನೆಯಹತ್ತಿರ ಬಂದರು ನನ್ನ ಸೊಸೆಯು ಆರತಿ ಎತ್ತಿ ದಳು.ಒಳಗೆ ಕರೆದು ಮಣೆಯ ಮೇಲೆ ಕೂಡ್ರಿಸಿದೆವು. ತಕ್ಷಣ ಅವರದ್ರುಷ್ಟಿ, ತೂಗುಹಾಕಿದ ಲಕ್ಷ್ಮಿಯ ಫೋಟೋದ ಮೇಲೆ ಹೋಯಿತು.ಅರೇ..ಅರೇ ಇದೇನು ಅಂತ ಅವರು ಫೋಟೋ ವನ್ನೂ ಅದರ ಕೆಳಗಡೆ ಇರುವ ಯಂತ್ರವನ್ನೂ ತೆಗೆದರು.ಅದರ ವಿಷಯವಾಗಿ ಹೇಳುವುದೆಂದರೆ ಒಬ್ಬ ಗ್ರಹಸ್ಥರು ನಮ್ಮ ಕಡೆ ಬಂದಿದ್ದರು.ಅವರಿಗ ಏನೋ ಜ್ಞಾನ ವಿದೆಯಂತ ತುಂಬಾ ಜನರು ಅವರ ಸಂಪರ್ಕದಲ್ಲಿ ಇದ್ದರು ಹಾಗೆ ಯೇ ನಮ್ಮದೂ ಪರಿಚಯವಾಗಿ ದಿನೇ ದಿನೇ ಪರಿಚಯ ಹೆಚ್ಚಾಗುತ್ತಾ ಹೆಚ್ಚು ಕಡಿಮೆ ಒಂದು ವರ್ಷ ನಮ್ಮಮನೆಯಲ್ಲಿ ಇಟ್ಟುಕೊಂಡಿದ್ದೆವು .ಅವರೇ ಈ ಫೋಟೋವನ್ನು ಕೊಟ್ಟಿದ್ದರು . ನಮಗೆಲ್ಲರಿಗೂ ಯಂತ್ರವನ್ನು ಮಂತ್ರಿಸಿ ಕೊಟ್ಟಿದ್ದರು.ತ್ರಿಜೂರಿಯ ಬಾಗಿಲು ತೆಗೆದಿಡಿ ಮನೆಯ ಬಾಗಿಲು ತೆಗೆದಿಡಿ ಫೋಟೋ ದ ಹತ್ತಿರದ ಯಂತ್ರಕ್ಕೆ ದುಡ್ಡು ಹಾಕುತ್ತಿರಿ  ಅಂತ ಹೇಳುತ್ತಿದ್ದರು.ಆದುಡ್ಡನ್ನು ಅವರೇ ತೆಗೆದುಕೊಂಡು ಹೋಗುತ್ತಿದ್ದರು .ಆದರೆ ನಮ್ಮ ಆರ್ಥಿಕ ಪರಿಸ್ಥಿತಿಯು ದಿನೇ ದಿನೇ ಹದಗೆಟ್ಟಿತು. ಎಲ್ಲರಿಗೂ ಅವರಮೇಲೆ ಸಂಶಯ ಬಂದಿತ್ತು. ಅವರೂ ಅಲ್ಲಿಂದ ಕಾಲು ಕಿತ್ತಿದ್ದರು .ನಾವು ಏನು ಹೇಳುವುದಕ್ಕಿಂತ ಮೊದಲೇ ಸ್ವಾಮಿ ಯವರುಆಫೋಟೋವನ್ನು ತೆಗಸಿದ್ದರು. ನನ್ನ ಸೊಸೆಯಕೊರಳಿನಲ್ಲಿದ್ದ ತಾಯಿತವನ್ನು ಸ್ವಾಮಿ ಯವರೇ ಎಳೆದು ತೆಗೆದರು.
ಆಗ ನಾವು ನಡೆದ ಎಲ್ಲಾ ಘಟನೆಗಳನ್ನು ಹೇಳಿದೆವು .
ಮತ್ತು  ರಕ್ಷಣೆ ಮಾಡಿರೆಂದು ಕೇಳಿ ಕೊಂಡೆವು .
ನಾವು ಸ್ವಾಮಿಯವರ ಕಾಲಮೇಲೆ ತಲೆ ಇಟ್ಟು ನಮಸ್ಕರಿಸಿದೆವು ನಮ್ಮ ರಕ್ಷಣೆ ಮಾಡಿರೆಂದು ಪ್ರಾರ್ಥಿಸಿದೆವು.ಚಿಂತೆಮಾಡಬೇಡಿ ಎಲ್ಲಾ ಒಳ್ಳೆಯದಾಗುತ್ತದೆ ಅಂತ ಹೇಳಿ ನಮಗೆ ಪೂಜೆಗೆ ಒಂದು ಫೋಟೋವನ್ನು ಕೊಟ್ಟರು ಆದಿವಸದಿಂದ ಪ್ರತಿನಿತ್ಯವೂ ನಾವು ಸ್ವಾಮಿಯವರ ಫೋಟೋ ಪೂಜೆ ಮಾಡುತ್ತಿದ್ದೇವೆ.ಮುಂದೆ ನಮಗೆ ಯಾವುದೇ ಬಗೆಯ ಕಷ್ಟವಾಗಲಿಲ್ಲ.
ಇತ್ತೀಚಿನ  ಕಾಲದಲ್ಲಿ ನಡೆದ ಘಟನೆಯನ್ನು ಹೇಳುವುದೆಂದರೆ ನನಗೆ ಬದ್ರೀನಾರಾಯಣಕ್ಕೆ ಹೋಗುವ ಇಚ್ಛೆ ಯಾಗಿತ್ತುಫೋಟೋದ ಎದುರು ನಿಂತು ಮನ:ಪೂರ್ವಕ ಪ್ರಾರ್ಥನೆ ಮಾಡಿದೆ.ಕಾಲ್ನಡಿಗೆಯಿಂದಹತ್ತುವ ಇಚ್ಛೆ ಇದೆ ಅದಕ್ಕೆ ನಿಮ್ಮ ಕ್ರುಪೆ ಇರಲಿ ಅಂತ ಬೇಡಿಕೊಂಡೆ.ಯಾರಿಗೂ ನಿಜವೆನಿಸಲಾರದು ನನ್ನನ್ನುಹಿಡಿದು ಕೊಂಡು ಯಾರೋ ನಡೆಸಿಕೊಂಡು ಹೋಗುತ್ತಿದ್ದಾರೇನೋ ಅನ್ನುವ ಭಾವನೆ ಯಲ್ಲಿ
ನಿರಾಯಾಸವಾಗಿ ಬದ್ರೀನಾರಾಯಣನ ದರ್ಶನ ಪಡೆದು ಬಂದೆ.
 
ಇಷ್ಟು ದೊಡ್ಡ ವಿಭೂತಿ ನನ್ನ ಆಯುಷ್ಯದಲ್ಲಿಬಂದುನನ್ನ ಕಲ್ಯಾಣ ಮಾಡಿ  ಹೋದರು. ಅವರುದೇಹ ಬಿಟ್ಟು ಹೋದಮೇಲೆ ತುಂಬಾ ಬೇಸರವಾಗಿತ್ತು ಲೀಲಾತಾಯಿ ಕರಾಡದವರು ಸ್ವಾಮಿ ಯವರ ನೆನಪು ಹೇಳು ಅಂತ ನನಗೆ ಕೇಳಿದಾಗ ಕಣ್ಣೀರು ತುಂಬಿಕೊಂಡು ಗದ್ಗಗದಿತ ಸ್ವರದಲ್ಲಿ ಸ್ವಾನುಭವದ ಕಥನ ಮಾಡಿದೆನು. 
ಸ್ವಾಮಿ ಯವರಕೀರ್ತಿಧ್ವ ಜವು,ದಿಗ್ ದಿಗಂತದಲ್ಲಿ ಹಾರಾಡಲಿ.ಅನೇಕ ಜನರಿಗೆ ಅದರ ಲಾಭವಾಗಲಿ ಅನ್ನುವುದು ಸದ್ಗುರು ಚರಣದಲ್ಲಿ ನನ್ನನಮ್ರ ಪ್ರಾರ್ಥನೆ .
 
❀~●~❁~●~❀~●~❁
 
ಭಗವಾನ್ ಶ್ರೀಧರ ಸ್ವಾಮಿಯವರ ದಿವ್ಯ ನೆನಪುಗಳು
 
ನಿವೇದಕರು–ಶ್ರೀಮತಿ ಲಕ್ಷ್ಮೀಬಾಯಿವಿಂಝಣೇಕರ್ ಬೆಳಗಾವಿ
 
ನಮ್ಮ ಗುರು ಮಾವುಲಿ ಎರಡು ವರ್ಷದ ನಂತರ ಏಕಾಂತದಿಂದ ಹೊರಗೆ ಬಂದು ದರ್ಶನ ಕೊಡುತ್ತಾರೆ ಅಂತ ಕೇಳಿದ ತಕ್ಷಣ ಜೀವ ವ್ಯಾಕುಲಗೊಂಡು ಮನಸ್ಸು ಕಾತರಿಸಿ, ಯಾವಾಗ ಅವರನ್ನು ದರ್ಶನ ಮಾಡುತ್ತೇವೆ ಅನ್ನುವ ಉತ್ಕಂಠತೆ ಯಿಂದ ನಾವು ವರದಹಳ್ಳಿಗೆ ಬಂದು ಮುಟ್ಟಿದೆವು ಸ್ವಾಮಿಯವರು ಗುರುವಾರ ಹೊರಗೆ ಬಂದು ದರ್ಶನ ಕೊಡುವವರು ಇದ್ದರು. ನಾವು ಮಂಗಳವಾರ ಬಂದಿತ್ತು. ವರದಪುರದ ದೇವಿಯ ದೇವಸ್ಥಾನದಲ್ಲಿ ನಮಗೆ ಉಳಿಯಲು ವ್ಯವಸ್ಥೆ ಮಾಡಿದ್ದರು. ಆದರೆ ನಮಗೆ ಒಂದೇ ಒಂದು ಧ್ಯಾಸ ಆಗಿತ್ತು, ಸ್ವಾಮಿಗಳ ದರ್ಶನದ್ದು. ಊಟ-ತಿಂಡಿ ತುಂಬಾ ಚೆನ್ನಾಗಿತ್ತು. ಆದರೂ ನಮ್ಮ ಲಕ್ಷ್ಯವು ಸ್ವಾಮಿಯವರ ದರುಶನದಕಡೇಗೇ ಇತ್ತು. ದೇವಸ್ಥಾನದ ಹತ್ತಿರದ ವಾತಾವರಣ ತುಂಬಾ ಸುಂದರವಾಗಿತ್ತು. ಪಕ್ಕದ ಕೆರೆ, ಮೇಲಿಂದ ಕೆಳಗೆ ಬೀಳುತ್ತಿದ್ದ ನೀರಿನ ಝರೆ, ಸುತ್ತಮುತ್ತಲು ಹಸಿರು ತುಂಬಿದ ಮರಗಿಡ, ರಮಣೀಯವಾಗಿತ್ತು. ಅಲ್ಲಿಯ ನಿಸರ್ಗ ನಿಜವಾಗಲೂ ಅವರ್ಣನೀಯ ವಾಗಿತ್ತು. ಆದರೂ ನಮ್ಮ ಮನಸ್ಸು ಒಂದೇ ಕಡೆ ತವಕದಿಂದ ಕಾಯುತ್ತಿತ್ತು. ಗುರುವಾರ ಬರುವ ದಾರಿಯ ಪ್ರತೀಕ್ಷೆ ನಮ್ಮದಾಗಿತ್ತು. ಬೇರೆ ಏನು ಸೂಚಿಸುತ್ತಲೇ ಇರಲಿಲ್ಲ. ನಮ್ಮ ಪ್ರೇಮಮಯಿ ಗುರುವಿನ ಮುಖವನ್ನು ಯಾವಾಗ ನೋಡುವುದು ಅನಿಸಿತ್ತು. ಮನಸ್ಸಿನ ವ್ಯಾಕುಲತೆ ಉತ್ಕಂಠತೆ ಕಡಿಮೆಯಾಗುತ್ತಲೇ ಇರಲಿಲ್ಲ. ನಮ್ಮ ಗುರುಗಳ ದರ್ಶನವೇ ನಿಜವಾದ ಸೌಂದರ್ಯ ಅನಿಸುತ್ತಿತ್ತು. ಅವರ ದರ್ಶನಕ್ಕಾಗಿ ನಾವು ಉತ್ಸುಕರಾಗಿತ್ತು.
 
ಕೊನೆಗೂ ಆ ವೇಳೆ ಬಂತು ಗುರುವಾರ ಬೆಳಗಿನ ಜಾವ ನಾವು ಹತ್ತಿರ ಹೋಗಿ ಶ್ರೀಧರ ತೀರ್ಥದ ಹತ್ತಿರ ಸ್ವಾಮಿಯವರ ದಾರಿ ನೋಡುತ್ತಾ ನಿಂತೆವು. ನಗುಮುಖದಿಂದ, ವರದ ಹಸ್ತವನ್ನು  ನೀಡುತ್ತಾ,  ಶಿಖರ ಕುಟಯಿಂದ ಶ್ರೀಧರ ತೀರ್ಥಕ್ಕೆ ಗುರು ಮಾವುಲಿ ಪ್ರಕಟ ರಾದರು ನಮ್ಮ ಆನಂದಕ್ಕೆ ಪಾರವೇ ಇರಲಿಲ್ಲ ಅದೊಂದು ದಿವ್ಯ ಅನುಭವವಾಗಿತ್ತು. ಉತ್ಸವದ ಸ್ವರೂಪ ಬಂದಿತ್ತು. ಅಲ್ಲಿಂದ ಸ್ವಾಮಿಯವರ ಮೆರವಣಿಗೆ ಹೊರಟಿದ್ದು ಸೀದಾ ದೇವಿಯ ದೇವಸ್ಥಾನಕ್ಕೆ ಹೋಗಿ ನಿಂತಿತು. ಅಲ್ಲಿಂದ ಇಳಿದು ಸ್ವಾಮಿಯವರು ದೇವಿಯ ದರುಶನವನ್ನು ತೆಗೆದುಕೊಂಡರು. ಆಮೇಲೆ ಸಜ್ಜನಗಡ ದಿಂದ ಬಂದ ಸಮರ್ಥರ ಪಾದುಕೆಯನ್ನು ಯಥಾ ಸಾಂಗವಾಗಿ ಪೂಜೆ ಮಾಡಿದರು. ಆಮೇಲೆ ಊಟದ ತಯಾರಿ ನಡೆಯಿತು ಸಾವಿರಾರು ಜನರು ಅದಕ್ಕೆ ಲೆಕ್ಕವೇ ಇಲ್ಲ. ಪಂಗತಿಯ ಮೇಲೆ ಪಂಗತಿ ಉಂಡೆದ್ದಿತು. ಎಲ್ಲರಿಗೂ ಅವರು ತಮ್ಮ ಕೈಯಿಂದಲೇ ತೀರ್ಥ ಕೊಟ್ಟರು ಅದನ್ನೆಲ್ಲಾ ನೋಡಿ ನನಗೆ ಮನಸ್ಸು ತುಂಬಿ ಬಂತು.ನನ್ನ ಪರಭ್ರಹ್ಮ,ಎಣಗಪ್ಪು ಶ್ರೀರಾಮ,ಶ್ರೀಕೃಷ್ಣ, ಕಾಷಾಯ ವಸ್ತ್ರ ಧರಿಸಿ ನಮ್ಮೆಲ್ಲರ ಉದ್ಧಾರಕ್ಕಾಗಿ ಪ್ರಕಟವಾಗಿದ್ದರೋ ಅನಿಸಿತು.  
 
ಭಕ್ತಜನರ ಮೊದಲನೆಯ ಪಂಗತಿ ಕುಳಿತುಕೊಂಡಾಗ ನಾನು ಕೆರೆಯಲ್ಲಿ ಸ್ನಾನ ಮಾಡುತ್ತಿದ್ದೆ ಸ್ವಲ್ಪ ಉದಾ ಸನಾಗಿದ್ದೆ ಸ್ವಾಮೀಜಿ ಅವರ ಹತ್ತಿರ ಮಾತನಾಡಲಿಕ್ಕೆ ಸಿಗಲಿಲ್ಲ ಅನಿಸಿತ್ತು ಆಶ್ಚರ್ಯವೆಂದರೆ ಅಷ್ಟರಲ್ಲಿಯೇ ಸ್ವಾಮಿಯವರು ನನ್ನ ಎದುರುಗಡೆ ಬಂದಿದ್ದರು ಅವರದ್ದು ಮೌನವಿತ್ತು ಆ ಮೌನದಲ್ಲಿಯೇ ಪ್ರೇಮಪೂರ್ಣ ಹಾಸ್ಯದಿಂದ ನನ್ನ ಹತ್ತಿರ ಕೈಸನ್ನೆ ಮಾಡಿ ಊಟ ಮಾಡು
 ಅಂತ ಹೇಳಿ ಅಲ್ಲಿಂದ ಹೋದರು. ಅದೊಂದು ಚಮತ್ಕಾರವೇ ನಡೆದಂತೆ
 ನನಗೆ ಅನಿಸಿತು.
4ಘಂಟೆಗೆ ಶ್ರೀ ಸ್ವಾಮಿಯವರು ಪ್ರವಚನ ಮಾಡಿ ಮೌನವನ್ನು ಬಿಟ್ಟರು. ಮೊದಲು ಸಂಸ್ಕೃತ ಆಮೇಲೆ ಕನ್ನಡ ಆಮೇಲೆ ಮರಾಠಿಯಲ್ಲಿ ಪ್ರವಚನ ಮಾಡಿದರು.ಆಮೇಲೆ ದರುಶನಕ್ಕೆ ಎಲ್ಲರೂ ಮುನ್ನುಗ್ಗುತ್ತಿದ್ದರು ಎಲ್ಲರಿಗೂ ಸ್ವಾಮಿಯವರು ಮಂತ್ರಾಕ್ಷತೆ ಕೊಡುತ್ತಿದ್ದರು ಅದೇ ಉತ್ಸಾಹ ಅದೇ ಆನಂದದಿಂದ ಜನಸಮುದಾಯಕ್ಕೆ ತೀರ್ಥ ಮಂತ್ರಾಕ್ಷತೆ ಕೊಟ್ಟರು.
 
5 ದಿವಸ ಎಲ್ಲರಿಗೂ ದರ್ಶನ ಕೊಟ್ಟರು ಹಸಿವು ನಿದ್ರೆಯ ಪರಿವೆಯೂ ನಮಗೆ ಇರಲಿಲ್ಲ. ಒಂದು ದಿವಸ ಹಾಡಿನ ಕಾರ್ಯಕ್ರಮ ಆಯಿತು ಒಬ್ಬರು ಕನ್ನಡದಲ್ಲಿ ಸ್ವಾಮಿಯವರ ಚರಿತ್ರೆಯನ್ನು ಒಳಗೊಂಡ ಹಾಡನ್ನು ಹೇಳಿದರು. ಅದನ್ನು ಕೇಳಿ ರಾಮರಾಯರ ಎದುರುಗಡೆ ಲವಕುಶರು ರಾಮಾಯಣವನ್ನು ಹಾಡಿದ ದೃಶ್ಯ ನಮ್ಮ ಕಣ್ಣ ಮುಂದೆ ಬಂದಿತು. ಸ್ವಾಮಿಯವರ ಬಗ್ಗೆ ಹಾಡಬೇಕು ಅಂತ ನನಗೂ ಅನಿಸಿತು ನಾನು ಕುಳಿತಲ್ಲಿಂದಲೇ ಹಾಡಲು ಪ್ರಾರಂಭಿಸಿದೆ. ಗುರುಗಳು ನನ್ನನ್ನು ಮಗಾ ಮುಂದೆ ಬಂದು ಹಾಡು, ಹೇಳಿದರು. ನನಗೆ ತುಂಬಾ ಆನಂದವಾಯಿತು ನನ್ನ ಆಂತರಿಕ ತಳಮಳ ಗುರುಗಳಿಗೆ ಗೊತ್ತಾಯಿತು ಜನರು ನನಗೆ ಮಳ್ಳಿ ಅಂದರು. ಜನರು ಏನೇ ಹೇಳಲಿ ಅದು ನನಗೆ ನಗಣ್ಯ ವೆನಿಸಿತು.
 
ಈ ರೀತಿ ಐದು ದಿವಸ ಸಾವಿರಾರು ಭಕ್ತರ ಮನಸ್ಸನ್ನು ಶಾಂತಿಸಿ ಅನುಗ್ರಹ ಕೊಟ್ಟು ಎಲ್ಲರ ಉತ್ಕಂಟತೆಯನ್ನು ಶಮನಿಸಿ,ಯೋಗ್ಯ ಮಾರ್ಗದರ್ಶನ ಕೊಟ್ಟರು.
ಮುಕ್ತ ಹಸ್ತದಿಂದ ಅನ್ನದಾನ ನಡೆಯುತ್ತಿತ್ತು ಪಂಗತಿಯ ಮೇಲೆ ಪಂಗತಿ ಏಳುವುದನ್ನು ನೋಡಿದರೆ ಧರ್ಮ ರಾಜರ ಅಶ್ವಮೇಧ ಯಜ್ಞದ ಯಜ್ಞದ ವರ್ಣನೆಯನ್ನು ಕೇಳಿದರ ಅನುಭವವಾಯಿತು. ಸ್ವಾಮಿಗಳ ರಾಜ್ಯದಲ್ಲಿ ಬಡವ-ಶ್ರೀಮಂತ ಉಚ್ಚ-ನೀಚ ಎನ್ನುವ ಭೇದಭಾವ ಇಲ್ಲದೆ ಎಲ್ಲರನ್ನು ತಾಯಿಯ ವಾತ್ಸಲ್ಯದಿಂದ ನೋಡುತ್ತಿದ್ದರು ಯಾರನ್ನು ಸ್ವಲ್ಪ ಕಡೆಗಣಿಸುತ್ತಿದ್ದರೋ ಅವರನ್ನು ಹತ್ತಿರ ಕರೆದು ಮಾತೃ ಪ್ರೇಮದಿಂದ ಮಾತನಾಡಿಸುತ್ತಿದ್ದರು.
 
ಈ ರೀತಿ ಐದು ದಿವಸ ಹೇಗೆ ಹೋಯಿತು ಗೊತ್ತಾಗಲಿಲ್ಲ ಅವರು ಪ್ರವಚನದಿಂದ ನಮಗೆ ದಾರಿತೋರಿಸಿದರು. ಆ ಮಾರ್ಗದಲ್ಲಿ ಹೋಗುವುದು ನಮ್ಮ ಕರ್ತವ್ಯ. ನಮ್ಮೆಲ್ಲರ ಹಿಂದೆ ಸ್ವಾಮಿಗಳ ಆಧಾರವಿದ್ದೇ ಇದೆ. ಆರನೆಯ  ದಿವಸ ಸ್ವಾಮಿಯವರು ಎಲ್ಲರಿಗೂ ಮಂತ್ರಾಕ್ಷತೆ ಕೊಟ್ಟು ಬೆಳಗಿನ ಜಾವ ಆರು ಗಂಟೆಗೆ ಮತ್ತೆ ಜಗತ್ತಿನ ಕಲ್ಯಾಣಕ್ಕಾಗಿ ತಪಶ್ಚರ್ಯ ಮಾಡಲು 1 ವರ್ಷದ ಏಕಾಂತಕ್ಕೆ ಹೋದರು. ದಿವ್ಯ ಅನುಭವವನ್ನು ಪಡೆದು ಧನ್ಯತೆಯನ್ನು ಅನುಭವಿಸಿ ನಾವು ಹಿಂದಿರುಗಿದೆವು.
 
❀~●~❁~●~❀~●~❁
 
ಗುರುಮಾವುಲಿಯ ಸಾನಿಧ್ಯದಲ್ಲಿ
 
ನಿವೇದಕರು–ಶ್ರೀ ರಘುವೀರ ಘಾಣೆಕರ .
 
ಸ್ಥಳ_ನಾಶಿಕ  
 
 ಕಾಲ_ಫಾಲ್ಗುಣ ಶುದ್ದ ,4/1887.
 
ಕಳೆದ ವರ್ಷದ ಗುರು ಮಾವುಲಿಯ ದರ್ಶನದ
 ನೆನಪಿನಿಂದ ಮನಸ್ಸು ಬ್ರಹ್ಮ ಸ್ವರೂಪದಲ್ಲಿ ಅಂತರ್ಮುಖ ವಾಗುತ್ತಿತ್ತು. ಅಮೃತದಂತಹ ಅವರ  ಸಿಹಿಯಾದ ಮಾತು ಕಿವಿಯ ಒಳಗೆ ಪಿಸುಗುಟ್ಟಿದಂತೆ, ಭಾಸವಾಗುತ್ತಿತ್ತು. ಅವರ ಆನಂದ ಸ್ವರೂಪ ಕಣ್ಣೆದುರು ಬರುತ್ತಿತ್ತು. ಅವರೊಂದಿಗೆ ವಿಲೀನವಾಗುವ ಮನಸ್ಸಾಗುತ್ತಿತ್ತು. ಗುರುಗಳು ಶ್ರೀ ಬದ್ರಿ ಕ್ಷೇತ್ರದಲ್ಲಿ ಜಗತ್ತಿನ ಉದ್ಧಾರಕ್ಕಾಗಿ, ತಪಶ್ಚರ್ಯ ಮುಗಿಸಿ ಕಾಶಿ ಕ್ಷೇತ್ರಕ್ಕೆ ಮಹಾಶಿವರಾತ್ರಿಯ ದಿವಸ ಬರುವವರಿದ್ದರು. ನಾವು ಕಾಶಿ ಕ್ಷೇತ್ರಕ್ಕೆ ಹೋಗುವ ಮನಸ್ಸು ಮಾಡಿದೆವು. ನಮಗೆಲ್ಲರಿಗೂ ಸ್ಪೂರ್ತಿ ಕೊಡುವ ಆ ಸದ್ಗುರು ಚರಣದಲ್ಲಿ ನಮ್ಮ ಮನಸ್ಸು ಮೊದಲೇ ಹೋಗಿ ಮುಟ್ಟಿತ್ತು. ನಮ್ಮ ಪ್ರಿಯಬಂಧು ಗೋಡಸೆ ಯವರಮಾರ್ಗದರ್ಶನದಿಂದ ನಾನು ನನ್ನ ಹೆಂಡತಿಯ ಜೊತೆಗೆ,ಮಾರ್ಗಸ್ಥನಾದೆನು. ಮಹಾಶಿವರಾತ್ರಿಯ ದಿವಸ ಮಧ್ಯಾಹ್ನ 4 ಗಂಟೆಗೆ ರೈಲ್ವೆಯು ವಾರಣಾಸಿಗೆ ಮುಟ್ಟಿತ್ತು. ನಾವು ಶ್ರೀಧರ ಸ್ಪೂರ್ತಿ ನಿವಾಸದ ಹತ್ತಿರ ಬಂದೆವು. ಒಳಗಡೆಯಿಂದ ಓಂ ನಮಃ ಶಿವಾಯ ದ ಜಯಘೋಷ ಕೇಳಿಬರುತ್ತಿತ್ತು. ಭಕ್ತರು ತುಂಬಾ ಆನಂದದಿಂದ ತಲ್ಲೀನರಾಗಿ ಭಜನೆ ಮಾಡುತ್ತಿದ್ದರು ಸಾಯಂಕಾಲ ಸದ್ಗುರುಗಳ ಆಗಮನದ ಸಂಕೇತ ವಿರುವುದರಿಂದ ಜನರ ಉತ್ಸಾಹ ಆನಂದಕ್ಕೆ ಪಾರವೇ ಇರಲಿಲ್ಲ. ಸದ್ಗುರುವಿನ ಆಸನದ ವ್ಯವಸ್ಥೆ ನಡೆದಿತ್ತು. ನೀಲಿ ಮತ್ತು ಕೆಂಪು ಮಕಮಲ್ಲಿನಲಿ ಶಾಲಿನ ಮೇಲೆ  ವ್ಯಾಘ್ರಜಿನವನ್ನು ಹಾಕಿ ಗೊಂಡೆ ಹೂವಿನ ಹಾರದಿಂದ ಸುಂದರವಾಗಿ ಶೃಂಗಾರ ಮಾಡಿದ್ದರು.
 
ನಾವು ಗಂಗಾಮಾಯಿಯ ದರ್ಶನಕ್ಕೆ ಹೋದೆವು .ಅಲ್ಲಿ ಸ್ನಾನ ಸಂಧ್ಯಾ ಪೂಜೆ ಮುಗಿಸಿ ಸ್ಪೂರ್ತಿ ನಿವಾಸಕ್ಕೆ ಬಂದೆವು.   
ಕೆಲವೇ ಕ್ಷಣಗಳಲ್ಲಿ ಹೊರಗಡೆಯಿಂದ ಸ್ವಾಮಿಯವರು ಬರುವ ಶಬ್ದವು ಕೇಳಿಬಂತು ಮನಸ್ಸು ತುಂಬಿ ಬಂತು ಆನಂದಾಶ್ರು ಹರಿಯತೊಡಗಿತು ಜಯ ಜಯ ರಘುವೀರ ಸಮರ್ಥ ದ ಘೋಷಣೆಯಿಂದ ಆಶ್ರಮದ ವಾತಾವರಣವು ಭಕ್ತಿ ಮಾಯವಾಯಿತು. ಮಾವುಲಿ ಆಸನ ಗ್ರಹಣ ಮಾಡಿದರು. ಒಂದು ವರ್ಷ ದೂರವಿದ್ದ ನಮ್ಮ ಭಗವಂತನ ಪಾದಸ್ಪರ್ಶ ಮಾಡಿ ನಮಸ್ಕರಿಸಿ ನಾವು ಪಾವನರಾದೆವು. ಮಾವುಲಿಯ ಆ ಸಾನ್ನಿಧ್ಯದ ವರ್ಣನೆ ಎಷ್ಟು ಹೇಳಿದರು ಕಡಿಮೆ ಇದೆ. ಕೆನ್ನೆಯ ಮೇಲೆ,ಕೈಯಾಡಿಸುತ್ತಿದ್ದರು, ಆಲಂಗಿಸುತ್ತಿದ್ದರು. ಪದೇ ಪದೇ ತಿಳಿಹೇಳುತ್ತಿದ್ದರು. 
 
ಮರುದಿವಸ ಶನಿವಾರ ಗುರುನಾಥರು ಪ್ರಯಾಗರಾಜ ಕ್ಕೆ ಹೊರಡಲು ಸಿದ್ಧರಾದರು. ಆಶ್ರಮವಾಸಿಯವರಿಗೆ ತುಂಬಾ ಬೇಸರವಾಯಿತು ಆದರೆ ರಾಷ್ಟ್ರಉದ್ದಾರಕ್ಕಾಗಿ ಪಣತೊಟ್ಟ ಸದ್ಗುರುವಿಗೆ ಹೋಗುವುದು ಅನಿವಾರ್ಯವಾಗಿತ್ತು.
ಮರುದಿವಸ ತ್ರಿವೇಣಿ ಸಂಗಮದಲ್ಲಿ ಸ್ನಾನ ವಾಯಿತು. ಭಿಕ್ಷೆ ಆಯ್ತು ಸಂಗಮದಲ್ಲಿ ಮುಕ್ತ ಹಸ್ತದಿಂದ ಮಾವುಲಿ ಯವರು ದಾನ-ಧರ್ಮ ಮಾಡಿದರು ಅಲ್ಲಿ ಉಟ್ಟ ಬಟ್ಟೆಯನ್ನೂ ತೆಗೆದುಕೊಟ್ಟರು. ಪ್ರಯಾಗದಲ್ಲಿ ಅವರ ದರ್ಶನಕ್ಕೆ ತುಂಬಾ ಜನರು ಸೇರಿದ್ದರು ಮರುದಿವಸ ಗಾಡಿಯು ಚಿತ್ರಕೂಟದ ಕಡೆಗೆ ಪ್ರಯಾಣ ಬೆಳೆಸಿತು ರಾತ್ರಿಯ ಮುಕ್ಕಮು ಚಿತ್ರಕೂಟದಲ್ಲಿ ಆಗಿತ್ತು ನಾವು ಸಾಯಂಕಾಲದ ಬಸ್ಸಿಗೆ ಚಿತ್ರಕೂಟಕ್ಕೆ ಹೋದೆವು ಪ್ರಭು ಶ್ರೀರಾಮಚಂದ್ರನ ಪಾದಸ್ಪರ್ಶದಿಂದ ಪುನೀತವಾದ ಚಿತ್ರಕೂಟ ದರ್ಶನವು ನಮಗೆ ಆಯಿತು ಮಂದಾಕಿನಿ ಯಲ್ಲಿ ಸ್ನಾನ ಮಾಡಿ, ಗುರುಗಳು ಭಿಕ್ಷೆ ತೆಗೆದುಕೊಂಡರು. ನಾವು ಅಲ್ಲಿ ಏಳು ಜನರೇ ಇದ್ದೆವು. ಮರುದಿವಸ ಅಲ್ಲಿಂದ ಹೊರಟು ಸಾಯಂಕಾಲ ಏಳೂವರೆ ಗಂಟೆಗೆ ಸತನಾ ಸ್ಟೇಷನ್ನಿಗೆ ಬಂದೆವು ಮಾವುಲಿಯ ಜೊತೆ ನಾವು ಏಕರೂಪವಾಗಿ ಹೋಗಿದ್ದೆವು ರಾತ್ರಿಯ ಪ್ರವಾಸವು ಅವರ ಜೊತೆಯಲ್ಲಿಯೇ ಆಯ್ತು. ಮರುದಿವಸ ಇಟಾರಸಿಯಲ್ಲಿ, ಪೂಜ್ಯ ಗುರು ಮಾವುಲಿ, ಶ್ರೀ ಗೋಡಸೆ, ಸಾವಿತ್ರಿ ಅಕ್ಕ, ಮತ್ತಿಬ್ಬರು ಶಿಷ್ಯರು, ನರ್ಮದಾ ಸ್ನಾನಕ್ಕೆ ಇಳಿದರು.
ಪೂಜ್ಯ ಗುರು ಮಾವುಲಿಯಿಂದ ದೂರವಾಗುವ ವಿರಹದ ವೇಳೆ ಬಂದಿತ್ತು. ಅವರ ಪಾದದ ಮೇಲೆ ತಲೆಯಿಟ್ಟು ನಮಸ್ಕರಿಸುವಾಗ ಕಣ್ಣೀರಿನಿಂದಲೇ ಪಾದ ತೊಳೆದೆ. ಗುರು ಮಾವುಲಿ ಮತ್ತೆ ಮತ್ತೆ ನನ್ನನ್ನು ಆಲಂಗಿಸಿದರು. ವಿಯೋಗವು ಸಹನ ವಾಗಲಿಲ್ಲ ಮಾವುಲಿ ದೃಷ್ಟಿಯಿಂದ ದೂರವಾಗಿತ್ತು. ಆನಂದ ಸ್ವರೂಪ ಮಾವುಲಿಯ ಆಶೀರ್ವಾದದ ಅನುಭವಧ ಚೈತನ್ಯ ಮನಸ್ಸಿನಲ್ಲಿ ತುಂಬಿತ್ತು.
ಇದನ್ನು ಬರೆಯುತ್ತಿದ್ದಾಗ ನನ್ನ ಕಣ್ಣೆದುರಿಗೇ ಗುರು ಮಾವುಲಿ ಹಸನ್ಮುಖವಾಗಿ ನಿಂತಂತಿದೆ. ನಾನಿದ್ದೇನೆ ನಾನಿದ್ದೇನೆ ಅಂತ ಬೆನ್ನಮೇಲೆ ಕೈಯಾಡಿಸಿ ದಂತೆ ಅನಿಸುತ್ತದೆ. ಅವರು ನಮಗೆ ಹೇಳಿದ ಸೇವಾ, ಉಪಾಸನಾ, ನಿತ್ಯ ನೇಮದಿಂದ ನಡೆಯಲಿ ಇದೇ, ಅವರ ಚರಣ ಕಮಲದಲ್ಲಿ ಪ್ರಾರ್ಥನೆ.
 
❀~●~❁~●~❀~●~❁
 
ಮ್ರುದೂನಿ  ಕುಸುಮಾದಪಿ
 
ನಿವೇದಕರು:  ವಿನಾಯಕ ದಿ.  ಕುಲಕರ್ಣಿ.
ಸದ್ಗುರು ಶ್ರೀಧರ ಸ್ವಾಮಿಯವರ ವಾಣಿಯಲ್ಲಿ, ವಿಲಕ್ಷಣವಾದ ಮಧುರತೆ ಇದೆ. ಅದರ ಅನುಭವ,ಅವರ ಎಲ್ಲಾಭಕ್ತರು, ಮತ್ತು ಶಿಷ್ಯರಿಗೆ ಸತತವಾಗಿ ಬರುತ್ತದೆ. ಅವರ ವಾಣಿಯಲ್ಲಿ ವಶೀಕರಣದ ಜಾದುಇದ್ದಂತೆ ಕಿವಿಯ ಮೇಲೆ ಬಿದ್ದ ಧ್ವನಿಯತರಂಗಗಳು,ಮತ್ತೆಮತ್ತೆ ಮೇಲೆದ್ದು,ತ್ರುಪ್ತಿಯ ಅನುಭವ,ಅವರಹತ್ತಿರಬಂದ ಪ್ರತಿಯೊಬ್ಬರಿಗೂ ,ಆಗೇಆಗುತ್ತಿತ್ತು.
ತಮ್ಮಸುಖದ ವಿಚಾರ ಸ್ವಲ್ಪ ವೂ ಮಾಡದೆ,ಸತತವಾಗಿ ಜನಕಲ್ಯಾಣದ ಚಿಂತನೆ,ಭಕ್ತರ ಸುಖದುಃಖ ಕ್ಕಾಗಿಯೇಜೀವನ ಸಮರ್ಪಿಸಿದ್ದರು.ಜನರ ಉನ್ನತಿಗಾಗಿಯೇ, ಕಳಕಳಿಯಿಂದ ರಾಮರಾಯನಲ್ಲಿ ಪ್ರಾರ್ಥಿಸುತ್ತಿದ್ದರು.
 
ಅವರ ಸಾನ್ನಿಧ್ಯದಲ್ಲಿದ್ದರೆ, ಅಲ್ಲಿಂದ ಏಳುವ ಇಚ್ಛೆ ಯೇ ಆಗುವುದಿಲ್ಲ.ಅದೇ ಅನುಭವ ಎಲ್ಲರಿಗೂ, ಆಗುವುದರಿಂದ,ಜನಸಂದಣಿಯೇ ಜನಸಂದಣಿ. ಜನರನ್ನು ಹಿಂದೆ ದೂಡುವ ದೇ ಶಿಶ್ಯರಿಗೊಂದು ಕೆಲಸ.ಅವರ ಸತ್ವ ಪರೀಕ್ಷೆ ಯಾಗಿತ್ತು. ಆದರೆ ಕೇಳುವವರು ಯಾರು,ದೂಡಿ ದೂಡಿ ಜನರು ಮುನ್ನುಗ್ಗುತ್ತಾರೆ. ಸ್ವಲ್ಪ ಮೈ ಮುಟ್ಟಿದರೂ, ಕೋಪಗೊಳ್ಳುವ, ಅಪಮಾನ ವಾಯಿತು ಎನ್ನುವ ಜನರುಈಗ ಶರೀರಭಾವವನ್ನೇಮರೆತು ಸದ್ಗುರುವಿನಲ್ಲಿ, ಏಕರೂಪವಾಗಿಹೋಗಿದ್ದರು
 
ಬೇರೆಯವರ ಉದಾಹರಣೆಗಳನ್ನು, ಹೇಳುವುದಕ್ಕಿಂತ ನನ್ನದೇ ಕಥೆಯನ್ನು ಹೇಳುತ್ತೇನೆ.ಶಕೆ1881ರ ದಾಸನವಮಿಯ ಉತ್ಸವವು ಬೆಳಗಾವಿಯ ಜನರಿಗೆ ಚಿರಸ್ಮರಣೀಯ ವಾಗಿದೆ.ನನ್ನಜೀವನದಲ್ಲಿ ಕ್ರಾಂತಿ ನಡೆದದ್ದು ಇದೇ ವೇಳೆಯಲ್ಲಿ .ದಾಸನವಮಿಯ ನಿಮಿತ್ತ ಸ್ವಾಮಿ
ಯವರ ವಸತಿ ಬೆಳಗಾವಿಯಲ್ಲಿಇತ್ತು . ಲೆಕ್ಕವಿಲ್ಲದಷ್ಟು ಜನಸಮುದಾಯವಾಗಿತ್ತು. 
ಪಾರಮಾರ್ಥಿಕದ ಗಂಧವೂ ಇಲ್ಲದ ಪಾಶ್ಚಿಮಾತ್ಯ ಅನುಕರಣೆಯ  ಅಭಿಮಾನದಿಂದ ಮೆರೆಯುವ ನನಗೆ, ನಮ್ಮಹತ್ತಿರದಲ್ಲಿರುವ ಹನುಮಂತನ ದೇವಸ್ಥಾನದಲ್ಲಿ, ಇಷ್ಟೇಕೆ ಜನನುಗ್ಗುತ್ತಿದ್ದಾರೆ ಅನಿಸಿ, ವಿಚಾರಿಸಿದಾಗ ತಿಳಿಯಿತು, ಯಾರೋ ಥೋರ ಸತ್ಪುರುಷರು ಬಂದಿದ್ದಾರೆ. ನನಗೆ ಮನಸ್ಸಿನಲ್ಲಿ ಅನಿಸಿತು, ಎಷ್ಟೋ ಸತ್ಪುರುಷ ರೆನ್ನುವವರು ಬರುತ್ತಾರೆ ,ಹೋಗುತ್ತಾರೆ ಮಳ್ಳುಜನರು ವೇಳೆಕಳೆಯಲು ಹೋಗುತ್ತಾರೆ. ಆಧುನಿಕ ವಾಙ್ಮಯದಿಂದ ಉಚ್ಛಸ್ಥರದಲ್ಲಿ ನನ್ನ ನೀತಿ ಪರಿಪಕ್ವವಾಗಿತ್ತು .ಉತ್ಸವದ 3 ದಿವಸ ಕಳೆದಿತ್ತು ,ಆಕಡೆ ನನ್ನ ಲಕ್ಷ್ಯ ವಿರಲಿಲ್ಲ. ನನ್ನ ಮತ್ತಿನಲ್ಲಿ ನಾನಿದ್ದೆ .ಆದರೆ ಮಾಯಿ ವೈದ್ಯ ನನ್ನ ಚಿಕ್ಕಮ್ಮ  ಹೇಳಿದಳು ಅರೇ ವಿನಾಯಕ.. ಒಂದಿನಾನಾದ್ರೂ ಸ್ವಾಮಿ ದರ್ಶನಕ್ಕೆ ಬಾ.ನಾನಂದೆ ನನಗೆ ದಿವಸವಿಡೀ ಕೆಲಸವಿರುತ್ತದೆ ವೇಳೆ ಇಲ್ಲ. ವೇಳೆ ಇಲ್ಲ ಅಂತಾ, ತಪ್ಪಿಸಿಕೊಳ್ಳಲು ದಾರಿ ಹುಡುಕಿದೆ.ಬೇರೆಯವರನ್ನು ಪರಮಾರ್ಥ ಮಾರ್ಗದಲ್ಲಿ ತರುವ ಸತತ ಪ್ರಯತ್ನದಲ್ಲಿರುವ ನನ್ನಪ್ರೇಮಮಯಿ ಚಿಕ್ಕಮ್ಮ ಹಿಂಜರಿಯಲಿಲ್ಲ.ದಿವಸ ವೇಳೆ ಸಿಕ್ಕದಿದ್ದರೆ ರಾತ್ರೆ ಪ್ರವಚನಕ್ಕಾದರೂ ಬಾ, ಅಂದಳು.ಮನಸ್ಸಿನಲ್ಲಿಯೇ ಹೇಳಿದೆ ಚಿಕ್ಕಮ್ಮನ ಸಮಾಧಾನಕ್ಕಾಗಿ ರಾತ್ರಿ ಹೋದಂತೆ ಮಾಡೋಣ. ಆ ದಿವಸ ಮಾಘ, ಕ್ರು ,3ಕ್ಕೆರಾತ್ರೆ 9ಘಂಟೆಗೆ ಶ್ರೀಗಳಪ್ರವಚನ ಕೇಳಲಿಕ್ಕೆ ಹೋದೆ .ಭಕ್ತಿಇಲ್ಲ , ಶ್ರದ್ಧೆ ಇಲ್ಲ,ಹೋದೆ. ಶ್ರೀ ,ಪೈ ,ರವರ ಭವ್ಯ ಆವಾರದಲ್ಲಿ, ದೊಡ್ಡ ಸುಂದರ ಮಂಟಪವನ್ನು ಹಾಕಿದ್ದರು, ಸಾವಿರಾರು ಜನರು,ಸೇರಿದ್ದರು.ಮಧ್ಯದಲ್ಲಿ ಎದ್ದು ಬರಲಿಕ್ಕೆ ಅನುಕೂಲವಾಗುತ್ತದೆ ಎಂದು ನಾನು ಹಿಂದುಗಡೆ ಕುಳಿತುಕೊಂಡೆ.ಸ್ವಲ್ಪ ವೇಳೆಯಲ್ಲಿ ಸ್ವಾಮಿ ಯವರುಬಂದರು ಮೋಟಾರಿನಿಂದ ಕೆಳಗಿಳಿದು ಒಳಗೆ ಪ್ರವೇಶಿಸುತ್ತಿದ್ದಂತೆ ಭಕ್ತಜನರು ಎದ್ದುನಿಂತು ನಮ್ರತೆಯಿಂದ ಕೈಜೋಡಿಸಿ ನಮಸ್ಕರಿಸುತ್ತಿದ್ದರು.
ಸದ್ಗುರು ಸಮರ್ಥ ರಾಮದಾಸ ಸ್ವಾಮಿ ಮಹಾರಾಜ ಕೀ ಜೈ
ಸದ್ಗುರು ಭಗವಾನ್ ಶ್ರೀಧರ ಸ್ವಾಮಿ ಮಹಾರಾಜ್ ಕೀ ಜೈ 
ಜಯ ಜಯ ರಘುವೀರ ಸಮರ್ಥ.
 
ವಗೈರೆ ಗಗನ ಭೇದಿಜಯಘೋಷದಿಂದವಾತಾವರಣವು ಧುಮಧುಮಿಸಿ ಹೋಯಿತು.
ಶ್ರೀ ಯವರು ಪ್ರಸನ್ನ ಮುದ್ರೆಯಿಂದ ಆಸನಸ್ಥರಾದರು. ಅಭಯಕರದಿಂದ ಎಲ್ಲಭಕ್ತವ್ರುಂದದಕಡೆ ಒಮ್ಮೆ ದ್ರುಷ್ಟಿಹರಿಸಿ ಕುಳಿತುಕೊಳ್ಳಲು ಸೂಚನೆ ಮಾಡಿದರು.ಸ್ವತ:ಕೆಲವು ಕ್ಷಣ ಧ್ಯಾನಸ್ಥರಾದರು .
ಆಮೇಲೆ ಸಮರ್ಥಾವತಾರ ವಿಷಯದ ಮೇಲೆ ಮಾತನಾಡಲು, ಪ್ರಾರಂಭಿಸಿದರು.
ಅವರ ಪ್ರಸನ್ನ ಚಿತ್ತ ,ಮ್ರದು ಮಧುರ ವಾಣಿಯನ್ನುಕೇಳುತ್ತಿದ್ದಂತೆ,ದೇಹಭಾವವೇ ಉಳಿಯಲಿಲ್ಲ.ಆಯುಷ್ಯದಲ್ಲಿ,ಮೊದಲನೆದಾಗಿ ಅನುಭವಿಸಿದ ಅಲೌಕಿಕ ಅನುಭವವಾಗಿತ್ತು .
ಸಣ್ಣ ಸಣ್ಣ ವಾಕ್ಯ‌ ರಚನೆ ಅರ್ಥಪೂರ್ಣವಾಗಿ ಎಲ್ಲರ ಮನಸ್ಸನ್ನು ಸೂರೆಗೊಳ್ಳುತ್ತಿತ್ತು.ಏಕಾಗ್ರಚಿತ್ತದಿಂದತಲ್ಲೀನವಾಗಿ,ಎರಡೂವರೆ ತಾಸು ಕಳೆದದ್ದು ತಿಳಿಯಲೇ ಇಲ್ಲ.
ಪ್ರವಚನ ಮುಗಿದಿತ್ತು. ಜಯಜಯಕಾರದ ಘರ್ಜನೆ ಯಮಧ್ಯದಲ್ಲಿ,ಶ್ರೀಯವರು ಕಣ್ಮರೆಯಾಗಿದ್ದರು.ಆದರೆಅಂತ:ಚಕ್ಷುವಿನಲ್ಲಿ ಅಚ್ಚೊತ್ತಿ ಉಳಿದು ಕೊಂಡಿದ್ದರು .
 
ಕಿವಿಯ ಮೇಲೆ ಅವರ ವಾಣಿಯೇ,ಪ್ರತಿಧ್ವನಿಸುತ್ತಿತ್ತು. ಅದೇ ದುಂಧಿಯಲ್ಲೇ ರಾತ್ರಿಕಳೆಯಿತು. ಮರುದಿವಸ ಅನುಗ್ರಹ ಸಿಕ್ಕಬಹುದೋ ವಿಚಾರಿಸಿದೆ.
 
ಮರುದಿವಸ ಮಂಗಳವಾರ ಹನುಮಂತನ ದೇವಸ್ಥಾನದಲ್ಲಿ ಬೆಳಿಗ್ಗೆ 10ಘಂಟೆಗೆ  ಗುರುಗಳ ಅನುಗ್ರಹ ಸಿಕ್ಕಿತು.
ಪ್ರೇಮಮಯಿ, ವಾತ್ಸಲ್ಯ ಮೂರ್ತಿ ,ಅಲೌಕಿಕ ಗುಣದ ಅನುಭವ,ಪ್ರತಿಯೊಬ್ಬರಿಗೂ ಆಗುತ್ತದೆ. ಅವರಗುಣವರ್ಣನೆ ಮಾಡುವುದು ನಮ್ಮಿಂದ ಅಸಾಧ್ಯವಾದದ್ದು,ಆದರೂ ಅವರ ಹತ್ತಿರ ಬಂದವರಮನಸ್ಸು ಪರಿವರ್ತನೆ ಮಾಡಿ, ಆತ್ಮೋನ್ನತಿಯ ಮಾರ್ಗವನ್ನು ತೋರಿಸುತ್ತಾರೆನ್ನುವದು ಖಚಿತ ವಾದ ವಿಷಯ .
 
ಅನುಗ್ರಹ ಕೊಟ್ಟು ಜೀವನದಲ್ಲಿ ಕ್ರಾಂತಿ ಘಟಿಸಿ ಸನ್ಮಾರ್ಗತೋರಿಸಿ ತಮ್ಮ ಚರಣ ಕಮಲದಲ್ಲಿ ಆಶ್ರಯ ಕೊಟ್ಟು ಸತತವಾಗಿ ಆಶೀರ್ವಾದ ಕೊಡುತ್ತಿದ್ದ  ನಮ್ಮ ಗುರುಮಾವುಲಿಗೆ ಕೋಟಿ ಕೋಟಿ ಪ್ರಣಾಮಗಳು.
 
❀~●~❁~●~❀~●~❁
 
ವಾತ್ಸಲ್ಯ ಮೂರ್ತಿ
 
ನಿವೇದಕರು–ಡಾ.ಬಾ.ಆ.ಯೆಳಗುಡಕರ, ಕಡವಯಿ.
 
ನಮ್ಮ ಅಜ್ಜ ಔಂಧ ಸಂಸ್ಥಾನದ ರಾಜಕವಿ.ನನಗೂ ಅನಿಸುತ್ತಿತ್ತು ನಾನು ಒಬ್ಬ ಲೇಖಕ ಅಥವಾ ಕವಿ ಆಗಬೇಕು.ಆಗ ನಾವು ಸಾತಾರದಲ್ಲಿ ಗುರುವಾರ ಪೇಠೆಯಲ್ಲಿಇರುತ್ತಿದ್ದೆವು.ಉತ್ಸವದಲ್ಲಿಪ್ರತಿವರ್ಷ  ಸಜ್ಜನಗಡಕ್ಕೆಹೋಗುವುದು,ನಮ್ಮಪರಿಪಾಠವಾಗಿತ್ತು .ಆ ವರ್ಷ ನನಗೆ ಆರಾಮಿಲ್ಲದ ಕಾರಣ,ನನ್ನ ಗೆಳೆಯರೆಲ್ಲಾ ಹೋದರು ನನಗೆ ಹೋಗಲಿಕ್ಕಾಗಲಿಲ್ಲ.ತುಂಬಾ ಬೇಸರವಾಯಿತು.ಒಂದು ಕಾಗದವನ್ನು ತೆಗೆದುಕೊಂಡು ಸಜ್ಜನಗಡದ ವಿಷಯವಾಗಿ “ಬಾ ಸಜ್ಜನಗಡಾ” ಅಂತ ಒಂದುಲೇಖನವನ್ನುಬರೆದೆ .
 
ಆಯಿಗೆ ಓದಿ ತೋರಿಸಿದೆ .ನ್ಯೂ ಇಂಗ್ಲಿಷ್ ಸ್ಕೂಲಿನ ಪ್ರಿನ್ಸಿಪಾಲ್ ಶ್ರೀ ರಾನಡೆಯವರಿಗೆ ತೋರಿಸಿದೆ.ಅವರು ಪರಿಶೀಲಿಸಿದರು.ನೀನುಮೊದಲು ಮ್ಯಾಟ್ರಿಕ್ ಮುಗಿಸು,ಆಮೇಲೆ ಮರಾಠಿ ವಾಙ್ಮಯದ ಅಭ್ಯಾಸ ಮಾಡು, ಆಮೇಲೆ ಲೇಖಕನಾಗು ಅಂದರು.ನಾನುಎರಡುಪ್ರತಿಯನ್ನು ತೆಗೆದು ಒಂದನ್ನು ಸಜ್ಜನಗಡ ಮಾಸಿಕದ ಸಂಪಾದಕರ ಹತ್ತಿರ ಹೋದೆ .ಅವರು ನನ್ನ ಲೇಖನ ದ ಮೇಲೆ ಕಣ್ಣಾಡಿಸಿ,ನಿನ್ನ ಶಿಕ್ಷಣ ಎಷ್ಟಾಗಿದೆ ಅಂತ ಕೇಳಿದರು ನಿನ್ನ ಲೇಖನವು ಚೆನ್ನಾಗಿ ಬರಲಿಲ್ಲ, ತಯಾರಿ ಚೆನ್ನಾಗಿ ಬೇಕು ಅಂದರು.
 
ಆರು ತಿಂಗಳ ನಂತರ ಪರಮಪೂಜ್ಯ ಭಗವಾನ್ ಶ್ರೀಧರ ಸ್ವಾಮಿಯವರು ನಮ್ಮಪಕ್ಕದ ಅಗ್ನಿ ಹೋತ್ರಿಯವರ ಮನೆಗೆ ಬರುವವರಿದ್ದರು. ನಾನು ಅಗ್ನಿ ಹೋತ್ರಿಯವರಿಗೆ ಹೇಳಿದೆ, ನನಗೆ ಹದಿನೈದು ನಿಮಿಷ ಅವರು  ಹತ್ತಿರ ಮಾತನಾಡಲು,ವೇಳೆಬೇಕು.ಸ್ವಾಮಿಯವರು ಒಂದೇ ತಾಸು ನಿಲ್ಲುತ್ತಾರೆ, ಅಂತ ಅವರು ಹೇಳಿದರು.ನಿಶ್ಚಯಿಸಿದ ವೇಳೆಯಲ್ಲಿ ಸ್ವಾಮಿಯವರು ಬಂದರು .ಚಿಕ್ಕ ಮೂರ್ತಿ, ಯೋಗಿಯ ತೇಜ:ಪುಂಜ ಕಾಂತಿಯ ಮುಖ ,ಆಸನಸ್ಥರಾದರು. ಶೀಘ್ರಗತಿಯಲ್ಲಿ ದರುಶನವು ನಡೆಯುತ್ತಿತ್ತು.ಕೆಲವರು ಸಂಕ್ಷಿಪ್ತದಲ್ಲಿ ಪ್ರಶ್ನೆ ಕೇಳುತ್ತಿದ್ದರು.ನಯ
ವಿನಯದಿಂದ ಸ್ವಾಮಿಗಳು ಉತ್ತರಿಸುತ್ತಿದ್ದರು.ನಾನು ದರ್ಶನಕ್ಕೆ ಮುಂದೆಹೋದೆ
ಬೇಗ ಬೇಗ ನೆ ಮುಗಿಸಿ ಹೋಗು ಎಂದು ಶಿಷ್ಯರು ನನಗೆ,ಗಡಿಬಿಡಿಸುತ್ತಿದ್ದರೂ,ನಾನು ಇಬ್ಬರನ್ನು ಬದಿಗೆ ಸರಿಸಿ ಮಧ್ಯೆ ನಿಂತು ಕೊಂಡೆ ನನ್ನ ಲೇಖನ ವನ್ನು ಮುಂದೆ ತೋರಿಸಿ ನಡೆದ ಘಟನೆಯನ್ನು ಹೇಳಿದೆನು ಅವರಿಗೆ ನನ್ನ ಲೇಖನ ನೋಡಿ ತುಂಬಾ ಖುಷಿ ಯಾಯಿತು.ಮಗಾ..ನೀನು ಸಜ್ಜನಗಡವನ್ನು ಕಾಗದದ ಮೇಲೆ ತಂದಿದ್ದೀಯಲ್ಲಾ ಅಂದರು ಮುಂದೆ ಕುಳಿತ ಸಜ್ಜನಗಡದ ಸಂಪಾದಕ ರನ್ನು ಕರೆದು,ಈಲೇಖನವು ಸಜ್ಜನಗಡದಅಂಕದಲ್ಲಿಛಾಪಿಸಿಬರಬೇಕು ಅಂದರು.ನನ್ನ ಲೇಖನವು, ಸಜ್ಜನಗಡ ಅಂಕದಲ್ಲಿ ಛಾಪಿಸಿ ಬಂದಿತು.ಸಂತಮಹಾತ್ಮರು ಹೀಗಿರುತ್ತಾರೆ ಅವರು ನನ್ನ ಲೇಖಕನಾಗುವ ಇಚ್ಛೆಯನ್ನು, ಪೂರ್ಣ ಮಾಡಿದರು.ಭಾವಿಕರ ಅಂತರ್ಮನವನ್ನು ತಿಳಿಯುತ್ತಾರೆ.ಮತ್ತು ಪ್ರತಿಯೊಬ್ಬರ ಮನಸ್ಸನ್ನು ಜಯಿಸುತ್ತಾರೆ.ಈಗಲೂ,ಸೌಮ್ಯ, ಶಾಂತ,ಮಹಾನ್ ತೇಜಸ್ವಿ ಸ್ವಾಮಿ ಯವರ ಮೂರ್ತಿಯು ನನ್ನ ಚಕ್ಷುವಿನೆದುರು ನಿಂತಿದೆ.
 
❀~●~❁~●~❀~●~❁